ರಿಂಕು ಸಿಂಗ್ ಮ್ಯಾಚ್ ಫಿನಿಷರ್ ಆಗೋಕೆ ಕಾರಣ ಯಾರು? – ರಿಂಕು ಸಕ್ಸಸ್ ಹಿಂದಿರೋ ಆ ವ್ಯಕ್ತಿ ಯಾರು?

ರಿಂಕು ಸಿಂಗ್ ಮ್ಯಾಚ್ ಫಿನಿಷರ್ ಆಗೋಕೆ ಕಾರಣ ಯಾರು? – ರಿಂಕು ಸಕ್ಸಸ್ ಹಿಂದಿರೋ ಆ ವ್ಯಕ್ತಿ ಯಾರು?

ಮ್ಯಾಚ್ ವಿನ್ನರ್ ರಿಂಕು ಸಿಂಗ್ ಬಗ್ಗೆ ಇಂಟ್ರೆಸ್ಟಿಂಗ್ ಸಂಗತಿಗಳಿವೆ. ಜೊತೆಗೆ ರಿಂಕು ಸಿಂಗ್ ಮ್ಯಾಚ್​ ಫಿನಿಷರ್​ ಆಗೋಕೆ ಕಾರಣ ಯಾರು? ರಿಂಕು ಸಕ್ಸಸ್​​ ಹಿಂದಿರೋ ಆ ವ್ಯಕ್ತಿ ಯಾರು ಎಂಬ ಬಗ್ಗೆ ವಿವರಣೆಯೂ ಇಲ್ಲಿದೆ.

ಇದನ್ನೂ ಓದಿ: ಬೌಲರ್ಸ್‌ಗಳ ಬಗ್ಗೆ ಪ್ರಶ್ನೆ ಮಾಡಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗನಿಗೆ ಮಾತಿನಲ್ಲೇ ಸೀಮರ್ ಎಸೆದ ಶಮಿ..!

