ಭಾರತದ ಫಾಸ್ಟ್ ಬೌಲರ್ ಆಲ್‌ರೌಂಡರ್ ಕೊರಗಿಗೆ ಯಾವಾಗ ಮುಕ್ತಿ ಸಿಗುತ್ತೆ?
BCCIಗೆ ಸಿಕ್ಕಿಲ್ವಾ ಮತ್ತೊಬ್ಬ ಪಾಂಡ್ಯ?

ಟಿ20 ಪಂದ್ಯಗಳಲ್ಲಿ ಅಬ್ಬರಿಸುತ್ತಿರೋ ಹಾರ್ದಿಕ್ ಪಾಂಡ್ಯ, 7 ವರ್ಷಗಳ ಹಿಂದೆ ಟೆಸ್ಟ್‌ನಲ್ಲೂ ಅಬ್ಬರಿಸುತ್ತಿದ್ದರು. 2018 ಸೆಪ್ಟೆಂಬರ್ 2. ರಂದು ನಡೆದ ಇಂಗ್ಲೆಂಡ್ ಎದುರಿನ ಟೆಸ್ಟ್ ಪಂದ್ಯ ಟೀಮ್ ಇಂಡಿಯಾ 60 ರನ್ ಗಳ ಹೀನಾಯ ಸೋಲು ಕಂಡಿತ್ತು. ಈ ಟೆಸ್ಟ್ ಪಂದ್ಯ ನಡೆದು ಬರೋಬ್ಬರಿ 6 ವರ್ಷ 8 ತಿಂಗಳೇ ಕಳೆದಿವೆ. ಈ ಸೋಲನ್ನೂ ಮರೆತು ಮುಂದೆ ಸಾಗಿದ್ದಾಗಿದೆ. ಇದೇ ಅವಧಿಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯನೂ ಬಿಟ್ಟು ಮುಂದೆ ಸಾಗಿದ್ದಾಗಿದೆ. ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಲೌಂಡರ್ ಪಾಂಡ್ಯ ವೈಟ್ ಜರ್ಸಿಯಲ್ಲಿ ಕಂಡು 2462 ದಿನಗಳು ಉರುಳಿವೆ. ಈ 7 ವರ್ಷದಲ್ಲಿ ಟೀಮ್ ಇಂಡಿಯಾ ಹಲವು ಟೆಸ್ಟ್ ಪಂದ್ಯಗಳನ್ನಾಡಿದೆ. ಸೋಲು-ಗೆಲುವು ಎಲ್ಲವನ್ನೂ ಕಂಡಿದೆ. ಟೀಮ್ ಇಂಡಿಯಾಗೆ ಮಾತ್ರ ಓರ್ವ ಸಮರ್ಥ ಫಾಸ್ಟ್ ಬೌಲಿಂಗ್ ಆಲ್ರೌಂಡರ್ನ ಕೊರಗು ಬಿಟ್ಟೂ ಬಿಡದೇ ಕಾಡಿದೆ. ಹಾರ್ದಿಕ್ ಪಾಂಡ್ಯ ನಂತ್ರ ಯಾರು ಕೂಡ ಹೇಳಿಕೊಳ್ಳುವಂತಹ ಫಾಸ್ಟ್ ಬೌಲರ್ ಯಾರು ಸಿಕ್ಕಿಲ್ಲ.
