B ಗ್ರೂಪ್ ಸೆಮೀಸ್ ಲೆಕ್ಕಾಚಾರವೇನು – ಭಾರತಕ್ಕೆ ನಾಕೌಟ್ ಎದುರಾಳಿ ಯಾರು?

ಚಾಂಪಿಯನ್ಸ್ ಟ್ರೋಫಿಯಲ್ಲಿ ಬುಧವಾರ ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನದ ನಡುವೆ ಭರ್ಜರಿ ಫೈಟ್ ನಡೆದಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನ್ ತಂಡ ಬಿಗ್ ಸ್ಕೋರ್ ಕಲೆ ಹಾಕಿದ್ರೆ ಟಾರ್ಗೆಟ್ ಮುಟ್ಟಲು ಆಗದೇ ಆಂಗ್ಲರು ಸೋಲೊಪ್ಪಿಕೊಂಡಿದ್ದಾರೆ. ಬರೋ ಸೋಲು ಮಾತ್ರವಲ್ಲ ಇಡೀ ಟೂರ್ನಿಯಿಂದಲೇ ಹೊರ ಬಿದ್ದಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಇದು ಅಫ್ಗಾನಿಸ್ತಾನ್ ತಂಡದ ಚೊಚ್ಚಲ ಚಾಂಪಿಯನ್ಸ್ ಟ್ರೋಫಿ ಟೂರ್ನಿ. ಇದೀಗ ಚೊಚ್ಚಲ ಟೂರ್ನಿಯಲ್ಲೇ ಅಫ್ಘಾನ್ ಪಡೆ ಬಲಿಷ್ಠ ತಂಡವನ್ನು ಮಕಾಡೆ ಮಲಗಿಸುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ : ಅರೆಬರೇ ಕ್ರಿಕೆಟರ್ ಅಬ್ರಾರ್ – ಪಾಕ್ ಬೌಲರ್ ಅಹಂಗೆ ಪೆಟ್ಟು!
ಬಿ ಗ್ರೂಪ್ನಲ್ಲಿ ಅಫ್ಘಾನಿಸ್ತಾನ ಒಂದು ಪಂದ್ಯವನ್ನ ಸೋತು ಇನ್ನೊಂದು ಪಂದ್ಯವನ್ನ ಗೆದ್ದಿದೆ. ಲೀಗ್ ಹಂತದಲ್ಲಿ ಆಫ್ಘನ್ ಗೆ ಇನ್ನೂ ಒಂದು ಮ್ಯಾಚ್ ಇರೋದ್ರಿಂದ ಟೂರ್ನಿ ಕನಸು ಇನ್ನೂ ಜೀವಂತವಾಗಿದೆ. ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ಮುಂದಿನ ಪಂದ್ಯಗಳ ರಿಸಲ್ಟ್ ಬಳಿಕ ಅಫ್ಘಾನ್ ಸೆಮಿಸ್ ಹೋಗುವುದು ಡಿಸೈಡ್ ಆಗುತ್ತೆ. ಬಟ್ ಇಂಗ್ಲೆಂಡ್ ಟೂರ್ನಿಯಲ್ಲಿ ಎರಡು ಪಂದ್ಯಗಳನ್ನು ಸೋತಿರೋದ್ರಿಂದ ಗಂಟು ಮೂಟೆ ಕಟ್ಟಾಗಿದೆ. ಅಲ್ದೇ ಎ ಗುಂಪಿನಲ್ಲಿರೋ ಬಾಂಗ್ಲಾ ಹಾಗೂ ಪಾಕ್ ಕೂಡ ಟೂರ್ನಿಯಿಂದ ಹೊರ ಬಿದ್ದಿವೆ.
