ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಇಬ್ಬರಲ್ಲಿ ಬೆಸ್ಟ್ ಕ್ಯಾಪ್ಟನ್ ಯಾರು?

ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಇಬ್ಬರಲ್ಲಿ ಬೆಸ್ಟ್ ಕ್ಯಾಪ್ಟನ್ ಯಾರು?

ಆಸ್ಟ್ರೇಲಿಯಾ ವಿರುದ್ಧದ ಟಿ-20 ಸೀರಿಸ್​​ನಲ್ಲಿ ರವಿ ಬಿಷ್ಣೋಯಿ ಮ್ಯಾನ್​​ ಆಫ್ ದಿ ಸೀರಿಸ್ ಪಡೆದಿರಬಹುದು. ಆದ್ರೆ, ಈ ಸೀರಿಸ್​​ನಲ್ಲಿ ಟೀಂ ಇಂಡಿಯಾದ ಮತ್ತೊಬ್ಬ ಹೀರೋ ಅಂದ್ರೆ ಅದು ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್. 4-1 ಅಂತರದಿಂದ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನ ಮಣಿಸೋಕೆ ಸೂರ್ಯಕುಮಾರ್ ಕ್ಯಾಪ್ಟನ್ಸಿ ಕೂಡ ಪ್ರಮುಖ ಕಾರಣ. ಇಡೀ ಟೀಂ ಸೂರ್ಯಕುಮಾರ್​​ ಕ್ಯಾಪ್ಟನ್ಸಿಯಲ್ಲಿ ಬೆಸ್ಟ್ ಪರ್ಫಾಮೆನ್ಸ್ ನೀಡಿದೆ. ನೆಕ್ಸ್ಟ್ ದಕ್ಷಿಣ ಆಫ್ರಿಕಾ ವಿರುದ್ಧದ ಸೀರಿಸ್​ನಲ್ಲೂ ಸೂರ್ಯಕುಮಾರ್​ ಯಾದವ್ ಟೀಂ ಇಂಡಿಯಾ ಟಿ-20 ಟೀಂನ್ನು ಲೀಡ್ ಮಾಡಲಿದ್ದಾರೆ. ಹಾಗಿದ್ರೆ ಸೂರ್ಯಕುಮಾರ್​ ಯಾದವ್ ಭವಿಷ್ಯದಲ್ಲಿ ಟಿ-20 ತಂಡದ ಪರ್ಮನೆಂಟ್ ಕ್ಯಾಪ್ಟನ್​ ಆಗ್ತಾರಾ? ಹಾರ್ದಿಕ್ ಪಾಂಡ್ಯಾ ಕ್ಯಾಪ್ಟನ್ಸಿ ಕಳೆದುಕೊಳ್ತಾರಾ? ಈ ವಿಚಾರದ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಆಸೀಸ್ ವಿರುದ್ಧ ಟಿ20 ಸರಣಿ ಗೆದ್ದು ಬೀಗಿದ ಭಾರತ – ರವಿ ಬಿಷ್ಣೋಯ್ ಸರಣಿಶ್ರೇಷ್ಠ, ಉತ್ತಮ ಪ್ರದರ್ಶನ ನೀಡಿದರೂ ರಿಂಕು ಸಿಂಗ್‌ಗೆ ನಿರಾಸೆ

