ಹೇರ್ ಡೈ ಬೇಡ.. ಬಿಳಿ ಕೂದಲಿಗೆ ಮನೆಯಲ್ಲೇ ಇದೆ ಪರಿಹಾರ! – ಕೊಬ್ಬರಿ ಎಣ್ಣೆಗೆ ಈ ವಸ್ತು ಬೆರೆಸಿ ಹಚ್ಚಿದ್ರೆ ಬಿಳಿ ಕೂದಲು ಮಾಯ!

ಈಗೀಗ ಸಣ್ಣ ಮಕ್ಕಳಿಗೆ ಬಿಳಿ ಕೂದಲಿನ ಸಮಸ್ಯೆ ಎದುರಾಗ್ತಿದೆ. ಏನೇ ಮಾಡಿದ್ರೂ ಕೂದಲು ಮೊದಲಿನಂತಾಗುವುದಿಲ್ಲ. ಕೆಲವರು ರಾಸಾಯನಿಕ ವಸ್ತುಗಳಿಂದ ಮಾಡಿರುವ ಹೇರ್ ಡೈ ಅನ್ನ ಬಳಸುತ್ತಾರೆ. ಇದ್ರಿಂದಾಗಿ ಕೂದಲಿನ ಮೇಲೆ ಮಾತ್ರವಲ್ಲ, ನಮ್ಮ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀಳುತ್ತದೆ. ಹೀಗಾಗಿ ಕೊಬ್ಬರಿ ಎಣ್ಣೆ ಜೊತೆ ಈ ವಸ್ತುವನ್ನ ಬೆರೆಸಿ ಹಚ್ಚಿದ್ರೆ ಬಿಳಿ ಕೂದಲು ಮಾಯವಾಗುತ್ತದೆ.
ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್! – ಇನ್ಮುಂದೆ 4 ನಿಮಿಷಗಳಿಗೊಮ್ಮೆ ರೈಲು ಸಂಚಾರ
ಕೂದಲಿನ ಸರ್ವ ಸಮಸ್ಯೆಗೂ ಕೊಬ್ಬರಿ ಎಣ್ಣೆ ಪರಿಹಾರ ಎಂದೇ ಹೇಳಬಹುದು. ಕೊಬ್ಬರಿ ಎಣ್ಣೆಯನ್ನ ನಿತ್ಯ ಕೂದಲಿಗೆ ಹಚ್ಚಿದರೆ ಕೂದಲು ಉದುರುವಿಕೆ ಸಮಸ್ಯೆ ಕಡಿಮೆಯಾಗುತ್ತದೆ ಎಂದು ಗೊತ್ತಿದೆ. ತೆಂಗಿನ ಎಣ್ಣೆ ಜೊತೆ ಕೆಲವು ಪದಾರ್ಥಗಳನ್ನು ಬೆರೆಸಿ ಬಳಸುವುದರಿಂದ ನೈಸರ್ಗಿಕವಾಗಿ ಬಿಳಿಕೂದಲನ್ನು ಕಡು ಕಪ್ಪಾಗಿಸಬಹುದು. ಹೇರ್ ಡೈ ಇಲ್ಲದೆಯೇ ನಿಮ್ಮ ಬಿಳಿ ಕೂದಲನ್ನು ಕಪ್ಪುಗೊಳಿಸುವ ಸೂಪರ್ ಮನೆಮದ್ದು ಇಲ್ಲಿದೆ.
ತೆಂಗಿನ ಎಣ್ಣೆ ಮತ್ತು ಗೋರಂಟಿ ಬಳಸಿ 10 ನಿಮಷದಲ್ಲೇ ಬಿಳಿ ಕೂದಲನ್ನು ಕಪ್ಪಾಗಿಸಬಹುದು. 3 – 4 ಚಮಚ ತೆಂಗಿನ ಎಣ್ಣೆಯನ್ನು ಕುದಿಸಿ, ನಂತರ ಎಣ್ಣೆಗೆ ಗೋರಂಟಿ ಎಲೆಗಳನ್ನು ಸೇರಿಸಿ. ಎಣ್ಣೆಯು ಕಂದು ಬಣ್ಣಕ್ಕೆ ಬರುವವರೆಗೆ ಕುದಿಸಿ.
ಈಗ ಎಣ್ಣೆಯನ್ನು ತಣ್ಣಗಾಗಿಸಿ ಮತ್ತು ಕೂದಲಿನ ಬೇರುಗಳಿಗೆ ಹಚ್ಚಿಕೊಳ್ಳಿ. ಕನಿಷ್ಠ 40 ನಿಮಿಷಗಳ ಕಾಲ ಎಣ್ಣೆಯನ್ನು ಹಾಗೇ ಬಿಡಿ ಮತ್ತು ನಂತರ ತಲೆ ಸ್ನಾನ ಮಾಡಿ. ಬಿಳಿ ಕೂದಲು ಬುಡಸಮೇತ ಕಪ್ಪಾಗಿರುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯನ್ನು ನಿಯಮಿತವಾಗಿ ಮಾಡಿದರೆ ಬಿಳಿ ಕೂದಲು ಕಪ್ಪಾಗುವುದು ಖಚಿತ.
ಕೊಲಾಜೆನ್ ಅನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿರುವ ಆಮ್ಲಾದೊಂದಿಗೆ ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡಿ ಹಚ್ಚಿದಾಗ ಕೂದಲಿನ ಆರೋಗ್ಯ ದ್ವಿಗುಣಗೊಳ್ಳುತ್ತದೆ. ಇದರಿಂದ ಕೂದಲು ಕಪ್ಪಾಗುತ್ತದೆ.
3 ಚಮಚ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ 2 ಚಮಚ ಆಮ್ಲಾ ಪುಡಿಯನ್ನು ಮಿಶ್ರಣ ಮಾಡಿ. 10-15 ನಿಮಿಷಗಳ ಬಳಿಕ ಗ್ಯಾಸ್ ಆಫ್ ಮಾಡಿ. ಎಣ್ಣೆಯನ್ನು ತಣ್ಣಗಾಗಿಸಿ. ಕೂದಲಿಗೆ ಹಚ್ಚಿ ಮತ್ತು ಮಸಾಜ್ ಮಾಡಿ. ಅದನ್ನು ರಾತ್ರಿಯಿಡೀ ಬಿಟ್ಟು ಬೆಳಗ್ಗೆ ತಲೆಸ್ನಾನ ಮಾಡಿ. ಬಿಳಿ ಕೂದಲು ಕಪ್ಪಾಗುವುದು.

ನೋಡಿರಿ