ಚೊಚ್ಚಲ ಚಾಂಪಿಯನ್ಸ್ ಟ್ರೋಫಿ ಆಡ್ತಿರೋ ಆಫ್ಘನ್ಗೆ ಮುಂದಿನ ಪಂದ್ಯವೇ ನಿರ್ಣಾಯಕ. ಬಲಿಷ್ಠ ಆಸ್ಟ್ರೆಲಿಯಾ ವಿರುದ್ಧ ಶುಕ್ರವಾರ ಸೆಣಸಾಡಲಿದೆ. ಈ ಪಂದ್ಯದಲ್ಲಿ ಅಫ್ಘಾನ್ ಗೆದ್ದರೆ 4 ಅಂಕ ಪಡೆಯಲಿದ್ದು, ಸೆಮಿಫೈನಲ್ ರೇಸ್ನಲ್ಲಿ ಉಳಿಯಲಿದೆ. ಆದರೆ ದಕ್ಷಿಣ ಆಫ್ರಿಕಾ ಶನಿವಾರ ನಡೆಯುವ ತನ್ನ ಕೊನೆಯ ಪಂದ್ಯದಲ್ಲಿ ಸೋಲಬೇಕಾಗುತ್ತೆ. ಒಂದು ವೇಳೆ ಅಫ್ಘಾನ್ ಸೋತರೆ ದಕ್ಷಿಣ ಆಫ್ರಿಕಾ ತನ್ನ ಕೊನೆಯ ಪಂದ್ಯದಲ್ಲಿ ಗೆದ್ದರೂ, ಸೋತರೂ ಸೆಮಿಫೈನಲ್ ಪ್ರವೇಶಿಸಲಿದೆ. ಯಾಕಂದ್ರೆ ಆಫ್ಘನ್ಗಿಂತ ಸೌತ್ ಆಫ್ರಿಕಾದ ನೆಟ್ ರನ್ ರೇಟ್ ಜಾಸ್ತಿ ಇದೆ. ಬಟ್ ಈವರೆಗೂ ಬಿ ಗ್ರೂಪ್ನಲ್ಲಿ ಯಾರು ನಾಕೌಟ್ ಮ್ಯಾಚ್ ಆಡ್ತಾರೆ ಅನ್ನೋದು ಫೈನಲ್ ಆಗಿಲ್ಲ.
ಟೂರ್ನಿಯಲ್ಲಿ ಎ ಗ್ರೂಪ್ನಿಂದ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಈಗಾಗಲೇ ಸೆಮಿಫೈನಲ್ ಪ್ರವೇಶಿಸಿವೆ. ಆದ್ರೆ ಒಂದನೇ ಮತ್ತು 2ನೇ ಸ್ಥಾನ ಇನ್ನೂ ನಿರ್ಧಾರವಾಗಿಲ್ಲ. ಭಾನುವಾರ ಉಭಯ ತಂಡಗಳ ನಡುವೆ ನಡೆಯಲಿರುವ ಪಂದ್ಯಗಳ ವಿಜೇತರು ಒಂದನೇ ಸ್ಥಾನಕ್ಕೇರಲಿದ್ದರೆ, ಪರಾಭವಗೊಂಡ ತಂಡ 2ನೇ ಸ್ಥಾನದಲ್ಲಿ ಸೆಮಿಫೈನಲ್ ಪ್ರವೇಶಿಸಲಿದೆ. ಒಂದು ವೇಳೆ ಮಳೆ ಅಥವಾ ಬೇರೆ ಯಾವುದೇ ಕಾರಣದಿಂದ ಪಂದ್ಯ ರದ್ದಾದ್ರೆ ತಲಾ ಒಂದೊಂದು ಅಂಕಗಳನ್ನ ಹಂಚಲಾಗುತ್ತೆ. ಆಗ ರನ್ ರೇಟ್ ನಲ್ಲಿ ಮುಂದಿರುವಂತ ನ್ಯೂಜಿಲೆಂಡ್ ಫಸ್ಟ್ ಪ್ಲೇಸ್ ಮತ್ತು ಭಾರತ ಸೆಕೆಂಡ್ ಪ್ಲೇಸ್ನಲ್ಲಿರಲಿದೆ.
