ಗ್ಯಾಸ್ ಸಿಗುತ್ತಿಲ್ಲ, ಸಿಕ್ಕರೂ ದುಡ್ಡು ಜಾಸ್ತಿ – ಆಟೋ ಚಾಲಕರ ಕಣ್ಣೀರಿಗೆ ಹೊಣೆಯಾರು?

ಒಂದೆಡೆ ವಾಣಿಜ್ಯ ಬಳಕೆ ಸಿಲಿಂಡರ್ ಸಿಗದೆ ಹೋಟೆಲ್ ಮಾಲೀಕರ ಪರದಾಟ, ಮತ್ತೊಂದೆಡೆ ಸರಿಯಾದ ಸಮಯಕ್ಕೆ ಗೃಹಬಳಕೆ ಸಿಲಿಂಡರ್ ಸಿಗದೆ ಗ್ರಾಹಕರ ಸಂಕಟ. ಇದೆಲ್ಲದರ ಮಧ್ಯೆ ಆಟೋ ಚಾಲಕರ ಕಣ್ಣೀರು, ಅವರ ಮನೆಯವರ ದುಸ್ಥಿತಿ ಯಾರಿಗೂ ಬೇಡ.
ಇದನ್ನೂ ಓದಿ:ನಮ್ಮನ್ನು ‘ಸಾಲದ ಸರ್ಕಾರ’ ಎನ್ನುತ್ತಾರೆ – ಮೋದಿ ಸರ್ಕಾರ ಸಾಲವನ್ನೇ ಮಾಡಿಲ್ಲವೇ?- ಡಿಕೆ ಶಿವಕುಮಾರ್
ಕರ್ನಾಟಕದ ವಿವಿದೆಡೆ ಎಲ್‌ಪಿಜಿ ಗ್ಯಾಸ್ ಅಭಾವ ಮಿತಿಮೀರಿದೆ. ಬೆಂಗಳೂರಿನಲ್ಲಿ ಗ್ಯಾಸ್‌ಗಾಗಿ ಕಿಲೋಮೀಟರ್‌ಗಟ್ಟಲೆ ಆಟೋ ಚಾಲಕರು ಕ್ಯೂ ನಿಂತಿರುವ ದೃಶ್ಯಗಳು ಕಂಡು ಬರುತ್ತಿವೆ. ಗ್ಯಾಸ್ ಸಿಗುತ್ತಿಲ್ಲ, ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಗ್ಯಾಸ್ ಪಡೆಯಬೇಕಾದ ಪರಿಸ್ಥಿತಿ ದುಡಿಯುವ ಕೈಗಳನ್ನು ಕಟ್ಟಿಹಾಕಿದೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸುವಂತೆ ಆಟೋ ಚಾಲಕರು ಆಗ್ರಹಿಸಿದ್ದಾರೆ ಒಂದೆಡೆ ಗ್ಯಾಸ ಸಿಗದೆ, ಮತ್ತೊಂದೆಡೆ ಗ್ಯಾಸ್ ಬಂಕ್‌ಗಳಲ್ಲಿ ದಿಢೀರ್ ಬೆಲೆ ಏರಿಕೆ ಆಟೋ ಚಾಲಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಒಂದು ಬಂಕ್‌ನಲ್ಲಿ 90 ರೂಪಾಯಿ ಇದ್ದರೆ, ಮತ್ತೊಂದರಲ್ಲಿ 95, 105, 110 ರೂಪಾಯಿ, ಕೆಲವು ಕಡೆ 115 ರೂಪಾಯಿ ವಸೂಲಿ ಮಾಡಲಾಗುತ್ತಿದೆ. ರಾತ್ರಿ ಇಡೀ ಗ್ಯಾಸ್ ಗಾಗಿ ಕಿಲೋ ಮೀಟರ್ ಗಟ್ಟಲೇ ಕ್ಯೂ ನಿಲ್ಲುವ ಪರಿಸ್ಥಿತಿ ಬಂದಿದೆ ಎಂದು ರಾಜ್ಯ ಸರ್ಕಾರಕ್ಕೆ ತರಾಟೆ ತೆಗೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಆಟೋ ಚಾಲಕರು ಹಗಲಿಡೀ ಬಂಕ್‌ಗಳ ಮುಂದೆ ಕಾದು ನಿಂತಿರುವ ದೃಶ್ಯ ಮನಕಲಕುವಂತಿದೆ. ಬೆಂಗಳೂರಿನ ಹೊಸಹಳ್ಳಿ, ಮೂಡಲಪಾಳ್ಯ ಮತ್ತು ರಾಜಾಜಿನಗರದ ರಸ್ತೆಗಳಲ್ಲಿ ಆಟೋಗಳು ಎರಡು ಕಿಲೋಮೀಟರ್‌ವರೆಗೂ ಸಾಲುಗಟ್ಟಿ ನಿಂತಿವೆ. ಇನ್ನು ಗ್ಯಾಸ್‌ಗಾಗಿ ಕೆಆರ್‌ಪುರಂನಿಂದ ಆಟೋಚಾಲಕರು ಬೆಂಗಳೂರು ದಕ್ಷಿಣದ ಕಡೆಗೆ ಆಟೋ ಗ್ಯಾಸ್ ಬಂಕ್ ಹುಡುಕಿಕೊಂಡು ಬರುತ್ತಿದ್ದಾರೆ. ಹೀಗೆ ಬರುವಾಗ ಗ್ಯಾಸ್ ಮದ್ಯದಲ್ಲಿ ಕೈಕೊಟ್ಟು ಹೊಟ್ಟೆಗೆ ಹಿಟ್ಟಿಲ್ಲದೇ, ಕೈಯಲ್ಲಿ ಕಾಸಿಲ್ಲದೇ, ಆಟೋ ಓಡಿಸಲಾಗದೇ ಕಣ್ಣೀರಿಡುತ್ತಿದ್ದಾರೆ.
ಬಂಕ್ ಸಿಬ್ಬಂದಿ ಕೇಳಿದಷ್ಟು ಹಣ ಕೊಟ್ಟು ಗ್ಯಾಸ್ ತುಂಬಿಸಬೇಕು. ಅನಿವಾರ್ಯವಾಗಿ ಅವರು ಹೇಳಿದಂತೆ ಕೊಡಬೇಕು. ಒಂದೊಂದು ಏರಿಯಾದಲ್ಲಿ ಒಂದೊಂದು ದರ ವಿಧಿಸಲಾಗುತ್ತಿದೆ. ಇದರಿಂದ ಆಟೋ ಚಾಲಕರ ಕಂಗಾಲಾಗಿ ಹೋಗಿದ್ದಾರೆ.

ನೋಡಿರಿ

