ತೆರಿಗೆ ಮಿತಿ ಯಥಾಸ್ಥಿತಿ, ಅಭಿವೃದ್ಧಿಯೇ ಮಂತ್ರ! – ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್‌ನಲ್ಲಿ ಯಾರಿಗುಂಟು ಲಾಭ?

ತೆರಿಗೆ ಮಿತಿ ಯಥಾಸ್ಥಿತಿ, ಅಭಿವೃದ್ಧಿಯೇ ಮಂತ್ರ! –  ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್‌ನಲ್ಲಿ ಯಾರಿಗುಂಟು ಲಾಭ?

ಲೋಕಸಭಾ ಚುನಾವಣೆಗೆ ಕೆಲವೇ ವಾರಗಳು ಬಾಕಿ ಉಳಿದಿದ್ದು, ಕೇಂದ್ರ ಸರ್ಕಾರ ಗುರುವಾರ ಮಧ್ಯಂತರ ಬಜೆಟ್ ಮಂಡನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಅವಧಿಯ ಕೊನೇ ಬಜೆಟ್ ಇದಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 6ನೇ ಬಜೆಟ್ ಇದು. ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್ ಭಾರೀ ಮಹತ್ವ ಪಡೆದುಕೊಂಡಿದೆ. ನೂತನ ಸಂಸತ್‌ನಲ್ಲಿ ಮೊದಲ ಬಾರಿಗೆ ಮಂಡನೆಯಾದ ಆಯವ್ಯಯದ ಬಗ್ಗೆ ಸಾಕಷ್ಟು ಕುತೂಹಲಗಳು ಹಾಗೂ ನಿರೀಕ್ಷೆಗಳಿತ್ತು. ಹಾಗಾದ್ರೆ ಬಜೆಟ್​ನಲ್ಲಿ ಯಾರಿಗೆಲ್ಲಾ ಗಿಫ್ಟ್ ಸಿಕ್ಕಿದೆ..? ಯಾರಿಗೆ ನಿರಾಸೆ ಆಗಿದೆ..? ರೈತರು ಮಹಿಳೆಯರಿಗೆ ಸಿಕ್ಕಿದ್ದೇನು..? ಈ ಎಲ್ಲಾ ವಿಚಾರಗಳನ್ನು ವಿಸ್ತೃತ ವಿವರಣೆ ಇಲ್ಲಿದೆ.

ಇದನ್ನೂ ಓದಿ: ಬಜೆಟ್‌ನಲ್ಲಿ ಮಾಲ್ಡೀವ್ಸ್‌ಗೆ ಕೇಂದ್ರಸರ್ಕಾರದ ತಿರುಗೇಟು – ಲಕ್ಷದ್ವೀಪವನ್ನು ಅಭಿವೃದ್ಧಿ ಮಾಡುವುದಾಗಿ ಘೋಷಣೆ