ಆಸ್ಟ್ರೇಲಿಯಾ ವಿರುದ್ಧದ ಮ್ಯಾಚ್ ವಿನ್ ಆದ ಬಳಿಕ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಅಭಿಷೇಕ್ ನಾಯರ್ ನೇರವಾಗಿ ರಿಂಕು ಸಿಂಗ್ ಬಳಿ ಹೋಗಿ ತಬ್ಬಿಕೊಳ್ಳುತ್ತಾರೆ. ಈ ಫೋಟೋ ಭಾರಿ ವೈರಲ್ ಆಗಿದೆ. ರಿಂಕು ಸಿಂಗ್ ಮತ್ತು ಅಭಿಷೇಕ್ ನಾಯರ್​ ಕುರಿತು ಮತ್ತೊಬ್ಬ ಕ್ರಿಕೆಟಿಗ, ಕಾಮೆಂಟ್ರೇಟರ್ ದಿನೇಶ್​​ ಕಾರ್ತಿಕ್ ಒಂದು ಸ್ಟೋರಿಯನ್ನ ಬಿಚ್ಚಿಟ್ಟಿದ್ದಾರೆ. 2018ರಲ್ಲಿ ಐಪಿಎಲ್​ ಸಂದರ್ಭದಲ್ಲಿ ಕೊಲ್ಕತ್ತಾ ನೈಟ್​​ರೈಡರ್ಸ್ ಪರ ಅಭಿಷೇಕ್​ ನಾಯರ್ ಆಡ್ತಿದ್ದಾಗ ರಿಂಕು ಸಿಂಗ್ ಟ್ಯಾಲೆಂಟ್​​ನ್ನ ನೋಟ್ ಮಾಡಿದ್ದರು. ಆಲಿಘರ್​ನ ಸಣ್ಣ ಪಟ್ಟಣದಿಂದ ಬಂದ ರಿಂಕು ಸಿಂಗ್​ ಮೈಂಡ್​ಸೆಟ್​ ಒಂದಷ್ಟು ಬದಲಾವಣೆಗಳಾಗಬೇಕಿದೆ ಅಂತಾ ಈ ಹಿಂದೆ ಕೆಕೆಆರ್​​ನಲ್ಲಿದ್ದ ದಿನೇಶ್ ಕಾರ್ತಿಕ್ ಜೊತೆಗೆ ಅಭಿಷೇಕ್ ನಾಯರ್ ಹೇಳಿಕೊಂಡಿದ್ದರಂತೆ. ಜೊತೆಗೆ ಥಿಂಕ್ ಬಿಗ್ ಅನ್ನೋ ಆ್ಯಂಗಲ್​ನಲ್ಲಿ ಅಭಿಷೇಕ್ ನಾಯರ್ ಅವರು ರಿಂಕು ಸಿಂಗ್ ಮೈಂಡ್​ ಸೆಂಟ್ ಚೇಂಜ್ ಮಾಡೋಕೆ ಒಂದಷ್ಟು ವರ್ಕೌಟ್ ಮಾಡಿದ್ದರು. ಡೆತ್​ ಓವರ್​ನಲ್ಲಿ ಬಿಗ್​ ಶಾಟ್ಸ್​​ಗಳನ್ನ ಹೊಡೆಯುವ ಸ್ಕಿಲ್​ ರಿಂಕು ಸಿಂಗ್​ಗೆ ಮೊದಲಿಂದಲೇ ಇತ್ತು. ಮ್ಯಾಚ್ ವಿನ್ನರ್ ಆಗುವ ಕೆಪಾಸಿಟಿ ಈ ಹಿಂದೆಯೇ ಇತ್ತು. ರಿಂಕು ಸಿಂಗ್​ಗೆ ಇರೋ ಈ ಸ್ಕಿಲ್​​ನ್ನ ಇನ್ನಷ್ಟು ಫೈನ್ ಟ್ಯೂನ್ ಮಾಡೋಕೆ ಅಭಿಷೇಕ್ ನಾಯರ್ ಮುಂದಾಗ್ತಾರೆ. ರಿಂಕು ಸಿಂಗ್​ ಸ್ಟ್ರಗಲ್ ಮಾಡ್ತಿದ್ದಾಗಲೆಲ್ಲಾ ಟಿಪ್ಸ್​ ಕೊಟ್ಟು ಬೆಟರ್​ ಬ್ಯಾಟ್ಸ್​​ಮನ್​ ಆಗಿಸಿದ್ದೇ ಅಭಿಷೇಕ್ ನಾಯರ್. ಐಪಿಎಲ್​​ ಟೂರ್ನಿಗೂ ಮುನ್ನ ರಿಂಕು ಸಿಂಗ್ ಕೆಲ ತಿಂಗಳುಗಳ ಕಾಲ ಅಭಿಷೇಕ್ ನಾಯರ್ ನಿವಾಸದಲ್ಲೇ ಉಳಿದುಕೊಂಡಿದ್ದರು. ಡೊಮೆಸ್ಟಿಕ್​ ಕ್ರಿಕೆಟ್​​ ಆಡುವ ಮುನ್ನವೂ ರಿಂಕು ಸಿಂಗ್​ ಅಭಿಷೇಕ್ ನಾಯರ್​ರಿಂದ ಟ್ರೈನಿಂಗ್ ಪಡೆಯುತ್ತಿದ್ದರು. ರಿಂಕು ಸಿಂಗ್ ಒಬ್ಬ ಮ್ಯಾಚ್ ವಿನ್ನಿಂಗ್ ಫಿನಿಷರ್ ಆಗ್ತಾರೆ ಅಂತಾ ಅಭಿಷೇಕ್ ನಾಯರ್​ಗೆ ಮೊದಲೇ ಗೊತ್ತಿತ್ತು. ಒಂದೇ ಮಾತಲ್ಲಿ ಹೇಳೋದಾದ್ರೆ ಅಭಿಷೇಕ್ ನಾಯರ್ ಅಕ್ಷರಶ: ರಿಂಕು ಸಿಂಗ್ ಪಾಲಿನ ಬೆಸ್ಟ್ ಕೋಚ್. ಇವತ್ತು ರಿಂಕು ಸಿಂಗ್ ಈ ಪೊಸೀಷನ್​​ನಲ್ಲಿ ಇದ್ದಾರೆ ಅಂದ್ರೆ ಅದಕ್ಕೆ ಮೇನ್ ರೀಸನ್ ಅಂದ್ರೆ ಅಭಿಷೇಕ್ ನಾಯರ್. ಇದೇ ಕಾರಣಕ್ಕೆ ಆಸ್ಟ್ರೇಲಿಯಾ ವಿರುದ್ಧದ ಮ್ಯಾಚ್ ಬಳಿಕ ಅಭಿಷೇಕ್​ ನಾಯರ್ ನೇರವಾಗಿ ರಿಂಕು ಸಿಂಗ್ ಬಳಿ ಹೋಗಿ ತಬ್ಬಿಕೊಂಡು ಅಭಿನಂದನೆ ಸಲ್ಲಿಸ್ತಾರೆ.

