ಐಪಿಎಲ್ ಟೂರ್ನಿಯಲ್ಲಿ ಸ್ಟ್ರಾಂಗ್ ಟೀಮ್ ಯಾವುದು? – ಬೆಸ್ಟ್ ಪ್ಲೇಯರ್ಸ್ ಯಾವ ಟೀಮ್‌ನಲ್ಲಿದ್ದಾರೆ?

ಐಪಿಎಲ್ ಟೂರ್ನಿಯಲ್ಲಿ ಸ್ಟ್ರಾಂಗ್ ಟೀಮ್ ಯಾವುದು? – ಬೆಸ್ಟ್ ಪ್ಲೇಯರ್ಸ್ ಯಾವ ಟೀಮ್‌ನಲ್ಲಿದ್ದಾರೆ?

ಮಾರ್ಚ್​​ನಲ್ಲಿ 22ರಿಂದ ಐಪಿಎಲ್​ ಟೂರ್ನಿ ಆರಂಭವಾಗ್ತಿದೆ. ಹೀಗಾಗಿ ಕ್ರಿಕೆಟ್ ಫ್ಯಾನ್ಸ್​​ಗಳೆಲ್ಲಾ ಈಗ ಐಪಿಎಲ್​​ ಟೂರ್ನಿಗಾಗಿ ಕಾಯ್ತಾ ಇದ್ದಾರೆ. ಮಿನಿ ಆಕ್ಷನ್ ಕೂಡ ಮುಗಿದಿದ್ದು. ಎಲ್ಲಾ 10 ತಂಡಗಳು ಕೂಡ ಘಟಾನುಘಟಿ ಪ್ಲೇಯರ್ಸ್​ಗಳನ್ನ ಗುಡ್ಡೆ ಹಾಕ್ಕೊಂಡು ರೆಡಿಯಾಗಿವೆ. ಇತ್ತ ಕ್ರಿಕೆಟ್ ಫ್ಯಾನ್ಸ್​ ಯಾವುದು ಸ್ಟ್ರ್ಯಾಂಗ್​ ಟೀಮ್? ಬೆಸ್ಟ್ ಪ್ಲೇಯರ್ಸ್​ಗಳು ಯಾವ್ಯಾವ ಟೀಮ್​ನಲ್ಲಿದ್ದಾರೆ? ಅನ್ನೋ ಬಗ್ಗೆ ಚರ್ಚೆ ಕೂಡ ನಡೆಸ್ತಿದ್ದಾರೆ.

ಇದನ್ನೂ ಓದಿ: 2 ಟೆಸ್ಟ್ ಪಂದ್ಯಗಳಲ್ಲಿ ಆಡುತ್ತಿಲ್ಲ ವಿರಾಟ್ ಕೊಹ್ಲಿ – ಕಿಂಗ್ ಕೊಹ್ಲಿಯ ಬದಲಿಗೆ ಆಡುವ ಆಟಗಾರ ಯಾರು?

ಐಪಿಎಲ್​ ಸೇರಿದಂತೆ ಯಾವುದೇ ಟಿ20 ಮ್ಯಾಚ್​​ಗಳಲ್ಲಿ ಓಪನಿಂಗ್​ ಬ್ಯಾಟ್ಸ್​​ಮನ್​ಗಳ ರೋಲ್​ ತುಂಬಾನೆ ಇಂಪಾರ್ಟೆಂಟ್ ಆಗಿರುತ್ತೆ. ಯಾಕಂದ್ರೆ ಓಪನಿಂಗ್​ ಬ್ಯಾಟ್ಸ್​​ಮನ್​ಗಳು ಕ್ಲಿಕ್ ಆದ್ರು ಅಂದ್ರೆ ಸ್ಟೇಜ್ ಸೆಟ್ ಆದಂತೆಯೇ. ಮುಂದಿನ ಆರ್ಡರ್​ಗಳಲ್ಲಿ ಕ್ರೀಸ್​ಗೆ ಇಳಿಯೋ ಬ್ಯಾಟ್ಸ್​​ಮನ್​ಗಳಿಗೂ ಅಟೋಮೆಟಿಕ್ ಆಗಿ ಹೆಚ್ಚು ಕಾನ್ಫಿಡೆನ್ಸ್​​ ಬರುತ್ತೆ. ಈಗ ಈ ಬಾರಿಯ ಐಪಿಎಲ್​​ ಟೂರ್ನಿಯಲ್ಲಿ ಯಾವ ತಂಡ ಬೆಸ್ಟ್​ ಓಪನಿಂಗ್​ ಪ್ಯಾರ್ ಹೊಂದಿದೆ ಅನ್ನೋದನ್ನ ನೋಡೋಣ.

