ಚಿಕನ್, ಮಟನ್ ತಿಂದ್ರೆ ಇಷ್ಟೆಲ್ಲಾ ಸಮಸ್ಯೆಗಳಿವೆಯಾ – ಮಾಂಸಾಹಾರ ಒಳ್ಳೇದಾ..? ಸಸ್ಯಾಹಾರ ಒಳ್ಳೇದಾ?

ಚಿಕನ್, ಮಟನ್ ತಿಂದ್ರೆ ಇಷ್ಟೆಲ್ಲಾ ಸಮಸ್ಯೆಗಳಿವೆಯಾ – ಮಾಂಸಾಹಾರ ಒಳ್ಳೇದಾ..? ಸಸ್ಯಾಹಾರ ಒಳ್ಳೇದಾ?

ಆಹಾರ ಪದ್ಧತಿ ಅವರವರ ಇಷ್ಟ. ಆದ್ರೆ ಆರೋಗ್ಯಕ್ಕೆ ಸಸ್ಯಾಹಾರ ಒಳ್ಳೆಯದಾ..? ಮಾಂಸಾಹಾರ ಒಳ್ಳೆಯದಾ..? ಜಗತ್ತಿನಾದ್ಯಂತ ವೆಜಿಟೇರಿಯನ್ ಮತ್ತು ನಾನ್ ವೆಜಿಟೇರಿಯನ್ಸ್ ಇದ್ದಾರೆ. ಆದ್ರೆ ಮಾಂಸಹಾರಕ್ಕಿಂತ ಸಸ್ಯಾಹಾರವೇ ಬೆಸ್ಟ್ ಎಂದು ಆಯುರ್ವೇದ ಹೇಳುತ್ತದೆ. ಕೆಲವು ಮಾಂಸಗಳು ಆರೋಗ್ಯಕ್ಕೆ ಒಳ್ಳೆಯದಾಗಿದ್ದರೂ ನಿರಂತರವಾಗಿ ತಿನ್ನೋದ್ರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.

ಇದನ್ನೂ ಓದಿ : ಅಜ್ಜಿಯ ಮೃತದೇಹದ ಮುಂದೆ ಮೌನಕ್ಕೆ ಶರಣಾದ ಮೊಮ್ಮಗ – ಪಕ್ಕದಲ್ಲೇ ಕುಳಿತು ಅಪ್ಪನಿಗೆ ಧೈರ್ಯ ತುಂಬಿದ ಯುವರಾಜ್

ಮಾಂಸದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿರೋದ್ರಿಂದ ದೇಹದ ತೂಕ ಜಾಸ್ತಿಯಾಗುತ್ತೆ. ಇದ್ರಿಂದ ಹಲವು ಕಾಯಿಲೆಗಳಿಗೆ ಆಹ್ವಾನ ನೀಡಿದಂತಾಗುತ್ತೆ. ಕೋಳಿ, ಹಂದಿ, ದನ ಸೇರಿದಂತೆ ಕೆಲ ಪ್ರಾಣಿಗಳಿಗೆ ಬೇಗ ಬೆಳವಣಿಗೆಯಾಗಲಿ ಅಂತಾ ಹಾರ್ಮೋನ್​ಗಳ ಇಂಜೆಕ್ಷನ್ ಚುಚ್ಚಲಾಗುತ್ತೆ. ಇಂತಹ ಮಾಂಸ ಸೇವನೆ ಮಾಡೋದ್ರಿಂದ ಕ್ಯಾನ್ಸರ್​ಗೆ ಕಾರಣವಾಗಬಹುದು. ಹಾಗೇ ವಿವಿಧ ಸೋಂಕುಗಳು ಹರಡುವ ಸಾಧ್ಯತೆ ಕೂಡ ಇರುತ್ತೆ. ಹೀಗಾಗಿ ಅತಿಯಾಗಿ ನಾನ್​ವೆಜ್ ತಿನ್ನೋದು ಬೇಡ ಅಂತಾ ತಜ್ಞರೇ ಹೇಳ್ತಾರೆ. ಆದ್ರೆ ಸಸ್ಯಾಹಾರದಲ್ಲಿ ಈ ಪ್ರಾಬ್ಲಂ ಇರಲ್ಲ. ಹೆಚ್ಚೆಚ್ಚು ತರಕಾರಿ, ಸೊಪ್ಪು ಸೇರಿದಂತೆ ಕಾಳುಗಳನ್ನ ತಿನ್ನೋದ್ರಿಂದ ಆರೋಗ್ಯಕ್ಕೆ ಬೇಕಾಗಿರುವ ಎಲ್ಲಾ ಬಗೆಯ ಪ್ರೋಟೀನ್ ಸಿಗುತ್ತವೆ. ಇಷ್ಟೆಲ್ಲಾ ಪ್ರಯೋಜನಗಳು ಇದ್ದರೂ ಜನರಿಗೆ ಮಾತ್ರ ಬಾಡೂಟ ಅಂದ್ರೇನೇ ಇಷ್ಟ.

Shantha Kumari