ದೇವರ ಮೇಲೆ ಅತಿಯಾದ ಭಕ್ತಿ : ಪೇಚಿಗೆ ಸಿಲುಕಿದ ವ್ಯಕ್ತಿ – ವಿಡಿಯೋ ವೈರಲ್
ಅತಿಯಾದ ಭಕ್ತಿ ಆರೋಗ್ಯಕ್ಕೆ ಹಾನಿಕಾರಕವೆಂದ ನೆಟ್ಟಿಗರು…  

ದೇವರ ಮೇಲೆ ಅತಿಯಾದ ಭಕ್ತಿ : ಪೇಚಿಗೆ ಸಿಲುಕಿದ ವ್ಯಕ್ತಿ – ವಿಡಿಯೋ ವೈರಲ್ಅತಿಯಾದ ಭಕ್ತಿ ಆರೋಗ್ಯಕ್ಕೆ ಹಾನಿಕಾರಕವೆಂದ ನೆಟ್ಟಿಗರು…  

ನವದೆಹಲಿ: ದೇವರ ಮೇಲೆ ಅತಿಯಾಗಿ ನಂಬಿಕೆ ಇಟ್ಟವರು, ತಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಲು ದಿನ ನಿತ್ಯ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಅಷ್ಟೇ ಅಲ್ಲದೇ ದೇವಾಲಯಲಕ್ಕೆ ಭೇಟಿ ನೀಡಿ ಹರಕೆಗಳನ್ನು ಸಲ್ಲಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬ ವ್ಯಕ್ತಿ, ದೇವರನ್ನು ಆರಾಧಿಸಲು ಹೋಗಿ ಪೇಚಿಗೆ ಸಿಲುಕಿದ್ದಾನೆ. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: 78ರ ಹರೆಯದಲ್ಲೂ ಕುಗ್ಗದ ಉತ್ಸಾಹ – 12,300 ಅಡಿ ಎತ್ತರಕ್ಕೆ ತೆರಳಿ ಯೋಗ ತರಭೇತಿ

ದೇವರನ್ನು ಆರಾಧಿಸುವ ವೇಳೆ ಆನೆಯ ಪ್ರತಿಮೆ ಒಳಗೆ ನುಸುಳಿದ್ದಾನೆ. ಈ ವೇಳೆ ಆತ ಆನೆ ಪ್ರತಿಮೆಯ ಮಧ್ಯಭಾಗದಲ್ಲಿ ಸಿಲುಕಿ ಒದ್ದಾಡಿದ್ದಾನೆ. ಹೊರಗೆ ಬರಲಾಗದೆ ಎಲ್ಲಾ ಪ್ರಯತ್ನ ಮಾಡಿ ಸುಮ್ಮನಾಗಿದ್ದಾನೆ. ದೇವಾಲಯದಲ್ಲಿದ್ದ ಭಕ್ತರು ಕೂಡ ಈತನ ಒದ್ದಾಟವನ್ನು ನೋಡಿ ನೆರವಿಗೆ ಧಾವಿಸಿದ್ದಾರೆ. ಆದರೆ ಅವರೆಲ್ಲರ ಪ್ರಯತ್ನವೂ ವಿಫಲವಾಗಿದೆ.

ಈ ಘಟನೆ ಎಲ್ಲಿ ನಡೆದಿದೆ ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಅಲ್ಲದೇ ಆತ ಅಲ್ಲಿಂದ ಹೊರಕ್ಕೆ ಬಂದಿದ್ದಾನೆಯೇ ಎಂಬುದು ಈ ವಿಡಿಯೋದಲ್ಲಿ ಇಲ್ಲ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ, ನೆಟ್ಟಿಗರು ‘ಭಕ್ತಿ ಅತಿಯಾದರೆ ಆರೋಗ್ಯಕ್ಕೆ ಹಾನಿಕಾರಕ ಎಂದಿದ್ದಾರೆ. ಈತ ಹೊರಬರಲು ಆಗದೇ ಇದ್ರೆ, ಒಳಗೆ ಹೋಗಿದ್ದು ಹೇಗೆ ಎಂದು ಪ್ರಶ್ನಿಸಿ, ಟ್ವೀಟ್ ಮಾಡಿದ್ದಾರೆ.

suddiyaana