ಬಿಳಿ ಕುಂಬಳಕಾಯಿಯಲ್ಲಿ ಅಡಗಿದೆ ಆರೋಗ್ಯದ ಗುಟ್ಟು – ರಸ ಸೇವನೆಯಿಂದಲೂ ಹತ್ತಾರು ಲಾಭ

ಬಿಳಿ ಕುಂಬಳಕಾಯಿಯಲ್ಲಿ ಅಡಗಿದೆ ಆರೋಗ್ಯದ ಗುಟ್ಟು – ರಸ ಸೇವನೆಯಿಂದಲೂ ಹತ್ತಾರು ಲಾಭ

ಬಿಳಿ ಕುಂಬಳಕಾಯಿ ಅಥವಾ ಬೂದು ಕುಂಬಳಕಾಯಿ ಅಂದರೆ ಕೆಲವರಿಗೆ ಇಷ್ಟ ಆಗೋದಿಲ್ಲ. ಆದರೆ ಅದರಲ್ಲಿರುವ ಆರೋಗ್ಯ ಪ್ರಯೋಜನಗಳನ್ನ ತಿಳಿದರೆ ನೀವೇ ಬೆರಗಾಗುತ್ತೀರ. ಬೂದುಗುಂಬಳಕಾಯಿ ರಸವನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ. ಕುಂಬಳಕಾಯಿಗಳಲ್ಲಿ ಹಳದಿ, ಕಿತ್ತಳೆ, ಕಂದು ಮತ್ತು ಕಪ್ಪು ಮುಂತಾದ ಹಲವು ವಿಧಗಳಿವೆ. ಇಂಗ್ಲೆಂಡ್ನಲ್ಲಿ, ಬಿಳಿ ಕುಂಬಳಕಾಯಿಯನ್ನು ಅಲಂಕಾರಕ್ಕಾಗಿ ಬಳಸಲಾಗುತ್ತದೆ. ಹ್ಯಾಲೋವೀನ್ ಆಚರಿಸಿದಾಗ ಕುಂಬಳಕಾಯಿಗಳನ್ನು ದೆವ್ವಗಳಂತೆ ಅಲಂಕರಿಸಲಾಗುತ್ತದೆ.

ಬಿಳಿ ಕುಂಬಳಕಾಯಿಯಲ್ಲಿ ವಿಟಮಿನ್ ಎ, ಬಿ6, ಸಿ, ಇ, ಕ್ಯಾರೋಟಿನ್, ಲುಟೀನ್, ಕ್ಸಿಲಾಂಥಿನ್, ಮೆಗ್ನೀಸಿಯಮ್, ರಂಜಕ, ಕಬ್ಬಿಣ, ಫೋಲೇಟ್, ನಿಯಾಸಿನ್, ಥಯಾಮಿನ್ ಇದೆ. ಆದ್ದರಿಂದ ಇದನ್ನು ಸೇವಿಸಿದರೆ ತುಂಬಾ ಆರೋಗ್ಯಕರ ಪ್ರಯೋಜನಗಳಿವೆ. ಬೂದುಗುಂಬಳಕಾಯಿ ಸಸ್ಯವೂ ಕೂಡ ಕಲ್ಲಂಗಡಿಯಂತೆ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಈ ಸಸ್ಯವು ಬೆಚ್ಚಗಿನ, ಆರ್ದ್ರ ಉಷ್ಣವಲಯದ ಹವಾಮಾನದಲ್ಲಿ ಬೆಳೆಯುತ್ತದೆ, ಮತ್ತು ಇದರ ಕೃಷಿಯನ್ನು ಆಗ್ನೇಯ ಏಷ್ಯಾದಂತಹ ದೇಶಗಳಲ್ಲಿ ಮಾಡಲಾಗುತ್ತದೆ, ಇದರಲ್ಲಿ ಜಪಾನ್, ಭಾರತ, ಚೀನಾ, ಮ್ಯಾನ್ಮಾರ್, ಚೀನಾ, ಇಂಡೋನೇಷ್ಯಾ, ಮಲೇಷ್ಯಾ ಮತ್ತು ತೈವಾನ್ ನಂತಹ ದೇಶಗಳು ಸೇರಿವೆ. ಬೂದುಗುಂಬಳಕಾಯಿ ರಸದಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿರಬಹುದು. ಆದರೆ ನಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ.

