ಕದ್ದು ಮುಚ್ಚಿ ಪಡಿಕ್ಕಲ್‌ ಡೇಟಿಂಗ್‌? – ಸೆಂಚುರಿ ಸೆಲೆಬ್ರೇಷನ್.. ಪ್ರೀತಿ ಗುಟ್ಟು ರಟ್ಟು?
ಕನ್ನಡಿಗನ ದಿಲ್‌ ಕದ್ದ ರಿಯಾಂಜಲಿ ಯಾರು?

ಕದ್ದು ಮುಚ್ಚಿ ಪಡಿಕ್ಕಲ್‌ ಡೇಟಿಂಗ್‌? – ಸೆಂಚುರಿ ಸೆಲೆಬ್ರೇಷನ್.. ಪ್ರೀತಿ ಗುಟ್ಟು ರಟ್ಟು?ಕನ್ನಡಿಗನ ದಿಲ್‌ ಕದ್ದ ರಿಯಾಂಜಲಿ ಯಾರು?

ದೇವದತ್‌ ಪಡಿಕ್ಕಲ್..‌ IPLನಲ್ಲಿ RCB ಪರ ಆಡ್ತಿರುವ ಕನ್ನಡಿಗ ಈಗ ಟೀಂ ಇಂಡಿಯಾದಲ್ಲೂ ಅಬ್ಬರಿಸ್ತಿದ್ದಾರೆ.  ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ ಸರಣಿಯಲ್ಲಿ ಪಡಿಕ್ಕಲ್‌ ಪವರ್‌ಫುಲ್‌ ಬ್ಯಾಟಿಂಗ್‌ಗೆ ಬೌಲರ್ಸ್‌ ಥಂಡಾ ಹೊಡೆದಿದ್ದಾರೆ. ಎರಡು ಇನ್ನಿಂಗ್ಸ್‌ಗಳಲ್ಲಿ ಒಟ್ಟು 211 ರನ್‌ಗಳನ್ನ ಗಳಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ ಕನ್ನಡಿಗ. ಲಂಕಾ ಟೆಸ್ಟ್‌ ಸರಣಿಯಲ್ಲಿ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದ ಕನ್ನಡಿಗ ಇದೀಗ ಬೇರೆ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಲಂಕಾದಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ ಬೆನ್ನಲ್ಲೇ ಪಡಿಕ್ಕಲ್‌ ಗುಟ್ಟೊಂದು ರಟ್ಟಾಗಿದೆ. ಅದುವೇ ಲವ್‌ ಮ್ಯಾಟರ್..‌ ದೇವದತ್‌ ಪ್ರೀತಿಯಲ್ಲಿ ಬಿದ್ದಾರೆ ಅನ್ನೋ ವಿಚಾರವೊಂದು ಭಾರಿ ಸದ್ದು ಮಾಡ್ತಿದೆ.

ಇದನ್ನೂ ಓದಿ: ಮಧುಮೇಹ ರೋಗಿಗಳಿಗೆ ಈ ಹಣ್ಣು ಬೆಸ್ಟ್!‌ – ಅಂಜೂರ ಹಣ್ಣಿನ ಪ್ರಯೋಜನ ಇಷ್ಟೊಂದಾ?

ಕ್ಲಾಸ್‌ ಆಟಕ್ಕೂ ಸೈ.. ಮಾಸ್‌ ಆಟಕ್ಕೂ ಜೈ.. ಇದುವೇ ಕನ್ನಡಿಗ ದೇವದತ್‌ ಪಡಿಕ್ಕಲ್‌ ಸ್ಪೆಷಾಲಿಟಿ.. IPL ನಲ್ಲಿ ಅಬ್ಬರಿಸಿರುವ ಪಡಿಕ್ಕಲ್‌ ಈಗ ಟೀಂ ಇಂಡಿಯಾದಲ್ಲೂ ತಮ್ಮ ಬ್ಯಾಟಿಂಗ್‌ ಪರಾಕ್ರಮವನ್ನ ಮೆರೆದಿದ್ದಾರೆ. ಗಾಯದ ಕಾರಣದಿಂದಾಗಿ ಸಾಯಿ ಸುದರ್ಶನ್​ ಶ್ರೀಲಂಕಾ ಸರಣಿಯಿಂದ ಹೊರಬಿದ್ದರು. ಈ ಬೆನ್ನಲ್ಲೆ ಅವರ ಸ್ಥಾನಕ್ಕೆ ಪಡಿಕ್ಕಲ್ ಗೆ ಚಾನ್ಸ್‌ ನೀಡಲಾಯ್ತು. ಸಿಕ್ಕ ಅವಕಾಶವನ್ನು  ಪಡಿಕ್ಕಲ್‌ ಸದುಪಯೋಗ ಪಡಿಸಿಕೊಂಡಿದ್ದಾರೆ. ಲಂಕಾ ವಿರುದ್ದ ಸೆಂಚುರಿ ಬಾರಿಸುತ್ತಿದ್ದಂತೆ ಪಡಿಕ್ಕಲ್‌ ವೈಯಕ್ತಿಕ ವಿಚಾರ ಮುನ್ನಲೆಗೆ ಬಂದಿದೆ. ಅದುವೆ ದೇವದತ್‌ ಡೇಟಿಂಗ್‌ ವಿಚಾರ.