ಆಸ್ಟ್ರೇಲಿಯಾ ವಿರುದ್ಧದ ಟಿ-20 ಸೀರಿಸ್ ನೋಡಿದರೆ, ಟೀಮ್ ಇಂಡಿಯಾಕ್ಕೆ ಒಬ್ಬ ಹೊಸ ಕ್ಯಾಪ್ಟನ್​ ಕೂಡ ಸಿಕ್ಕಿರೋದಂತೂ ಗ್ಯಾರಂಟಿ. ಯಾಕಂದ್ರೆ ಒಬ್ಬ ಕ್ಯಾಪ್ಟನ್​​ಗೆ ಇರಬೇಕಾದ ಎಲ್ಲಾ ಗುಣ ಲಕ್ಷಣಗಳೂ, ಕೆಪಾಸಿಟಿಯೂ ಸೂರ್ಯಕುಮಾರ್​ರಲ್ಲಿದೆ. ಎಷ್ಟೇ ಒತ್ತಡದ ಪರಿಸ್ಥಿತಿ ಬಂದರೂ ಸೂರ್ಯಕುಮಾರ್ ಕೂಲ್ ಆಗಿಯೇ ಎಲ್ಲವನ್ನೂ ಹ್ಯಾಂಡಲ್ ಮಾಡುತ್ತಾರೆ. ಆಟಗಾರರ ಮೇಲೆ ಸಿಟ್ಟಾಗೋದು, ರೇಗಾಡೋದಾಗಲಿ, ಯಾವ ವರ್ತನೆಗಳು ಸೂರ್ಯಕುಮಾರ್​ರಿಂದ ಕಂಡು ಬಂದಿಲ್ಲ. ಈ ಸೀರಿಸ್​​ನುದ್ದಕ್ಕೂ ಬೌಲರ್ಸ್​ಗಳ ಮೇಲೆ ಹೆಚ್ಚು ಪ್ರೆಷರ್ ಇತ್ತು. ಬಹುತೇಕ ಎಲ್ಲವೂ ಬ್ಯಾಟ್ಸ್​​ಮನ್​ಗಳಿಗೆ ಫೇವರ್​ ಆಗಿರೋ ಪಿಚ್​ಗಳೇ ಆಗಿತ್ತು. ಹೀಗಾಗಿ ಪ್ರತಿ ಮ್ಯಾಚ್​ ಕೂಡ ಬೌಲರ್ಸ್​ಗಳಿಗೆ ಹೆಚ್ಚು ಚಾಲೆಂಜಿಂಗ್ ಆಗಿತ್ತು. ಮ್ಯಾಚ್​​ ಲಾಸ್ಟ್​ ಓವರ್​ತನಕ ಬಂದಿತ್ತು. ಅರ್ಶ್​​​ದೀಪ್​ ಸಿಂಗ್​​ರ ಸ್ಮಾರ್ಟ್​ ಬೌಲಿಂಗ್​ನಿಂದಾಗಿ ಟೀಂ ಇಂಡಿಯಾಗೆ ಪಂದ್ಯವನ್ನ ಗೆಲ್ಲೋಕೆ ಸಾಧ್ಯವಾಯ್ತು. ಆದ್ರೆ ಮ್ಯಾಚ್ ಗೆದ್ದ ಬಳಿಕ ಮಾತನಾಡಿರುವ ಅರ್ಶ್​ದೀಪ್ ಸಿಂಗ್ ತಮ್ಮ ಲಾಸ್ಟ್​​ ಓವರ್​ನ ಕ್ರೆಡಿಟ್​​​ನ್ನ ಕ್ಯಾಪ್ಟನ್​ ಸೂರ್ಯಕುಮಾರ್ ಯಾದವ್​ಗೆ ನೀಡಿದ್ದಾರೆ. ಯಾಕಂದ್ರೆ ಲಾಸ್ಟ್​ ಓವರ್​ನಲ್ಲಿ ಆಸ್ಟ್ರೇ​ಲಿಯಾಗೆ ಮ್ಯಾಚ್​ ಗೆಲ್ಲೋಕೆ 10 ರನ್​ಗಳಷ್ಟೇ ಬೇಕಾಗಿದ್ದಾಗ ಅರ್ಶ್​​ದೀಪ್​ ಕೈಗೆ ಬಾಲ್​ ನೀಡಿರೋದು ನಿಜಕ್ಕೂ ಸೂರ್ಯಕುಮಾರ್ ತೆಗೆದುಕೊಂಡ ಅತ್ಯಂತ ಬೋಲ್ಡ್ ಡಿಸೀಶನ್. ಯಾಕಂದ್ರೆ ತಮ್ಮ 3 ಓವರ್​ನಲ್ಲಿ ಅರ್ಶ್​ದೀಪ್ 37 ರನ್​​ಗಳನ್ನ ನಿಟ್ಟಿಕೊಟ್ಟಿದ್ರು. ಆದ್ರೆ ಅರ್ಶ್​​ದೀಪ್ ಒಬ್ಬ ಡೆತ್ ಓವರ್ ಸ್ಪೆಷಲಿಸ್ಟ್. ಈ ಹಿಂದೆಯೂ ಕೆಲ ಮ್ಯಾಚ್​​ಗಳನ್ನ ಕೊನೆಯ ಓವರ್​ನಲ್ಲಿ ಟೀಂ ಇಂಡಿಯಾವನ್ನ ಗೆಲ್ಲಿಸಿದ್ದಾರೆ. ಐಪಿಎಲ್​​ನಲ್ಲೂ ರಿಸ್ಕೀ ಸ್ಪೆಲ್​​ಗಳನ್ನ ಹಾಕಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ 5ನೇ ಮ್ಯಾಚ್​​ನಲ್ಲಿ ಒಂದಷ್ಟು ಹೊಡೆಸಿಕೊಂಡ್ರೂ ಸೂರ್ಯಕುಮಾರ್​​ ಯಂಗ್​​ ಬೌಲರ್​​ನ್ನೇ ತಮ್ಮ ಮ್ಯಾಚ್​​ ವಿನ್ನರ್ ಆಗಿ ಚೂಸ್ ಮಾಡಿದ್ರು. ಮೂರು ಓವರ್​ಗಳಲ್ಲಿ 37 ರನ್ ಕೊಟ್ಟಿದ್ದ ಅರ್ಶ್​​ದೀಪ್​, ಫೈನಲ್​ ಓವರ್​​ನಲ್ಲಿ ಬಿಟ್ಟುಕೊಟ್ಟಿದ್ದು ಕೇವಲ 3 ರನ್​​ಗಳನ್ನ. ಜೊತೆಗೆ ಡೇಂಜರಸ್ ಮ್ಯಾಥ್ಯೂ ವೇಡ್ ವಿಕೆಟ್ ಬೇರೆ ಪಡೆದಿದ್ರು. ಈ ಬಗ್ಗೆ ಮಾತನಾಡಿರೋ ಅರ್ಶ್​​ದೀಪ್​ ಕ್ಯಾಪ್ಟನ್ ಸೂರ್ಯಕುಮಾರ್ ಬೌಲರ್ಸ್​ಗಳ ಮೇಲೆ ಪ್ರೆಷರ್​ ಬೀಳದಂತೆ ನೋಡಿಕೊಳ್ತಾರೆ. ನಮ್ಮ ಮೇಲೆ ಯಾವುದೇ ರೀತಿಯ ಒತ್ತಡ ಹಾಕೋದಿಲ್ಲ. ಪ್ರತಿಯೊಬ್ಬ ಬೌಲರ್​ಗೂ ಆತನ ಪ್ಲ್ಯಾನ್​ನಂತೆಯೇ ಬೌಲಿಂಗ್ ಮಾಡೋಕೆ ಅವಕಾಶ ಕೊಡ್ತಾರೆ. ಫುಲ್ ಫ್ರೀಡಂ ನೀಡ್ತಾರೆ. ಎಕ್ಸ್​ಪ್ರೆಸ್​​ ಮಾಡೋಕೆ ಚಾನ್ಸ್ ಕೊಡ್ತಾರೆ. ಹೀಗಾಗಿ ನಮಗೆ ಎಕ್ಸ್​​ಟ್ರಾ ಪ್ರೆಷರ್ ಫೀಲ್ ಆಗೋದಿಲ್ಲ ಅಂತಾ ಅರ್ಶ್​ದೀಪ್ ಸಿಂಗ್ ಹೇಳಿದ್ದಾರೆ.