ಕೊಲ್ಕತ್ತಾ ನೈಟ್ ರೈಡರ್ಸ್

ಕೊಲ್ಕತ್ತಾ ನೈಟ್ ರೈಡರ್ಸ್​​ನಲ್ಲಿ ಇಬ್ಬರು ಬೆಸ್ಟ್​ ಟಾಪ್​ ಕ್ಲಾಸ್ ಓಪನಿಂಗ್ ಬ್ಯಾಟ್ಸ್​ಮನ್​ಗಳಿದ್ದಾರೆ. ಜೇಸನ್ ರಾಯ್ ಮತ್ತು ವಿಕೆಟ್ ಕೀಪರ್​ ಬ್ಯಾಟ್ಸ್​ಮನ್ ಗುರ್ಬಾಜ್. ಬಟ್ ವೆಂಕಟೇಶ್ ಅಯ್ಯರ್ ಕೂಡ ಓಪನಿಂಗ್ ಮಾಡ್ತಾರೆ. ಹೀಗಾಗಿ ಫೈನಲಿ ಕೊಲ್ಕತ್ತಾ ನೈಟ್​​ ರೈರ್ಸ್ ಈ ಮೂವರಲ್ಲಿ ಯಾರನ್ನ ಬೇಕಾದ್ರೂ ಕಣಕ್ಕಿಳಿಸಬಹುದು. ಗುರ್ಬಾಜ್ ಮತ್ತು ವೆಂಕಟೇಶ್ ಅಯ್ಯರ್. ಅಥವಾದ ಜೇಸನ್ ರಾಯ್ ಮತ್ತು ವೆಂಕಟೇಶ್ ಅಯ್ಯರ್ ಹೀಗೆ ಓಪನಿಂಗ್​​ ಪ್ಯಾರ್​ಗೆ ಕೊಲ್ಕತ್ತಾ ನೈಟ್ ರೈಡರ್ಸ್​ ಬಳಿ ಒಟ್ಟು ಮೂರು ಪ್ಯಾರ್​​ಗಳ ಆಪ್ಷನ್ ಇದೆ.

ಸನ್ ರೈಸರ್ಸ್ ಹೈದರಾಬಾದ್

ಇನ್ನು ಸನ್​ ರೈಸರ್ಸ್ ಹೈದರಾಬಾದ್ ತಂಡದ ವಿಚಾರಕ್ಕೆ ಬರೋದಾದ್ರೆ ಇಲ್ಲಿ ಓಪನಿಂಗ್​ ಬ್ಯಾಟ್ಸ್​ಮನ್​ಗಳಾಗಿ ಈಗಷ್ಟೇ ಟೀಮ್​ಗೆ ಜಾಯಿನ್ ಆಗಿರೋ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಎಸ್​​ರನ್ನ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಾಗಿದೆ. ಆದ್ರೆ ಇಬ್ಬರೂ ಕೂಡ ಲೆಫ್ಟ್​​ಹ್ಯಾಂಡ್​ ಬ್ಯಾಟ್ಸ್​​ಮನ್​ಗಳು. ಬಟ್ ತುಂಬಾ ಕ್ವಾಲಿಟಿ ಬ್ಯಾಟ್ಸ್​ಮನ್​​ಗಳು. ಹೀಗಾಗಿ ನೋ ಮ್ಯಾಟರ್. ಇನ್ನು ಕರ್ನಾಕದ ಮಯಾಂಕ್ ಅಗರ್​ವಾಲ್​ ಈ ಬಾರಿಯ ಐಪಿಎಲ್​​ನಲ್ಲಿ ಹೈದರಾಬಾದ್​​ ಪರ ಆಡ್ತಾ ಇದ್ದಾರೆ. ಹೀಗಾಗಿ ಓಪನಿಂಗ್​ ರೈಟ್​ ಹ್ಯಾಂಡ್-ಲೆಫ್ಟ್​ ಹ್ಯಾಂಡ್ ಕಾಮಬಿನೇಷನ್ ಬೇಕು ಅನ್ನೋದಾದ್ರೆ ಮಯಾಂಕ್ ಅಗರ್​ವಾಲ್​ರನ್ನ ಬೇಕಿದ್ರೂ ಓಪನರ್ ಆಗಿ ಕ್ರೀಸ್​ಗೆ ಇಳಿಸ್ಬಹುದು.

