SIXERನಲ್ಲೂ ಭಾರತವೇ BOSS – 10 ಎಸೆತಗಳಲ್ಲೇ 1 ಬಿಗ್ ಹಿಟ್
2026ರ ಪವರ್ ಹಿಟ್ಟರ್ಸ್ ಯಾರೆಲ್ಲಾ?

ಟಿ-20ಐ ಫಾರ್ಮೆಟ್ನಲ್ಲಿ ಭಾರತ ಮೋಸ್ಟ್ ಡೇಂಜರಸ್ ಟೀಂ. ಅದ್ರಲ್ಲೂ ಬ್ಯಾಟಿಂಗ್ ಅಂತಾ ಬಂದಾಗ ಡೇ ಬೈ ಡೇ ಡೇಂಜರಸ್ ಆಗ್ತಾನೇ ಇದ್ದಾರೆ. ಆಲ್ರೆಡಿ ನ್ಯೂಜಿಲೆಂಡ್ನಲ್ಲೂ ಕೂಡ ತಮ್ಮ ಬ್ಯಾಟಿಂಗ್ ಖದರ್ ಎಂಥಾದ್ದು ಅನ್ನೋದನ್ನ ಇಡೀ ಜಗತ್ತಿಗೇ ತೋರಿಸಿದ್ದಾರೆ. ಬಟ್ ನಾಲ್ಕನೇ ಮ್ಯಾಚಲ್ಲಿ ಲೆಕ್ಕಾಚಾರ ಉಲ್ಟಾ ಆಯ್ತು. ಬಟ್ ಓವರ್ ಆಲ್ ಅಂತಾ ಬಂದಾಗ ಭಾರತವೇ ಬಾಸ್. ಅಷ್ಟಕ್ಕೂ ಭಾರತ ಟಿ-20ಐನಲ್ಲಿ ಗ್ರೇಟೆಸ್ಟ್ ಟೀಂ ಆಗೋಕೆ ಕಾರಣನೇ ಸಿಕ್ಸ್ ಹಿಟ್ಟಿಂಗ್ ಎಬಿಲಿಟಿ. ವರ್ಷದಿಂದ ವರ್ಷಕ್ಕೆ ಸಿಕ್ಸ್ ಬಾರಿಸೋ ಸಾಮರ್ಥ್ಯ ಮಿರಾಕಲ್ ಅನ್ನೋ ರೇಂಜ್ಗೆ ಬದಲಾಗಿದೆ. ಅದ್ರಲ್ಲೂ 2026ರಲ್ಲಂತೂ ಸಾರ್ವಕಾಲಿಕ ದಾಖಲೆಯನ್ನೇ ಬರೆದಿದೆ.
ಇದನ್ನೂ ಓದಿ : ಮೊನ್ನೆ 118/0.. ಇಂದು 62/4 – NZ ಗೆಲ್ಲಿಸಿದ ಭಾರತದ ಬೌಲರ್ಸ್
2024 ಹಾಗೇ 2026ರ ಟಿ-20 ವಿಶ್ವಕಪ್ನಲ್ಲಿ ಬ್ಯಾಕ್ ಟು ಬ್ಯಾಕ್ ಚಾಂಪಿಯನ್ಸ್ ಆಗಿರುವ ಭಾರತ ಸದ್ಯ ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳ ಟಿ-20ಐ ಸಿರೀಸ್ನಲ್ಲಿದೆ. ಌಂಡ್ ಇವತ್ತು ಸರಣಿಯ ಕೊನೇ ಪಂದ್ಯಕ್ಕೆ ಕೌಂಟ್ಡೌನ್ ಸ್ಟಾರ್ಟ್ ಆಗಿದೆ. ಮೊದಲ ಮೂರು ಪಂದ್ಯಗಳಲ್ಲೇ ಗೆದ್ದು ಸರಣಿ ಕೈವಶ ಮಾಡಿಕೊಂಡಿದ್ದ ಟೀಂ ಇಂಡಿಯಾ ಬ್ಯಾಟಿಂಗ್ನಲ್ಲಿ ಕಂಪ್ಲೀಟ್ ಡಾಮಿನೇಟ್ ಮಾಡಿತ್ತು. ಈಗ ಸರಣಿಯ ಕೊನೇ ಪಂದ್ಯ ಹ್ಯಾಮಿಲ್ಟನ್ನ ಸೆಡ್ಡಾನ್ ಪಾರ್ಕ್ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲೂ ಭಾರತದ ಬ್ಯಾಟಿಂಗ್ ನೋಡೋಕಂತ್ಲೇ ಟಿಕೆಟ್ಸ್ ಎಲ್ಲಾ ಕಂಪ್ಲೀಟ್ ಸೋಲ್ಡ್ ಔಟ್ ಆಗಿವೆ. ಈ ಇಡೀ ವರ್ಷ ಭಾರತ ಟಿ-20ಐ ತಂಡದ ಪ್ರದರ್ಶನವೇ ಆ ಮಟ್ಟಿಗಿದೆ.