ಸೂರ್ಯಕುಮಾರ್ ಯಾದವ್ ಈ ಗುಣವನ್ನು ಟೀಂ ಇಂಡಿಯಾದ ಕ್ಯಾಪ್ಟನ್ ರೋಹಿತ್​ ಶರ್ಮಾರಿಂದಲೇ ನೋಡಿ ಕಲಿತಿದ್ದು. ರೋಹಿತ್ ಕೂಡ ಅಷ್ಟೇ, ಬೌಲರ್ಸ್​​ಗಳಿಗೆ ಕಂಪ್ಲೀಟ್ ಫ್ರೀಡಂ ಕೊಡ್ತಾರೆ. ತಮ್ಮ ಪ್ಲ್ಯಾನ್​ನನ್ನ ಎಕ್ಸಿಕ್ಯೂಟ್​ ಮಾಡೋಕೆ ಅವಕಾಶ ಕೊಡ್ತಾರೆ. ಅದು ವರ್ಕೌಟ್ ಆಗದಿದ್ರೆ ಮಾತ್ರ ಬೌಲರ್ಸ್​​ಗಳಿಗೆ ಸಜೆಷನ್​​ಗಳನ್ನ ನೀಡ್ತಾರೆ. ಈಗ ಸೂರ್ಯಕುಮಾರ್​ ಕೂಡ ಮಾಡ್ತಿರೋದು ಇದೇ. ಇನ್ನು ಫೀಲ್ಡಿಂಗ್ ಸೆಟ್ ವಿಚಾರದಲ್ಲಾಗಲಿ, ಬೌಲಿಂಗ್​ ಚೇಂಜ್ ಮಾಡೋದ್ರಲ್ಲಿ ಈಗಿ ಕ್ಯಾಪ್ಟನ್ಸಿಯ ಪ್ರತಿ ವಿಭಾಗದಲ್ಲೂ ಸೂರ್ಯಕುಮಾರ್ ಬೆಸ್ಟ್ ಇದ್ದಾರೆ.

ಭವಿಷ್ಯದಲ್ಲಿ ಸೂರ್ಯಕುಮಾರ್​ ಯಾದವ್​ ಟೀಂ ಇಂಡಿಯಾದ ಟಿ-20 ಕ್ಯಾಪ್ಟನ್ ಆಗ್ತಾರಾ ಅನ್ನೋ ವಿಚಾರ ಸಾಕಷ್ಟು ಚರ್ಚೆಯಲ್ಲಿದೆ. ಈ ಹಿಂದಿನ ಟಿ-20 ಸೀರಿಸ್​ಗಳೆಲ್ಲಾ ಹಾರ್ದಿಕ್ ಪಾಂಡ್ಯಾ ಟಿ-20 ಟೀಂ ಕ್ಯಾಪ್ಟನ್ ಆಗಿದ್ದರು. ಕಳೆದ ಒಂದು ವರ್ಷದಿಂದ ರೋಹಿತ್ ಶರ್ಮಾ ಟೀಂ ಇಂಡಿಯಾ ಪರ ಟಿ-20 ಮ್ಯಾಚ್ ಆಡಿಲ್ಲ. ಬಹುತೇಕ ಎಲ್ಲಾ ಸೀರಿಸ್​ಗಳಲ್ಲೂ ಹಾರ್ದಿಕ್ ಪಾಂಡ್ಯ ತಂಡವನ್ನ ಲೀಡ್ ಮಾಡಿದ್ದಾರೆ. ಒಂದು ವೇಳೆ ಗಾಯಕ್ಕೆ ಒಳಗಾಗದೆ ಇರುತ್ತಿದ್ದರೆ ಆಸ್ಟ್ರೇಲಿಯಾ ವಿರುದ್ಧದ ಸೀರಿಸ್‌ನಲ್ಲಿ ಹಾರ್ದಿಕ್ ಪಾಂಡ್ಯಾ ಕ್ಯಾಪ್ಟನ್​ ಆಗಿ ಇರುತ್ತಿದ್ದರು. ಆದ್ರೀಗ ತಮಗೆ ಸಿಕ್ಕ ಅವಕಾಶವನ್ನ ಸೂರ್ಯಕುಮಾರ್ ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ತಮಗೂ ಕ್ಯಾಪ್ಟನ್ಸಿ ಕೆಪಾಸಿಟಿ ಇದೆ ಅನ್ನೋದನ್ನ ಪ್ರೂವ್ ಮಾಡಿದ್ದಾರೆ.

