ಕ್ರಿಕೆಟ್ ದೇವರ ಸೊಸೆ ಸಾನಿಯಾ ಯಾರು? – ಮಗನಿಗೂ ದೊಡ್ಡವಳನ್ನೇ ನೋಡಿದ್ರಾ ಸಚಿನ್?
ಇನ್ನಾದರೂ ಬದಲಾಗುತ್ತಾ ಅರ್ಜುನ್ ಅದೃಷ್ಟ?

ಕ್ರಿಕೆಟ್ ದೇವರ ಸೊಸೆ ಸಾನಿಯಾ ಯಾರು? – ಮಗನಿಗೂ ದೊಡ್ಡವಳನ್ನೇ ನೋಡಿದ್ರಾ ಸಚಿನ್?ಇನ್ನಾದರೂ ಬದಲಾಗುತ್ತಾ ಅರ್ಜುನ್ ಅದೃಷ್ಟ?

ಕ್ರಿಕೆಟ್ ಅನ್ನೋದು ಕೂಡಾ ಅದೃಷ್ಟದ ಆಟವೇ.. ಇಲ್ಲಿ ಇನ್‌ಫ್ಲುಯೆನ್ಸ್ ಎಷ್ಟೇ ನಡೆದರೂ, ಲಕ್ ಕೂಡಾ ಜೊತೆಯಲ್ಲೇ ಇರಬೇಕು. ಆಗ್ಲೇ ಕ್ರಿಕೆಟ್ ಲೋಕದಲ್ಲಿ ಮೆರೆಯೋಕೆ ಸಾಧ್ಯವಾಗೋದು. ನಾವ್ ಹೇಳ್ತಿರೋದು ಕ್ರಿಕೆಟ್ ದೇವರ ಮಗ.. ಗಾಡ್ ಅಫ್ ಕ್ರಿಕೆಟ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಬಗ್ಗೆ. ಅರ್ಜುನ್ ಗೆ ಎಲ್ಲವೂ ಇತ್ತೂ.. ಆದ್ರೆ, ಲಕ್ ಇಲ್ಲ. ಇದೀಗ ತಂದೆ ಸಚಿನ್ ತೆಂಡೂಲ್ಕರ್ ಮಗನ ಬದುಕಲ್ಲಿ ಮತ್ತೊಂದು ಇನ್ನಿಂಗ್ಸ್ ಶುರು ಮಾಡುವ ಉತ್ಸಾಹದಲ್ಲಿದ್ದಾರೆ. ಈ ಮೂಲಕವಾದ್ರೂ ಅರ್ಜುನ್ ಕೆರಿಯರ್ ಬಿಲ್ಡ್ ಆಗಲಿ ಅಂತಾ ಕ್ರಿಕೆಟ್ ದೇವರ ಕುಟುಂಬ ಕಾಯುತ್ತಿದೆ.

ಇದನ್ನೂ ಓದಿ : ರೋಹಿತ್ ಗೆ BCCI ಫಿಟ್ ನೆಸ್ ಟೆಸ್ಟ್ – ಯೋ-ಯೋ ಓಕೆ.. ಬ್ರಾಂಕೋ ಟೆಸ್ಟ್ ಏಕೆ?

ಮರಿ ತೆಂಡೂಲ್ಕರ್.. ಜ್ಯೂನಿಯರ್ ತೆಂಡೂಲ್ಕರ್, ಕ್ರಿಕೆಟ್ ದೇವರ ಮಗ.. ಸಚಿನ್ ತೆಂಡೂಲ್ಕರ್ ಅವರ ಒನ್ ಆಂಡ್ ಓನ್ಲಿ ಸನ್ ಅರ್ಜುನ್ ತೆಂಡೂಲ್ಕರ್ ಲೈಫ್‌ನಲ್ಲಿ ಮತ್ತೊಂದು ಇನ್ನಿಂಗ್ಸ್ ಶುರುವಾಗುತ್ತಿದೆ. ಅರ್ಜುನ್ ತೆಂಡೂಲ್ಕರ್ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಅದು ಕೂಡಾ ಕೇವಲ 25 ವರ್ಷದಲ್ಲೇ. ಅಕ್ಕ ಸಾರಾ ತೆಂಡೂಲ್ಕರ್‌ಗೂ ಮೊದಲೇ ಅರ್ಜುನ್ ಮದುವೆಯಾಗುತ್ತಿದ್ದಾರೆ. ಇದೀಗ ಫ್ಯಾನ್ಸ್ ಕೇಳ್ತಿರೋದು ಒಂದೇ ಪ್ರಶ್ನೆ. ಸಾರಾ ಬಿಟ್ಟು ಅರ್ಜುನ್ ಗೆ ಇಷ್ಟು ಬೇಗ ಮದ್ವೆಯಾಕೆ?, ಅರ್ಜುನ್ ಇನ್ನೂ ಕ್ರಿಕೆಟ್ ಕೆರಿಯರ್‌ನಲ್ಲಿ ಸಕ್ಸಸ್ ಆಗಿಲ್ಲ. ಆಗ್ಲೇ ಫ್ಯಾಮಿಲಿ ಕಮಿಟ್‌ಮೆಂಟ್ ಯಾಕೆ ಅನ್ನೋದು. ಇದಕ್ಕೆಲ್ಲಾ ಸ್ವತಃ ಸಚಿನ್ ತೆಂಡೂಲ್ಕರ್ ಉತ್ತರ ನೀಡಿದ್ದಾರೆ.