ಚೆನ್ನೈ ಸೂಪರ್​ ಕಿಂಗ್ಸ್​

ಚಾಂಪಿಯನ್​ ಟೀಮ್​ ಚೆನ್ನೈ ಸೂಪರ್​ ಕಿಂಗ್ಸ್​ ಬಳಿಯಂತೂ ಓಪನಿಂಗ್​ಗೆ ಒಟ್ಟು ಮೂರು ಆಪ್ಷನ್​ಗಳಿವೆ. ಡೆವಾನ್ ಕಾನ್ವೆ, ರುತುರಾಜ್ ಗಾಯಕ್ವಾಡ್ ಮತ್ತು ರಚಿನ್ ರವೀಂದ್ರ. ಈ ಮೂವರಲ್ಲಿ ಯಾರನ್ನ ಬೇಕಿದ್ರೂ ಓಪನರ್ಸ್​ಗಳಾಗಿ ಅಖಾಡಕ್ಕಿಳಿಸಬಹುದು. ರಚಿನ್​ ರವೀಂದ್ರಗೆ ಇದು ಫಸ್ಟ್ ಐಪಿಎಲ್​ ಟೂರ್ನಿ. ಬಟ್ ಡೆವಾನ್ ಕಾನ್ವೆ ಮತ್ತು ರುತುರಾಜ್​ ಗಾಯಕ್ವಾಡ್​​ ಈ ಹಿಂದಿನ ಟೂರ್ನಿಗಳಲ್ಲೂ ಸಿಎಸ್​​ಕೆ ಪರ ಓಪನಿಂಗ್ ಬಂದಿದ್ರು. ಎಕ್ಸ್ಟ್​​ಪೀರಿಯನ್ಸ್, ಇಬ್ಬರ ನಡುವೆ ಒಳ್ಳೆಯ ಅಂಡರ್​ಸ್ಟ್ಯಾಂಡಿಂಗ್​ ಕೂಡ ಇದೆ. ಹೀಗಾಗಿ ಈ ಬಾರಿಯೂ ಡೆವಾನ್ ಕಾನ್ವೆ ಮತ್ತು ರುತುರಾಜ್​ ಗಾಯಕ್ವಾಡ್ ಸಿಎಸ್​​ಕೆಯ ಓಪನಿಂಗ್​​ ಬ್ಯಾಟ್ಸ್​​ಮನ್​ಗಳಾಗುವ ಸಾಧ್ಯತೆ ಹೆಚ್ಚಿದೆ.