ಹೌದು ಕನ್ನಡಿಗ ಪಡಿಕ್ಕಲ್‌ ಈಗ ತಮ್ಮ ವೈಯಕ್ತಿಕ ವಿಚಾರವಾಗಿಯೂ ಸುದ್ದಿಯಲ್ಲಿದ್ದಾರೆ. ದೇವದತ್‌, ರಿಯಾಂಜಲಿ ಎಂಬುವವರ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. IPL ಟೈಮ್‌ನಿಂದಲೇ ರಿಯಾಂಜಲಿ ಜೊತೆ ಡೇಟಿಂಗ್‌ ನಡೆಸ್ತಿದ್ದಾರೆ. IPL ವೇಳೆ RCB ಮ್ಯಾಚ್‌ ಇದ್ದಾಗ ರಿಯಾಂಜಲಿ ಸ್ಟೇಡಿಯಂಗೆ ಬರ್ತಿದ್ರು. ಪಡಿಕ್ಕಲ್‌ಗೆ ಸಪೋರ್ಟ್‌ ಮಾಡ್ತಿದ್ರು. ಇದೀಗ ಲಂಕಾ ವಿರುದ್ದದ ಪಂದ್ಯದ ವೇಳೆಯೂ ಮೈದಾನದಲ್ಲಿ ಹಾಜರಿ ಹಾಕಿದ್ರು ಎಂಬ ಸುದ್ದಿ ಸದ್ದು ಮಾಡ್ತಿದೆ. ಪಡಿಕ್ಕಲ್‌ ಹಾಗೂ ರಿಯಾಂಜಲಿ ಅವರ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಆದ್ರೆ ಈ ಬಗ್ಗೆ ರಿಯಾಂಜಲಿ ಆಗ್ಲೀ, ಪಡಿಕ್ಕಲ್‌ ಆಗ್ಲಿ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ.

ಇನ್ನು ರಿಯಾಂಜಲಿ ಯಾರು? ಅವರ ವೈಯಕ್ತಿಕ ಹಿನ್ನೆಲೆ ಏನು ಅಂತ ನೋಡೋದಾದ್ರೆ, ರಿಯಾಂಜಲಿ ಕೂರ್ಗ್‌ ಮೂಲದವರು ಅಂತ ಹೇಳಲಾಗ್ತಿದೆ. ವೃತ್ತಿಯಲ್ಲಿ ಆರ್ಟಿಸ್ಟ್‌. ಹಾಗೇ ಸೆಕಾಮಿಕ್‌, ಮಣ್ಣಿನ ಕಲಾಕೃತಿಗಳನ್ನ ಡಿಸೈನ್‌ ಮಾಡುತ್ತಾರೆ. ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಕರಕುಶಲ ಸ್ಟುಡಿಯೋಗಳಲ್ಲಿ ಇವರು ಪಾಟರಿ ವರ್ಕ್‌ಶಾಪ್‌ಗಳನ್ನು ನಡೆಸುತ್ತಿರುತ್ತಾರೆ. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಎನ್ನಲಾಗ್ತಿದೆ. ಇದೀಗ ಪಡಿಕ್ಕಲ್‌ ಜೊತೆ ರಿಯಾಂಜಲಿ ಹೆಸರು ತಳುಕುಹಾಕಿಕೊಂಡಿದೆ. ಇದೀಗ ಈ ಬಗ್ಗೆ ರಿಯಾಂಜಲಿ ಪ್ರತಿಕ್ರಿಯೆ ನೀಡ್ತಾರಾ ಅಂತ ಕಾದುನೋಡ್ಬೇಕು.

ಕ್ರಿಕೆಟರ್ಸ್‌ ಅಂದ್ಮೇಲೆ ನಟಿಯರ ಜೊತೆ ಹೆಸರು ತಳುಕುಹಾಕಿಕೊಳ್ಳೋದು ಕಾಮನ್. ಕಳೆದ 2 ವರ್ಷದ ಹಿಂದೆ ದೇವದತ್‌ ಪಡಿಕ್ಕಲ್‌ ಜೊತೆ ಸ್ಯಾಂಡಲ್‌ವುಡ್‌ ನಟಿ ಧನ್ಯ ರಾಮ್‌ಕುಮಾರ್ ಹೆಸರು ತಳುಕುಹಾಕಿಕೊಂಡಿತ್ತು. ಧನ್ಯ ಅವರು RCB ಜೆರ್ಸಿ ಧರಿಸಿ ಸ್ಟೇಡಿಯಂಗೆ ಬಂದಿದ್ರು. ಆ ಜೆರ್ಸಿಯಲ್ಲಿ ಪಡಿಕ್ಕಲ್‌ ಜರ್ಸಿ ನಂಬರ್‌ ಇತ್ತು ಅನ್ನೋ ಕಾರಣಕ್ಕೆ ಡೇಟಿಂಗ್‌ ರೂಮರ್‌ ಹಬ್ಬಿತ್ತು. ಅದಾದ ಬಳಿಕ ದೇವದತ್ತ್‌ ಪಡಿಕ್ಕಲ್‌ ಹಾಗೇ ಶೆಹನಾಜ್‌ ಗಿಲ್‌ ಡೇಟಿಂಗ್‌ ನಡೆಸ್ತಿದ್ದಾರೆ ಅನ್ನೋ ಸುದ್ದಿ ಸದ್ದು ಮಾಡ್ತಿತ್ತು. ಇದೀಗ ಪಡಿಕ್ಕಲ್‌ ಹೆಸರು ರಿಯಾಂಜಲಿ ಜೊತೆ ತಳುಕುಹಾಕಿಕೊಂಡಿದೆ. ಮುಂದಿನ ದಿನಗಳಲ್ಲಿ ಈ ಗಾಸಿಪ್‌ ಎಲ್ಲಿವರೆಗೆ ತಲುಪುತ್ತೆ ಅನ್ನೋದನ್ನ ಕಾದುನೋಡ್ಬೇಕು.

Shwetha M

Leave a Reply

Your email address will not be published. Required fields are marked *