ಅರ್ಜುನ್ ತೆಂಡೂಲ್ಕರ್ ಮತ್ತು ಸಾನಿಯಾ ಚಂದೋಕ್ ನಿಶ್ಚಿತಾರ್ಥ ಜೂನ್ 14 ರಂದು ನಡೆದಿದೆ. ಮುಂಬೈನಲ್ಲಿ ಕುಟುಂಬದವರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನೆರವೇರಿದೆ. ತೀರಾ ಖಾಸಗಿಯಾಗಿ ಎಂಗೇಜ್‌ಮೆಂಟ್ ಮಾಡಲಾಗಿದೆ. ಎರಡೂ ಕುಟುಂಬಗಳು ಮತ್ತು ಕೆಲವು ಆಪ್ತರು ಮಾತ್ರ ಹಾಜರಿದ್ದರು. ಸಾನಿಯಾ ಚಾಂದೋಕ್ ಗ್ರಾವಿಸ್ ಗ್ರೂಪ್ ನ ಅಧ್ಯಕ್ಷರಾಗಿರುವ ಮುಂಬೈನ ಖ್ಯಾತ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳು. ಗ್ರಾವಿಸ್ ಗ್ರೂಪ್ ಆಹಾರ ಮತ್ತು ಪಾನೀಯ ಉದ್ಯಮದಲ್ಲಿ ಫೇಮಸ್ ಆಗಿರೋ ಸಂಸ್ಥೆ. ಈ ಗುಂಪಿನ ಪ್ರಮುಖ ಉದ್ಯಮಗಳಲ್ಲಿ ಕುಟುಂಬದ ಮುಖ್ಯಸ್ಥ ಐ.ಕೆ. ಘಾಯ್ ಸ್ಥಾಪಿಸಿದ ಪ್ರಸಿದ್ಧ ಕ್ವಾಲಿಟಿ ಐಸ್ ಕ್ರೀಮ್ ಕೂಡಾ ಸೇರಿದೆ. ಇದರ ಹೊರತಾಗಿ, ‘ಬ್ರೂಕ್ಲಿನ್ ಕ್ರೀಮರಿ’ ಮತ್ತು ಮರೀನ್ ಡ್ರೈವ್‌ನಲ್ಲಿರುವ ಐಷಾರಾಮಿ ಇಂಟರ್‌ಕಾಂಟಿನೆಂಟಲ್ ಹೋಟೆಲ್ ಕೂಡ ಇವರದ್ದೇ. ಇನ್ನು ಸಾನಿಯಾ, ಮಿಸ್ಟರ್ ಪಾವ್ಸ್ ಪೆಟ್ ಸ್ಪಾದಲ್ಲಿ ನಿರ್ದೇಶಕಿಯಾಗಿದ್ದಾರೆ. ಜೊತೆಗೆ ಸಾನಿಯಾ ಈ ಕಂಪನಿಯ ಸ್ಥಾಪಕಿಯೂ ಆಗಿದ್ದಾರೆ. ಸಾನಿಯಾ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಸ್ಟಡಿ ಮಾಡಿದ್ದಾರೆ. ವರ್ಲ್ಡ್‌ವೈಡ್ ವೆಟರ್ನರಿ ಸರ್ವೀಸ್‌ನಿಂದ ಪಶುವೈದ್ಯಕೀಯ ತಂತ್ರಜ್ಞ ಡಿಪ್ಲೊಮಾ ಪಡೆದಿದ್ದಾರೆ. ಹೈಪ್ರೊಫೈಲ್ ಹೊಂದಿದ್ರೂ ಕೂಡಾ ಸಾನಿಯಾ ಬಹಳ ಸಿಂಪಲ್ ಗರ್ಲ್.

