ಯಾರು ಆಳುತ್ತಿದ್ದಾರೆ RCB ಫ್ರಾಂಚೈಸಿ? ಮಲ್ಯ ಕಟ್ಟಿದ ಕೋಟೆಗೆ ದಿಕ್ಕಿಲ್ವಾ?
ಹೆಸರಿಗೆ ಮಾತ್ರನಾ ‘ಬೆಂಗಳೂರು’?

ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ.. ಕಳೆದ 18 ವರ್ಷಗಳಿಂದ ಕೋಟಿ ಕೋಟಿ ಅಭಿಮಾನಿಗಳು ಆರಾಧನೆ ಮಾಡುತ್ತಿರೋ ಹೆಸರು.. ಆರ್‌ಸಿಬಿಗಾಗಿ ಜೀವ ಬೇಕಾದ್ರೂ ಬಿಡೋಕೆ ರೆಡಿ ಅನ್ನೋದ್ದನ್ನ ಆರ್‌ಸಿಬಿ ಕಪ್ ಗೆದ್ದ ಮೇಲೆ ಫ್ಯಾನ್ಸ್ ತೋರಿಸಿಕೊಟ್ಟಿದ್ದಾರೆ. ಚಿನ್ನಸ್ವಾಮಿಯಲ್ಲಿ ನಡೆದ ದುರಂತ 18 ವರ್ಷದ ನಂತ್ರ ಕಪ್ ಗೆದ್ದ ಖುಷಿಯನ್ನ 18ಗಂಟೆ ಕೂಡ ಇರೋದ್ದಕ್ಕೆ ಬಿಟ್ಟಿಲ್ಲ. ಈಗ ಎಲ್ಲರನ್ನೂ ಕಾಡೋ ಪ್ರಶ್ನೆ ಏನಂದ್ರೆ ಕೋಟಿ ಕೋಟಿ ಫ್ಯಾನ್ಸ್ ಪೂಜಿಸುವ ಈ ಆರ್‌ಸಿಬಿ ಫ್ಯಾನ್ಸ್‌ನ ಓನರ್ ಯಾರು ಅನ್ನೋದು. ಯಾಕಂದ್ರೆ ಆರ್‌ಸಿಬಿಗಾಗಿ ಪ್ರಾಣ ಬಿಟ್ರೂ ಈ ಫ್ರಾಂಚೈಸಿ ಓನರ್ ಅನ್ನೋರು ಒಂದು ಸಂತಾಪ ಕೂಡ ಸೂಚಿಸಿಲ್ಲ. ಯಾಕೆ ಅನ್ನೋ ಪ್ರಶ್ನೆ ಸಾಕಷ್ಟು ಜನಕ್ಕೆ ಕಾಡುತ್ತಿದೆ.
ಅಂದಹಾಗೇ ಕರ್ನಾಟಕವನ್ನು ಪ್ರತಿನಿಧಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು 2008ರಲ್ಲಿ ಹುಟ್ಟಿಕೊಳ್ತು. ಉದ್ಘಾಟನಾ ಐಪಿಎಲ್‌ನಲ್ಲಿ ಚೊಚ್ಚಲ ಪ್ರವೇಶ ಮಾಡಿದ ಫ್ರಾಂಚೈಸಿ ಆರ್‌ಸಿಬಿಯಾಗಿದೆ. 2008 ರಿಂದ ಅಂದ್ರೆ ಆರಂಭದಿಂದ ಆಡುತ್ತಿರೋ ಆರ್‌ಸಿಬಿ 2009, 2011, 2016ರ ಐಪಿಎಲ್‌ನಲ್ಲಿ ಫೈನಲ್ ತಲುಪಿತ್ತಾದರೂ ರನ್ನರ್ ಅಪ್ ಆಗಿದೆ. 2020, 2021 ಮತ್ತು 2020ರ ಸೀಸನ್‌ಗಳಲ್ಲಿ ಪ್ಲೇಆಫ್ ಪ್ರವೇಶಿಸಿತ್ತು. ಆದ್ರೆ ಈ ಸಲ್ ಅಂದ್ರೆ 2025 ರ 18 ನೇ ಸೀಸನ್‌ನಲ್ಲಿ ಕಪ್ ಗೆದ್ದಿದೆ. ಈ ಕಪ್‌ನಿಂದ ಆರ್‌ಸಿಬಿ ಫ್ರಾಂಚೈಸಿ ಕೋಟಿ ಕೋಟಿ ಹಣಗಳಿಸಿದ್ರೆ, 11 ಜನ ಅಮಾಯಕ ಫ್ಯಾನ್ಸ್ ಪ್ರಾಣ ಬಿಟ್ಟಿದ್ದಾರೆ.
