ಉದ್ಘಾಟನೆಗೆ ಸಜ್ಜಾಯ್ತು ವೈಟ್ ಫೀಲ್ಡ್ ಮೆಟ್ರೋ ಸ್ಟೇಷನ್ – ಪ್ರಯಾಣಿಕರಿಗೆ ಏನೆಲ್ಲಾ ಪ್ರಯೋಜನ..?

ಉದ್ಘಾಟನೆಗೆ ಸಜ್ಜಾಯ್ತು ವೈಟ್ ಫೀಲ್ಡ್ ಮೆಟ್ರೋ ಸ್ಟೇಷನ್ – ಪ್ರಯಾಣಿಕರಿಗೆ ಏನೆಲ್ಲಾ ಪ್ರಯೋಜನ..?

ವಿಧಾನಸಭಾ ಚುನಾವಣಾ ಹೊಸ್ತಿಲಲ್ಲೇ ಬಿಜೆಪಿ ಹಲವು ಯೋಜನೆಗಳಿಗೆ ತರಾತುರಿಯಲ್ಲೇ ಚಾಲನೆ ನೀಡುತ್ತಿದೆ. ಅದೂ ಕೂಡ ಎಲೆಕ್ಷನ್ ಗಮನದಲ್ಲಿಟ್ಟುಕೊಂಡು ಜನಧಾನಿ ನರೇಂದ್ರ ಮೋದಿ ಅವರನ್ನೇ ಕರೆಸುತ್ತಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಮತ್ತೆ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಮಾರ್ಚ್ 25 ರಂದು ಕೆಆರ್ ಪುರಂ-ವೈಟ್‌ಫೀಲ್ಡ್ ಮೆಟ್ರೋ ಮಾರ್ಗವನ್ನು ಉದ್ಘಾಟಿಸಲಿದ್ದು, ವರ್ಣರಂಜಿತ ದೀಪಗಳಿಂದ ಕಂಗೊಳಿಸುತ್ತಿದೆ.

ಬಹಳ ದಿನಗಳ ನಂತರ ಬೆಂಗಳೂರಿನ ಐಟಿ ಹಬ್ ಎಂದು ಪರಿಗಣಿಸಲ್ಪಡುವ ವೈಟ್‌ಫೀಲ್ಡ್​​ಗೆ ಮೆಟ್ರೋ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಇದು ಸದ್ಯಕ್ಕೆ ಕೆಆರ್ ಪುರಂಗೆ ಮಾತ್ರ ಸೀಮಿತವಾಗಿದೆ. ಬೈಯಪ್ಪನಹಳ್ಳಿಯಿಂದ ಪ್ರಾರಂಭವಾಗುವ ನೇರಳೆ ಮಾರ್ಗವು ನಂತರ ಕೆಆರ್ ಪುರಂ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತದೆ.

ಕೆಆರ್ ಪುರಂ – ವೈಟ್‌ಫೀಲ್ಡ್ ಮೆಟ್ರೋ ಲೈನ್ 10-12 ನಿಮಿಷಗಳ ಅಂತರದಲ್ಲಿ ಏಳು ರೈಲುಗಳು ಓಡಾಡಲಿವೆ. ಈ ಹೊಸ ಮೆಟ್ರೋ ಮಾರ್ಗವು ಕೆಆರ್ ಪುರಂ ಮತ್ತು ವೈಟ್‌ಫೀಲ್ಡ್ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡಲಿದೆ.

ವೈಟ್‌ಫೀಲ್ಡ್‌ನಿಂದ ಕೆಆರ್ ಪುರಂವರೆಗಿನ 13.71 ಕಿಮೀ ಉದ್ದದ ಆರ್‌-1 ವಿಸ್ತರಣಾ ಮಾರ್ಗದ ಅಂತಿಮ ಹಂತದ ಟ್ರಯಲ್ ರನ್ ಅನ್ನು ರೈಲ್ವೆ ಸೇಫ್ಟಿ ಕಮಿಷನ್ ಈಗಾಗಲೆ ನಡೆಸಿದ್ದು,‌ ಕೆಆರ್ ಪುರಂ-ವೈಟ್ ಫೀಲ್ಡ್ ನೇರಳೆ ಮಾರ್ಗ ಐಟಿ ಉದ್ಯೋಗಿಗಳಿಗೆ ಸಹಾಯಕವಾಗಲಿದೆ. ಕೆಆರ್ ಪುರಂ – ವೈಟ್‌ಫೀಲ್ಡ್ ಮೆಟ್ರೋ ಲೈನ್ 13.2 ಕಿಲೋಮೀಟರ್​ ಇದ್ದು, 12 ಮೆಟ್ರೋ ನಿಲ್ದಾಣಗಳನ್ನು ಹೊಂದಿದೆ.

ಕೆಆರ್ ಪುರಂ-ವೈಟ್‌ಫೀಲ್ಡ್ ಮೆಟ್ರೋ ಮಾರ್ಗದಲ್ಲಿ(KR Puram-Whitefield Metro Line) 10-12 ನಿಮಿಷಗಳ ಸಮಯದ ಅಂತರದಲ್ಲಿ ಏಳು ರೈಲುಗಳು ಓಡಲಿವೆ ಎಂದು ಸಂಸದ ಪಿ.ಸಿ.ಮೋಹನ್(PC Mohan) ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಇದರಿಂದ ಪ್ರಯಾಣಿಕರ ಸಮಯ ಉಳಿಯಲಿದೆ. ಕೆಆರ್ ಪುರಂನಿಂದ ವೈಟ್‌ಫೀಲ್ಡ್ ತಲುಪಲು ಮೆಟ್ರೋದಲ್ಲಿ ಕೇವಲ 24 ನಿಮಿಷಗಳು ಮಾತ್ರ ತಗುಲಲಿದೆ.

suddiyaana