ಫೇಸ್ ಬುಕ್ ಬಳಕೆಯಲ್ಲಿ ಯುಎಇ ನಂಬರ್ 1 – ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ..?

ಫೇಸ್ ಬುಕ್ ಬಳಕೆಯಲ್ಲಿ ಯುಎಇ ನಂಬರ್ 1 – ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ..?

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿಶ್ವದ ಸಾಮಾಜಿಕ ಮಾಧ್ಯಮದ ರಾಜಧಾನಿ ಎಂದು ಹೊರಹೊಮ್ಮಿದೆ. ಬಹುತೇಕ ಅರಬ್ ದೇಶದ ಎಲ್ಲಾ ಜನರು ಫೇಸ್ ಬುಕ್ ಖಾತೆಯನ್ನು ಹೊಂದಿರುವುದರಿಂದ ದೇಶವು ಅತೀ ಹೆಚ್ಚಾಗಿ ಸಾಮಾಜಿಕ ಮಾಧ್ಯಮ ಬಳಕೆ ಮಾಡುವ ದೇಶವೆಂದು ಪರಿಗಣಿಸಲ್ಪಟ್ಟಿದೆ.

ಇದನ್ನೂ ಓದಿ : ಈ ಮಂಚದ ಬೆಲೆ ಬರೋಬ್ಬರಿ 1,12,075 ರೂಪಾಯಿ – ಅಂತಹ ವಿಶೇಷತೆ ಏನೀದೆ ಗೊತ್ತಾ?

ಪ್ರಾಕ್ಸಿರಾಕ್ ಸಂಸ್ಥೆಯು ನಡೆಸಿದ ಒಂದು ಅಧ್ಯಯನದ ಪ್ರಕಾರ ದೇಶಗಳು ಉಪಯೋಗಿಸುವ ಸಾಮಾಜಿಕ ವೇದಿಕೆಗಳು ಮತ್ತು ಅವುಗಳನ್ನ ಬಳಕೆ ಮಾಡುವ ಜನಸಂಖ್ಯೆಯ ಆಧಾರದ ಮೇಲೆ ಈ ರ್ಯಾಂಕಿಂಗ್ ನೀಡಲಾಗಿದೆ. 10 ರಲ್ಲಿ 9.55 ರಷ್ಟು  ಸ್ಕೋರ್‌ನೊಂದಿಗೆ, ಯುಎಇ ವಿಶ್ವದ ಸಾಮಾಜಿಕ ಮಾಧ್ಯಮ ರಾಜಧಾನಿಯಾಗಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಯುಎಇಯಲ್ಲಿನ ಜನರು ಸರಾಸರಿ 8.2 ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದ್ದಾರೆ. ಯುಎಇ ಕೂಡ ಫೇಸ್‌ಬುಕ್ ಹೊಂದಿರುವ ಅತಿ ಹೆಚ್ಚು ಶೇಕಡಾ 100 ರಷ್ಟು ಜನರನ್ನು ಹೊಂದಿದೆ ಎಂದು ಪ್ರಾಕ್ಸಿರಾಕ್ ಹೇಳಿದೆ. ಯುಎಇಯಲ್ಲಿ ಜನಸಂಖ್ಯೆಗಿಂತ ಹೆಚ್ಚು ಫೇಸ್‌ಬುಕ್ ಬಳಕೆದಾರರು ನೋಂದಾಯಿಸಿರುವುದರಿಂದ ಯುಎಇಯ ಅಂದಾಜು ಶೇಕಡಾವಾರು ಶೇಕಡಾ 100 ಕ್ಕಿಂತ ಹೆಚ್ಚಿದೆ ಎಂದು ಅದು ಸೇರಿಸಿದೆ.

ವರದಿಯ ಪ್ರಕಾರ ಅರಬ್ ಜನರು ಪ್ರತಿದಿನ ಏಳೂವರೆ ಗಂಟೆಗಳ ಕಾಲ ಇಂಟರ್ನೆಟ್ ಬಳಸುತ್ತಾರೆ. ಯುಎಇ ನಂತರದ ಸ್ಥಾನದಲ್ಲಿ ಮಲೇಷ್ಯಾ/ಫಿಲಿಪೈನ್ಸ್ 8.75, ಸೌದಿ ಅರೇಬಿಯಾ (8.41), ಸಿಂಗಾಪುರ್ (7.96), ವಿಯೆಟ್ನಾಂ (7.62), ಬ್ರೆಜಿಲ್ (7.62), ಥೈಲ್ಯಾಂಡ್ (7.61), ಇಂಡೋನೇಷ್ಯಾ (7.5) ಮತ್ತು ಹಾಂಗ್ ಕಾಂಗ್ (7.27) ರಾಂಕಿಂಗ್ ನೀಡಲಾಗಿದೆ. ಈ ನಡುವೆ ಭಾರತವು 19 ನೇ ಸ್ಥಾನದಲ್ಲಿದೆ. ಜನಸಂಖ್ಯೆಯ ಕೇವಲ ಶೇಕಡಾ 29 ರಷ್ಟು ಜನ ಮಾತ್ರ ಫೇಸ್ ಬುಕ್ ಬಳಸುತ್ತಾರೆ. ಆದರೆ ಪ್ರತಿ ದಿನ ಸುಮಾರು 9 ಗಂಟೆಗಳ ಕಾಲ ಇಂಟರ್ನೆಟ್ ನಲ್ಲಿ ಸಮಯ ಕಳೆಯುತ್ತಾರೆ ಎಂದು ಪ್ರಾಕ್ಸಿರಾಕ್ ಸಂಸ್ಥೆಯು ತನ್ನ ಅಧ್ಯಯನದಲ್ಲಿ ವರದಿಯಾಗಿದೆ.

suddiyaana