ಅಂದಹಾಗೆ ಎಲ್ಲಿಯ ಸಾನಿಯಾ.. ಎಲ್ಲಿಯ ಅರ್ಜುನ್.. ಇವರಿಬ್ಬರದ್ದು ಅರೇಂಜ್ ಎಂಗೇಜ್‌ಮೆಂಟಾ, ಇಲ್ಲಾ, ಇಬ್ಬರೂ ಲವರ್ಸಾ ಅನ್ನೋ ಪ್ರಶ್ನೆಯನ್ನ ಫ್ಯಾನ್ಸ್ ಕೇಳ್ತಿದ್ದಾರೆ. 25 ವರ್ಷದ ಅರ್ಜುನ್‌ ತೆಂಡೂಲ್ಕರ್ ಗೆ ಸಾನಿಯಾ ಚೈಲ್ಡ್ ಹುಡ್ ಫ್ರೆಂಡ್. ಜೊತೆಗೆ ಇಬ್ಬರೂ ಕೂಡಾ ಪರಸ್ಪರ ಪ್ರೀತಿಸುತ್ತಿದ್ದರು. ಇದೀಗ ಬಾಲ್ಯದ ಗೆಳತಿ, ಪ್ರೀತಿಯ ಒಡತಿ ಸಾನಿಯಾ ಚಂದೋಕ್ ಅವರನ್ನೇ ಅರ್ಜುನ್ ಮದ್ವೆಯಾಗ್ತಿದ್ದಾರೆ. ವಿಶೇಷವೆಂದರೆ, ಅರ್ಜುನ್‌ಗಿಂತ ಸಾನಿಯಾ ದೊಡ್ಡವರು. ಅದೃಷ್ಟವೋ ಅಥವಾ ಕಾಕತಾಳೀಯವೋ.. ಸಚಿನ್ ತೆಂಡೂಲ್ಕರ್ ಪತ್ನಿ ಅಂಜಲಿ ಕೂಡಾ ಸಚಿನ್‌ಗಿಂತ ದೊಡ್ಡವರು. ಸಚಿನ್ ಮತ್ತು ಅಂಜಲಿ ಅವರ ವಯಸ್ಸಿನಲ್ಲಿ 5 ವರ್ಷಗಳ ಅಂತರವಿದೆ. ಅಂಜಲಿ ಸಚಿನ್‌ಗಿಂತ ಐದು ವರ್ಷ ದೊಡ್ಡವರು. ಈಗ ಸಾನಿಯಾ ಚಂದೋಕ್ ಕೂಡಾ ಅರ್ಜುನ್‌ಗಿಂತ ಒಂದು ವರ್ಷ ದೊಡ್ಡವರು.

ಅರ್ಜುನ್ ತನ್ನ ಅಕ್ಕ ಸಾರಾ ತೆಂಡೂಲ್ಕರ್ ಗಿಂತ 2 ವರ್ಷ ಚಿಕ್ಕವರು. ಈಗಿನ್ನೂ ಕೇವಲ 25 ವರ್ಷವಷ್ಟೇ. ಆದರೆ, ಅರ್ಜುನ್ ಮತ್ತು ಸಾನಿಯಾ ಒಬ್ಬರನೊಬ್ಬರು ಪ್ರೀತಿಸುತ್ತಿದ್ದು, ಇವರಿಬ್ಬರ ಪ್ರೀತಿಗೆ ನಿಶ್ಚಿತಾರ್ಥದ ಮುದ್ರೆ ಬಿದ್ದಿದೆಯಷ್ಟೇ. ಇನ್ನು ಸಾನಿಯಾ ಮತ್ತು ಸಾರಾ ಕೂಡಾ ಬೆಸ್ಟ್ ಫ್ರೆಂಡ್ಸ್. ಇಬ್ಬರೂ ಜೊತೆಯಲ್ಲೇ ಐಪಿಎಲ್ ಪಂದ್ಯ ನೋಡ್ತಾರೆ. ಜೊತೆಗೆ ಇಬ್ಬರೂ ಜೊತೆಯಲ್ಲಿದ್ದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ತಿದ್ದಾರೆ.