ಬಜೆಟ್ ಅಂದಾಗಲೇ ಸಾಕಷ್ಟು ನಿರೀಕ್ಷೆಗಳು ಮೂಡೋದು ಸಹಜ. ಯಾವ್ಯಾವ ವಲಯಕ್ಕೆ ಏನೆಲ್ಲಾ ಗಿಫ್ಟ್ ಸಿಗುತ್ತೆ..? ಯಾರಿಗೆ ಹೊರೆ ಹೆಚ್ಚಾಗುತ್ತೆ ಅಂತಾ ಜನಸಾಮಾನ್ಯರು ಕಾಯ್ತಿರ್ತಾರೆ. ಅದ್ರಲ್ಲೂ ಈ ಸಲ ಚುನಾವಣಾ ವರ್ಷದ ಬಜೆಟ್ ಆಗಿರೋದ್ರಿಂದ ಪ್ರಧಾನಿ ಮೋದಿ ಸರ್ಕಾರದ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳನ್ನ ಇಟ್ಟುಕೊಳ್ಳಲಾಗಿತ್ತು. ದೇಶದ ಎಲ್ಲ ವರ್ಗದ ಜನರಿಗೆ  ಸರ್ಕಾರದಿಂದ ಸ್ವಲ್ಪ ರಿಲೀಫ್‌ ಸಿಗಲಿದೆ ಎಂಬ ಆಸೆಯಲ್ಲಿದ್ರು. ಕೊನೇ ಬಜೆಟ್ ಆಗಿದ್ದರಿಂದ ಸರ್ಕಾರಕ್ಕೂ ಬಹಳ ಮಹತ್ವದ್ದಾಗಿತ್ತು.  ಟ್‌ ಬ್ಯಾಂಕ್‌ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಹಲವು ಘೋಷಣೆಗಳನ್ನು ಮಾಡುವ ನಿರೀಕ್ಷೆಯಿತ್ತು. ಆದ್ರೆ  ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಒಂದು ಗಂಟೆಗೂ ಮೊದಲೇ ಬಜೆಟ್ ಮಂಡಿಸಿ ಮುಗಿಸಿದ್ದರು. ಕೇವಲ 59 ನಿಮಿಷಗಳಲ್ಲೇ ಮಂಡನೆಯಾಗಿತ್ತು. ಈ ಬಜೆಟ್​ನಲ್ಲಿ ಹೇಳಿಕೊಳ್ಳುವಂತಹ ಯೋಜನೆಗಳೇನು ಪ್ರಸ್ತಾಪ ಆಗಿಲ್ಲ. ಕೆಲವೊಂದು ಹಿಂದಿನದ್ದನ್ನೇ ಮುಂದುವರಿಸಲಾಗಿದೆ.

  • ಬಜೆಟ್ ಅಂದಾಗ ಮೊದಲು ನೋಡೋದೇ ಇನ್‌ಕಮ್ ಟ್ಯಾಕ್ಸ್ ಮಿತಿ
  • ಆದಾಯ ತೆರಿಗೆ ಮಿತಿಯಲ್ಲಿ ಈ ವರ್ಷ ಯಾವುದೇ ಬದಲಾವಣೆ ಇಲ್ಲ
  • ಕಳೆದ ವರ್ಷ ಘೋಷಿಸಿದ ರೀತಿ 7 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇಲ್ಲ
  • ಪೂರ್ತಿ ತೆರಿಗೆ ವಿನಾಯಿತಿ ಇಲ್ಲ, 10% ತೆರಿಗೆ ಸ್ಲ್ಯಾಬ್ ಅಡಿಯಲ್ಲಿ ಬರುತ್ತದೆ
  • ಹೊಸ ತೆರಿಗೆ ಪದ್ದತಿ ಹಾಗೂ ಹಳೇ ತೆರಿಗೆ ಪದ್ದತಿ ಹಾಗೆಯೇ ಇರಲಿದೆ
  • ಎಲೆಕ್ಟ್ರಿಕ್ ವಾಹನ ಉತ್ಪಾದನೆ, ಚಾರ್ಜಿಂಗ್ ಸ್ಟೇಷನ್ ಹೆಚ್ಚಳಕ್ಕೆ ಆದ್ಯತೆ
  • ದೇಶದ ಹಲವು ನಗರಗಳಲ್ಲಿ ಮೆಟ್ರೋ ರೈಲು ಮಾರ್ಗ ವಿಸ್ತರಣೆಗೆ ಅನುದಾನ
  • 40 ಸಾವಿರ ರೈಲ್ವೆ ಬೋಗಿಗಳನ್ನು ವಂದೇ ಭಾರತ್ ಬೋಗಿಗಳಾಗಿ ಪರಿವರ್ತನೆ
  • ಉಡಾನ್ ಯೋಜನೆಗೆ 517 ಹೊಸ ಮಾರ್ಗ – ಸಣ್ಣ ನಗರಗಳಿಗೂ ವಿಮಾನ
  • ರಕ್ಷಣಾ ಇಲಾಖೆಗೆ ಬರೋಬ್ಬರಿ 11 ಲಕ್ಷ ಕೋಟಿ ರೂ. ಮೀಸಲು
  • ಲಖ್‌ಪತಿ ದೀದಿ ಯೋಜನೆ ಅಂದ್ರೆ ಲಕ್ಷಾಧಿಪತಿ ಸಹೋದರಿ ಯೋಜನೆ
  • 3 ಕೋಟಿ ಮಹಿಳೆಯರಿಗೆ ತರಬೇತಿ ನೀಡುವುದು ಯೋಜನೆಯ ಮುಖ್ಯ ಉದ್ದೇಶ
  • ಮಹಿಳೆಯರು ತಮ್ಮ ಹಳ್ಳಿಗಳಲ್ಲಿ ಸಣ್ಣ ಉದ್ಯಮಗಳನ್ನು ಪ್ರಾರಂಭಿಸಲು ಪ್ರೋತ್ಸಾಹ
  • ಆಶಾ, ಅಂಗನವಾಡಿ ಕಾರ್ಯಕರ್ತರಿಗೂ ಆಯುಷ್ಮಾನ್ ಭಾರತ ಯೋಜನೆ
  • ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಹಾಗೂ ಜೈ ಅನುಸಂಧಾನ್ ಮಂತ್ರ
  • ದೇಶಾದ್ಯಂತ ಒಂದು ಕೋಟಿ ಮನೆಗಳಿಗೆ ಸೌರ ವಿದ್ಯುತ್
  • ಮುಂದಿನ 5 ವರ್ಷಗಳಲ್ಲಿ 3 ಕೋಟಿ ಹೊಸ ಮನೆ ನಿರ್ಮಾಣ

