RCBಗೆ ಅಭಿಮಾನಿಗಳೇ ಬಂಡವಾಳ.. ಕಪ್ ಗೆಲ್ಲದಿದ್ರೂ RCB ಶ್ರೀಮಂತ – ಮಲ್ಯ ಸ್ಟಾರ್ ಡಮ್ ವರ್ಕೌಟ್ ಆಯ್ತಾ?

RCBಗೆ ಅಭಿಮಾನಿಗಳೇ ಬಂಡವಾಳ.. ಕಪ್ ಗೆಲ್ಲದಿದ್ರೂ RCB ಶ್ರೀಮಂತ – ಮಲ್ಯ ಸ್ಟಾರ್ ಡಮ್ ವರ್ಕೌಟ್ ಆಯ್ತಾ?

ರಾಯಲ್ ಚಾಲೆಂಜರ್ಸ್ ಬೆಂಗಳೂರು. ಐಪಿಎಲ್​ನ 10 ಫ್ರಾಂಚೈಸಿಗಳ ಪೈಕಿ ಅತೀ ಹೆಚ್ಚು ನಿಷ್ಠಾವಂತ ಅಭಿಮಾನಿಗಳನ್ನ ಹೊಂದಿರೋ ತಂಡ. ಒಂದು ತಂಡದ ಸ್ಟಾರ್​ಡಮ್ ಹೆಚ್ಚಾಗೋಕೆ ಕಪ್​ಗಳನ್ನ ಗೆಲ್ಲಲೇಬೇಕು ಅಂತಿಲ್ಲ. ಲಾಯಲ್ ಫ್ಯಾನ್ಸ್ ಇದ್ರೆ ಸಾಕು ಅನ್ನೋದನ್ನ ತಮ್ಮ ಕನ್ನಡಿಗರು ತೋರಿಸಿಕೊಟ್ಟಿದ್ದಾರೆ. ಹಾಗಾದ್ರೆ 17 ವರ್ಷಗಳಿಂದ ಟ್ರೋಫಿ ಕನಸು ಕನಸಾಗೇ ಉಳಿದಿರುವಂತ ಆರ್​ಸಿಬಿಯ ಇನ್ಕಂ ಎಷ್ಟಿದೆ? ಎಷ್ಟು ಖರ್ಚು ಮಾಡ್ತಾರೆ? ಫ್ರಾಂಚೈಸಿಗಳ ಪೈಕಿ ಅತೀಹೆಚ್ಚು ವಹಿವಾಟು ನಡೆಸೋದು ಯಾರು? ಈ ಬಗೆಗಿನ ಒಂದಷ್ಟು ಮಾಃಇತಿ ಇಲ್ಲಿದೆ.

ಇದನ್ನೂ ಓದಿ:  HITಮ್ಯಾನ್ ಬ್ಯಾಟ್ ಸೈಲೆಂಟ್.. 11 ಇನ್ನಿಂಗ್ಸ್.. ಗಳಿಸಿದ್ದು 134 ರನ್! – ರೋಹಿತ್ ಕ್ಯಾಪ್ಟನ್ಸಿ ಬುಮ್ರಾ ಪಾಲು?

2025ರ ಐಪಿಎಲ್ ಹರಾಜಿನಲ್ಲಿ ಹೊಸ ತಂಡವನ್ನ ಕಟ್ಟಿರೋ ಆರ್​ಸಿಬಿ 18ನೇ ಸೀಸನ್​ಗೆ ಟ್ರೋಫಿ ಗೆಲ್ಲೋ ಲೆಕ್ಕಾಚಾರದಲ್ಲಿದೆ. ಬಟ್ ಸೋಲು ಗೆಲುವು ಏನೇ ಇದ್ರೂ ಕನ್ನಡಿಗರು ಮಾತ್ರ ಅತ್ಯಂತ ನಿಷ್ಠಾವಂತರಾಗಿ ಡೇ ಒನ್​ನಿಂದ ತಮ್ಮ ತಂಡಕ್ಕೆ ಸಪೋರ್ಟ್ ಮಾಡ್ತಿದ್ದಾರೆ. ಸೋತ್ರೂ ಗೆದ್ರೂ ಆರ್​ಸಿಬಿಯೇ ನಮ್ಮ ಉಸಿರು ಅಂತಾ ಜೈಕಾರ ಹಾಕ್ತಾರೆ. ಪ್ರತೀ ಸೀಸನ್ ಆರಂಭ ಆದಾಗ್ಲೂ ಈ ಸಲ ಕಪ್ ನಮ್ದೇ ಅಂತಾ ಮತ್ತದೇ ಜೋಶ್​ನಿಂದ ಸೀಸನ್ ಸ್ಟಾರ್ಟ್ ಮಾಡ್ತಾರೆ. ಫ್ಯಾನ್ಸ್  ಬಿಡಿ ಕ್ರಿಕೆಟ್ ಆಗುವಂಥ ಎಷ್ಟೋ ಆಟಗಾರರಿಗೆ ಬೆಂಗಳೂರು ತಂಡದಲ್ಲಿ ಒಂದು ಸಲನಾದ್ರೂ ಆಡ್ಬೇಕಪ್ಪ ಅನ್ನೋ ಕನಸಿರುತ್ತೆ. ಅದಕ್ಕೆ ಕಾರಣ ಅದೇ ಅಭಿಮಾನಿಗಳ ನಿಷ್ಕಲ್ಮಶವಾದ ಪ್ರೀತಿ. ಬಟ್ ಇದೇ ಅಭಿಮಾನಿಗಳ ನಿಷ್ಠೆಯನ್ನ ಫ್ರಾಂಚೈಸಿ ಬಂಡವಾಳ ಮಾಡಿಕೊಳ್ತಿದೆ ಅನ್ನೋದೇ ಬೇಸರದ ಸಂಗತಿ. ಹಂಗಂತ ಇದು ನಮ್ಮ ತಂಡಕ್ಕಷ್ಟೇ ಅಲ್ಲ. ಎಲ್ಲಾ ಫ್ರಾಂಚೈಸಿಗಳ ಹಣೆಬರಹನೂ ಅಷ್ಟೇ.

