ಕಾಲ್ಚೆಂಡಿನ ಚತುರನಿಗೆ ಹೆಚ್ಚಾಯ್ತು ಜೀವ ಬೆದರಿಕೆ – ಲೆಯೊನೆಲ್‌ ಮೆಸ್ಸಿ ಭದ್ರತೆಗೆ ನೇಮಕಗೊಂಡ ಹೊಸ ಬಾಡಿಗಾರ್ಡ್‌ ಯಾರು ಗೊತ್ತಾ?

ಕಾಲ್ಚೆಂಡಿನ ಚತುರನಿಗೆ ಹೆಚ್ಚಾಯ್ತು ಜೀವ ಬೆದರಿಕೆ – ಲೆಯೊನೆಲ್‌ ಮೆಸ್ಸಿ ಭದ್ರತೆಗೆ ನೇಮಕಗೊಂಡ ಹೊಸ ಬಾಡಿಗಾರ್ಡ್‌ ಯಾರು ಗೊತ್ತಾ?

ಫುಟ್ಬಾಲ್ ಜಗತ್ತಿನ ಸಾಮ್ರಾಟನಾಗಿ ಮೆರೆಯುತ್ತಿರುವ ಮೆಸ್ಸಿ ಲೆಕ್ಕವಿಲ್ಲದಷ್ಟು ದಾಖಲೆ ಬರೆದಿದ್ದಾರೆ. ಫಿಫಾ ವಿಶ್ವಕಪ್‌ ಟೂರ್ನಿ ಬಳಿಕ ಇತ್ತೀಚೆಗಷ್ಟೇ ಇಂಟರ್ ಮಿಯಾಮಿ ಕ್ಲಬ್‌ ಸೇರಿದ ಲಿಯೊನೆಲ್‌ ಮೆಸ್ಸಿ ಯುಎಸ್‌ ಲೀಗ್‌ನಲ್ಲಿ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಮೆಸ್ಸಿಗೆ ದೇಶ, ವಿದೇಶಗಳಲ್ಲಿ ಸಾಕಷ್ಡು ಅಭಿಮಾನಿಗಳು ಇದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಮೆಸ್ಸಿಗೆ ಕೆಲ ಬೆದರಿಕೆಗಳು ಬರುತ್ತಿವೆ. ಈ ಹಿನ್ನೆಲೆ ಮೆಸ್ಸಿ ಸುರಕ್ಷತೆಗಾಗಿ ಎಂಎಂಎ ಫೈಟರ್‌ ಹಾಗೂ ಮಾಜಿ ಸೈನಿಕನನ್ನ ಬಾಡಿಗಾರ್ಡ್‌ ಆಗಿ ನೇಮಿಸಲಾಗಿದೆ.

ಫುಟ್ಬಾಲ್‌ ತಾರೆ ಲಿಯೋನೆಲ್‌ ಮೆಸ್ಸಿ ಅತ್ಯಂತ ಜನಪ್ರಿಯ ಆಟಗಾರ.  ಕಳೆದ ಕೆಲವು ತಿಂಗಳುಗಳಿಂದ ಸಾಕಷ್ಟು ಬೆದರಿಕೆಗಳು ಕೇಳಿಬರುತ್ತಿವೆ. ತಮ್ಮ ಸುರಕ್ಷತೆಗಾಗಿ ಮೆಸ್ಸಿ ಹೊಸ ಬಾಡಿಗಾರ್ಡ್​ ನೇಮಕ ಮಾಡಿಕೊಂಡಿದ್ದಾರೆ. ಈ ಹೊಸ ಬಾಡಿಗಾರ್ಡ್‌ ಬಗ್ಗೆ ಹೆಚ್ಚು ಸುದ್ದಿಯಾಗುತ್ತಿದೆ. ಅವರು ಯಾರು? ಏನು ಎತ್ತ ಎಂಬುದರ ಕುರಿತು ಚರ್ಚೆಯಾಗುತ್ತಿದೆ. ಫುಟ್ಬಾಲ್ ಲೋಕದ ದಿಗ್ಗಜ ಲಿಯೊನೆಲ್ ಮೆಸ್ಸಿ ಅವರು ತಮ್ಮ ರಕ್ಷಣೆಗಾಗಿ ಎಂಎಂಎ ಫೈಟರ್‌ ಹಾಗೂ ಮಾಜಿ ಸೈನಿಕ ಯಾಸಿನ್‌ ಚುಯೆಕೊ ಅವರನ್ನ ತಮ್ಮ ಭದ್ರತೆ ನಿಯೋಜನೆ ಮಾಡಿಕೊಂಡಿದ್ದಾರೆ. ಜೀವ ಬೆದರಿಕೆ ಕರೆಗಳು ಹೆಚ್ಚಾದ್ದರಿಂದ ಬಾಡಿಗಾರ್ಡ್​ ನೇಮಿಸಿಕೊಂಡಿದ್ದಾರೆ. ವಿಶೇಷ ಅಂದರೆ ಇಂಟರ್​ ಮಿಯಾಮಿ ತಂಡವೇ ಈ ಅಂಗರಕ್ಷಕನನ್ನು ನೇಮಿಸಿರುವುದು.