ಅರ್ಜುನ್ ತೆಂಡೂಲ್ಕರ್ ಹಾರ್ಡ್ ವರ್ಕರ್ ಅನ್ನೋದು ಎಲ್ಲರಿಗೂ ಗೊತ್ತಿದೆ. ಅಪ್ಪ ಕ್ರಿಕೆಟ್‌ನಲ್ಲಿ ದೇವರ ಪಟ್ಟ ಏರಿದರೂ ಕೂಡಾ ಮಗ, ತನ್ನದೇ ಆದ ಕಠಿಣ ಪ್ರಯತ್ನದ ಮೂಲಕ ಕ್ರಿಕೆಟ್‌ಗೆ ಕಾಲಿಟ್ಟವರು ಅರ್ಜುನ್. ಆದರೆ ವೃತ್ತಿಬದುಕಿನಲ್ಲಿ ಅರ್ಜುನ್ ಒಂದಲ್ಲಾ ಒಂದು ಅಗ್ನಿಪರೀಕ್ಷೆಗೆ ಒಳಗಾಗುತ್ತಲೇ ಬಂದಿದ್ದಾರೆ. ಈ ಬಾರಿ ರಣಜಿ ಟ್ರೋಫಿಯಲ್ಲಿ ಅರ್ಜುನ್ ತೆಂಡೂಲ್ಕರ್ ಸಿಕ್ಕಾಪಟ್ಟೆ ಶೈನ್ ಆಗಿದ್ದರು. ಆದ್ರೆ, ಯಾಕೋ ಐಪಿಎಲ್‌ನಲ್ಲಿ ಹೇಳಿಕೊಳ್ಳುವಂತಾ ಚಾನ್ಸ್ ಸಿಗಲೇ ಇಲ್ಲ. ಇದೀಗ

ದುಲೀಪ್ ಟ್ರೋಫಿಯಲ್ಲಿ ಕೂಡಾ ಚಾನ್ಸ್ ಸಿಕ್ಕಿಲ್ಲ. ರಣಜಿ ಟ್ರೋಫಿಯ ಪ್ಲೇಟ್ ಗ್ರೂಪ್‌ನಲ್ಲಿ ನಾಲ್ಕು ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನು ಕಬಳಿಸಿದ್ದರು ಅರ್ಜುನ್. ಈ ಕಾರಣದಿಂದಾಗಿ, ಗೋವಾ ಪ್ಲೇಟ್ ಡಿವಿಷನ್ ಪ್ರಶಸ್ತಿ ಕೂಡಾ ಗೆದ್ದುಕೊಂಡಿತ್ತು. ಅರ್ಜುನ್ 2022-23 ರ ಆವೃತ್ತಿಯಿಂದ ಗೋವಾ ಪರ ಆಡುತ್ತಿದ್ದಾರೆ. ಡಿಸೆಂಬರ್ 2023 ರಲ್ಲಿ ಗೋವಾ ಪರ ತಮ್ಮ ಮೊದಲ ಪ್ರಥಮ ದರ್ಜೆ ಪಂದ್ಯವನ್ನಾಡಿದ್ದ ಅರ್ಜುನ್, ಭರ್ಜರಿ ಶತಕ ಬಾರಿಸಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇದುವರೆಗೆ 37 ವಿಕೆಟ್‌ಗಳನ್ನು ಕಬಳಿಸಿರುವ ಅರ್ಜುನ್ 532 ರನ್‌ ಬಾರಿಸಿದ್ದಾರೆ. ನವೆಂಬರ್ 2022 ರಲ್ಲಿ ಗೋವಾ ಪರ ಲಿಸ್ಟ್ ಎ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಅರ್ಜುನ್, 18 ಪಂದ್ಯಗಳಲ್ಲಿ 25 ವಿಕೆಟ್‌ಗಳನ್ನು ಪಡೆದು 102 ರನ್‌ಗಳನ್ನು ಗಳಿಸಿದ್ದಾರೆ. ಕ್ರಿಕೆಟ್‌ನಲ್ಲಿ ತನ್ನದೇ ಆದ ಕೆರಿಯಲ್ ಬಿಲ್ಡ್ ಮಾಡಿಕೊಳ್ಳುತ್ತಿದ್ದರೂ ಕೂಡಾ ಅರ್ಜುನ್‌ಗೆ ಹೇಳಿಕೊಳ್ಳುವಂತಾ ಅವಕಾಶಗಳು ಸಿಕ್ತಿಲ್ಲ. ಇದು ಸಹಜವಾಗಿಯೇ ಸಚಿನ್ ಫ್ಯಾಮಿಲಿಗೆ ನಿರಾಶೆಯಂತೂ ಖಂಡಿತಾ ಇದೆ. ಇದೀಗ ಅರ್ಜುನ್ ಬದುಕಲ್ಲಿ ಮತ್ತೊಂದು ಇನ್ನಿಂಗ್ಸ್ ಶುರುವಾಗಲಿದೆ.

Shantha Kumari