ಇಲ್ಲಿ ಇನ್ನೊಂದು ವಿಚಾರ ಹೇಳಲೇಬೇಕು. ಮ್ಯಾಚ್ ಫಿನಿಷಿಂಗ್ ರೋಲ್​ ಅನ್ನೋದು ಕ್ರಿಕೆಟ್​ನಲ್ಲಿ ತುಂಬಾನೆ ಕ್ರೂಶಿಯಲ್. ಪ್ರತಿ ಟೀಂಗೂ ಒಬ್ಬ ಬೆಸ್ಟ್ ಫಿನಿಷರ್ ಅಂತಾ ಇರಲೇಬೇಕು. ಫಸ್ಟ್​ ಬ್ಯಾಟಿಂಗ್​ ಮಾಡೋವಾಗ ಆಗಲಿ, ಇಲ್ಲಾ ಚೇಸಿಂಗ್ ವೇಳೆಯೇ ಆಗಲಿ. ಡೆತ್ ಬ್ಯಾಟ್ಸ್​​ಮನ್​​ ಆಗಿ ಬಂದು ಮ್ಯಾಚ್​​ನ್ನೇ ಟರ್ನ್ ಮಾಡೋದು ಕ್ರಿಕೆಟ್​ನ ಅತ್ಯಂತ ಕಠಿಣ ಸಂದರ್ಭ. ಒತ್ತಡದಲ್ಲಿದ್ದುಕೊಂಡು ಮ್ಯಾಚ್​ ಫಿನಿಶ್ ಮಾಡೋದು ಅಂದ್ರೆ ಸುಲಭದ ಮಾತಲ್ಲ. ಎಲ್ಲರಿಗೂ ಮ್ಯಾಚ್​ ಫಿನಿಷರ್ ಆಗೋಕೆ ಸಾಧ್ಯವಿಲ್ಲ. ಫಿನಿಶರ್ ರೋಲ್ ನಿಭಾಯಿಸಬೇಕು ಅಂದ್ರೆ ಅದಕ್ಕೆ ಸ್ಪೆಷಲ್ ಸ್ಕಿಲ್ ಇರಬೇಕು. ರಿಸ್ಕ್ ಟೇಕಿಂಗ್ ಎಬಿಲಿಟಿ ಇರ್ಬೇಕು. ಪ್ರೆಷರ್ ಹ್ಯಾಂಡಲ್ ಮಾಡೋ ತಾಕತ್ತು ಇರ್ಬೇಕು. ಮಹೇಂದ್ರ ಸಿಂಗ್ ಧೋನಿ ಬಳಿಕ ಅಂಥಾ ಫಿನಿಷರ್ ಟೀಂ ಇಂಡಿಯಾಗೆ ಸಿಕ್ಕಿಯೇ ಇಲ್ಲ. ಆದ್ರೀಗ ಟಿ-20 ಫಾರ್ಮಟ್​​ನಲ್ಲಿ ರಿಂಕು ಸಿಂಗ್​ ಈ ರೋಲ್​ ನಿಭಾಯಿಸ್ತಾ ಇದ್ದಾರೆ. ಮುಂದಿನ ದಿನಗಳಲ್ಲಿ ರಿಂಕು ಸಿಂಗ್ ಟೀಂ ಇಂಡಿಯಾಗೆ ದೊಡ್ಡ ಅಸೆಟ್ ಆಗೋದ್ರಲ್ಲಿ ಯಾವುದೇ ಡೌಟ್ ಇಲ್ಲ. ​

Sulekha