ಬಿಳಿ ಕುಂಬಳಕಾಯಿಗಳು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಅಧಿಕ ತೂಕ ಹೆಚ್ಚಾಗುವುದು ಮತ್ತು ಹೃದಯ ಕಾಯಿಲೆಗೆ ಕಾರಣವಾಗದಂತೆ ತಡೆಯುತ್ತದೆ. ಏಕೆಂದರೆ ಅವು ಫೈಟೊಸ್ಟೆರಾಲ್‌ಗಳನ್ನು ಒಳಗೊಂಡಿರುತ್ತವೆ. ಅಧಿಕ ರಕ್ತದೊತ್ತಡ ಮತ್ತು ಅಧಿಕ ತೂಕ ಇರುವವರು ಬಿಳಿ ಕುಂಬಳಕಾಯಿಯನ್ನು ಬೇಯಿಸಿ ತಿನ್ನುವುದು ಉತ್ತಮ. ಬಿಳಿ ಕುಂಬಳಕಾಯಿ ಎಂದು ಕರೆಯಲ್ಪಡುವ ಬೂದುಗುಂಬಳಕಾಯಿ ಒಂದು ಜಾತಿಯ ಸೋರೆಕಾಯಿಯಾಗಿದ್ದು, ಇದನ್ನು ಏಷ್ಯಾದ ವಿವಿಧ ಪಾಕಪದ್ಧತಿಗಳಲ್ಲಿ ಬಳಸಲಾಗುತ್ತದೆ. ಹೆಚ್ಚುವರಿಯಾಗಿ, ಅದರ ಹಲವಾರು ಪ್ರಯೋಜನಗಳಿಂದಾಗಿ, ಬೂದುಗುಂಬಳಕಾಯಿ ರಸವು ಸಂಭಾವ್ಯ ಆರೋಗ್ಯ ಪಾನೀಯವಾಗಿ ಜನಪ್ರಿಯತೆಯನ್ನು ಗಳಿಸಿದೆ. ಬೂದುಗುಂಬಳಕಾಯಿ ರಸವು ಕೆಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ, ಇದನ್ನು ಬೆಂಬಲಿಸಲು ಹೆಚ್ಚಿನ ಪುರಾವೆಗಳಿಲ್ಲ.

ಬೂದುಗುಂಬಳಕಾಯಿಯಲ್ಲಿ ಶೇಕಡಾ 96 ರಷ್ಟು ನೀರಿನ ಅಂಶವಿದೆ, ಇದು ವಿಶೇಷವಾಗಿ ಬಿಸಿಲಿನಿಂದ ದೇಹ ಹೀಟ್ ಆಗಿದ್ದರೆ ನಿಮ್ಮನ್ನು ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತದೆ. ಹಾಗೂ ಬೂದುಗುಂಬಳಕಾಯಿಯ ಉರಿಯೂತ ನಿವಾರಕ ಗುಣಗಳು ಉರಿಯೂತಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಉತ್ತಮ ಆಯ್ಕೆಯಾಗಿದೆ. ಜೊತೆಗೆ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಉತ್ತಮ ಏಜೆಂಟ್ ಆಗಿದೆ ಮತ್ತು ವಿಟಮಿನ್ ಸಿ, ಬಿ ಕಾಂಪ್ಲೆಕ್ಸ್, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಮೆಗ್ನೀಸಿಯಮ್ ಅನ್ನು ಇತರ ಪ್ರಮುಖ ಅಂಶಗಳಳನ್ನು ಒಳಗೊಂಡ ಪವರ್ ಪ್ಯಾಕ್ ಆಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಬ್ರಾಂಕೈಟಿಸ್ ಮತ್ತು ಅಸ್ತಮಾದಂತಹ ಉಸಿರಾಟದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬೂದುಗುಂಬಳಕಾಯಿ ರಸವನ್ನು ಸಾಂಪ್ರದಾಯಿಕ ಔಷಧದಲ್ಲಿ ಬಳಸಲಾಗುತ್ತದೆ. ಬಿಳಿ ಕುಂಬಳಕಾಯಿಯಲ್ಲಿ ವಿಟಮಿನ್ ಎ, ಲುಟೀನ್, ಕ್ಸೆಲಾಂಥಿನ್ ಮುಂತಾದ ಆಂಟಿಆಕ್ಸಿಡೆಂಟ್‌ಗಳಿವೆ. ಇದು ಕಣ್ಣುಗಳನ್ನು ರಕ್ಷಿಸುತ್ತದೆ. ಕಣ್ಣಿನ ಪೊರೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ದೃಷ್ಟಿ ಸುಧಾರಿಸುತ್ತದೆ.

suddiyaana