ಉದ್ಘಾಟನೆ ವರ್ಷವೇ ಅತಿ ಹೆಚ್ಚು ಮೊತ್ತಕ್ಕೆ ಖರೀದಿ ಮಾಡಿದ್ದ ಮಲ್ಯ!

ಯೆಸ್.. ಐಪಿಎಲ್​ನ ಸ್ಟಾರ್ಟಿಂಗ್ ಇಯರ್​ಗಳನ್ನ ನೆನಪಿಸಿಕೊಂಡ್ರೆ ನೆನಪಾಗೋದೇ ವಿಜಯ್ ಮಲ್ಯ. ಸ್ಟೇಡಿಯಮ್​ಗಳಲ್ಲಿ ಮಲ್ಯ ಮತ್ತು ಅವ್ರ ಪುತ್ರ ಸಿದ್ಧಾರ್ಥ್ ಯಾವಾಗ್ಲೂ ಕಾಣಿಸಿಕೊಳ್ತಿದ್ರು. 2008ರಲ್ಲಿ ಐಪಿಎಲ್ ಶುರುವಾದಾಗಲೇ ಬೆಂಗಳೂರು ತಂಡವನ್ನ ಮಲ್ಯ ಖರೀದಿ ಮಾಡಿದ್ರು. ಅಂದಿನಿಂದಲೇ ಆರ್​ಸಿಬಿಯ ಸ್ಟಾರ್​ಡಮ್ ಸ್ಟಾರ್ಟ್ ಆಗಿತ್ತು. ಆರ್​ಸಿಬಿ ತಂಡವನ್ನು ಕಿಂಗ್‌ಫಿಶರ್ ಏರ್‌ಲೈನ್ಸ್ ಅಂದಿನ ಅಧ್ಯಕ್ಷ ವಿಜಯ್ ಮಲ್ಯ 111.6 ಮಿಲಿಯನ್‌ ಡಾಲರ್​ಗೆ ಅಂದ್ರೆ ಭಾರತೀಯ ಕರೆನ್ಸಿ ಪ್ರಕಾರ 942 ಕೋಟಿ ರೂಪಾಯಿಗೆ ಖರೀದಿಸಿದ್ದರು. ಇದು ಐಪಿಎಲ್​ನ 2ನೇ ಅತಿ ಹೆಚ್ಚು ಬಿಡ್ ಆಗಿತ್ತು. ಉದ್ಘಾಟನಾ ಐಪಿಎಲ್​ನಲ್ಲಿ ಚೊಚ್ಚಲ ಪ್ರವೇಶ ಮಾಡಿದ ಆರ್ ಸಿಬಿ ಫ್ರಾಂಚೈಸಿ, 2008 ರಿಂದ ಆರಂಭದಿಂದ ಟ್ರೋಫಿ ಗೆಲ್ಲದೆ ಆಡುತ್ತಿರುವ ತಂಡಗಳಲ್ಲಿ ಇದು ಕೂಡ ಒಂದಾಗಿದೆ. ಆರ್‌ಸಿಬಿ 2009, 2011, 2016ರ ಐಪಿಎಲ್‌ನಲ್ಲಿ ಫೈನಲ್ ತಲುಪಿತ್ತಾದರೂ ಟ್ರೋಫಿಗೆ ಮುತ್ತಿಡೋಕೆ ಆಗಿಲ್ಲ.

