ಸರ್ಕಾರಕ್ಕೆ ತಲೆನೋವಾದ ರಾನ್ಯಾ ರಾವ್‌ ಕೇಸ್‌! – ಪ್ರಕರಣದಲ್ಲಿ ಸಚಿವರ ಭಾಗಿತ್ವ ಇದ್ಯಾ?

ಸರ್ಕಾರಕ್ಕೆ ತಲೆನೋವಾದ ರಾನ್ಯಾ ರಾವ್‌ ಕೇಸ್‌! – ಪ್ರಕರಣದಲ್ಲಿ ಸಚಿವರ ಭಾಗಿತ್ವ ಇದ್ಯಾ?

ರಾಜ್ಯದಲ್ಲಿ ಈಗ ರಾನ್ಯಾ ರಾವ್‌ ಪ್ರಕರಣ ಭಾರಿ ಸದ್ದು ಮಾಡಿದೆ. ಇದೀಗ ಈ ಪ್ರಕರಣದಲ್ಲಿ ಸಚಿವರ ಭಾಗಿತ್ವ ಇದೆ ಅಂತ ಬಿಜೆಪಿ ಆರೋಪಿಸಿದೆ. ಮುಂದುವರಿದ ಭಾಗವಾಗಿ ಸದನದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡೋದಕ್ಕೆ ಬಿಜೆಪಿ ಪ್ಲಾನ್ ಮಾಡಿದೆ. ಈ ಪ್ರಕರಣದಿಂದಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.

ಇದನ್ನೂ ಓದಿ: ಎಕ್ಸ್ ನಲ್ಲಿ ಭಾರೀ ತಾಂತ್ರಿಕ ಸಮಸ್ಯೆ- ದೊಡ್ಡ ಮಟ್ಟದ ಸೈಬರ್ ಅಟ್ಯಾಕ್ ಎಂದ ಎಲಾನ್ ಮಸ್ಕ್

ಇಬ್ಬರು ಸಚಿವರ ಸಂಪರ್ಕ ಇರೋದು ಬಹಿರಂಗವಾಗಬೇಕು ಅಂತಾ ಪಟ್ಟು ಹಿಡಿಯಲು ವಿಪಕ್ಷಗಳು ನಿರ್ಧರಿಸಿವೆ. ಆ ಮೂಲಕ ಸರ್ಕಾರವನ್ನು ಮುಜುಗರಕ್ಕೀಡು ಮಾಡಲು ಬಿಜೆಪಿ ತಂತ್ರ ರೂಪಿಸಿದೆ. ಇನ್ನು ರನ್ಯಾ ರಾವ್ ಪ್ರಕರಣದಲ್ಲಿ ಸಚಿವರ ಹೆಸರು ಪ್ರಸ್ತಾಪ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗುಪ್ತಚರ ಇಲಾಖೆಯ ಮೊರೆ ಹೋಗಿದ್ದಾರೆ. ಇಲಾಖೆಯ ADGPಯಿಂದ ಸಿಎಂ ಮಾಹಿತಿ ಕೇಳಿದ್ದಾರೆ. ಪ್ರಕರಣದಲ್ಲಿ ಸಚಿವರು ಭಾಗಿಯಾಗಿರೋದು ನಿಜಾನಾ? ಎಂದು ಕೇಳಿದ್ದಾರೆ. ಈ ಮೂಲಕ ಒಂದಷ್ಟು ರಹಸ್ಯ ಮಾಹಿತಿಗಳನ್ನು ಸಿಎಂ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಬಿಜೆಪಿ ನಾಯಕರು ಸಚಿವರ ಮೇಲೆ ಆರೋಪ ಮಾಡ್ತಿದ್ದಾರೆ. ಬೆನ್ನಲ್ಲೇ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. ಅಷ್ಟಕ್ಕೂ ಏನಿದು ಪ್ರಕರಣ? ಇದ್ರಲ್ಲಿ ಸಚಿವರು ಭಾಗಿಯಾಗಿದ್ದಾರಾ? ನಟಿ ರನ್ಯಾರಾವ್ ಜೊತೆಗೆ ಸಚಿವರ ಸಂಪರ್ಕ ಇರೋದು ನಿಜಾನಾ? ಹಾಗಾದ್ರೆ ನಟಿಯ ಜೊತೆಗೆ ಸಂಪರ್ಕದಲ್ಲಿ ಇದ್ದ ಸಚಿವರು ಯಾರು? ಪ್ರಕರಣದಲ್ಲಿ ನಮ್ಮ ಸಚಿವರ ಹೆಸರು ಕೇಳಿ ಬರಲು ಕಾರಣ ಏನು? ಆ ಇಬ್ಬರು ಸಚಿವರ ಜೊತೆಗೆ ಇತರೆ ಅಧಿಕಾರಿಗಳ ಸಂಪರ್ಕ ಇದ್ಯಾ? ಬೇರೆ ಕಾಂಗ್ರೆಸ್ ನಾಯಕರಿಗೂ ನಟಿಯ ಜೊತೆಗೆ ಸಂಪರ್ಕ ಇದ್ಯಾ? ಅಧಿವೇಶನದ ವೇಳೆ ಈ ಪ್ರಕರಣ ಹೊರ ಬರಲು ಕಾರಣವೇನು? ಗೋಲ್ಡ್​ ಸ್ಮಗ್ಲಿಂಗ್ ಪ್ರಕರಣ ರಾಜಕೀಯ ಪ್ರೇರಿತವಾ? ಇಲ್ಲ ನಿಜವೇ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

Shwetha M

Leave a Reply

Your email address will not be published. Required fields are marked *