ರಾಜ್ಯದ್ದೇ ಇರಲಿ, ಕೇಂದ್ರ ಬಜೆಟ್ ಆಗಲಿ ಮೊದಲು ನೋಡೋದೇ ಇನ್ಕಂ ಟ್ಯಾಕ್ಸ್ ಕಟ್ಟೋರಿಗೆ ಏನು ವಿನಾಯಿತಿ ಸಿಕ್ಕಿದೆ ಅಂತಾ. ಆದ್ರೆ ಬಜೆಟ್​ನಲ್ಲಿ ಆದಾಯ ತೆರಿಗೆ ಮಿತಿಯಲ್ಲಿ ಈ ವರ್ಷ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ವರ್ಷ ಘೋಷಿಸಿದ ರೀತಿ 7 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇರುವುದಿಲ್ಲ. ಹಾಗಂತ ಪೂರ್ತಿ ತೆರಿಗೆ ವಿನಾಯಿತಿ ಇರೋದಿಲ್ಲ. ಇದು 10% ತೆರಿಗೆ ಸ್ಲ್ಯಾಬ್ ಅಡಿಯಲ್ಲಿ ಬರುತ್ತದೆ. ಹೊಸ ತೆರಿಗೆ ಪದ್ದತಿ ಹಾಗೂ ಹಳೇ ತೆರಿಗೆ ಪದ್ದತಿ ಹಾಗೆಯೇ ಇರಲಿದೆ. ಎಲೆಕ್ಟ್ರಿಕ್ ವಾಹನ ಉತ್ಪಾದನೆ, ಚಾರ್ಜಿಂಗ್ ಸ್ಟೇಷನ್ ಹೆಚ್ಚಳಕ್ಕೆ ಆದ್ಯತೆ ನೀಡೋದ್ರ ಜೊತೆಗೆ ದೇಶದ ಹಲವು ನಗರಗಳಲ್ಲಿ ಮೆಟ್ರೋ ರೈಲು ಮಾರ್ಗ ವಿಸ್ತರಣೆಗೆ ಅನುದಾನ ಮೀಸಲಿಡಲಾಗಿದೆ. 40 ಸಾವಿರ ರೈಲ್ವೆ ಬೋಗಿಗಳನ್ನು ವಂದೇ ಭಾರತ್ ಬೋಗಿಗಳಾಗಿ ಪರಿವರ್ತನೆ ಮಾಡಲಾಗುತ್ತದೆ. ಉಡಾನ್ ಯೋಜನೆಗೆ 517 ಹೊಸ ಮಾರ್ಗ – ಸಣ್ಣ ನಗರಗಳಿಗೂ ವಿಮಾನ ಸೇವೆ, ರಕ್ಷಣಾ ಇಲಾಖೆಗೆ ಬರೋಬ್ಬರಿ 11 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಲಖ್‌ಪತಿ ದೀದಿ ಯೋಜನೆ ಅಂದ್ರೆ ಲಕ್ಷಾಧಿಪತಿ ಸಹೋದರಿ ಯೋಜನೆ ಮೂಲಕ 3 ಕೋಟಿ ಮಹಿಳೆಯರಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಮಹಿಳೆಯರು ತಮ್ಮ ಹಳ್ಳಿಗಳಲ್ಲಿ ಸಣ್ಣ ಉದ್ಯಮಗಳನ್ನು ಪ್ರಾರಂಭಿಸಲು ಪ್ರೋತ್ಸಾಹ ನೀಡಲಾಗುತ್ತದೆ. ಆಶಾ, ಅಂಗನವಾಡಿ ಕಾರ್ಯಕರ್ತರಿಗೂ ಆಯುಷ್ಮಾನ್ ಭಾರತ ಯೋಜನೆ ಅನ್ವಯವಾಗಲಿದೆ. ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಹಾಗೂ ಜೈ ಅನುಸಂಧಾನ್ ಕೂಡ ಮೋದಿ ಸರ್ಕಾರದ ಮಂತ್ರವಾಗಿದೆ. ದೇಶಾದ್ಯಂತ ಒಂದು ಕೋಟಿ ಮನೆಗಳಿಗೆ ಸೌರ ವಿದ್ಯುತ್ ಮತ್ತು ಮುಂದಿನ 5 ವರ್ಷಗಳಲ್ಲಿ 3 ಕೋಟಿ ಹೊಸ ಮನೆ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ.