2016ರಲ್ಲಿ ಮಲ್ಯರಿಂದ ಮತ್ತೊಬ್ಬರಿಗೆ ಫ್ರಾಂಚೈಸಿ ಮಾರಾಟ!

ವಿಜಯ್ ಮಲ್ಯ ಸಾಲದ ಸುಳಿಯಲ್ಲಿ ಬಿದ್ದು ದೇಶ ಬಿಟ್ಟಿದ್ದು ನಿಮ್ಗೆಲ್ಲಾ ಗೊತ್ತೇ ಇದೆ. ಇದೇ ಕಾರಣಕ್ಕೆ 2016ರಲ್ಲಿ ಸಾಲವನ್ನು ಮರುಪಾವತಿಸದ ಕಾರಣ ಬೇರೊಬ್ಬರಿಗೆ ಆರ್ ಸಿಬಿ ಫ್ರಾಂಚೈಸಿಯನ್ನ ಮಾರಾಟ ಮಾಡಬೇಕಾಯಿತು. ಪ್ರಸ್ತುತ ಈ ತಂಡ ಡಿಯಾಜಿಯೊದ ಅಂಗಸಂಸ್ಥೆಯಾಗಿರುವಂಥ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್‌ನ ಮಾಲೀಕತ್ವದಲ್ಲಿದೆ. 2022ರ ಹೊತ್ತಿಗೆ ರಾಯಲ್ ಚಾಲೆಂಜರ್ಸ್ 3ನೇ ಶ್ರೀಮಂತ ಫ್ರಾಂಚೈಸ್ ಆಗಿದ್ದು, ಆರ್​ಸಿಬಿ ನಿವ್ವಳ ಮೌಲ್ಯ 697 ಕೋಟಿ ರೂಪಾಯಿ. ಫ್ರಾಂಚೈಸಿ ಅಧ್ಯಕ್ಷ ಪ್ರಥಮೇಶ್ ಮಿಶ್ರಾ ಅವ್ರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಓನರ್​ ಯಾರು?

ಸದ್ಯ ಆರ್​ಸಿಬಿ ತಂಡ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್  ಒಡೆತನದಲ್ಲಿದೆ. ಆದರೆ ಈ ಹಿಂದೆ ಯುನೈಟೆಡ್ ಬ್ರೂವರೀಸ್ ಮಾಲೀಕತ್ವದಲ್ಲಿತ್ತು. ಇದು ಭಾರತದ ಆಲ್ಕೊಹಾಲ್​ಯುಕ್ತ ಪಾನೀಯ  ಕಂಪನಿ. ಅತಿ ಹೆಚ್ಚು ಪ್ರಮಾಣದ ಸ್ಪಿರಿಟ್‌ ಉತ್ಪಾದಿಸುವ ವಿಶ್ವದ 2ನೇ ಕಂಪನಿ. ಇಂಗ್ಲಿಷ್ ಬಹುರಾಷ್ಟ್ರೀಯ ಆಲ್ಕೊಹಾಲ್​ಯುಕ್ತ ಪಾನೀಯ ದೈತ್ಯ ಮತ್ತು ವಿಶ್ವದ ಪ್ರಮುಖ ಮದ್ಯದ ಕಂಪನಿಗಳಲ್ಲಿ ಒಂದು. ಯುನೈಟೆಡ್ ಸ್ಪಿರಿಟ್ಸ್‌ನ ಪ್ರಸ್ತುತ ಸಿಇಒ, ವ್ಯವಸ್ಥಾಪಕ ನಿರ್ದೇಶಕಿ ಹಿನಾ ನಾಗರಾಜನ್.

2025ರಲ್ಲಿ ಮತ್ತಷ್ಟು ಹೆಚ್ಚಾಗುತ್ತಾ ಬೆಂಗಳೂರು ತಂಡದ ಆದಾಯ?

