ಪಾಕ್ ಬೆಂಡೆತ್ತಿದ ಕನ್ನಡಿಗ – ಚಿಕ್ಕಮಗಳೂರು To ಅಮೆರಿಕ ಜರ್ನಿ ಹೇಗಿತ್ತು?
USA ಟೀಂ ನಲ್ಲಿ ಆಯ್ಕೆ ಆಗಿದ್ದು ಹೇಗೆ?

ಪಾಕ್ ಬೆಂಡೆತ್ತಿದ ಕನ್ನಡಿಗ – ಚಿಕ್ಕಮಗಳೂರು To ಅಮೆರಿಕ ಜರ್ನಿ ಹೇಗಿತ್ತು?USA ಟೀಂ ನಲ್ಲಿ ಆಯ್ಕೆ ಆಗಿದ್ದು ಹೇಗೆ?

ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಬೇಕೆಂಬುದು ಪ್ರತಿಯೊಬ್ಬ ಭಾರತೀಯ ಯುವ ಕ್ರಿಕೆಟಿಗನ ಕನಸಾಗಿರುತ್ತದೆ. ಅಂತಹ ಕನಸು ಹೊತ್ತ ಅದೆಷ್ಟೋ ಯುವಕರ ಕನಸು ಕನಸಾಗಿಯೇ ಇದೆ. ಇನ್ನೂ ಅವಕಾಶಕ್ಕಾಗಿ ಕಾಯುತ್ತಲೇ ಇದ್ದಾರೆ. ಆದ್ರೆ, ಇಲ್ಲೊಬ್ಬ ಕನ್ನಡಿಗ ಅವಕಾಶ ಸಿಕ್ಕಿಲ್ಲ ಅಂತಾ ಕೈ ಚೆಲ್ಲಿ ಕುಳಿತಿಲ್ಲ. ಸಿಕ್ಕ ಅವಕಾಶದಲ್ಲೇ ತಾವೇನು ಅಂತಾ ಫ್ರೂವ್ ಮಾಡಿದ್ದಾರೆ.. ನಾನು ಒಬ್ಬ ಸಮರ್ಥ ಆಟಗಾರ ಅಂತ ತೋರಿಸಿಕೊಟ್ಟಿದ್ದಾರೆ. ಹೌದು.. ಅವರು ಬೇರೆ ಯಾರು ಅಲ್ಲ.. ಅಮೆರಿಕಾ ತಂಡದ ಆಟಗಾರ ನೊಸ್ತುಶ್ ಕೆಂಜಿಗೆ.. ಭಾರತ ತಂಡದಲ್ಲಿ ಸ್ಥಾನ ಸಿಗದೇ, ಸಪ್ತ ಸಾಗರದಾಚೆ ದಾಟಿ ಹೋಗಿ ಯುಎಸ್ಎ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಗುರುವಾರ ನಡೆದ ಪಾಕ್ ವರ್ಸಸ್ ಅಮೆರಿಕ ಪಂದ್ಯದಲ್ಲಿ ಪಾಕ್ ತಂಡವನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ..

ಇದನ್ನೂ ಓದಿ: ಪಾಕ್‌ ಸೊಂಟ ಮುರಿದ ಬುಮ್ರಾ!! – ರೋಹಿತ್‌ಗೆ ಮಂಡಿಯೂರಿದ ಬಾಬರ್‌!

ಅಮೆರಿಕ ಹಾಗೂ ಕೆನಡಾ ದೇಶಗಳು ಅವಕಾಶಗಳ ನಾಡು ಎಂದೇ ಖ್ಯಾತಿ ಪಡೆದಿದೆ.. ಭಾರತದಲ್ಲಿ ರಾಜ್ಯ ಅಥವಾ ರಾಷ್ಟ್ರೀಯ ತಂಡದಲ್ಲಿ ಕ್ರಿಕೆಟ್ ಆಡಲು ಅವಕಾಶ ಸಿಗದ ಎಷ್ಟೋ ಮಂದಿ ಅಮೆರಿಕ, ಕೆನಡಾ ದೇಶಗಳಿಗೆ ಹೋಗಿದ್ದಾರೆ. ಅಮೆರಿಕದಲ್ಲಿ ಉದ್ಯೋಗಕ್ಕಾಗಿ ಹೋದವರೂ ಕ್ರಿಕೆಟಿಗರಾಗಿ ಬದಲಾಗಿದ್ದಾರೆ. ಅಂತವರಲ್ಲಿ ನಮ್ಮ ಕರ್ನಾಟಕದ ಯುವಕ ನೊಸ್ತುಶ್ ಕೆಂಜಿಗೆ ಕೂಡ ಒಬ್ರು..