ಹಾಗೇ ಜನ್‌ ಧನ್ ಖಾತೆ ಮೂಲಕ ಜನರಿಗೆ ನೇರ ಲಾಭ ವರ್ಗಾವಣೆ ಯೋಜನೆ ಜಾರಿ ಮಾಡಲಾಗಿದೆ. ಯುವಕರು, ಬಡವರು, ಕೃಷಿಕರು ಹಾಗೂ ಮಹಿಳೆಯರು, ಕುಶಲ ಕರ್ಮಿಗಳನ್ನ ಗುರಿಯಾಗಿಸಿ ವಿಶೇಷ ಕಾರ್ಯಕ್ರಮಗಳನ್ನ ಆಯೋಜಿಸಿದೆ. ಇದಿಷ್ಟೇ ಅಲ್ಲದೆ ಭಾರತದ ಅಭಿವೃದ್ಧಿಗೂ ಹಲವು ನಿರ್ಣಯಗಳನ್ನ ಕೈಗೊಳ್ಳಲಾಗಿದೆ. ಅದ್ರಲ್ಲೂ ಭಾರತ ವಿರೋಧಿ ಮಾಲ್ಡೀವ್ಸ್ ಗೆ ಬುದ್ಧಿ ಕಲಿಸಲು ಅನುದಾನ ಮೀಸಲಿಡಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನ ಬಲ ಪಡಿಸಲು ಮೋದಿ ಸರ್ಕಾರ ಉದ್ದೇಶ ಹೊಂದಿದೆ.

  • ಭಾರತ ವಿರೋಧಿ ಮಾಲ್ಡೀವ್ಸ್ ಗೆ ಬಜೆಟ್ ನಲ್ಲಿ ತಿರುಗೇಟು ಕೊಟ್ಟ ಮೋದಿ
  • ಲಕ್ಷ ದ್ವೀಪ ಸೇರಿದಂತೆ ಹಲವೆಡೆ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ
  • ಪ್ರವಾಸೋದ್ಯಮ ಅಭಿವೃದ್ಧಿಯಿಂದ ಲಕ್ಷದ್ವೀಪಕ್ಕೆ ತೆರಳುವವರು ಕುಸಿತ
  • 2047ಕ್ಕೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸುವ ಗುರಿ
  • ಜಾಗತಿಕವಾಗಿ ಆರ್ಥಿಕ ಸಂಕಷ್ಟ ಸ್ಥಿತಿ ಇದ್ದರೂ ಭಾರತದ ಆರ್ಥಿಕತೆ ಸ್ಥಿರ
  • 10 ವರ್ಷಗಳಲ್ಲಿ ದೇಶದ ಆರ್ಥಿಕತೆಯಲ್ಲಿ ಅಗಾಧ ಬೆಳವಣಿಗೆ
  • ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿ ಸಾರಥ್ಯದ ಸರ್ಕಾರದಲ್ಲಿ ಭಾರತದ ಆರ್ಥಿಕಾಭಿವೃದ್ದಿ