ವಿಶ್ವಕ್ರಿಕೆಟ್ ನಲ್ಲಿ ಅಲ್ಟ್ರಾ-ಅಗ್ರೆಸಿವ್ ಮೋಡ್ ನಲ್ಲಿದೆ ಭಾರತ!
ಟಿ20ಐ ಕ್ರಿಕೆಟ್ನಲ್ಲಿ ಭಾರತೀಯರು ಸಿಕ್ಸರ್ಗಳನ್ನು ಬಾರಿಸೋದ್ರಲ್ಲಿ ಬಾಸ್ಗಳಾಗಿದ್ದಾರೆ. ಅದ್ರಲ್ಲೂ ಹೊಸ ತಲೆಮಾರಿನ ಅಲ್ಟ್ರಾ-ಅಗ್ರೆಸ್ಸಿವ್ ಬ್ಯಾಟರ್ಸ್ ಇತಿಹಾಸ ಸೃಷ್ಟಿಸುತ್ತಿದ್ದಾರೆ. ಸತತ ಎರಡು ಬಾರಿ ವಿಶ್ವಕಪ್ ಗೆದ್ದಿರೋ ಭಾರತವನ್ನ ಮತ್ತಷ್ಟು ಮಾರಕ ತಂಡವಾಗಿಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಸಿಕ್ಸ್ ಸಿಡಿಸೋ ಸಾಮರ್ಥ್ಯ ಕೂಡ ಜಾಸ್ತಿಯಾಗಿದೆ.
ಸಿಕ್ಸರ್ಸ್ ನಲ್ಲೂ ಸಾಮ್ರಾಟರು!
2021 ರಲ್ಲಿ ಭಾರತದ T20I ಬ್ಯಾಟರ್ ಗಳ ಓವರ್ ಆಲ್ ಸ್ಟ್ರೈಕ್ ರೇಟ್ 130.2
ಪ್ರತಿ 20.5 ಎಸೆತಗಳಿಗೆ ಒಂದು ಸಿಕ್ಸರ್, ಸೂರ್ಯನ ಗರಿಷ್ಠ (1,164)ರ ನ್ಸ್
2022 ರಲ್ಲಿ, ಪ್ರತಿ 15.4 ಎಸೆತಗಳಿಗೆ ಒಂದು ಸಿಕ್ಸರ್, ಭಾರತದ ಸ್ಟ್ರೈಕ್ ರೇಟ್ 144.6
2022ರ ಟಿ-20 ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧ ಸೆಮೀಸ್ ಸೋತ ಮೇಲೂ ರೈಸ್
2023ರಲ್ಲಿ ಸ್ಟ್ರೈಕ್ ರೇಟ್ 145.1 ಕ್ಕೆ ಏರಿಕೆ.. 13.4 ಎಸೆತಗಳಲ್ಲಿ 1 ಸಿಕ್ಸರ್
2024 ರಲ್ಲಿ ಸ್ಟ್ರೈಕ್ ರೇಟ್ 150.8ಕ್ಕೆ ಏರಿಕೆ.. 12.2 ಎಸೆತಗಳಿಗೆ 1 ಸಿಕ್ಸರ್
ರೋಹಿತ್ ಶರ್ಮಾ ನಾಯಕತ್ವದಲ್ಲಿ T20 ವಿಶ್ವಕಪ್ ಗೆಲುವಿನೊಂದಿಗೆ ಚಾಂಪಿಯನ್ಸ್
2025 ರಲ್ಲಿ 144.8ಕ್ಕೆ ಇಳಿಕೆ.. ಪ್ರತಿ 14.4 ಎಸೆತಗಳಿಗೆ ಒಂದು ಸಿಕ್ಸರ್
2026ರಲ್ಲಂತೂ ಸಿಕ್ಸರ್ ಗಳಲ್ಲೇ ಧೂಳೆಬ್ಬಿಸುತ್ತಿರುವ ಟೀಂ ಇಂಡಿಯಾ ಸ್ಟಾರ್ಸ್
