RCBಯ‌ ವ್ಯವಹಾರ ಎಷ್ಟಿದೆ? – ಈಗ ಫ್ರಾಂಚೈಸಿ ಮಾಲೀಕ ಯಾರು?

RCBಯ‌ ವ್ಯವಹಾರ ಎಷ್ಟಿದೆ? – ಈಗ ಫ್ರಾಂಚೈಸಿ ಮಾಲೀಕ ಯಾರು?

ರಾಯಲ್‌ ಚಾಲೆಂಜರ್ಸ್ ಬೆಂಗಳೂರು.. 16 ವರ್ಷದಿಂದ ಕಪ್ ಗೆಲ್ಲದೇ ಇದ್ದರೂ ಅಭಿಮಾನಿಗಳ ಅಭಿಮಾನ ಮಾತ್ರ ಒಂಚೂರು ಕಡಿಮೆಯಾಗಿಲ್ಲ..  ಆರ್ ಸಿಬಿ ಫ್ಯಾನ್ಸ್  ಆಲ್‌ಮೋಸ್ಟ್ ಪ್ರತಿ ಮ್ಯಾಚ್‌ ಮುಗಿದ್ಮೇಲೂ ಇತ್ತೀಚೆಗೆ ತಂಡದ ಮ್ಯಾನೆಜ್‌ಮೆಂಟ್‌ ವಿರುದ್ದ ಕಿಡಿಕಾರುತ್ತಲೇ ಇರುತ್ತಾರೆ.. ಆದ್ರೆ ಆರ್ ಸಿಬಿ ಮ್ಯಾನೆಜ್‌ಮೆಂಟ್‌ ಮಾತ್ರ ಮೌನದಿಂದಲೇ ಲಾಭ ಮಾಡಿಕೊಳ್ತಿದೆ. ಅಷ್ಟಕ್ಕೂ ಆರ್ ಸಿಬಿ ತಂಡದ ಈಗಿನ ಮಾಲೀಕರು ಯಾರು ಗೊತ್ತಾ? ಅವ್ರ ಆದಾಯ ಎಷ್ಟು ಈ ಕುರಿತ ಮಾಹಿತಿ ಇಲ್ಲಿದೆ..

ಜಗತ್ತಿನಾದ್ಯಂತ ನಿಷ್ಠಾವಂತ ಅಭಿಮಾನಿಗಳನ್ನು ಹೊಂದಿರುವ ತಂಡ ಅಂದರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾತ್ರ. 16 ವರ್ಷಗಳಿಂದಲೂ ಟ್ರೋಫಿ ಗೆಲ್ಲದಿದ್ದರೂ ಅಭಿಮಾನಿಗಳು ತಂಡವನ್ನು ಎಂದಿಗೂ ಬಿಟ್ಟುಕೊಟ್ಟಿಲ್ಲ. ಅಚ್ಚರಿ ಏನೆಂದರೆ ಇದೇ ಫ್ಯಾನ್ಸ್ ನಿಷ್ಠೆಯನ್ನೇ ಫ್ರಾಂಚೈಸಿ ಬಂಡವಾಳ ಮಾಡಿಕೊಳ್ಳುತ್ತಿದೆ. ಈ ಬಾರಿಯಂತೂ ಹೊಸ ಅಧ್ಯಾಯ ಎಂದು ಹೇಳುವ ಮೂಲಕ ಆರ್‌ಸಿಬಿ ಹವಾ ಸೃಷ್ಟಿಸಿತ್ತು. ಇದೀಗ ಸತತ ಸೋಲಿನಿಂದ ಆರ್‌ಸಿಬಿ ಕಂಗೆಟ್ಟು ಹೋಗಿದೆ..

ಇದನ್ನೂ ಓದಿ: ವಿಕೆಟ್ ಕೀಪರ್ಸ್.. ಮ್ಯಾಚ್ ಫಿನಿಶರ್ಸ್  – ಅಂಕಲ್ಸ್ ಅಂದವ್ರಿಗೆ MSD, DK ಡಿಚ್ಚಿ

ಆರ್ ಸಿಬಿಯ ಶೋಚನೀಯ ಪ್ರದರ್ಶನ ಕಂಡು  ದಯವಿಟ್ಟು ತಂಡವನ್ನು  ಹೊಸ ಮಾಲಿಕರಿಗೆ ಮಾರಿ ಬಿಡಿ ಎಂಬ ಕೂಗು ಕೂಡ ಕೇಳಿ ಬಂದಿದೆ‌‌.. ಈ ಕೂಗು ಕೇಳಿ ಬಂದ ಬೆನ್ನಲ್ಲೇ ಆರ್‍ ಸಿಬಿ ಮಾಲೀಕರು ಯಾರೆಂಬ ಹುಡುಕಾಟ ಶುರುವಾಗಿದೆ.