ಮುಂಬೈ ಇಂಡಿಯನ್ಸ್

ಓಪನಿಂಗ್​ ಬ್ಯಾಟ್ಸ್​​ಮನ್​ಗಳ ವಿಚಾರವಾಗಿ ಮುಂಬೈ ಇಂಡಿಯನ್ಸ್​ಗೆ ಹೆಚ್ಚು ಆಪ್ಷನ್ ಇಲ್ಲ. ಇಲ್ಲೇನಿದ್ರೂ ರೋಹಿತ್​ ಶರ್ಮಾ ಮತ್ತು ಇಶಾನ್ ಕಿಶನ್ ಓಪನರ್ಸ್​ಗಳಾಗಿ ಕ್ರೀಸ್​ಗಿಳಿಯೋದು ಆಲ್​ಮೋಸ್ಟ್ ಗ್ಯಾರಂಟಿ. ಅದ್ರಲ್ಲೂ ರೋಹಿತ್ ಶರ್ಮಾ ಬ್ಯಾಟಿಂಗ್​​ ಆರ್ಡರ್​​ನಲ್ಲಂತೂ ಯಾವುದೇ ಚೇಂಜೆಸ್​ಗಳಾಗೋದಿಲ್ಲ. ಇಲ್ಲಿ ಒಂದು ವಿಚಾರವನ್ನ ಮೆನ್ಷನ್ ಮಾಡಲೇಬೇಕಾಗುತ್ತೆ. ರೋಹಿತ್ ಮುಂಬೈ ಪರವೇ ಆಡಿದ್ರು ಅಂದ್ರೆ ಮಾತ್ರ. ಯಾಕಂದ್ರೆ ಟ್ರೇಡಿಂಗ್ ಇನ್ನೂ ಕೂಡ ಓಪನ್​ ಆಗಿಯೇ ಇದೆ. ಐಪಿಎಲ್​ ಆರಂಭವಾಗೋಕೆ ಒಂದು ವಾರದ ಹಿಂದಿನವರೆಗೂ ಟ್ರೇಡಿಂಗ್​ಗೆ ಅವಕಾಶ ಇದೆ. ಈಗಾಗ್ಲೇ ರೋಹಿತ್​ ಶರ್ಮಾರನ್ನ ಕ್ಯಾಪ್ಟನ್ಸಿಯಿಂದ ಕೆಳಕ್ಕೆ ಇಳಿಸಿರೋ ಕಾರಣ ಹಿಟ್​ಮ್ಯಾನ್​ ಬೇರೆ ಫ್ರಾಂಚೈಸಿ ಜಾಯಿನ್ ಆದ್ರೂ ಆಶ್ಚರ್ಯ ಇಲ್ಲ.

ರಾಜಸ್ಥಾನ ರಾಯಲ್ಸ್

ಇನ್ನು ರಾಜಸ್ಥಾನ್ ರಾಯಲ್ಸ್​​ ಟೀಂನ ಓಪನರ್ಸ್​ಗಳ ವಿಚಾರಕ್ಕೆ ಬರೋದಾದ್ರೆ, ಇವರ ಬಳಿಯಂತೂ ಓಪನಿಂಗ್​​ ಬ್ಯಾಟ್ಸ್​​ಮನ್​ಗಳಿಗೇನು ಕೊರತೆ ಇಲ್ಲ. ಜಾಸ್ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್​ ರಾಜಸ್ಥಾನ ಪರ ಓಪನಿಂಗ್​ಗೆ ಇಳಿಯಬಹುದು. ಹಾಗೆಯೇ ಬ್ಯಾಕ್​​ಅಪ್​​ನಲ್ಲಿ ವಿಕೆಟ್​​ ಕೀಪರ್ ಬ್ಯಾಟ್ಸ್​ಮನ್​ ಟಾಮ್ ಕ್ಯಾಡ್ಮೋರ್​ ಕೂಡ ಇದ್ದಾರೆ. ಬಟ್ ​ ಜಾಸ್ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ ಓಪನಿಂಗ್​​ಗೆ ಇಳಿಯೋದು ಆಲ್​ಮೋಸ್ಟ್ ಗ್ಯಾರಂಟಿ. ಅದು ಕೂಡ ಲೆಫ್ಟ್​ & ರೈಟ್ ಕಾಂಬಿನೇಷನ್ ಬೇರೆ. ಹೀಗಾಘಿ ಇವರಿಬ್ಬರೂ ಅಷ್ಟೂ ಐಪಿಎಲ್​ ಟೀಮ್​ಗಳಲ್ಲಿ ವನ್​​ ಆಫ್ ದಿ ಬೆಸ್ಟ್ ಓಪನಿಂಗ್ ಪ್ಯಾರ್ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ.

