ಟೀಮ್‌ ನಿಂದ ಔಟ್.. ಪ್ರೇಯಸಿ ಜೊತೆ ಸುತ್ತಾಟ! – ಇಶಾನ್ ಕಿಶನ್ ಜೊತೆಗಾತಿ ಯಾರು?

ಟೀಮ್‌ ನಿಂದ ಔಟ್.. ಪ್ರೇಯಸಿ ಜೊತೆ ಸುತ್ತಾಟ! – ಇಶಾನ್ ಕಿಶನ್ ಜೊತೆಗಾತಿ ಯಾರು?

ಸ್ಪೋಟಕ ಬ್ಯಾಟಿಂಗ್ ಮೂಲಕ ಭಾರಿ ಸದ್ದು ಮಾಡುತ್ತಿದ್ದ ಟೀಮ್ ಇಂಡಿಯಾ ಆಟಗಾರ ಇಶಾನ್ ಕಿಶನ್ ಸದ್ಯ ಟೀಮ್ ನಲ್ಲಿ ಅವಕಾಶಕ್ಕಾಗಿ ಎದುರು ನೋಡ್ತಾ ಇದ್ದಾರೆ. ಮೈದಾನದಲ್ಲಿ ಸದಾ ಶೈನ್ ಆಗ್ತಿದ್ದ ಆಟಗಾರ ಈಗ ತಾನು ಮಾಡಿದ ಎಡವಟ್ಟಿನಿಂದಾಗಿ ಫಾರ್ಮ್ನಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಇದೀಗ ಇಶಾನ್ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಇಶಾನ್ ಕಿಶನ್ ಗರ್ಲ್ ಫ್ರೆಂಡ್ ಯಾರು? ಆಕೆ ಏನು ಮಾಡ್ತಾ ಇದ್ದಾರೆ? ಎಷ್ಟು ಕೋಟಿಗಳ ಒಡತಿ ಅಂತಾ ಹುಡುಕಾಡುತ್ತಿದ್ದಾರೆ. ಅಷ್ಟಕ್ಕೂ ಇಶಾನ್ ಕಿಶಾನ್ ಮನಸ್ಸು ಕದ್ದ ಚೆಲುವೆ ಯಾರು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: 1 ರನ್.. 14 ಬಾಲ್.. 2 ವಿಕೆಟ್! – ಮ್ಯಾಚ್ ಟೈ.. ಸೂಪರ್ ಓವರ್ ಯಾಕಿಲ್ಲ?

ದಕ್ಷಿಣ ಆಫ್ರಿಕಾ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಭಾರತಕ್ಕೆ ವಾಪಸ್ಸಾಗಿದ್ದ ಟೀಂ ಇಂಡಿಯಾದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ಇಶಾನ್ ಕಿಶನ್ ಸದ್ಯ ಟೀಂ ಇಂಡಿಯಾದಲ್ಲಿ ಚಾನ್ಸ್ ಗಾಗಿ ಎದುರು ನೋಡ್ತಾ ಇದ್ದಾರೆ.. ಒಂದು ಸಮಯದಲ್ಲಿ ಭಾರತ ತಂಡದ ಭವಿಷ್ಯದ ಸೂಪರ್ ಸ್ಟಾರ್ ಎನಿಸಿಕೊಂಡಿದ್ದ ಇಶಾನ್, ಬಿಸಿಸಿಐ ನೀಡಿದ ಸೂಚನೆಗೂ ಬೆಲೆ ಕೊಡಲಿಲ್ಲ. ಇತ್ತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ನೀಡಿದ ಸಲಹೆಯನ್ನು ಪರಿಗಣಿಸಲಿಲ್ಲ. ಪರಿಣಾಮವಾಗಿ ಬಿಸಿಸಿಐ ಕೇಂದ್ರ ಗುತ್ತಿಗೆಯಿಂದ ಹೊರಬಿದ್ದಿರುವ ಇಶಾನ್ ಕಿಶನ್ ಸಾಲು ಸಾಲು ಸವಾಲುಗಳನ್ನು ಫೇಸ್ ಮಾಡ್ತಾ ಇದ್ದಾರೆ. ಒಂದ್ಕಡೆ ಕಿಶನ್  ತಂಡದಲ್ಲಿ ಸ್ಥಾನ ಪಡೆಯದೆ ನಿರಾಶರಾಗಿದ್ದಾರೆ. ಮತ್ತೊಂದೆಡೆ ಕಿಶನ್ ತನ್ನ ಗೆಳತಿ ಅದಿತಿ ಹುಂಡಿಯಾ ಜೊತೆ ಇರುವ ಫೋಟೋಗಳು  ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ.

