ಸುಪ್ರೀಂ ಹೊಸ CJI ಯಾರು ಗೊತ್ತಾ? – ಸರ್ಕಾರಿ ಶಾಲೆ , ದೀಪದ ಬೆಳಕಲ್ಲಿ ವಿದ್ಯಾಭ್ಯಾಸ
ಕೃಷಿ ಕೆಲಸ ಮಾಡುತ್ತಿದ್ದವರು ಜಡ್ಜ್ ಆಗಿದ್ದೇಗೆ?

ನಮಸ್ಕಾರ ಸ್ನೇಹಿತರೇ ಈಗ ಇರೋ ಸಿಜೆಐ ಬಿಆರ್ ಗವಾಯಿ ಅವರು ನ.23ರಂದು ಸೇವೆಯಿಂದ ನಿವೃತ್ತಿ ಹೊಂದುತ್ತಿದ್ದಾರೆ.. ಇವರ ನಂತ್ರ ಅಂದ್ರೆ ನ.24ರಂದು ಜಸ್ಟೀಸ್ ಸೂರ್ಯಕಾಂತ್ ಅವರು ಸಿಜೆಐ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಿಜೆಐ ಹುದ್ದೆಗೆ ಕುರುವುದು ಅಷ್ಟು ಸುಲಭ ಅಲ್ಲ.. ಬಡತನವಿದ್ರೂ ಬಾಲ್ಯದಲ್ಲಿ ಸಾಕಷ್ಟು ಕಷ್ಟ ಪಟ್ಟು ಓದಿ ಇಂದು ಸಿಜೆಐ ಹುದ್ದೆೆಗೆ ನೇಮಕ ಆಗಿರೋ ಸೂರ್ಯಕಾಂತ್ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು..
ಇದನ್ನೂ ಓದಿ: ಪಾಕ್ ಗಡಿಯ ಬಳಿ ʼತ್ರಿಶೂಲ್ʼ ಸಮರಾಭ್ಯಾಸ ಶುರು ಮಾಡಿದ ಭಾರತ
ಮುಂದಿನ ನವೆಂಬರ್ 24ರಂದು ಅಧಿಕಾರ ಸ್ವೀಕರಿಸೋ ನ್ಯಾಯಮೂರ್ತಿ ಸೂರ್ಯ ಕಾಂತ್ 2027ರ ಫೆಬ್ರುವರಿ 9ರವರೆಗೆ ಸಿಜೆಐ ಆಗಿ ಮುಂದುವರಿಯಲಿದ್ದಾರೆ. ಹರಿಯಾಣದ ನ್ಯಾಯಮೂರ್ತಿಯೊಬ್ಬರು ಇದೇ ಮೊದಲ ಬಾರಿಗೆ ಸರ್ವೋಚ್ಛ ನ್ಯಾಯಾಲಯದ ಹುದ್ದೆಗೆ ಏರಿದ ಕೀರ್ತಿಗೆ ಇವರು ಪಾತ್ರರಾಗಿದ್ದಾರೆ. ಈ ಸೂರ್ಯಕಾಂತ್ ಅವರು ಹರಿಯಾಣದ ಹಿಸ್ಸಾರ್‌ನ ಒಂದು ಮಿಡಲ್ ಕ್ಲಾಸ್ ಫ್ಯಾಮೀಲಿಯಿಂದ ಬಂದವರು.. ಹುಟ್ಟತ್ತಲೇ ಕಷ್ಟವನ್ನ ನೋಡಿದವರು. ಎಸ್ಸೆಸ್ಸೆಲ್ಸಿವರೆಗೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದವರು.. ಇವರ ತಂದೆ ಶಿಕ್ಷಕರಾಗಿದ್ರು. ಅವರ ಹೆಸರು ಮಧಂಗೋಪಾಲ್ ಶಾಸ್ತ್ರಿ ತಾಯಿ ಶಶಿ ದೇವಿ ಅವರು ಗೃಹಿಣಿಯಾಗಿದ್ರು. ಐದು ಸಹೋದರ-ಸಹೋದರಿಗಳಲ್ಲಿ ಚಿಕ್ಕವರು ಸೂರ್ಯಕಾಂತ. ಶಾಲೆಗೆ ಹೋಗ್ತಾ ಇವರು ತುಂಬಾ ಲ್ಲಿ ಬುದ್ಧಿವಂತರಾಗಿದ್ದರು . ಆದ್ರೆ ಇವರು ಮೊದ್ಲು ಒಂದು ಸಣ್ಣ ಪಟ್ಟಣ ಅಂತ ನೋಡಿದ್ದು ಎಸ್ಸೆಸ್ಸೆಲ್ಸಿಯಲ್ಲಿ ಇದ್ದಾಗ. ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಸಲುವಾಗಿ ಹಿಸ್ಸಾರ್‌ನ ಹನ್ಸಿ ಪಟ್ಟಣಕ್ಕೆ ಹೋಗಿದ್ರು. ಅಲ್ಲಿ ತನಕ ಇವರು ತಮ್ಮ ಹಳ್ಳಿ ಬಿಟ್ಟು ಹೊರಗೇ ಹೋಗೇ ಇಲ್ಲ.. ಇವರೇ ಒಂದ್ಕಡೆ ಹೇಳಿಕೊಂಡಿದ್ರು ನನ್ನ ಶಾಲಾ ಶಿಕ್ಷಣ ಸರ್ಕಾರಿ ಶಾಲೆಯಲ್ಲೇ ಆಗಿತ್ತು. ಶಾಲೆ ಬಿಟ್ಟ ನಂತರ ಬಿಡುವಿನ ಅವಧಿಯಲ್ಲಿ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದೆ ಅಂತ ಹೇಳಿದ್ರು. ಕೃಷಿ ಕ್ಷೇತ್ರದಲ್ಲಿ ಗ್ರಾಮಸ್ಥರೊಂದಿಗೆ ಕೆಲಸ ಮಾಡಿದ್ದರಿಂದ ಜೀವನದ ಬಗ್ಗೆ ಅನೇಕ ಪಾಠಗಳನ್ನು ಕಲಿಯಲು ಸಾಧ್ಯವಾಯಿತು’ ಎಂದು ಅವರು ಹೇಳಿಕೊಂಡಿದ್ದರು.
ಏಳನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದ ಹಳ್ಳಿಯ ಶಾಲೆಯಲ್ಲಿ ಸರಿಯಾದ ಬೆಂಚುಗಳೇ ಇರಲಿಲ್ಲ ಅಂತೆ.. ಅಷ್ಚೇ ಇವರು ಓದುತ್ತಿದ್ದಾಗ ಇವರಿದ್ದ ಗ್ರಾಮದಲ್ಲಿ ವಿದ್ಯುತ್ ಸಮರ್ಪಕ ಇರಲಿಲ್ಲ.. ಬುಡ್ಡಿ ದೀಪದ ಬೆಳಕಿನಲ್ಲಿ ಗೆಳೆಯರ ಜತೆಗೆ ಓದುತ್ತಿದ್ದಂತೆ. ಇವರಿಗೆ ಹಾಗೂ ಇವರ ಸ್ನೇಹಿತರಿಗೆ ಸರ್ಕಾರಿ ಉದ್ಯೋಗ ಪಡೆಯುವುದೇ ಗುರಿಯಾಗಿತ್ತಂತೆ.. ಇನ್ನೂ ಇವರ ಬಗ್ಗೆ ನೋಡ್ತಾ ಹೋದ್ರೆ..
ನ್ಯಾ. ಸೂರ್ಯಕಾಂತ್ ಜೀವನ
ಹಿಸ್ಸಾರ್ ಜಿಲ್ಲೆಯ ಪೆಟ್ಟಾರ್ ಗ್ರಾಮದಲ್ಲಿ 1962ರ ಫೆಬ್ರುವರಿ 10ರಂದು ಜನನ
ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಲ್ಲಿ 1984ರಲ್ಲಿ ಎಲ್‌ಎಲ್‌ಬಿ ಪದವಿ
ಆರಂಭದಲ್ಲಿ ಹಿಸ್ಪಾರ್‌ನ ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ
ಬಳಿಕ ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್‌ನಲ್ಲಿ ವಕೀಲ ವೃತ್ತಿ
38ನೇ ವಯಸ್ಸಿನಲ್ಲೇ ಹರಿಯಾಣದ ಅಡ್ವಕೇಟ್ ಜನರಲ್ ಆಗಿ ಕಾರ್ಯನಿರ್ವಹಣೆ
42ನೇ ವಯಸ್ಸಿನಲ್ಲಿ ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ. ಅಲ್ಲಿ 14 ವರ್ಷಗಳ ಸೇವೆ
2018ರ ಅಕ್ಟೋಬರ್ 5ರಂದು ಹಿಮಾಚಲ ಪ್ರದೇಶ ಹೈಕೋರ್ಟ್ ಮುಖ್ಯನ ನ್ಯಾಯಮೂರ್ತಿಯಾಗಿ ಪದೋನ್ನತಿ
2019ರ ಮೇ 4ರಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ
ನ್ಯಾ. ಸೂರ್ಯಕಾಂತ್ ಮಹತ್ವದ ತೀರ್ಪು
ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದಿದ್ದ ಸುಪ್ರೀಂ ಕೋರ್ಟ್ ಪೀಠದ ಭಾಗವಾಗಿದ್ದರು. ವಸಾಹತು ಯುಗದ ದೇಶದ್ರೋಹಿ ಕಾನೂನಿಗೆ ತಡೆ ನೀಡಿದ್ದ ಪೀಠದಲ್ಲಿದ್ದರು. ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್) ಸಮಯದಲ್ಲಿ ಕರಡು ಮತದಾರರ ಪಟ್ಟಿಯಿಂದ ಹೊರಗಿಡಲಾದ 65 ಲಕ್ಷ ಹೆಸರುಗಳ ವಿವರಗಳನ್ನು ಬಹಿರಂಗಪಡಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದ್ದರು. ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಸೇರಿದಂತೆ ಬಾರ್ ಅಸೋಸಿಯೇಷನ್‌ಗಳಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕೆಂದು ನಿರ್ದೇಶಿಸಿದ ಕೀರ್ತಿಯೂ ನ್ಯಾ. ಸೂರ್ಯಕಾಂತ್ ಅವರಿಗೆ ಸಲ್ಲುತ್ತದೆ.

ನೋಡಿರಿ