2016 ರ ತನಕ ಮಲ್ಯ ಕೈಯಲ್ಲಿದ್ದ ಆರ್‌ಸಿಬಿ
2008 ರಲ್ಲಿ ಸ್ಥಾಪನೆಯಾದ RCB ಅನ್ನು ವಿಜಯ್ ಮಲ್ಯ $111.6 ಮಿಲಿಯನ್‌ಗೆ ಖರೀದಿಸಿದರು. ಆ ಸಮಯದಲ್ಲಿ ಇದು ಎರಡನೇ ಅತ್ಯಂತ ದುಬಾರಿ IPL ತಂಡವಾಗಿತ್ತು. 8 ವರ್ಷಗಳ ಕಾಲ ಆರ್‌ಸಿಬಿಯನ್ನ ಫುಲ್ ಜೋಶ್‌ನಲ್ಲಿ ವಿಜಯಮಲ್ಯ ನಡೆಸಿದ್ರು. ಯಾವ ಮಾಲೀಕರು ಮಾಡದ ರೀತಿಯಲ್ಲಿ ಆರ್‌ಸಿಬಿಯನ್ನ ಕಟ್ಟಿ ಬೆಳಸಿದ್ರು.. ಎಂಜಾಯ್‌ಮೆಂಟ್ ಕೂಡ ಹಾಗೇ ಇತ್ತು ಬಿಡಿ.. ಆದ್ರೆ ಸಾಲದ ಸುಳಿಯಲ್ಲಿ ಸಿಲುಕಿದ್ದ ವಿಜಯಮಲ್ಯಗೆ ಆರ್‌ಸಿಬಿ ಕೈ ತಪ್ಪಿ ಹೋಯ್ತು. 2016 ರಲ್ಲಿ ಆರ್ಥಿಕ ಸಂಕಷ್ಟ ಸಿಲುಕಿದ ಮಲ್ಯ ದೇಶವನ್ನೇ ಬಿಡಬೇಕಾಯ್ತು. ವಿಜಯ್ ಮಲ್ಯ ನಿರ್ಗಮಿಸಿದ ಬಳಿಕ ಆರ್‌ಸಿಬಿ ಮಾಲೀಕರು ಯಾರು ಎಂದು ಅಭಿಮಾನಿಗಳು ತಲೆಕೆಡಿಸಿಕೊಳ್ಳಲು ಹೋಗಿಲ್ಲ. ಅಷ್ಟರಮಟ್ಟಿಗೆ ಮಲ್ಯ ಅವರು ಬೆಂಗಳೂರು ತಂಡದ ಬುಡವನ್ನು ಭದ್ರಗೊಳಿಸಿದ್ದರು
ಈಗ USL ಕೈಯಲ್ಲಿದೆ ಆರ್‌ಸಿಬಿ ಫ್ರಾಂಚೈಸಿ
2016ರಲ್ಲಿ ಕಾನೂನು ಹೋರಾಟದಲ್ಲಿ ವಿಜಯ್ ಮಲ್ಯ ಅವರು USL ತೊರೆದ ಮೇಲೆ, ಆರ್‌ಸಿಬಿಯ ಸಂಪೂರ್ಣ ಹತೋಟಿ ಡಿಯಾಜಿಯೊ ಒಡೆತನದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್‌ಗೆ ಹೋಯಿತು. 2016ರಿಂದ ಮಲ್ಯ ಅವರಿಗೆ ಆರ್‌ಸಿಬಿ ಮೇಲೆ ಯಾವುದೇ ಹಿಡಿತ ಇರ್ಲಿಲ್ಲ. ಈಗ ಆರ್‌ಸಿಬಿ ಅಂಗ ಸಂಸ್ಥೆಯಾದ ಯುನೈಟೆಡ್ ಸ್ಪಿರಿಟ್ ಲಿಮಿಟೆಡ್‌ನ ಮಾಲೀಕತ್ವದಲ್ಲಿದೆ. ಇದರ ಅಧ್ಯಕ್ಷರು ಪ್ರಥಮೇಶ್ ಮಿಶ್ರಾ ಮತ್ತು ಸಿಇಓ ಮತ್ತು ವ್ಯವಸ್ಥಪಕಾ ನಿರ್ದೇಶಕರು ಹಿನಾ ನಾಗರಾಜ್ . ಸುಮಾರು 200 ವರ್ಷಗಳ ಹಳೆಯದಾದ ಯುನೈಟೆಡ್ ಸ್ಪಿರಿಟ್ ಕಂಪನಿಯು ಬ್ರಿಟೀಷ್ ಆಳ್ವಿಕೆಯ ಸಂದರ್ಭದಲ್ಲಿ ಮದ್ರಾಸ್ ಪ್ರಸಿಡೆನ್ಸಿಯಲ್ಲಿ ಆರಂಭವಾಯಿತು. ಈ ಕಂಪನಿಯು ದೇಶದ ಅತ್ಯಂತ ಅಗ್ಗದ ಮದ್ಯವಾದ ಮೆಕ್ಡೊವೆಲ್ಸ್ ಉತ್ಫಾದನೆ ಮಾಡುತ್ತದೆ. ಯುನೈಟೆಡ್ ಸ್ಪಿರಿಟ್ ಲಿಮಿಟೆಡ್ ಕಂಪನಿಯನ್ನು ವಿದೇಶಿ ಕಂಪನಿಯಾದ ಡಯಾಜಿಯೊ ನಿರ್ವಹಿಸುತ್ತಿದೆ. ಯುನೈಟೆಡ್ ಸ್ಪಿರಿಟ್ ಲಿಮಿಟೆಡ್‌ನ 55.88 ರಷ್ಟು ಷೇರು ಡಯಾಜಿಯೋ ಕಂಪನಿ ಕೈಯಲ್ಲಿದೆ.. ಹೀಗಾಗಿ ಆರ್‌ಸಿಬಿ ಮೂಲ ಓನರ್ ಈಗ ವಿದೇಶಿ ಕಂಪನಿಯಾದ ಡಯಾಜಿಯೊ ಆಗಿದೆ. ಆರ್‌ಸಿಬಿ ಗೆಲ್ಲುತ್ತಿದ್ದಂತೆ ಲಂಡನ್ನಲ್ಲಿರುವ ಈ ಡಯಾಜಿಯೋ ಕಂಪನಿ ಒಂದೇ ದಿನದಲ್ಲಿ 3,300 ಕೋಟಿ ರೂ ಮಾರುಕಟ್ಟೆ ಸಂಪತ್ತು ಹೆಚ್ಚಿಸಿಕೊಂಡಿದೆ.