ಹಲವು ತಿಂಗಳಿನಿಂದ ಇಶಾನ್ ಕಿಶಾನ್ ಸುಂದರಿಯೊಂದಿಗೆ ಡೇಟಿಂಗ್ ಮಾಡ್ತಾ ಇದ್ದಾರೆ ಎಂದು ಹೇಳಲಾಗ್ತಿದೆ. ಆ ಸುಂದರಿಯೇ 2017ರಲ್ಲಿ ಮಿಸ್ ಇಂಡಿಯಾ ರಾಜಸ್ಥಾನ ಫೈನಲಿಸ್ಟ್ ಆಗಿದ್ದ ಅದಿತಿ ಹುಂಡಿಯಾ. ಅಂದ್ಹಾಗೆ ಅದಿತಿ ಹುಂಡಿಯಾ ರಾಜಸ್ಥಾನದ ಜೈಪುರದವರು. ಮುಂಬೈನ ಫ್ಯಾಷನ್ ಮತ್ತು ಗ್ಲಾಮರ್ ಜಗತ್ತಿನಲ್ಲಿ ಅದಿತಿ ಹುಂಡಿಯಾ ಸಾಕಷ್ಟು ಸದ್ದು ಮಾಡಿದ್ದಾರೆ. ಹಲವು ಸೌಂದರ್ಯ ವರ್ಧಕಗಳ ಜಾಹೀರಾತಿನಲ್ಲಿ ಈಗಾಗಗಲೇ ಮಿಂಚುತ್ತಿದ್ದಾರೆ. 2016 ರಲ್ಲಿ  ಮಾಡೆಲ್ ಆಗಿ ವೃತ್ತಿಜೀವನ ಆರಂಭಿಸಿದ ಅದಿತಿ, 2017ರಲ್ಲಿ ಫೆಮಿನಾ ಮಿಸ್ ಇಂಡಿಯಾ ರಾಜಸ್ಥಾನ ಫೈನಲಿಸ್ಟ್ ಮತ್ತು 2018ರಲ್ಲಿ ಮಿಸ್ ದಿವಾ ಸುಪ್ರಾ ನ್ಯಾಷನಲ್ ಪ್ರಶಸ್ತಿ ಗೆದ್ದರು. ಪೋಲೆಂಡ್ನಲ್ಲಿ ನಡೆದ ಮಿಸ್ ಸುಪ್ರಾ ಇಂಟರ್ ನ್ಯಾಷನಲ್ – 2018 ಸೌಂದರ್ಯ ಸ್ಪರ್ಧೆಯಲ್ಲಿ ಅವರು ಭಾರತವನ್ನು ಪ್ರತಿನಿಧಿಸಿದರು.

ಇನ್ನು ಅದಿತಿ ಕ್ರಿಕೆಟ್ ಜೊತೆಗೂ ನಂಟು ಹೊಂದಿದ್ದಾರೆ. ಈ ಹಿಂದೆ ಹಲವು ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ವೇಳೆ ಕಾಣಿಸಿಕೊಂಡಿದ್ದರು. ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಅವರ ದೊಡ್ಡ ಫ್ಯಾನ್ ಆಗಿದ್ದಾರೆ. ಜೊತೆಗೆ ಕಾಲೇಜು ಮಟ್ಟದಲ್ಲಿ ಕ್ರಿಕೆಟ್ ಆಡಿದ್ದರು. ಸಂದರ್ಶನ ಒಂದರಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆ ಆಗುವುದು ತಮ್ಮ ಬಹುದೊಡ್ಡ ಕನಸಾಗಿತ್ತು ಎಂದೂ ಅದಿತಿ  ಹೇಳಿಕೊಂಡಿದ್ದರು. ಹೀಗಾಗಿ  ಅದಿತಿ ಆಗಾಗ ಮೈದಾನದಲ್ಲೂ ಕಾಣಿಸಿಕೊಳ್ಳುತ್ತಿದ್ದರು.

ಇನ್ನು ಅದಿತಿ ಇಶಾನ್ಗೆ ಚಿಯರ್ ಮಾಡಲು ಆಗಾಗ ಸ್ಟೇಡಿಯಂ ಗೆ ಬರ್ತಾ ಇದ್ರು.. ಇಶಾನ್ ಮೈದಾನದಲ್ಲಿ ಒಳ್ಳೆ ಪ್ರದರ್ಶನ ನೀಡಿದ್ರೆ ಆ ಖುಷಿಯನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡೋದ್ರ ಮೂಲಕ ವ್ಯಕ್ತ ಪಡಿಸ್ತಿದ್ರು..  ಅಷ್ಟೇ ಅಲ್ಲದೇ ಇಶಾನ್ ಮತ್ತು ಅದಿತಿ ಊಟಕ್ಕೆ ಹೋಗಿರುವ ಫೋಟೋಗಳು ಕೂಡ ಈ ಹಿಂದೆ ವೈರಲ್ ಆಗಿದ್ದವು. ಇಬ್ಬರು ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.  ಇಬ್ಬರೂ ರಿಲೇಶನ್ಶಿಪ್ನಲ್ಲಿದ್ದಾರೆ ಎಂಬ ಸುದ್ದಿ ಕೂಡ ಬಹಳ ದಿನಗಳಿಂದ ಕೇಳಿಬರುತ್ತಿದೆ. ಆದರೆ, ಅದಿತಿ ಅಥವಾ ಇಶಾನ್ ತಮ್ಮ ಸಂಬಂಧವನ್ನು ಅಧಿಕೃತವಾಗಿ ಖಚಿತಪಡಿಸಿಲ್ಲ.

ಇನ್ನು ಅದಿತಿ ಮಾಡೆಲಿಂಗ್, ಜಾಹಿರಾತುಗಳಲ್ಲೂ ಉತ್ತಮ ಸಂಭಾವನೆ ಪಡೆಯುತ್ತಾರೆ. ಮುಂಬೈನಲ್ಲಿರುವ ತನ್ನ ಮನೆಯಲ್ಲಿ ವಾಸಿಸುತ್ತಿರುವ ಅದಿತಿ ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಜೊತೆಗೆ ಈಕೆಯ ಅಂದಾಜು ಆಸ್ತಿ ಮೌಲ್ಯ ಸುಮಾರು 20 ಕೋಟಿಯಷ್ಟಿದೆ ಅಂತಾ ವರದಿಯಾಗಿದೆ.

Shwetha M

Leave a Reply

Your email address will not be published. Required fields are marked *