ಗುರುವಾರ ನಡೆದ ಟಿ20 ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಅಮೆರಿಕ ಗೆದ್ದಿದೆ. ಅನುಭವಿ ಪಾಕ್ ಯುಎಸ್ಎ ವಿರುದ್ಧ ಸೋತಿರೋದು ದೊಡ್ಡ ಮುಖಭಂಗಕ್ಕೆ ಕಾರಣವಾಗಿದೆ. ಆದರೆ ಪಾಕ್ ಅನ್ನು ಸೋಲಿಸಲು ಅಮೆರಿಕ ತಂಡ ಕನ್ನಡಿಗನನ್ನು ಅಸ್ತ್ರವನ್ನಾಗಿ ಬಳಸಿರೋದು ಬಹುತೇಕರಿಗೆ ತಿಳಿದಿಲ್ಲ.

ಹೌದು. ಅಮೆರಿಕ ತಂಡ ನೊಸ್ತುಶ್ ಕೆಂಜಿಗೆ ಮೂಲಕ ಪಾಕ್ ತಂಡದ ಮೇಲೆ ಬೌಲಿಂಗ್ ದಾಳಿ ಮಾಡಿದರು. ನೊಸ್ತುಶ್ ಎಸೆತಕ್ಕೆ ಪಾಕ್ 3 ವಿಕೆಟ್ ಉದುರಿತ್ತು. ಇದಾದ ಬಳಿಕ ಅಬ್ಬರದ ಆಟದ ಜೊತೆಗೆ ಆತ ಕನ್ನಡಿಗ ಎಂಬ ಸುದ್ದಿಯೂ ವೈರಲ್ ಆಯ್ತು.

ಅಂದಹಾಗೆ ನೊಸ್ತುಶ್ ಮೂಲತಃ ಕರ್ನಾಟಕದವರು. ಅದರಲ್ಲೂ ಕಾಫಿನಾಡು ಚಿಕ್ಕಮಗಳೂರಿನವರು. ಎಡಗೈ ಸ್ಪಿನ್ನರ್ ನೊಸ್ತುಶ್ ಪ್ರದೀಪ್ ಕೆಂಜಿಗೆ ಭಾರತ ತಂಡದಲ್ಲಿ ಆಡುವ ಕನಸು ಕಂಡಿದ್ದರು. 22ನೇ ವಯಸ್ಸಿಂದ  ವೃತ್ತಿಪರ ಕ್ರಿಕೆಟಿಗನಾಗಲು ಶ್ರಮ ಹಾಕಿದ್ರು.. ಆದ್ರೆ ಅವರ ಕನಸು ನನಸಾಗಿಲ್ಲ.. ಬಳಿಕ 2019ರಲ್ಲಿ ಯುಎಸ್ಎ ತಂಡಕ್ಕೆ ಪದಾರ್ಪಣೆ ಮಾಡಿದರು. ಅದಕ್ಕೂ ಮುನ್ನ ಬೆಂಗಳೂರಿನಲ್ಲಿ ಕ್ಲಬ್ ಕ್ರಿಕೆಟ್ ಆಡಿದ್ದಾರೆ. ಬಳಿಕ ನೊಸ್ತುಶ್ ಕೆಂಜಿಗೆ ಅವರು ಕೆಲಸಕ್ಕಾಗಿ ಯುಎಸ್ಎಗೆ ತೆರಳಿದ್ದರು. ಯುಸ್ ಗೆ ಹೋದಾಗ ತನ್ನ ಬದುಕಿನಲ್ಲಿ ಕ್ರಿಕೆಟ್ ಆಟ ಮುಗಿದಿದೆ. ಇನ್ನೇನಿದ್ರೂ ಸಿಕ್ಕ ಉದ್ಯೋಗದಲ್ಲೇ ಮುಂದುವರಿಬೇಕು ಅಂತ ಅಂದುಕೊಂಡಿದ್ರು.. ಆದ್ರೆ ಅಲ್ಲಿನ ಸ್ಥಳೀಯ ಪಂದ್ಯಗಳಲ್ಲಿ ಆಟವಾಡುವ ಅವಕಾಶ ಅವರಿಗೆ ಸಿಕ್ತು.. ಬಳಿಕ ಉದ್ಯೋಗದ ಜೊತೆ ಜೊತೆಗೆ ಕ್ರಿಕೆಟ್ನಲ್ಲೂ ಮುಂದುವರಿತಾರೆ ನೋಸ್ತುಶ್..