ಪ್ರತಿ 10.7 ಎಸೆತಗಳಲ್ಲಿ ಸಿಕ್ಸರ್, ಸ್ಟ್ರೈಕ್ ರೇಟ್ 165.7 ರ ಸಾರ್ವಕಾಲಿಕ ಗರಿಷ್ಠ ಮಟ್ಟ
ಅಲ್ಲಿಗೆ ಈ ವರ್ಷ ಅಂತೂ ಪೀಕ್ ಪರ್ಫಾಮೆನ್ಸ್ ಬರ್ತಿದೆ. ಕಿವೀಸ್ ವಿರುದ್ಧದ ಈ ಟಿ20ಐ ಸರಣಿಗೂ ಮುನ್ನ ವೆಸ್ಟ್ ಇಂಡೀಸ್ ವಿರುದ್ಧದ ತವರಿನಲ್ಲಿ ನಡೆದ ಟಿ20ಐ ಪಂದ್ಯಗಳಲ್ಲಿ, ಭಾರತವು 2,000 ಟಿ20ಐ ಸಿಕ್ಸರ್ಗಳ ಮೈಲಿಗಲ್ಲನ್ನು ತಲುಪಿದ ಎರಡನೇ ಟಿ20ಐ ತಂಡವಾಯಿತು. ಆದ್ರೆ ನ್ಯೂಜಿಲೆಂಡ್ ವಿರುದ್ಧದ ಸಿರೀಸ್ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನೂ ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೇರಿದ್ದಾರೆ. ವೆಸ್ಟ್ ಇಂಡೀಸ್ 260 ಪಂದ್ಯಗಳಲ್ಲಿ 2,026 ಸಿಕ್ಸರ್ಗಳನ್ನು ಬಾರಿಸಿದ್ದರೆ, 3021 ಪಂದ್ಯಗಳಲ್ಲಿ 2,061 ಸಿಕ್ಸರ್ಗಳನ್ನು ಬಾರಿಸಿದೆ. ಸದ್ಯ ನ್ಯೂಜಿಲೆಂಡ್ ಸಿರೀಸ್ನಲ್ಲಿ ಕಳೆದ ನಾಲ್ಕು ಪಂದ್ಯಗಳಲ್ಲಿ 44 ಸಿಕ್ಸರ್ ಬಂದಿವೆ. ಮೊದಲ ಪಂದ್ಯದಲ್ಲಿ 12, ಎರಡನೇ ಪಂದ್ಯದಲ್ಲಿ 8 ಹಾಗೂ ಮೂರನೇ ಪಂದ್ಯದಲ್ಲಿ 15 ಸಿಕ್ಸರ್ಗಳನ್ನು ಭಾರತ ಬಾರಿಸಿತ್ತು. ನಾಲ್ಕನೇ ಪಂದ್ಯದಲ್ಲಿ 9 ಸಿಕ್ಸರ್ ಬಾರಿಸಿದೆ. ಬಟ್ ನ್ಯೂಜಿಲೆಂಡ್ ಭಾರತವನ್ನೂ ಓವರ್ ಟೇಕ್ ಮಾಡಿದೆ. ಸರಣಿಯ ನಾಲ್ಕು ಪಂದ್ಯಗಳಲ್ಲಿ ಒಟ್ಟು 49 ಸಿಕ್ಸರ್ಗಳನ್ನು ಬಾರಿಸಿದೆ. ಅದ್ರಲ್ಲೂ ಕೊನೇ ಮ್ಯಾಚಲ್ಲಿ 20 ಸಿಕ್ಸರ್ಸ್ ಬಂದಿದ್ವು. ಸೋ ಇಲ್ಲೇ ವೇರಿಯಷನ್ ಆಗಿರುವಂಥದ್ದು.
ಸಿಕ್ಸರ್ ಪ್ಲೇಯರ್ಸ್! (2026)
ಆಟಗಾರ ಸಿಕ್ಸರ್ ಗಳು
ಅಭಿಷೇಕ್ ಶರ್ಮಾ 85
ಇಶಾನ್ ಕಿಶನ್ 55
ಸಂಜು ಸ್ಯಾಮ್ಸನ್ 50
ಶಿವಂ ದುಬೆ 37
ತಿಲಕ್ ವರ್ಮಾ 33

ನೋಡಿರಿ

