ಎಡ ಮಗ್ಗುಲಲ್ಲಿ ಮಲಗಿದ್ರೆ ಇಷ್ಟೆಲ್ಲಾ ಅಪಾಯನಾ? – ಯಾವ ಭಂಗಿಯಲ್ಲಿ ಮಲಗಿದ್ರೆ ಕೆಟ್ಟ ಕನಸು ಬೀಳುತ್ತೆ?
ನಿದ್ದೆ ಅನ್ನೋದು ಪ್ರತಿಯೊಂದು ಜೀವಿಗೂ ಪ್ರಕೃತಿ ಕೊಟ್ಟಿರುವ ಒಂದು ವರ. ಮನುಷ್ಯರಂತೂ ತಮ್ಮ ಅನುಕೂಲಕ್ಕೆ ತಕ್ಕಂತೆ ಬೆಡ್ಗಳನ್ನ ಮಾಡಿಕೊಂಡು ಮಲಗ್ತಾರೆ. ಬಡವನೇ ಆಗಿರಲಿ ಶ್ರೀಮಂತನೇ ಆಗಿರಲಿ. ನಿದ್ದೆಗೆ ಜಾರಿದಾಗ ಕನಸು ಬೀಳೋದು ಸಹಜ. ಆದ್ರೆ ನೀವು ಮಲಗುವ ಭಂಗಿಯಿಂದಲೇ ಒಳ್ಳೆ ಕನಸು, ಕೆಟ್ಟ ಕನಸು ಬೀಳುತ್ತೆ ಅನ್ನೋದು ನಿಮಗೆ ಗೊತ್ತಿದೆಯಾ..?
ಇದನ್ನೂ ಓದಿ: ಈ ದೇಶಗಳಿಗೆ ಹೋದ್ರೆ ಸರ್ಕಾರವೇ ದುಡ್ಡು ಕೊಡುತ್ತೆ! – ಗಂಟುಮೂಟೆ ಕಟ್ಟೋಕು ಮೊದಲು ಈ ರೂಲ್ಸ್ ತಿಳ್ಕೊಳಿ!
ಕನಸು ಅನ್ನೋದು ಒಂದು ಕಾಲ್ಪನಿಕ ಅನ್ನಿಸಿದ್ರೂ ಕೆಲವೊಮ್ಮೆ ನಿಜ ಜೀವನದ ಜೊತೆಗೆ ಬೆಸೆದುಕೊಂಡಿರುತ್ತೆ. ಕಂಡ ಕನಸು ಮುಂದೊಂದು ದಿನ ನನಸಾದ ಅದೆಷ್ಟೋ ನಿದರ್ಶನಗಳಿವೆ. ನಾವು ಮಲಗುವ ರೀತಿಗೂ ನಮಗೆ ಬೀಳುವ ಕನಸಿಗೂ ಸಂಬಂಧವಿದೆಯೇ? ಕನಸುಗಳು ಯಾಕೆ ಬೀಳುತ್ತವೆ? ಕನಸಿನ ಅರ್ಥವೇನು? ಎಂಬ ಬಗ್ಗೆ ಹಲವು ಸಂಶೋಧನೆಗಳು ನಡೆದಿವೆ.
ನಮ್ಮ ಎಡಭಾಗದಲ್ಲಿ ಮಲಗುವುದರಿಂದ ದುಃಸ್ವಪ್ನಗಳು ಹೆಚ್ಚಾಗಬಹುದು ಎಂದು ಸಂಶೋಧನೆಯೊಂದು ತಿಳಿಸಿದೆ. ಏಕೆಂದರೆ ಎಡಭಾಗದ ನಿದ್ರೆ ಹೃದಯದ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ. ‘ಸ್ಲೀಪ್ ಆ್ಯಂಡ್ ಹಿಪ್ನಾಸಿಸ್’ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ನೀವು ಮಲಗುವ ಭಂಗಿಯು ನಿಮ್ಮ ನಿದ್ರೆಯ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತದೆ. ಅದ್ರಲ್ಲೂ ಎಡ ಮಗ್ಗುಲಿನಲ್ಲಿ ಮಲಗುವ ಜನರು ಹೆಚ್ಚಾಗಿ ಕೆಟ್ಟ ಕನಸುಗಳನ್ನು ಕಾಣುತ್ತಾರೆ ಎಂಬುದು ಗೊತ್ತಾಗಿದೆ.
ತಮ್ಮ ಬಲಭಾಗದಲ್ಲಿ ಮಲಗುವವರಲ್ಲಿ ಶೇಕಡಾ 15ರಷ್ಟು ಜನ ರಾತ್ರಿ ವೇಳೆ ಕೆಟ್ಟ ಕನಸುಗಳನ್ನು ಕಾಣುತ್ತಾರೆ. ಎಡಭಾಗದಲ್ಲಿ ಮಲಗುವವರಲ್ಲಿ ಶೇಕಡಾ 41ರಷ್ಟು ಜನರಿಗೆ ದುಃಸ್ವಪ್ನಗಳನ್ನು ಬೀಳುತ್ತವೆ. ಒತ್ತಡ ಇದ್ದಾಗಲೆಲ್ಲಾ ನಿದ್ರೆಯ ಗುಣಮಟ್ಟ ಕಡಿಮೆಯಾಗಿರುತ್ತದೆ. ಇದರಿಂದ ದುಃಸ್ವಪ್ನಗಳು ಬೀಳುತ್ತವೆ ಎನ್ನಲಾಗಿದೆ. 30 ರಿಂದ 40 ವರ್ಷದಲ್ಲಿ ನಿದ್ರೆಯ ಅಡಚಣೆಗಳು ಸಾಮಾನ್ಯ. ಇದು ಜೀವನದಲ್ಲಿ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು ಎಂದು ಅಧ್ಯಯನ ತಿಳಿಸಿದೆ. ಮೇಲ್ಮುಖವಾಗಿ ಮಲಗುವವರಿಗೆ ಹೋಲಿಸಿದರೆ ಬೆನ್ನು ಮೇಲೆ ಮಾಡಿ ಮಲಗುವವರು ಕೂಡ ದುಃಸ್ವಪ್ನಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಆರೋಗ್ಯಕರ ಉಸಿರಾಟಕ್ಕೆ ಸೂಕ್ತವಾದ ಸ್ಥಾನದಲ್ಲಿ ಮಲಗುವುದು ಉತ್ತಮ ಮಾರ್ಗವಾಗಿದೆ. ನಿಮಗೂ ಕೆಟ್ಟ ಕನಸುಗಳು ಬೀಳುತ್ತಿದ್ದರೆ ಒಂದು ಸಲ ಮಲಗುವ ಸ್ಥಾನವನ್ನು ಬದಲಾಯಿಸಿ ನೋಡಿ. ಇದು ನಿಮ್ಮ ಕನಸುಗಳ ಮೇಲೆ ಪ್ರಭಾವ ಬೀರಬಹುದು. ಅದ್ರಲ್ಲೂ ಆರೋಗ್ಯದ ದೃಷ್ಟಿಯಿಂದಲೂ ಬಲ ಮಗ್ಗುಲಿನಲ್ಲಿ ಮಲಗುವುದು ಉತ್ತಮ.