ನಟ ಸಲ್ಮಾನ್ ಖಾನ್ ಟಾರ್ಗೆಟ್ – ಜಸ್ಟ್ ಮಿಸ್.. ಸಲ್ಮಾನ್‌ಗೆ ಹೈ ಸೆಕ್ಯೂರಿಟಿ
ಯಾರು ಈ ಲಾರೆನ್ಸ್ ಬಿಷ್ಣೋಯಿ?
ಮುಂಬೈನಲ್ಲಿ ಮತ್ತೆ ಪಿಸ್ತೂಲ್ ಸದ್ದು ಜೋರಾಗಿದೆ. ಬಾಲಿವುಡ್ ಸ್ಟಾರ್ ನಟರಿಗೆ ಜೀವ ಭಯ ಶುರುವಾಗಿದೆ. ಕಳೆದ ಶನಿವಾರ ಮಹಾರಾಷ್ಟ್ರದ ರಾಜಕಾರಣಿ, ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಮೇಲೆ ಗುಂಡಿನ ದಾಳಿನಡೆಸಲಾಗಿದೆ. ಈ ಘಟನೆ ಆಗುತ್ತಿದ್ದಂತೆ ನಟ ಸಲ್ಮಾನ್ ಖಾನ್ ಮನೆಗೆ ಭದ್ರತೆ ಹೆಚ್ಚಿಸಲಾಗಿದೆ. ಅಜಿತ್ ಪವಾರ್ ಬಣದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಅವರ ಹತ್ಯೆ ಮಹಾರಾಷ್ಟ್ರದಲ್ಲಿ ಭಯದ ವಾತಾವರ್ಣವನ್ನೇ ನಿರ್ಮಾಣ ಮಾಡಿದೆ. ಅದು ಅಲ್ಲದೇ ಸಲ್ಮಾನ್ ಮತ್ತು ಬಾಬಾ ಸಿದ್ದಿಕಿ ಕುಚಿಕು ಗೆಳೆಯರಾಗಿದ್ದವರು. ಈ ಘಟನೆ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ಸ್ ಹೊರಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ..
ಇದನ್ನೂ ಓದಿ: ಈ ಕ್ಯಾಬ್ ಡ್ರೈವರ್‌ನ ಭಯ್ಯಾ ಅಂತ ಕರೆಯಬಾರದು! – ಶಾಕ್ ಆಗುವಂತಿದೆ ಡ್ರೈವರ್ ರೂಲ್ಸ್?
ಅಂದಹಾಗೇ ಮೃತ ಬಾಬಾ ಸಿದ್ದಿಕಿ ಹಾಗೂ ಸಲ್ಮಾನ್ ಖಾನ್ ನಡುವೆ ಒಳ್ಳೆಯ ಸಂಬಂಧವಿದೆ. ಹೀಗಾಗಿ ಸಿದ್ದಿಕಿ ಅವರ ಹತ್ಯೆ ಹಿಂದೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಕೈವಾಡ ಇದೆ ಎಂಬ ಅನುಮಾನದೊಂದಿಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಿಷ್ಣೋಯಿ ಗ್ಯಾಂಗ್ ಬಹಳ ಹಿಂದಿನಿಂದಲೂ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಹಾಕುತ್ತಾ ಬಂದಿತ್ತು. ಅಲ್ಲದೆ, ಸಲ್ಮಾನ್ ಖಾನ್‌ನನ್ನ ಟಾರ್ಗೆ ಮಾಡಿ ಅಟ್ಯಾಕ್ ಮಾಡಿದ್ರು. ಕಳೆದ ಏಪ್ರೀಲ್ 14 ರಂದು ಮುಂಬೈನ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ನಿವಾಸದ ಹೊರಭಾಗ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿದ್ದರು. ಈ ಇಬ್ಬರು ಶೂಟರ್‌ಗಳನ್ನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಕಡೆಯವಾಗಿದ್ದು, ಸಲ್ಮಾನ್ ಖಾನ್ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂದು ಮುಂಬಯಿ ಪೊಲೀಸರು ಹೇಳಿದ್ದರು. ಶನಿವಾರ ಸಲ್ಮಾನ್ ಆಪ್ತ ಸ್ನೇಹಿತ ಬಾಬಾ ಸಿದ್ದಿಕಿ ಮೇಲೆ ಅಟ್ಯಾಕ್ ಆಗುತ್ತಿದ್ದಂತೆ , ಸಲ್ಮಾನ್ ಖಾನ್ ಅವರು ಬಿಗ್ ಬಾಸ್ 18ರ ಶೂಟಿಂಗ್ ನಿಲ್ಲಿಸಿ, ಸಿದ್ದಿಕಿ ಕುಟುಂಬವನ್ನು ಭೇಟಿ ಮಾಡಲು ತೆರಳಿದ್ರು.
ಸಲ್ಮಾನ್ ಮೇಲೆ ಬಿಷ್ಣೋಯಿಗೆ ಯಾಕೆ ಸೇಡು.?
ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಲಾರೆನ್ಸ್ ಬಿಷ್ಣೋಯಿ, ಬಾಬಾ ಸಿದ್ದಿಕಿ ಹತ್ಯೆ ಹಿಂದೆಯೂ ಸಂಚು ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಸಲ್ಮಾನ್ ಖಾನ್ ಮತ್ತು ಅವರ ಕುಟುಂಬದ ಭದ್ರತೆಗೆ ಹೆಚ್ಚಿಗೆ ಮಾಡಲಾಗಿದೆ. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದು ಶತಃಸಿದ್ಧ ಎಂದು ಲಾರೆನ್ಸ್ ಬಿಷ್ಣೋಯಿ ಅನೇಕ ಬಾರಿ ಬೆದರಿಕೆ ಹಾಕಿದ್ದಾನೆ. ಬಿಷ್ಣೋಯಿ ಸಮುದಾಯವು ಕೃಷ್ಣಮೃಗವನ್ನು ದೇವರು ಎಂದು ಪರಿಗಣಿಸಿದ್ದು, ಸಲ್ಮಾನ್ ಅದರ ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪ ಪ್ರಕರಣ ಬಿಷ್ಣೋಯಿ ಸಮುದಾಯಕ್ಕೆ ಆಘಾತ ಮೂಡಿಸಿತ್ತು. ಲಾರೆನ್ಸ್ ಬಿಷ್ಣೋಯಿ, ತನ್ನ ಗ್ಯಾಂಗ್ ಸದಸ್ಯರ ನೆರವಿನಿಂದ, ನನ್ನ ಕುಟುಂಬದ ಸದಸ್ಯರು ಮಲಗಿದ್ದಾಗ ಗುಂಡಿನ ದಾಳಿ ನಡೆಸಿದ್ದಾರೆ. ಅವರು ನನ್ನನ್ನು ಹಾಗೂ ನನ್ನ ಕುಟುಂಬವನ್ನು ಕೊಲ್ಲಲು ಸಂಚು ರೂಪಿಸಿದ್ದಾರೆ ಎಂದು ಸಲ್ಮಾನ್ ಖಾನ್ ಜೂನ್ 4ರಂದು ಪೊಲೀಸರಿಗೆ ಹೇಳಿಕೆ ನೀಡಿದ್ದರು.
ಬಾಲಿವುಡ್ ಜೊತೆ ಬಾಬಾ ಸಿದ್ದಿಕಿ ಬಾಂಧವ್ಯ
ಮಹಾರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದ ಬಾಬಾ ಸಿದ್ದಿಕಿ, ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಸೇರಿದಂತೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳ ಜತೆ ಒಳ್ಳೆ ಬಾಂಧವ್ಯ ಹೊಂದಿದ್ರು. ದಶಕದ ಹಿಂದೆ ಬಹಳ ಸುದ್ದಿ ಮಾಡುತ್ತಿದ್ದ ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ನಡುವಿನ ಕಿತ್ತಾಟವನ್ನು ಬಗೆಹರಿಸುವಲ್ಲಿ ಸಿದ್ದಿಕಿ ಪ್ರಮುಖ ಪಾತ್ರ ವಹಿಸಿದ್ದರು. 2008ರಲ್ಲಿ ಕತ್ರಿಕಾ ಕೈಫ್ ಬರ್ಥಡೇ ಪಾರ್ಟಿ ವೇಳೆ ಸಲ್ಮಾನ್ ಮತ್ತು ಶಾರುಖ್ ನಡುವೆ ಕಿರಿಕ್ ಆಗಿತ್ತು. ಕಿರಿಕ್ ನಂತ್ರ ಇಬ್ಬರೂ ಒಬ್ಬರನ್ನೊಬ್ಬರು ನೋಡುತ್ತಿರಲಿಲ್ಲ. ಖಾನ್‌ಗಳ ದ್ವೇಷವನ್ನ ಬಾಬಾ ಸಿದ್ದಿಕಿಯ ವಾರ್ಷಿಕ ಇಫ್ತಾರ್ ಕೂಟವು ಕೊನೆಗೂ ಒಂದಾಗಿಸಿತ್ತು. ಹಿಂದಿನ ಕಿತ್ತಾಟ ಮರೆತು ಇಬ್ಬರೂ ಅಪ್ಪಿಕೊಂಡಿದ್ರು.
ಸಲ್ಮಾನ್‌ಗೆ ನೆರುವು ನೀಡುವವರಿಗೆ ಖಡಕ್ ಎಚ್ಚರಿಕೆ
ಬಾಬಾ ಸಿದ್ದಿಕ್ ಹತ್ಯೆಯ ಹೊಣೆ ಹೊತ್ತಿರುವ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್, ಬಾಲಿವುಡ್ ತಾರೆ ಸಲ್ಮಾನ್ ಖಾನ್ ಅವರಿಗೆ ನೆರವು ನೀಡುವವರಿಗೆ ತಕ್ಕ ಶಾಸ್ತಿ ಮಾಡಲಾಗುವುದೆಂದು ಎಚ್ಚರಿಕೆ ನೀಡಿದೆ.
“ನಮಗೆ ಯಾರ ಮೇಲೂ ದ್ವೇಷಭಾವನೆ ಇಲ್ಲ. ಆದರೆ ಸಲ್ಮಾನ್ ಖಾನ್ ಮತ್ತು ದಾವೂದ್ ಗ್ಯಾಂಗ್ ಗೆ ಯಾರು ನೆರವು ನೀಡುತ್ತಾರೋ, ಅಂಥವರು ಎಚ್ಚರಿಕೆಯಿಂದ ಇರಿ’ ಎಂದು ಪೋಸ್ಟ್ ಮಾಡಿದ್ದಾರೆ. ಇದನ್ನ ಶುಬ್ಬೂ ಲೋನ್ಕರ್ ಎಂಬಾತ ಪೋಸ್ಟ್ ಮಾಡಿದ್ದಾನೆ. ಗುಂಡು ಹಾರಿಸಿದ ಇಬ್ಬರನ್ನ ಬಂಧಿಸಲಾಗಿದ್ದು, ಓರ್ವ ಆರೋಪಿ ಎಸ್ಕೇಪ್ ಆಗಿದ್ದಾನೆ.