ಯುಎಸ್ ನ ಸ್ಥಳೀಯ ಪಂದ್ಯಗಳಲ್ಲಿ ನೊಸ್ತುಶ್ ಕೆಂಜಿಗೆ ಉತ್ತಮ ಪ್ರದರ್ಶನ ನೀಡ್ತಾ ಬಂದ್ರು.. ಬಳಿಕ ಕೋಚ್ಗಳನ್ನು ಮೆಚ್ಚಿಸುವಲ್ಲಿ ಯಶಸ್ವಿಯಾದರು. ಓಪನ್ ಪಂದ್ಯಗಳು ಮತ್ತು ಆಯ್ಕೆ ಪ್ರಯೋಗಗಳಲ್ಲಿಯೂ ಸಹ ಛಾಪು ಮೂಡಿಸಿದರು. ಆದಾಗ್ಯೂ, ತಮ್ಮ ಅತ್ಯುತ್ತಮ ಪ್ರದರ್ಶನಗಳ ಹೊರತಾಗಿಯೂ, ನೊಸ್ತುಶ್  ಕೆಂಜಿಗೆ ಅವರು ಯುಎಸ್ಎ ತಂಡದ ಜೆರ್ಸಿ ಧರಿಸಲು ಮತ್ತೆ ಮೂರು ವರ್ಷಗಳ ಕಾಲ ಕಾಯಬೇಕಾಯಿತು. ಆ ಬಳಿಕ ಅಮೆರಿಕ ತಂಡ ಸೇರಿಕೊಂಡರು. 2019ರಲ್ಲಿ ನೊಸ್ತುಶ್ ಕೆಂಜಿಗೆ ಯುಎಇ ವಿರುದ್ಧ ಮೈದಾನಕ್ಕೆ ಕಾಲಿಟ್ಟರು. ಅಂದಿನಿಂದ ಕೆಂಜಿಗೆ 40 ಒಡಿಐ ಮತ್ತು 7 ಟಿ20ಐಗಳನ್ನು ಆಡಿದ್ದಾರೆ. ಅಂತಿಮವಾಗಿ 2024ರ ಟಿ20 ವಿಶ್ವಕಪ್ಗಾಗಿ ಯುಎಸ್ಎ ತಂಡಕ್ಕೆ ಆಯ್ಕೆಯಾಗುವಲ್ಲಿಗೆ ಯಶಸ್ವಿಯಾದ್ರು… ಮೂಡಿಗೆರೆ ಮೂಲದವರಾದ ನೊಸ್ತುಶ್ ತುಂಬಾ ಚೆನ್ನಾಗಿ ಕನ್ನಡ ಮಾತಾಡುತ್ತಾರೆ.. ಯುಎಸ್ ಎ  ಪರ  ಕ್ರಿಕೆಟ್ ಆಡಲು ಅಮೆರಿಕ ಪ್ರಜೆ ಆಗಿದ್ದಾರೆ..

ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್ನಲ್ಲಿ ಕಠಿಣ ತರಬೇತಿ ಕೂಡ ಪಡೆದ್ದಾರೆ. ಬೆಂಗಳೂರಿನ ದಯಾನಂದ ಸಾಗರ ಕಾಲೇಜ್ ಆಫ್ ಇಂಜಿನಿಯರಿಂಗ್ನಿಂದ ಜೈವಿಕ ತಂತ್ರಜ್ನಾನದಲ್ಲಿ ಪದವಿಯನ್ನು ಪಡೆದು ಬಳಿಕ ಯುಎಸ್ಎಗೆ ತೆರಳಿದ್ದರು . ಅಂದಹಾಗೆಯೇ ಪಾಕ್ ವಿರುದ್ಧ ಆಡಿದ ಪಂದ್ಯದಲ್ಲಿ ನೊಸ್ತುಶ್ ಕೆಂಜಿಗೆ 4 ಓವರ್ನಲ್ಲಿ 30 ರನ್ ನೀಡಿ 3 ವಿಕೆಟ್ ಉರುಳಿಸಿದ್ದಾರೆ. ಆ ಮೂಲಕ ಅಮೆರಿಕ ತಂಡದ ಗೆಲುವಿಗೆ ಮತ್ತು ಪಾಕ್ ಸೋಲಿಗೆ ಕಾರಣರಾಗಿದ್ದಾರೆ. ಇದಕ್ಕೂ ಮುಖ್ಯವಾಗಿ ನೊಸ್ತುಶ್ ಕನ್ನಡಿಗ ಎಂಬ ವಿಚಾರ ಎಲ್ಲರಿಗೂ ಹೆಮ್ಮ ತಂದಿದೆ.

Shwetha M

Leave a Reply

Your email address will not be published. Required fields are marked *