ದೆಹಲಿ ಕ್ಯಾಪಿಟಲ್ಸ್

ದೆಹಲಿ ಕ್ಯಾಪಿಟಲ್ಸ್​ ಟೀಮ್​ನಲ್ಲಿ ಓಪನಿಂಗ್​​ ಬ್ಯಾಟ್ಸ್​ಮನ್​ಗಳಾಗಿ ಡೇವಿಡ್ ವಾರ್ನರ್ ಮತ್ತು ಪೃಥ್ವಿ ಶಾ ಕ್ರೀಸ್​ಗೆ ಇಳಿಯಬಹುದು. ಹಾಗೆಯೇ ಶಾಯ್​ ಹೋಪ್​ ಕೂಡ ಈ ಟೀಮ್​ನಲ್ಲಿದ್ದಾರೆ. ಸೋ ಇಲ್ಲಿ ಪೃಥ್ವಿ ಶಾ ಕ್ಲಿಕ್ ಆಗಿಲ್ಲಾಂದ್ರೆ ಡೇವಿಡ್ ವಾರ್ನರ್ ಜೊತೆಗೆ ಶಾಯ್​ ಹೋಪ್​​ರನ್ನ ಕ್ರೀಸ್​​ಗಿಳಿಸಬಹುದು.

ಪಂಜಾಬ್ ಕಿಂಗ್ಸ್

ಇನ್ನು ಪಂಜಾಬ್ ಕಿಂಗ್ಸ್​ ಟೀಮ್​ನ ವಿಚಾರಕ್ಕೆ ಇವರ ಬಳಿಯೂ ಓಪನಿಂಗ್​​ ಸ್ಲಾಟ್​ಗೆ ಮೂವರು ಕ್ವಾಲಿಟಿ ಬ್ಯಾಟ್ಸ್​ಮನ್​ಗಳಿದ್ದಾರೆ. ಶಿಖರ್ ಧವನ್, ಸಿಮ್ರನ್ ಸಿಂಗ್ ಮತ್ತು ಜಾನಿ ಬ್ಯಾರ್​ಸ್ಟೋ ಈ ಮೂವರಲ್ಲಿ ಯಾರನ್ನ ಬೇಕಾದ್ರೂ ಓಪನಿಂಗ್​ಗೆ ಇಳಿಸಬಹುದು. ಮೋಸ್ಟ್ಲಿ ಶಿಖರ್ ಧವನ್ ಮತ್ತು ಜಾನಿ ಬ್ಯಾರ್​ಸ್ಟೋ ಓಪನರ್ಸ್​ಗಳಾಗಿ ಕ್ರೀಸ್​ಗೆ ಇಳಿಯೋ ಸಾಧ್ಯತೆ ಹೆಚ್ಚಿದೆ. ಆದ್ರೆ ಸದ್ಯಕ್ಕಂತೂ ಜಾನಿ ಬ್ಯಾರ್​ಸ್ಟೋ ಹೇಳಿಕೊಳ್ಳುವಂತಾ ಫಾರ್ಮ್​​ನಲ್ಲಿ ಇಲ್ಲ. ಶಿಖರ್ ಧವನ್ ಕೂಡ ಟೀಂ ಇಂಡಿಯಾ ಪರ ಆಡ್ತಾ ಇಲ್ಲ. ಹೀಗಾಗಿ ಇದು ಪಂಜಾಬ್ ಕ್ಸಿಂಗ್​​​ಗೆ ಸ್ವಲ್ಪ ವರಿಯಾಗುವಂತಾ ವಿಚಾರ.