ಇದನ್ನೂ ಓದಿ: ಮೆಸ್ಸಿಯಿಂದ ‘ಗೋಲ್ಡನ್’ ಗಿಫ್ಟ್ – ವಿಶ್ವಕಪ್ ಗೆದ್ದ ತನ್ನ ತಂಡದ ಸದಸ್ಯರಿಗೆ ವಿಶೇಷ ಉಡುಗೊರೆ

ಯಾಸಿನ್ಚುಯೆಕೊ ಯಾರು ಗೊತ್ತಾ?

ಇಂಟರ್ ಮಿಯಾಮಿ ಪರ ಆಡುವಾಗ ಹೆಚ್ಚು ಸದ್ದು ಮಾಡಿದ್ದೇ ಮೆಸ್ಸಿ ಅಂಗರಕ್ಷಕ. ಮೆಸ್ಸಿ ಎಲ್ಲೇ ಹೋದರು, ಬಂದರು ಅವರ ಹಿಂದೆಯೇ ಇರುತ್ತಿದ್ದರು. ತುಂಬಾ ಅಲರ್ಟ್​ ಆಗಿ ಓಡಾಡುತ್ತಿದ್ದರು. ಯಾರನ್ನೂ ಹತ್ತಿರಕ್ಕೂ ಬಿಟ್ಟುಕೊಳ್ಳುತ್ತಿರಲಿಲ್ಲ. ಮೈದಾನದಲ್ಲಿ ಆಡುವಾಗಲೂ ಅವರು ಓಡಿದತ್ತ ಇವರೂ ಸಹ ಹೋಗುತ್ತಿದ್ದರು. ಹಾಗಾಗಿ ಎಲ್ಲರಿಗೂ ಕುತೂಹಲ ಹೆಚ್ಚಾಗಿತ್ತು. ಮೆಸ್ಸಿಯ ಅಂಗರಕ್ಷಕ ಯಾಸಿನ್ ಚುಯೆಕೊ. ಅವರು ಅಮೆರಿಕದ ನೌಕಾಪಡೆಯ ಮಾಜಿ ಅಧಿಕಾರಿ ಜೊತೆಗೆ ಫೈಟರ್​​.

ಯಾಸಿನ್ ಚುಯೆಕೊ ವೃತ್ತಿಪರ ಮಿಶ್ರ ಸಮರ ಕಲೆಯಲ್ಲಿ ಪರಿಣಿತರಾಗಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಸೈನಿಕನಾಗಿ ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ಸೇವೆ ಸಲ್ಲಿಸಿದ್ದಾರೆ. ಆದರೆ ಅವರಿಗೆ ವೇತನ ಕೋಟಿಗಳಲ್ಲಿ ಇರಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಎಷ್ಟೆಂದು ಬಹಿರಂಗಗೊಂಡಿಲ್ಲ.

ಕೆಲ ತಿಂಗಳ ಹಿಂದಷ್ಟೇ ಮೆಸ್ಸಿ ಕುಟುಂಬಕ್ಕೆ ಸಂಬಂಧಿಸಿದ ಸೂಪರ್‌ ಮಾರ್ಕೆಟ್‌ ಮೇಲೆ ಗುಂಡಿನ ದಾಳಿ ನಡೆದಿತ್ತು. ಇತ್ತೀಚೆಗೆ ಮೆಸ್ಸಿಗೆ ಜೀವ ಬೆದರಿಕೆ ಕರೆಗಳು ಬಂದಿದ್ದವು. ಹಾಗಾಗಿ ಯಾಸಿನ್‌ ಚುಯೆಕೊ ಅವರನ್ನ ಬಾಡಿ ಗಾರ್ಡ್‌ ಆಗಿ ನೇಮಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

suddiyaana