ಬೋರ್‌ವೆಲ್‌ ನಲ್ಲಿ ನೀರಿನ ಬದಲು ಹಾಲು! – ಬಿಳಿ ದ್ರವ ಸಂಗ್ರಹಿಸಲು ಮುಗಿಬಿದ್ದ ಜನ!

ಬೋರ್‌ವೆಲ್‌ ನಲ್ಲಿ ನೀರಿನ ಬದಲು ಹಾಲು! – ಬಿಳಿ ದ್ರವ ಸಂಗ್ರಹಿಸಲು ಮುಗಿಬಿದ್ದ ಜನ!

ಈಗ ಎಲ್ಲೆಡೆ ನೀರಿಗಾಗಿ ಬೋರ್‌ವೆಲ್‌ ಕೊರೆಯಲಾಗುತ್ತಿದೆ. ಹೀಗೆ ಬೋರ್‌ವೆಲ್‌ ನಲ್ಲಿ ನೀರು ಸಿಗುವುದು ಕಾಮನ್‌.. ಆದ್ರೆ ಇಲ್ಲೊಂದು ಕಡೆ ಬೋರ್‌ವೆಲ್‌ ನಲ್ಲಿ ನೀರಿನ ಬದಲು ಹಾಲಿನ ಬಣ್ಣವನ್ನು ಹೋಲುವ ನೀರು ಬರುತ್ತಿದೆ. ಇದರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಹೌದು, ಈ ವಿಚಿತ್ರ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಇಲ್ಲಿನ ಬಸ್‌ ನಿಲ್ದಾಣದ ಬಳಿ ಇರುವ ಬೋರ್ ವೆಲ್  ಇದೆ. ಇದರಲ್ಲಿ ನೀರಿನ ಬದಲು ಹಾಲಿನ ಬಣ್ಣವನ್ನೇ ಹೋಲುವ ಬಿಳಿ ಬಣ್ಣದ ನೀರು ಬರಲು ಆರಂಭಿಸಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ಜಮಾಯಿಸಿದ್ದಾರೆ. ಇದು ನೀರಲ್ಲ ಹಾಲು ಅಂತಾ ಭಾವಿಸಿ ಮನೆಯಿಂದ ಬಾಟಲಿ, ಪಾತ್ರೆ, ಕ್ಯಾನ್ ಸೇರಿದಂತೆ ಕೈಗೆ ಸಿಕ್ಕಿದ ವಸ್ತುಗಳನ್ನು ತಂದು ಸರತಿ ಸಾಲಿನಲ್ಲಿ ನಿಂತು ಪಾತ್ರೆಗಳಿಗೆ ತುಂಬಿಸಿ ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಇದರ ವಿಡಿಯೋ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ: ಜೈಲು ಸೇರಿದ್ದ 9 ಮೇಕೆಗಳು ಒಂದು ವರ್ಷದ ಬಳಿಕ ರಿಲೀಸ್‌! – ಮೇಕೆಗಳು ಮಾಡಿದ ತಪ್ಪೇನು ಗೊತ್ತಾ?

ಬೋರ್ ವೆಲ್ ನಲ್ಲಿ ಹಾಲು ಬರುತ್ತಿರುವ ವಿಚಾರ ಇಲ್ಲಿನ ಪುರಸಭೆ ಅಧಿಕಾರಿಗಳ ಗಮನಕ್ಕೆ ಬಂದಿದೆ. ಆ ಬಳಿಕ ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಬೋರಿಂಗ್ ಪರಿಶೀಲನೆ ನಡೆಸಿದರು. ಈ ವೇಳೆ ಬೋರ್ ವೆಲ್ ನಲ್ಲಿ ಬರುತ್ತಿರುವುದು ಹಾಲಲ್ಲ ಬದಲಾಗಿ ಕಲುಷಿತ ನೀರು ಎಂದು ಮನವರಿಕೆ ಮಾಡಿದ್ದಾರೆ.

ಹ್ಯಾಂಡ್ ಪಂಪ್‌ನ ಕೆಳಭಾಗವು ಹಾನಿಗೊಳಗಾಗಿದ್ದು, ಅದನ್ನು ಪ್ಲಗ್ ಮಾಡಿದಾಗ ಬಿಳಿ ಬಣ್ಣದ ಕಲುಷಿತ ನೀರು ಸೋರಿಕೆಯಾಗುತ್ತಿದೆ ಎಂದು ಅವರು ಹೇಳಿದರು. ಈ ಬಗ್ಗೆ ತನಿಖೆ ನಡೆಸುವಂತೆ ಬಿಲಾರಿಯ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಪುರಸಭೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಬೋರಿಂಗ್ ಅನ್ನು ಕೂಲಂಕುಷವಾಗಿ ಪರಿಶೀಲಿಸಿದ ನಂತರವೇ ನೀರು ಸೇವನೆಗೆ ಅವಕಾಶ ನೀಡಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

Shwetha M