2018ರಲ್ಲಿ ಬ್ಯಾಕ್ ಇಂಜುರಿಗೆ ತುತ್ತಾಗಿದ್ದ ಹಾರ್ದಿಕ್, ಸರಿ ಸುಮಾರು 1 ವರ್ಷ ಕ್ರಿಕೆಟ್ನಿಂದಲೇ ದೂರ ಉಳಿದಿದ್ದರು. ಬಳಿಕ ಕಮ್ಬ್ಯಾಕ್ ಮಾಡಿದ್ರೂ ವೈಟ್ ಬಾಲ್ ಫಾರ್ಮೆಟ್ಗೆ ಮಾತ್ರವೇ ಸಿಮೀತವಾಗಿದ್ದಾರೆ. ಈ ಅವಧಿಯಲ್ಲಿ ಟೀಮ್ ಇಂಡಿಯಾ, ಸಮರ್ಥ ಫಾಸ್ಟ್ ಬೌಲಿಂಗ್ ಆಲ್‌ರೌಂಡರ್ ಇಲ್ಲದೆ 2021,2023ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಸೋತಿತ್ತು. ಇದಕ್ಕೆ ಕಾರಣ ಇಂಗ್ಲೆಂಡ್ನಂತ ಪಿಚ್ನಲ್ಲಿ ಕಾಡಿದ್ದ ಫಾಸ್ಟ್ ಬೌಲಿಂಗ್ ಆಲ್‌ರೌಂಡರ್ ಕೊರತೆ. ಆದ್ರೀಗ ಮತ್ತೆ ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾಗಿರುವ ಟೀಮ್ ಇಂಡಿಯಾದಲ್ಲಿ ಮತ್ತದೇ ಫಾಸ್ಟ್ ಬೌಲಿಂಗ್ ಆಲ್‌ರೌಂಡರ್ ಪ್ರಶ್ನೆ ಹುಟ್ಟಿಕೊಂಡಿದೆ.
ಹಾರ್ದಿಕ್ ಪಾಂಡ್ಯ ಅಲಭ್ಯತೆಯಲ್ಲಿ ಟೀಮ್ ಇಂಡಿಯಾಗೆ ಹಲವು ಫಾಸ್ಟ್ ಬೌಲಿಂಗ್ ಆಲ್ರೌಂಡರ್ಸ್ ಬಂದಿದ್ದಾರೆ. ಅವರಲ್ಲಿ ಯಾರೂ ಸಮರ್ಥವಾಗಿ ಹಾರ್ದಿಕ್ಗೆ ಸಾಟಿಯಾಗಲಿಲ್ಲ. ಪಾಂಡ್ಯಗೆ ಉತ್ತರಾಧಿಕಾರಿಗಳಾಗಿ ನಿತಿಶ್ ಕುಮಾರ್ ರೆಡ್ಡಿ, ಶಾರ್ದೂಲ್ ಠಾಕೂರ್ ಕಾಣಿಸಿಕೊಳ್ತಿದ್ದಾರೆ. ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗಿದ್ದ ನಿತಿಶ್ ಕುಮಾರ್ ರೆಡ್ಡಿ, ಹಾರ್ದಿಕ್ ಸ್ಥಾನ ತುಂಬ್ತಾರೆ ಎಂಬ ನಿರೀಕ್ಷೆಯೇ ದಟ್ಟವಾಗಿತ್ತು. ಆ ಸರಣಿಯಲ್ಲಿ ನಿತಿಶ್ ಕುಮಾರ್ ರೆಡ್ಡಿ, 1 ಶತಕ ಒಳಗೊಂಡ 298 ರನ್ ಸಿಡಿಸಿದ್ದು ಬಿಟ್ರೆ, ಬೌಲಿಂಗ್ನಲ್ಲಿ ಕಮಾಲ್ ಮಾಡಲಿಲ್ಲ. 5 ಪಂದ್ಯಗಳಿಂದ ಕೇವಲ 5 ವಿಕೆಟ್ ಮಾತ್ರವೇ ಬೇಟೆಯಾಡಿದ ನಿತಿಶ್, ನಿಜಕ್ಕೂ ಪಾಂಡ್ಯಗೆ ಪರ್ಯಾಯವಾ ಎಂಬ ಪ್ರಶ್ನೆ ಆಸ್ಟ್ರೇಲಿಯಾದಲ್ಲೇ ಹುಟ್ಟಿಕೊಂಡಿತ್ತು..