ಎ ಗುಂಪಿನಲ್ಲಿ ಎರಡು ತಂಡಗಳು ಸೆಮೀಸ್ಗೆ ಇನ್ನೆರಡು ತಂಡಗಳು ಹೊರಬಿದ್ದಾಗಿದೆ. ಆದ್ರೆ ಬಿ ಗುಂಪಿನಲ್ಲಿ ಇದ್ಯಾವುದೂ ಇನ್ನೂ ಫೈನಲ್ ಆಗಿಲ್ಲ. ಮಂಗಳವಾರ ನಡೆಯಬೇಕಿದ್ದ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ.. ಒಂದು ವೇಳೆ ಆ ಮ್ಯಾಚ್ ನಡೆದಿದ್ರೆ ಅಟ್ಲೀಸ್ಟ್ ಬಿ ಗ್ರೂಪ್ನಿಂದ ಸೆಮಿಫೈನಲ್ ಗೇರುವ ಒಂದು ತಂಡ ಡಿಸೈಡ್ ಆಗ್ತಿತ್ತು. ಮತ್ತೊಂದು ಸ್ಥಾನಕ್ಕೆ ಪೈಪೋಟಿ ಇರುತ್ತಿತ್ತು. ಇನ್ನು ಬುಧವಾರದ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ರೋಮಾಂಚಕ ಕಾಳಗದಲ್ಲಿ ಕ್ರಿಕೆಟ್ ಜನಕರನ್ನು ಪರಾಭವಗೊಳಿಸಿ ಮನೆಯ ಹಾದಿ ತೋರಿಸಿದೆ. ಹೀಗಾಗಿ ಬಿ ಗ್ರೂಪ್ನಲ್ಲಿ ಇಂಗ್ಲೆಂಡ್ ಅಧಿಕೃತವಾಗಿ ಹೊರ ಬಿದ್ದಿದ್ದು ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಆದ್ರೂ ದಕ್ಷಿಣಾ ಆಫ್ರಿಕಾ ಮಾತ್ರ ಸೇಫ್ ಆಗಿದೆ. ಹೆಂಗೆ ಅಂದ್ರೆ ಶುಕ್ರವಾರ ಅಫ್ಘಾನಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವೆ ಮಾಡು ಇಲ್ಲವೇ ಮಡಿ ಪಂದ್ಯ ನಡೆಯಲಿದೆ. ಸೋತವರು ಟೂರ್ನಿಯಿಂದ ಹೊರ ಬೀಳ್ತಾರೆ. ದಕ್ಷಿಣ ಆಫ್ರಿಕಾದ ರನ್ ರೇಟ್ ಜಾಸ್ತಿ ಇರೋದ್ರಿಂದ ಸೆಮಿಫೈನಲ್ ಪ್ರವೇಶಕ್ಕೆ ಯಾವುದೇ ರೀತಿಯ ಸಮಸ್ಯೆಯಿಲ್ಲ. ಶನಿವಾರದಂದು ಇಂಗ್ಲೆಂಡ್ ವಿರುದ್ಧ ಸೌತ್ ಆಫ್ರಿಕಾ ಕಣಕ್ಕಿಳಿಯಲಿದ್ದು ಇಲ್ಲೇನಾದ್ರೂ ದೊಡ್ಡ ಅಂತರದಲ್ಲಿ ಸೋತ್ರೆ ನಾಕೌಟ್ ಎಂಟ್ರಿ ಸ್ವಲ್ಪ ಕಷ್ಟ ಆಗ್ಬೋದು. ಹೀಗಾಗಿ ಭಾರತದ ಎದುರಾಳಿ ಯಾರು ಅನ್ನೋದನ್ನ ಈಗ್ಲೇ ಹೇಳೋದು ಕಷ್ಟ.