2008 ರಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಅನ್ನು ಕಿಂಗ್‌ ಫಿಶರ್ ಏರ್‌ಲೈನ್ಸ್ ನ  ಆಗಿನ ಅಧ್ಯಕ್ಷ ವಿಜಯ್ ಮಲ್ಯ ಖರೀದಿಸಿದ್ದರು. ತಂಡದ ಹರಾಜಿನ ಸಮಯದಲ್ಲಿ RCB ಗಾಗಿ ಎರಡನೇ ಅತಿ ಹೆಚ್ಚು ಬಿಡ್  111.6 ಮಿಲಿಯನ್ ಡಾಲರ್‌  ಆಗಿತ್ತು. ಆದರೆ, ವಿಜಯ್ ಮಲ್ಯ ಮತ್ತು ಆರ್‌ಸಿಬಿಯ ಪ್ರಯಾಣವು 2016 ರವರೆಗೆ ಸೀಮಿತವಾಗಿತ್ತು. ನಂತರ ಸಾಲ, ಜೈಲು ಅಂತೆಲ್ಲಾ ಮಲ್ಯ ದೇಶ ತೊರೆಯಬೇಕಾಯಿತು. RCB ಯ ಮಾಲೀಕ ಯುನೈಟೆಡ್ ಸ್ಪಿರಿಟ್ಸ್ ಆಗಿದೆ. ಆದ್ರೆ ಇದು ಯಾವುದೇ ವೈಯಕ್ತಿಕ ಮಾಲೀಕರನ್ನು ಹೊಂದಿಲ್ಲ. 2022ರ ಹೊತ್ತಿಗೆ ರಾಯಲ್ ಚಾಲೆಂಜರ್ಸ್ 3ನೇ ಶ್ರೀಮಂತ ಫ್ರಾಂಚೈಸ್ ಆಗಿದೆ. ಆರ್​ಸಿಬಿ ನಿವ್ವಳ ಮೌಲ್ಯ 697 ಕೋಟಿಗೆ ಬೆಳೆದಿದೆ.

ಅಂದಹಾಗೆ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (USL)ನ  ಹಿಂದಿನ ಹೆಸರು ಯುನೈಟೆಡ್ ಬ್ರೀವರೀಸ್ ಆಗಿತ್ತು… ಯುನೈಟೆಡ್ ಸ್ಪಿರಿಟ್ಸ್‌ನ ಪ್ರಸ್ತುತ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಹಿನಾ ನಾಗರಾಜನ್. ಮಹಿಳಾ ಪ್ರೀಮಿಯರ್​ ಲೀಗ್​​ನಲ್ಲೂ ತಂಡವನ್ನು ಹೊಂದಿದೆ. ಆರ್​ಸಿಬಿ ಫ್ರಾಂಚೈಸಿ ಮಾಲೀಕರ ಒಟ್ಟಾರೆ​ ಆದಾಯ 2.4 ಶತಕೋಟಿ ರೂಪಾಯಿಗೂ ಹೆಚ್ಚು ಎಂದು ವರದಿಯಾಗಿದೆ. ಈ ಪೈಕಿ 2023ರಲ್ಲೇ 1.4 ಶತಕೋಟಿ ಹರಿದು ಬಂದಿದೆ ಎಂದು ಹೇಳಲಾಗಿದೆ. ಜಾಹೀರಾತು, ಮಾಧ್ಯಮ ಹಕ್ಕು ಸೇರಿದಂತೆ ಹಲವು ಮೂಲಗಳಿಂದ ಆದಾಯ ಹರಿದು ಬರುತ್ತಿದೆ. ಪ್ರತಿ ವರ್ಷವೂ ಕೋಟಿಗಟ್ಟಲೇ ದುಡಿಯುವ ಫ್ರಾಂಚೈಸಿ ಒಂದು ಟ್ರೋಫಿ ಗೆಲ್ಲದಿದ್ದರೂ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸುವುದರಲ್ಲಿ ಮಾತ್ರ ಹಿಂದೆ‌ ಬಿದ್ದಿಲ್ಲ.

Shwetha M

Leave a Reply

Your email address will not be published. Required fields are marked *