ನಿತಿಶ್ ಕುಮಾರ್ ರೆಡ್ಡಿ ಮಾತ್ರವೇ ಅಲ್ಲ. ಇಂಗ್ಲೆಂಡ್ ಪ್ರವಾಸಕ್ಕೆ ಆಣಿಯಾಗಿರುವ ಶಾರ್ದೂಲ್ ಠಾಕೂರ್ ಬಗ್ಗೆಯೂ ಅನುಮಾನ ಇದೆ. 2021-23ರ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಶಾರ್ದೂಲ್, 8 ಇನ್ನಿಂಗ್ಸ್ಗಳಿಂದ 10 ವಿಕೆಟ್ ಉರುಳಿಸಿ, 2 ಅರ್ಧಶತಕ ಒಳಗೊಂಡ 122 ರನ್ ಗಳಿಸಿದ್ದಾರೆ. ಹೀಗಾಗಿ ಶಾರ್ದೂಲ್, ಓರ್ವ ಜನ್ಯೂನ್ ಆಲ್‌ರೌಂಡರ್ ಎನ್ನಲು ಸಾಧ್ಯವಿಲ್ಲ.
ಟೀಮ್ ಇಂಡಿಯಾದ ಫಾಸ್ಟ್ ಬೌಲಿಂಗ್ ಆಲ್‌ರೌಂಡರ್ ಮತ್ಯಾರು ಎಂಬ ಪ್ರಶ್ನೆಗೆ ಉತ್ತರ ಭಾರತ ಎ ತಂಡದಲ್ಲಿನ ಮೂವರು ಆಟಗಾರರು ಆಗಿದ್ದಾರೆ. ಈ ಪೈಕಿ ಒಬ್ಬ ಅರ್ಶಿನ್ ಕುಲಕರ್ಣಿ, ಮತ್ತೊಬ್ಬ ಕೃಷ್ ಭಗತ್, ಮಗದೊರ್ವ ಜಮೀತ್ ಪಟೇಲ್.
ಫಾಸ್ಟ್ ಬೌಲಿಂಗ್ ಆಲ್‌ರೌಂಡರ್ ಆಗಿರುವ ಮಹಾರಾಷ್ಟ್ರದ ಅರ್ಶಿನ್ ಕುಲಕರ್ಣಿ, 4 ಪಂದ್ಯಗಳಿಂದ 202 ರನ್ ಗಳಿಸಿ, 3 ವಿಕೆಟ್ ಉರುಳಿಸಿದ್ದಾರೆ. ಪಂಜಾಬ್ನ ಕ್ರಿಷ್ ಭಗತ್, ಆಡಿರೋ 3 ಪಂದ್ಯಗಳಿಂದ ಒಂದು ಅರ್ಧಶತಕ ಒಳಗೊಂಡ 3 ವಿಕೆಟ್ ಬೇಟೆಯಾಡಿದ್ದಾರೆ. ಗುಜರಾತ್ನ ಜಮೀತ್ ಪಟೇಲ್, 9 ಪಂದ್ಯಗಳಿಂದ 2 ಶತಕ, 5 ಅರ್ಧಶತಕ ಒಳಗೊಂಡ 661 ರನ್ ಗಳಿಸಿದ್ದಾರೆ. ಬೌಲಿಂಗ್ನಲ್ಲೂ 10 ವಿಕೆಟ್ ಉರುಳಿಸಿ ಮಿಂಚಿರುವ ಜಮೀತ್, ಭವಿಷ್ಯದ ಆಲ್‌ರೌಂಡರ್ ಆಗುವ ಭರವಸೆ ಹುಟ್ಟಿಹಾಕಿದ್ದಾರೆ. ಈ ಯುವ ಪ್ರತಿಭೆಗಳ ಬೆಳವಣಿಗೆಗೆ ಮತ್ತಷ್ಟು ವೇದಿಕೆ ಸೃಷ್ಟಿಸುವ ಹೊಣೆಗಾರಿಕೆ ಬಿಸಿಸಿಐ ಮುಂದಿದೆ. ಒಟ್ನಲ್ಲಿ ಟೀಂ ಇಂಡಿಯಾಗೆ ಮತ್ತಷ್ಟು ಒಳ್ಳೆಯ ಫಾಸ್ಟ್ ಬೌಲರ್ ಅವಶ್ಯಕತೆ ಇದ್ದು, ಯಾರು ಸಿಗ್ತಾರೆ ಕಾದು ನೋಡಬೇಕಿದೆ.

ನೋಡಿರಿ