ಭಾರತ ವಿರೋಧಿ ಮಾಲ್ಡೀವ್ಸ್ ಗೆ ಬಜೆಟ್ ನಲ್ಲಿ ತಿರುಗೇಟು ಕೊಟ್ಟಿರುವ ಮೋದಿ ಲಕ್ಷ ದ್ವೀಪ ಸೇರಿದಂತೆ ಹಲವೆಡೆ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಯಿಂದ ಲಕ್ಷದ್ವೀಪಕ್ಕೆ ತೆರಳುವ ಭಾರತೀಯರ ಸಂಖ್ಯೆ ಕುಸಿತವಾಗಲಿದೆ. 2047ಕ್ಕೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸುವ ಗುರಿಯನ್ನೂ ಹೊಂದಿದೆ. ಇನ್ನು ಈಗಾಗ್ಲೇ ಜಾಗತಿಕವಾಗಿ ಆರ್ಥಿಕ ಸಂಕಷ್ಟ ಸ್ಥಿತಿ ಇದ್ದರೂ ಭಾರತದ ಆರ್ಥಿಕತೆ ಸ್ಥಿರವಾಗಿದೆ. ಹಾಗೇ ಕಳೆದ 10 ವರ್ಷಗಳಲ್ಲಿ ದೇಶದ ಆರ್ಥಿಕತೆಯಲ್ಲಿ ಅಗಾಧ ಬೆಳವಣಿಗೆ ಸಾಧಿಸಿದೆ. ಹಾಗೂ ಪ್ರಧಾನಿ ಮೋದಿ ಸಾರಥ್ಯದ ಸರ್ಕಾರದಲ್ಲಿ ಭಾರತದ ಆರ್ಥಿಕಾಭಿವೃದ್ದಿ ಹೆಚ್ಚಳವಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಇನ್ನು ಈ ಬಾರಿಯ ಬಜೆಟ್ ಅನ್ನು ಪ್ರಧಾನಿ ಮೋದಿ ಐತಿಹಾಸಿಕ ಬಜೆಟ್ ಎಂದು ಬಣ್ಣಿಸಿದ್ದಾರೆ. ಯುವಕರು, ಮಹಿಳೆಯರು, ಬಡವರು, ರೈತರು ಈ ನಾಲ್ಕು ಸ್ತಂಭಗಳ ಬಲಪಡಿಸುವ ಬಜೆಟ್​ ಎಂದು ಹೊಗಳಿದ್ದಾರೆ.  ಈ ಬಜೆಟ್ ಎಲ್ಲರ ಅಭಿವೃದ್ಧಿ ಮಾಡಲಿದೆ, ಬಜೆಟ್ ನಲ್ಲಿ ಎಲ್ಲ ವರ್ಗಗಳ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿದೆ ಎಂದು ಹೇಳಿದ್ದಾರೆ. ಆದ್ರೆ ಕೇಂದ್ರ ಸರ್ಕಾರದ ಬಜೆಟ್​ನ ವಿಪಕ್ಷಗಳು ಟೀಕೆ ಮಾಡಿವೆ. ಇದು ಶೂನ್ಯ ಬಜೆಟ್. ಬಡ ಹಾಗೂ ಮಧ್ಯಮವರ್ಗದ ಜನರಿಗೆ ಏನೂ ನೀಡಿಲ್ಲ ಎಂದು ಟೀಕಿಸಿವೆ.

Sulekha