ಮಂಗಳವಾರ ನಡೆಯಲಿದೆ ಇಂಡಿಯಾ ಒಕ್ಕೂಟದ ಸಭೆ – ಪ್ರಧಾನಿ ಅಭ್ಯರ್ಥಿ ರೇಸ್‌ನಲ್ಲಿ ಯಾರ್ಯಾರು ಇದ್ದಾರೆ?

ಮಂಗಳವಾರ ನಡೆಯಲಿದೆ ಇಂಡಿಯಾ ಒಕ್ಕೂಟದ ಸಭೆ – ಪ್ರಧಾನಿ ಅಭ್ಯರ್ಥಿ ರೇಸ್‌ನಲ್ಲಿ ಯಾರ್ಯಾರು ಇದ್ದಾರೆ?

ಪಂಚ ರಾಜ್ಯಗಳ ಚುನಾವಣೆಯ ಕಾರಣದಿಂದ ನಿಂತು ಹೋಗಿದ್ದ ಇಂಡಿಯಾ ಕೂಟದ ಸಭೆ ಮಂಗಳವಾರ ನಡೆಯಲಿದೆ. ದೆಹಲಿಯ ಅಶೋಕ ಹೋಟೆಲ್ನಲ್ಲಿ ಇಂಡಿಯಾ ಒಕ್ಕೂಟದ ನಾಲ್ಕನೇ ಸಭೆ ನಡೆಯಲಿದೆ. ಎಂದು ವರದಿಯಾಗಿದೆ.

ಇದನ್ನೂ ಓದಿ: ಚೀನಾದಲ್ಲಿ ಪ್ರಬಲ ಭೂಕಂಪ – 111 ಜನರ ದುರ್ಮರಣ, 230ಕ್ಕೂ ಹೆಚ್ಚು ಮಂದಿಗೆ ಗಾಯ

ಇಂಡಿಯಾ ಕೂಟದ ಸಭೆಯಲ್ಲಿ ಪ್ರತಿ ರಾಜ್ಯದಲ್ಲಿ ಸೀಟು ಹೊಂದಾಣಿಕೆ ಮತ್ತು ಪ್ರಧಾನಿ ಅಭ್ಯರ್ಥಿ ಕುರಿತಾಗಿ ಚರ್ಚೆ ನಡೆಯಲಿದೆ. ನಮ್ಮ ಒಳಗೆ ಸ್ಪರ್ಧೆ ನಡೆದರೆ ಬಿಜೆಪಿಗೆ ಲಾಭ ಎಂಬುದನ್ನು ಅರಿತ ವಿಪಕ್ಷಗಳು ಒಂದೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಈ ಮೂಲಕ ಬಿಜೆಪಿ ವಿರುದ್ಧ ಮತಗಳ ಕ್ರೋಢಿಕರಣಕ್ಕೆ ತಂತ್ರ ರೂಪಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಲೋಕಸಭೆ ಚುನಾವಣೆಯಲ್ಲಿ ಒಕ್ಕೂಟ ನಾಯಕರು ಒಟ್ಟಾಗಿ ಪ್ರಚಾರ ನಡೆಸುವ ಸಾಧ್ಯತೆಯಿದೆ. ಇದರ ಜೊತೆಗೆ ಪ್ರಧಾನಿ ಅಭ್ಯರ್ಥಿ ಘೋಷಣೆ ಮಾಡಬೇಕೇ? ಬೇಡವೇ ಎಂಬುದರ ಬಗ್ಗೆ ಸಮಾಲೋಚನೆ ನಡೆಯಲಿದೆ. ಈಗಾಗಲೇ ಪ್ರಧಾನಿ ಅಭ್ಯರ್ಥಿ ಘೋಷಣೆ ಬಗ್ಗೆ ಸಿಎಂ‌ ಮಮತಾ ಬ್ಯಾನರ್ಜಿ ಸುಳಿವು ನೀಡಿದ್ದಾರೆ. ಹೀಗಾಗಿ ಪ್ರಧಾನಿ ಅಭ್ಯರ್ಥಿ ಘೊಷಣೆಯಿಂದಾಗುವ ಪರಿಣಾಮಗಳ ಬಗ್ಗೆ ಗಂಭೀರ ಚರ್ಚೆ ನಡೆಸಲಿದ್ದಾರೆ. ಪ್ರಧಾನಿ ಅಭ್ಯರ್ಥಿ ರೇಸ್‌ನಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಇದ್ದರೆ ಟಿಎಂಸಿಯಿಂದ ಮಮತಾ, ಜೆಡಿಯುನಿಂದ ನಿತೀಶ್ ಕುಮಾರ್ ಮಧ್ಯೆ ಪೈಪೋಟಿ ನಡೆಯುತ್ತಿದೆ. ತೀವ್ರ ಪೈಪೊಟಿ ಹಿನ್ನೆಲೆಯಲ್ಲಿ ವಿಪಕ್ಷ ನಾಯಕರು ಈಗ ಗೊಂದಲದಲ್ಲಿದ್ದಾರೆ.

ಈ ವಿಷಯದ ಜೊತೆಗೆ ಲೋಕಸಭೆ ಮತ್ತು ರಾಜ್ಯಸಭೆಯಿಂದ 94 ಸಂಸದರನ್ನು ಅಮಾನತು ಮಾಡಿದ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಮುಂದೆ ಯಾವ ರೀತಿಯ ಹೋರಾಟ ನಡೆಸಬೇಕು ಎಂಬುದರ ಬಗ್ಗೆ ನಿರ್ಧಾರ ತಗೆದುಕೊಳ್ಳುವ ಸಾಧ್ಯತೆಯಿದೆ.

Shwetha M