ಗುಜರಾತ್​ ಟೈಟಾನ್ಸ್

ಗುಜರಾತ್ ಟೈಟಾನ್ಸ್​ನಲ್ಲೂ ಓಪನರ್ಸ್​ಗಳಿಗೆ ಯಾವುದೇ ಸಮಸ್ಯೆ ಇಲ್ಲ. ಶುಬ್ಮನ್ ಗಿಲ್, ಮ್ಯಾಥ್ಯೂ ವೇಡ್ ಮತ್ತು ವೃದ್ಧಿಮಾನ್ ಶಾ ಒಟ್ಟು ಮೂವರು ಬ್ಯಾಟ್ಸ್​ಮನ್​ಗಳಿದ್ದಾರೆ. ಈ ಪೈಕಿ ಶುಬ್ಮನ್ ಗಿಲ್ ಮತ್ತು ಮ್ಯಾಥ್ಯೂ ವೇಡ್​ ಬೆಸ್ಟ್​ ಆಪ್ಷನ್. ಇವರಿಬ್ಬರೂ ಈ ಬಾರಿ ಓಪನಿಂಗ್ ಓಪನರ್ಸ್​​ಗಳಾಗಿ ಕ್ರೀಸ್​ಗಿಳಿಯೋ ಸಾಧ್ಯತೆ ಹೆಚ್ಚಿದೆ. ಬಟ್ ವೃದ್ಧಿಮಾಣ್​ ಸಹಾರನ್ನ ಕೂಡ ಓಪನರ್​ ಆಗಿ ಕಣಕ್ಕಿಳಿಸಬಹುದು. ಸಹಾ ಒಬ್ಬ ಅಂಡರ್​ರೇಟೆಡ್ ಕ್ರಿಕೆಟರ್. ಬಟ್ ಕನ್ಸಿಸ್ಟೆನ್ಸಿ ಮೇಂಟೇನ್​ ಮಾಡಿದ್ದು, ಹೀಗಾಗಿ ಗಿಲ್​​ ಜೊತೆ ಸಹಾ ಓಪನಿಂಗ್​ ಬಂದ್ರೂ ಆಶ್ಚರ್ಯ ಇಲ್ಲ.

ಲಕ್ನೋ ಸೂಪರ್ ಜಯಾಂಟ್ಸ್

ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಟೀಮ್​ನಲ್ಲೂ ಅಷ್ಟೇ ಓಪನರ್ಸ್​ಗಳ ದಂಡೇ ಇದೆ. ಕೆ.ಎಲ್.ರಾಹುಲ್ ಮತ್ತು ಕ್ವಿಂಟನ್ ಡಿಕಾಕ್. ಕೈಲ್ ಮೇಯರ್ಸ್ ಮತ್ತು ದೇವದತ್​ ಪಡಿಕ್ಕಲ್ ಒಟ್ಟು ನಾಲ್ವರು ಓಪನಿಂಗ್​ ಬ್ಯಾಟ್ಸ್​ಮನ್​ಗಳಿದ್ದಾರೆ. ಈ ಪೈಕಿ ಕೆಎಲ್ ರಾಹುಲ್​ ಮತ್ತು ಕ್ವಿಂಟನ್ ಡಿಕಾಕ್ ಬೆಸ್ಟ್ ಓಪನಿಂಗ್ ಪ್ಯಾರ್ಸ್ ಅಂತಾನೆ ಹೇಳಬಹುದು. ಬಟ್ ಈ ಬಾರಿ ಕೆಎಲ್​ ರಾಹುಲ್ ಓಪನಿಂಗ್​ಗೆ ಇಳಿಯೋದು ಡೌಟ್. ಹೀಗಾಗಿ ಕ್ವಿಂಟನ್ ಡಿಕಾಕ್ ಜೊತೆಗೆ ದೇವದತ್ ಕ್ರೀಸ್​​ಗಿಳಿಯೋದು ಬೆಸ್ಟ್ ಆಪ್ಷನ್ ಅನ್ಸುತ್ತೆ. ಪವರ್​ಪ್ಲೇನಲ್ಲಿ ಇಬ್ಬರದ್ದೂ ಒಳ್ಳೆಯ ಟ್ರ್ಯಾಕ್​ ರೆಕಾರ್ಡ್ ಇದೆ. ಅದ್ರಲ್ಲಿ ಕ್ವಿಂಟನ್ ಡಿಕಾಕ್ ಅಂತೂ ತುಂಬಾನೆ ಡೇಂಜರಸ್ ಬ್ಯಾಟ್ಸ್​ಮನ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು

ನಮ್ಮ ಆರ್​ಸಿಬಿ ಓಪನಿಂಗ್ ಪ್ಯಾರ್​ ಬಗ್ಗೆ ಹೆಚ್ಚೇನು ಹೇಳ್ಬೇಕಾದ ಅವಶ್ಯಕತೆಯೇ ಇಲ್ಲ. ಅಫ್​​ಕೋಸ್​ ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲೆಸಿಸ್ ಇವರಿಬ್ಬರೂ ಈ ಬಾರಿಯೂ ಓಪನರ್ಸ್​​ಗಳಾಗಿ ಕ್ರೀಸ್​ಗಿಳಿಯೋದು ಆಲ್​ಮೋಸ್ಟ್​ ಗ್ಯಾರಂಟಿ. ಬಟ್​​ ಆರ್​ಸಿಬಿ ಬಳಿಕ ಓಪನಿಂಗ್​​ಗೆ ಆಪ್ಷನ್​ಗಳಿದೆ. ವಿಲ್​​ ಜ್ಯಾಕ್ ಮತ್ತು ಕ್ಯಾಮರೂನ್ ಗ್ರೀನ್ ಇವರಿಬ್ಬರೂ ಓಪನಿಂಗ್ ಮಾಡೋ ಕೆಪಾಸಿಟಿ ಹೊಂದಿದ್ದಾರೆ. ಸೋ ಲಾಸ್ಟ್ ಮೂಮೆಂಟ್​ನಲ್ಲಿ ಏನು ಬೇಕಾದ್ರೂ ಚೇಂಜೆಸ್​​ಗಳಾಗಬಹುದು. ಬಟ್ ವಿರಾಟ್ ಕೊಹ್ಲಿ ಮತ್ತು ಫಾಫ್​​ ಡುಪ್ಲೆಸಿಸ್ ಈಗಲೂ ಆರ್​ಸಿಬಿ ಪಾಲಿಗೆ ಬೆಸ್ಟ್ ಓಪನಿಂಗ್​ ಪ್ಯಾರ್ಸ್​ ಅನ್ನೋದ್ರಲ್ಲಿ ಡೌಟೇ ಇಲ್ಲ. ಇಲ್ಲಿ 10 ಟೀಮ್​ಗಳ ಓಪನಿಂಗ್​ ಬ್ಯಾಟ್ಸ್​ಮನ್​ಗಳ ಬಗ್ಗೆ ನಿಮಗೆ ಇನ್​​ಫಾರ್ಮೇಶನ್ ಕೊಟ್ಟಿದ್ದೀನಿ. ಈ ಮೂರು ಟೀಮ್​ಗಳ ಓಪನರ್ಸ್​ ದಿ ಬೆಸ್ಟ್ ಅನ್ನೋ ರೀತಿ ಹೆಚ್ಚು ಹೈಲೈಟ್ ಆಗ್ತಿದ್ದಾರೆ. ರಾಜಸ್ಥಾನ ರಾಯಲ್ಸ್​ನಿಂದ ಯಶಸ್ವಿ ಜೈಸ್ವಾಲ್ ಮತ್ತು ಜಾಸ್ ಬಟ್ಲರ್.. ಚೆನ್ನೈ ಸೂಪರ್ ಕಿಂಗ್ಸ್​ನಿಂದ ಡೆವೋನ್ ಕಾನ್ವೆ ಮತ್ತು ರುತುರಾಜ್ ಗಾಯಕ್ವಾಡ್ ಹಾಗೇ ಆರ್​ಸಿಬಿಯಿಂದ ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲೆಸಿಸ್. ಈ ಮೂರು ಟೀಮ್​ಗಳ ಓಪನಿಂಗ್​ ಪ್ಯಾರ್​ ಟಾಪ್​ ಕ್ಲಾಸ್ ಆಗಿದೆ.

 

 

Sulekha