ಆರ್​ಸಿಬಿ ಫ್ರಾಂಚೈಸಿ ಕಪ್ ಗೆಲ್ಲದೇ ಇದ್ರೂ ಅದ್ರ ವ್ಯಾಲ್ಯೂ ಮಾತ್ರ ದಿನದಿನಕ್ಕೂ ಜಾಸ್ತಿಯಾಗ್ತಾನೇ ಹೋಗ್ತಿದೆ. ಆರ್​​ಸಿಬಿ ಆದಾಯ 2023ಕ್ಕೆ ಹೋಲಿಸಿದರೆ 2024ರಲ್ಲಿ ಶೇ 163 ರಷ್ಟು ಏರಿಕೆ ಕಂಡಿದೆ. 2023-24ರಲ್ಲಿ ಆದಾಯ 650 ಕೋಟಿಗೆ  ರೀಚ್ ಆಗಿದೆ. 2023ರ ಐಪಿಎಲ್​ನಲ್ಲಿ 247 ಕೋಟಿ ರೂಪಾಯಿ ಹರಿದು ಬಂದಿತ್ತು.   2025ರ ಐಪಿಎಲ್​ನಲ್ಲಿ ಈ ಆದಾಯ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಫ್ರಾಂಚೈಸ್​ಗಳಿಗೆ ಆದಾಯದ ಮೂಲಗಳು ಸಾಕಷ್ಟಿವೆ. ಜಾಹೀರಾತು, ಮಾಧ್ಯಮ ಹಕ್ಕು, ಟಿಕೆಟ್ ಪ್ರೈಸ್ ಸೇರಿ ಹಲವು ಮೂಲಗಳು. ಪ್ರತಿ ವರ್ಷವೂ ಕೋಟಿಗಟ್ಟಲೇ ದುಡಿಯುವ ಫ್ರಾಂಚೈಸಿ ಟ್ರೋಫಿ ಗೆಲ್ಲದಿದ್ದರೂ ‘ನಿಷ್ಠಾವಂತ ಅಭಿಮಾನಿಗಳ ಅಭಿಮಾನವೇ ಆರ್​ಸಿಬಿಗೆ ಬಂಡವಾಳವಾಗುತ್ತಿದೆ.

ಆರ್​ಸಿಬಿ ಮ್ಯಾನೇಜ್​​ಮೆಂಟ್​ ಡೇ ಒನ್​ನಿಂದಲೇ ತಂಡವನ್ನ ಬ್ರ್ಯಾಂಡ್​​ ಆಗಿ ಬೆಳೆಸಲು ಪ್ಲ್ಯಾನ್ ಮಾಡಿತ್ತು. ಅದ್ರಂತೆ ಆರಂಭದಲ್ಲೇ ಸೂಪರ್ ಸ್ಟಾರ್​​​​ಗಳಿಗೆ ಮಣೆ ಹಾಕಿತ್ತು. ದಿಗ್ಗಜರಾದ ರಾಹುಲ್ ದ್ರಾವಿಡ್​​, ಅನಿಲ್​ ಕುಂಬ್ಳೆ, ಕ್ರಿಸ್ ಗೇಲ್​​ ಹಾಗೂ ಎಬಿ ಡಿವಿಲಿಯರ್ಸ್​ ಆರ್​ಸಿಬಿ ಪರ ಆಡಿ ಹಲವು ದಾಖಲೆಗಳನ್ನ ಮಾಡಿದ್ದಾರೆ. ಅದ್ರಲ್ಲೂ ಗ್ಲೋಬಲ್ ಐಕಾನ್​ ವಿರಾಟ್ ಕೊಹ್ಲಿ ಆರ್​ಸಿಬಿಯ ದೊಡ್ಡ ಶಕ್ತಿಯಾಗಿದ್ದಾರೆ. ಫ್ಯಾನ್ಸ್​​ಗಾಗಿನೇ ಆರ್​ಸಿಬಿ ಫ್ರಾಂಚೈಸಿ ಪ್ರತಿವರ್ಷ ವಿಭಿನ್ನ ಕಾರ್ಯಕ್ರಮಗಳನ್ನ ಏರ್ಪಡಿಸುತ್ತೆ. ಬೋಲ್ಡ್​ ಡೈರಿ, ಆರ್​ಸಿಬಿ ಗೇಮ್​​​, ಆರ್​ಸಿಬಿ ಇನ್​ಸೈಡರ್​​​​​​ ಹಾಗೂ ಆರ್​ಸಿಬಿ 12TH ಮ್ಯಾನ್​​ ಮುಂತಾದ ಕಾರ್ಯಕ್ರಮಗಳು, ಈ ಮೂಲಕವೂ ಫ್ರಾಂಚೈಸಿ ತನ್ನ ಅಭಿಮಾನಿಗಳನ್ನ ತನ್ನತ್ತ ಸೆಳೆಯುತ್ತಿದೆ. ಒಟ್ನಲ್ಲಿ ಫ್ಯಾಂಚೈಸಿಗೆ ಎಷ್ಟು ಹಣ ಬರುತ್ತೆ, ಲಾಭ ಮಾಡಿಕೊಳ್ಳುತ್ತೆ ಅನ್ನೋದೆಲ್ಲಾ ಸೆಕೆಂಡ್ರಿ. ಬಟ್ ಕಪ್ ಗೆದ್ರೂ ಗೆಲ್ಲದೇ ಇದ್ರೂ ಕನ್ನಡಿಗರ ಸಪೋರ್ಟ್ ಯಾವತ್ತಿಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಾತ್ರವೇ.

Shwetha M