ನೆಕ್ಸ್ಟ್ ಸೌತ್​ ಆಫ್ರಿಕಾವನ್ನ ಅವರದ್ದೇ ನೆಲದಲ್ಲಿ ಸ್ಕೈ ಟೀಂ ಬೀಟ್ ಮಾಡ್ತು ಅಂದ್ರೆ, ಒಬ್ಬ ಕ್ಯಾಪ್ಟನ್​ ಆಗಿ ಸೂರ್ಯಕುಮಾರ್​ ಯಾದವ್​ಗೆ ಇನ್ನಷ್ಟು ಮೈಲೇಜ್​ ಸಿಗಲಿದೆ. ಹಾರ್ದಿಕ್ ಪಾಂಡ್ಯಾಗಿಂತಲೂ ಬೆಟರ್​ ಕ್ಯಾಪ್ಟನ್ಸಿ ಅಂತಾ ಅನ್ಸಿದ್ರೆ ನೆಕ್ಸ್ಟ್ ಸೂರ್ಯಕುಮಾರ್​​ ಯಾದವ್​ಗೆ ಪರ್ಮನೆಂಟ್ ಆಗಿ ಟಿ-20 ಟೀಂನ ಕ್ಯಾಪ್ಟನ್ಸಿ ಸಿಕ್ಕಿದ್ರೂ ಆಶ್ಚರ್ಯ ಇಲ್ಲ. ಈ ಬದಲಾವಣೆಗಳು 2024ರಲ್ಲಿ ಟಿ-20 ವರ್ಲ್ಡ್​​ಕಪ್ ಬಳಿಕ ಆಘಬಹುದೋ ಏನೊ. ವಿಶ್ವಕಪ್​ನಲ್ಲಂತೂ ರೋಹಿತ್​ ಶರ್ಮಾರೆ ಟಿ-20 ಕ್ಯಾಪ್ಟನ್​​ ಆಗೋದು ಆಲ್​ಮೋಸ್ಟ್ ಗ್ಯಾರಂಟಿ. ರೋಹಿತ್ ಬಳಿಕ WHO IS NEXT ಅಂತಾ ಬಂದಾಗಿ ಹಾರ್ದಿಕ್ ಪಾಂಡ್ಯಾ ಜೊತೆಗೆ ಸೂರ್ಯಕುಮಾರ್ ಯಾದವ್ ಕೂಡ ಟಿ-20 ಕ್ಯಾಪ್ಟನ್ಸಿ ರೇಸ್​​ನಲ್ಲಿರ್ತಾರೆ.

ಇಲ್ಲಿ ಇನ್ನೊಂದು ಸಂಗತಿ ಕೂಡ ಇದೆ. ಐಪಿಎಲ್​​ನಲ್ಲಿ ಸೂರ್ಯಕುಮಾರ್​ ಯಾದವ್​ ಮುಂಬೈ ಇಂಡಿಯನ್ಸ್ ಪರ ಆಡ್ತಾ ಇದ್ದಾರೆ. ಈಗ ಹಾರ್ದಿಕ್ ಪಾಂಡ್ಯಾ ಕೂಡ ಮುಂಬೈಗೆ ಕಮ್​​ಬ್ಯಾಕ್ ಮಾಡಿದ್ದಾರೆ. ಇಲ್ಲೂ ಕೂಡ ಅಷ್ಟೇ. ರೋಹಿತ್ ಶರ್ಮಾ ಬಳಿಕ ಮುಂಬೈ ಇಂಡಿಯನ್ಸ್​ನ ಮುಂದಿನ ಕ್ಯಾಪ್ಟನ್ ಯಾರು ಅನ್ನೋ ಪ್ರಶ್ನೆ ಇದೆ. ಹಾರ್ದಿಕ್ ಪಾಂಡ್ಯಾ ಫ್ರಂಟ್ ರನ್ನರ್ ಆಗಿದ್ದಾರೆ. ಆದ್ರೀಗ ಮ್ಯಾನೇಜ್ಮೆಂಟ್​ಗೆ ಇನ್ನೊಂದು ಆಪ್ಷನ್ ಕೂಡ ಸಿಕ್ಕಿದೆ. ಸೂರ್ಯಕುಮಾರ್​​ ಯಾದವ್.. ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಇವರಿಬ್ಬರಲ್ಲಿ ಯಾರಿಗೆ ಬೇಕಾದ್ರೂ ಕ್ಯಾಪ್ಟನ್ಸಿ ಪಟ್ಟ ಸಿಗಬಹುದು.

Sulekha