ನಿಮ್ಮ ಫೋನ್ ಚಾರ್ಜರ್ ನ ಕಲರ್ ಚೇಂಜ್ ಆಗಿದ್ಯಾ? – ಚಾರ್ಜರ್ ಬಣ್ಣ ಬದಲಾದ್ರೆ ಏನ್ ಅರ್ಥ?
ಕೈನಲ್ಲಿ ಮೊಬೈಲ್ ಇದೆ, ಚಾರ್ಜರ್ ಇಲ್ಲ ಅಂದ್ರೆ ಏನ್ ಪ್ರಯೋಜನ. ಮೊಬೈಲ್ ಜೊತೆ ಚಾರ್ಜರ್ ಇದ್ರೆ ಜೀವ ಇದ್ದಂತೆ. ಹೀಗಾಗಿ ಚಾರ್ಜರ್ ಬಹಳ ಮುಖ್ಯ. ನಾವು ದಿನಕ್ಕೆ ಎರಡು ಬಾರಿಯಾದರೂ ಫೊನ್ ಚಾರ್ಜ್ ಗೆ ಹಾಕ್ತೇವೆ. ಕೆಲವರು ಅದಕ್ಕೂ ಹೆಚ್ಚಿನ ಬಾರಿ ಚಾರ್ಜ್ ಮಾಡ್ತಾರೆ. ಆಯಾ ಉಪಕರಣದ ಬ್ಯಾಟರಿ ಹೇಗಿರುತ್ತದೆ ಎನ್ನುವುದರ ಮೇಲೆ ಚಾರ್ಜ ಮಾಡುವುದು ಅನಿವಾರ್ಯವಾಗುತ್ತದೆ.
ಕೆಲವು ಚಾರ್ಜರ್ ಗಳು ಕಪ್ಪು ಬಣ್ಣವಿದ್ರೆ, ಇನ್ಕೆಲವು ಬಿಳಿ ಬಣ್ಣದ ಚಾರ್ಜರ್ ಗಳಾಗಿರುತ್ತವೆ. ಬಿಳಿ ಬಣ್ಣದ ಚಾರ್ಜರ್ ಗಳು ಕೆಲ ಸಮಯದ ನಂತರ ಹಳದಿ ಬಣ್ಣಕ್ಕೆ ತಿರುಗುತ್ತದೆ. ನಾವು ನಿಯಮಿತವಾಗಿ ಬಳಸುವುದರಿಂದ ಬಿಳಿಯ ಚಾರ್ಜರ್ ಗಳು ಹಳದಿ ಬಣ್ಣಕ್ಕೆ ತಿರುಗಿರಬಹುದು ಅಥವಾ ಅದರ ಮೇಲೆ ಧೂಳು ಕೂತು ಹಳದಿ ಬಣ್ಣಕ್ಕೆ ತಿರುಗಿರಬಹುದೆಂದು ನಾವು ಅಂದುಕೊಳ್ತೇವೆ. ಆದರೆ ಚಾರ್ಜರ್ ಹಾಗೆ ಹಳದಿ ಬಣ್ಣಕ್ಕೆ ತಿರುಗಲು ಅನೇಕ ಕಾರಣಗಳಿವೆ. ಚಾರ್ಜರ್ ಹಳೆಯದಾದಾಗ ಮಾತ್ರ ಹಳದಿ ಬಣ್ಣಕ್ಕೆ ತಿರುಗುವುದಿಲ್ಲ. ಚಾರ್ಜರ್ ಹಳದಿ ಬಣ್ಣಕ್ಕೆ ತಿರುಗುವುದು ತುಂಬಾ ಡೇಂಜರ್.
ಇದನ್ನೂ ಓದಿ: ಮೊಬೈಲ್ ಕವರ್ ನಲ್ಲಿ ನೋಟು ಇಡುತ್ತೀರಾ? – ಸಣ್ಣ ತಪ್ಪಿನಿಂದ ಜೀವಕ್ಕೆ ಅಪಾಯ!
ಹಳದಿ ಬಣ್ಣಕ್ಕೆ ತಿರುಗಿದ ಚಾರ್ಜರ್ ಅನ್ನು ಬೇಗ ಬದಲಿಸುವುದು ಅಗತ್ಯ. ಯಾಕೆಂದರೆ ಇದರಲ್ಲಿರುವ ಇನ್ಸುಲೇಶನ್ ಕೇಬಲ್ ಸವೆದುಹೋಗಿ ಅದರಿಂದ ಶಾಖವು ಬಿಡುಗಡೆಯಾಗುತ್ತದೆ. ಹೆಚ್ಚಿನ ಶಾಖದಿಂದ ಕೇಬಲ್ ಬಣ್ಣ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇನ್ನು ವೋಲ್ಟೇಜ್ ಸಮಸ್ಯೆಗಳಿಂದಲೂ ಕೇಬಲ್ ಬಣ್ಣ ಬದಲಾಗುತ್ತೆ. ಇದ್ರಿಂದಾಗಿ ಚಾರ್ಜರ್ ಬಿಸಿಯಾಗುವುದು ಅಥವಾ ಬ್ಲಾಸ್ಟ್ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಚಾರ್ಜಿಂಗ್ ಕೇಬಲ್ ಬಣ್ಣ ಹಳದಿ ಬಣ್ಣಕ್ಕೆ ತಿರುಗಿದ ತಕ್ಷಣ ನಿಮ್ಮ ಚಾರ್ಜರ್ ಅನ್ನು ಬದಲಾಯಿಸಿಕೊಳ್ಳುವುದು ಒಳ್ಳೆಯದು. ಇಲ್ಲವಾದಲ್ಲಿ ಚಾರ್ಜರ್ ಸಮಸ್ಯೆಯಿಂದ ನಿಮಗೆ ಅಥವಾ ನಿಮ್ಮ ಮೊಬೈಲ್ ಗೆ ಹಾನಿಯಾಗಬಹುದು.