ಇಂದು IPL – 2026 ಮಿನಿ ಹರಾಜು – ಬಿಡ್ಡಿಂಗ್ ನಡೆಸಿಕೊಡಲಿದ್ದಾರೆ ಮಲ್ಲಿಕಾ ಸಾಗರ್

ಇಂದು IPL – 2026  ಮಿನಿ ಹರಾಜು – ಬಿಡ್ಡಿಂಗ್ ನಡೆಸಿಕೊಡಲಿದ್ದಾರೆ ಮಲ್ಲಿಕಾ ಸಾಗರ್

ಇಂಡಿಯನ್ ಪ್ರೀಮಿಯರ್ ಲೀಗ್   2026 ರ ಮಿನಿ-ಹರಾಜು ಇಂದು  ಅಬುಧಾಬಿಯ ಎತಿಹಾದ್ ಅರೆನಾದಲ್ಲಿ ನಡೆಯಲಿದೆ. ಇದು ಭಾರತದ ಹೊರಗೆ ನಡೆಯುತ್ತಿರುವ ಮೂರನೇ ಐಪಿಎಲ್ ಹರಾಜಾಗಲಿದೆ. ಖ್ಯಾತ ಹರಾಜುದಾರೆ ಮಲ್ಲಿಕಾ ಸಾಗರ್ ಅವರು ಪ್ರಕ್ರಿಯೆಗಳನ್ನು ನಡೆಸಲಿದ್ದಾರೆ. ಇಂದು  ಭಾರತೀಯ ಸಮಯ ಮಧ್ಯಾಹ್ನ 2:30  ಹರಾಜು ಪ್ರಾರಂಭವಾಗಲಿದೆ.

ಹರಾಜಿನಲ್ಲಿರುವ 359 ಆಟಗಾರರ ಪೈಕಿ 244 ಭಾರತೀಯ ಆಟಗಾರರು ಮತ್ತು 115 ವಿದೇಶಿ ಕ್ರಿಕೆಟಿಗರು ಸೇರಿದ್ದಾರೆ. ಒಟ್ಟು 40 ಆಟಗಾರರು ತಮ್ಮ ಮೂಲ ಬೆಲೆಯನ್ನು ಗರಿಷ್ಠ 2 ಕೋಟಿ ರೂ.ಗೆ ನಿಗದಿಪಡಿಸಿದ್ದಾರೆ. ಕುತೂಹಲಕಾರಿಯಾಗಿ, ಈ ಗಣ್ಯ ಗುಂಪಿನಲ್ಲಿ ಕೇವಲ ಇಬ್ಬರು ಭಾರತೀಯರು ಮಾತ್ರ ಸ್ಥಾನ ಪಡೆದಿದ್ದಾರೆ. ವೆಂಕಟೇಶ್ ಅಯ್ಯರ್ ಮತ್ತು ರವಿ ಬಿಷ್ಣೋಯ್.

ಇದನ್ನೂ ಓದಿ: ಬೆಳಗಾವಿ ಅಧಿವೇಶನ ಒಂದು ವಾರ ವಿಸ್ತರಿಸಿ – ಸ್ಪೀಕರ್‌ ಯು.ಟಿ.ಖಾದರ್‌ಗೆ ಅಶೋಕ್ ಒತ್ತಾಯ

ಎಲ್ಲಾ ಫ್ರಾಂಚೈಸಿಗಳಲ್ಲಿ, 31 ವಿದೇಶಿ ಸ್ಥಾನಗಳು ಸೇರಿದಂತೆ 77 ಸ್ಥಾನಗಳನ್ನು ಭರ್ತಿ ಮಾಡಲು ಲಭ್ಯವಿದೆ. ಐಪಿಎಲ್ ನಿಯಮಗಳ ಪ್ರಕಾರ, ಫ್ರಾಂಚೈಸಿಗೆ ಗರಿಷ್ಠ ತಂಡದ ಗಾತ್ರ 25 ಆಟಗಾರರು ಮತ್ತು ಎಂಟು ವಿದೇಶಿ ಆಟಗಾರರ ಕ್ಯಾಪ್ ಇದೆ. ತಂಡಗಳು ಕನಿಷ್ಠ 18 ಆಟಗಾರರ ತಂಡವನ್ನು ಕಾಯ್ದುಕೊಳ್ಳಬೇಕು.

ಕ್ಯಾಪ್ಡ್ ಮತ್ತು ಅನ್‌ಕ್ಯಾಪ್ಡ್ ಆಟಗಾರರ ಸಂಪೂರ್ಣ ವಿವರ

ಕ್ಯಾಪ್ಡ್ ಇಂಡಿಯನ್ಸ್-16

ಕ್ಯಾಪ್ಡ್ ವಿದೇಶಿ-96

ಅನ್ ಕ್ಯಾಪ್ಡ್ ಇಂಡಿಯನ್-224

ಅನ್ ಕ್ಯಾಪ್ಡ್ ವಿದೇಶಿ-14

ಒಟ್ಟು-350

ಮುಖ್ಯ ಕೋಚ್ ರಿಕಿ ಪಾಂಟಿಂಗ್ ಅನುಪಸ್ಥಿತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಹರಾಜಿನ ನೇತೃತ್ವ ವಹಿಸಲಿದ್ದಾರೆ ಎನ್ನಲಾಗಿದೆ. ಆಶಸ್ ಸರಣಿಗಾಗಿ ಆಸ್ಟ್ರೇಲಿಯಾದಲ್ಲಿ ಚಾನೆಲ್ ಸೆವೆನ್ ನೆಟ್‌ವರ್ಕ್‌ನೊಂದಿಗೆ ಕಾಮೆಂಟರಿ ತಂಡದ ಭಾಗವಾಗಿ ಪಾಂಟಿಂಗ್ ಒಪ್ಪಂದ ಮಾಡಿಕೊಂಡಿದ್ದಾರೆ. ಹೀಗಾಗಿ ಅವರು ಮಿನಿ ಹರಾಜಿನಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅಯ್ಯರ್ ಅವರೊಂದಿಗೆ ಫ್ರಾಂಚೈಸಿಯ ಹೊಸ ಸ್ಪಿನ್ ಬೌಲಿಂಗ್ ಕೋಚ್ ಸಾಯಿರಾಜ್ ಬಹುತುಲೆ, ಸಹಾಯಕ ಬೌಲಿಂಗ್ ಕೋಚ್ ಟ್ರೆವರ್ ಗೊನ್ಸಾಲ್ವೆಸ್ ಮತ್ತು ಜನರಲ್ ಮ್ಯಾನೇಜರ್ ಆಶಿಶ್ ತುಲಿ ಕೂಡ ಇರಲಿದ್ದಾರೆ ಎನ್ನಲಾಗಿದೆ.

 ಹರಾಜು ಪ್ರಕ್ರಿಯೆ ನಡೆಸಲಿದ್ದಾರೆ  ಮಲ್ಲಿಕಾ ಸಾಗರ್

ಈ ಮನಿ ಹರಾಜಿನಲ್ಲಿ ಮುಂಬೈ ಮೂಲದ ಮಲ್ಲಿಕಾ ಸಾಗರ್ ಹರಾಜುಗಾರ್ತಿಯಾಗಿದ್ದಾರೆ. ಮುಂಬೈ ಮೂಲದ 50 ವರ್ಷದ ಮಲ್ಲಿಕಾ ಸಾಗರ್ ಫಿಲಡೆಲ್ಫಿಯಾದ ಬ್ರೈನ್ ಮಾವರ್ ಕಾಲೇಜಿನಲ್ಲಿ ಕಲಾ ಇತಿಹಾಸದಲ್ಲಿ ಪದವಿ ಪಡೆದಿದ್ದಾರೆ. ಜಗತ್ತಿನ ಶ್ರೇಷ್ಠ ಹರಾಜುಗಾರರಲ್ಲಿ ಒಬ್ಬರು ಎಂದು ಗುರುತಿಸಿಕೊಂಡಿರುವ ಮಲ್ಲಿಕಾ ಸಾಗರ್ ಕಲಾ ಸಂಗ್ರಾಹಕಿ ಮತ್ತು ಸಲಹೆಗಾರ್ತಿಯಾಗಿದ್ದಾರೆ.

2023 ರಲ್ಲಿ ದುಬೈನಲ್ಲಿ ಮಿನಿ-ಹರಾಜನ್ನು ನಡೆಸುವ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಹರಾಜುದಾರರಾಗಿ ಸೇವೆ ಸಲ್ಲಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಸಾಗರ್ ಪಾತ್ರರಾದರು. ನಂತರ ಅವರು 2024 ರ ನವೆಂಬರ್‌ನಲ್ಲಿ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದ ಐಪಿಎಲ್ 2025 ಮೆಗಾ ಹರಾಜನ್ನು ನಿರ್ವಹಿಸುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಇದೀಗ ಮೂರನೇ ಬಾರಿಗೆ ಐಪಿಎಲ್‌ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Kishor KV