ವಿಶ್ವಕಪ್ ಟೂರ್ನಿಯಲ್ಲಿ ಸೆಮೆಫೈನಲ್ ಲೆಕ್ಕಾಚಾರ ಶುರು – ಸೆಮಿಫೈನಲ್‌ಗೆ ಎಂಟ್ರಿಯಾಗುವ ಟಾಪ್-4 ಟೀಂಗಳು ಯಾವುದು?

ವಿಶ್ವಕಪ್ ಟೂರ್ನಿಯಲ್ಲಿ ಸೆಮೆಫೈನಲ್ ಲೆಕ್ಕಾಚಾರ ಶುರು – ಸೆಮಿಫೈನಲ್‌ಗೆ ಎಂಟ್ರಿಯಾಗುವ ಟಾಪ್-4 ಟೀಂಗಳು ಯಾವುದು?

ಕ್ರಿಕೆಟ್​ ವರ್ಲ್ಡ್​​ಕಪ್​ನಲ್ಲಿ ಫಾಲೋ ಮಾಡುತ್ತಿರುವ ಎಲ್ಲರನ್ನೂ ಕಾಡ್ತಿರೋ ಒಂದೇ ಒಂದು ಪ್ರಶ್ನೆ ಏನಂದ್ರೆ, ಸೆಮಿಫೈನಲ್​​ಗೆ ಯಾರು ಎಂಟ್ರಿಯಾಗಬಹುದು ಅನ್ನೋದು? ರಾಬಿನ್ ರೌಂಡ್​ ಸ್ಟೇಜ್​ ಈಗ ಅಂತಿಮ ಘಟ್ಟದಲ್ಲಿದೆ. ಎಲ್ಲಾ 10 ಟೀಂಗಳಿಗೆ ಕೂಡ ಎರಡು-ಮೂರು ಮ್ಯಾಚ್​​ಗಳಷ್ಟೇ ಬಾಕಿ ಉಳಿದಿದೆ. ಹೀಗಾಗಿ ಸೆಮಿಫೈನಲ್​​ ಲೆಕ್ಕಾಚಾರ ಜೋರಾಗಿದೆ.

ಇದನ್ನೂ ಓದಿ: ಭಾರತದ ಬೌಲರ್ಸ್‌ಗಳೇ ತಂಡದ ತಾಕತ್ತು –ಟೀಮ್ ಇಂಡಿಯಾ ಬೌಲರ್ಸ್‌ಗಳಿಂದ ಅದ್ಭುತ ಪ್ರದರ್ಶನ

ಮೊದಲಿಗೆ ಟೀಂ ಇಂಡಿಯಾ ವಿಚಾರಕ್ಕೆ ಬರೋಣ. ಇದುವರೆಗೆ ಆಡಿರುವ ಎಲ್ಲಾ 6 ಮ್ಯಾಚ್​​ಗಳನ್ನ ಕೂಡ ಭಾರತ ಗೆದ್ದಿದ್ದು, ಪಾಯಿಂಟ್ಸ್​ ಟೇಬಲ್​ನಲ್ಲಿ ನಂಬರ್​-1 ಪೊಸೀಶನ್​ನಲ್ಲಿದೆ. ಒಟ್ಟು 12 ಪಾಯಿಂಟ್ಸ್​ಗಳನ್ನ ಪಡೆದುಕೊಂಡಿದೆ. ಸೆಮಿಫೈನಲ್​ಗೆ ಎಂಟ್ರಿಯಾಗಲು ಭಾರತಕ್ಕೆ ಈಗ ಕೇವಲ ಒಂದು ಪಾಯಿಂಟ್​​ನ ಅಗತ್ಯ ಅಷ್ಟೆ ಇದೆ. ಟೀಂ ಇಂಡಿಯಾಗೆ ಇನ್ನೂ ಮೂರು ಮ್ಯಾಚ್​ಗಳು ಬಾಕಿ ಉಳಿದಿದ್ದು, ಹೀಗಾಗಿ ಈ ಮೂರು ಪಂದ್ಯಗಳಲ್ಲಿ ಒಂದನ್ನ ಗೆದ್ದರೂ ಸಾಕು. ಅಥವಾ ಟೈ ಆದ್ರೂ ಪರ್ವಾಗಿಲ್ಲ. ನೋ ರಿ ರಿಸಲ್ಟ್ ಆದರೂ ತೊಂದರೆಯಿಲ್ಲ. ಒಂದು ಪಾಯಿಂಟ್ ಸಿಗುತ್ತೆ. ಭಾರತ ನೇರವಾಗಿ ಸೆಮಿಫೈನಲ್​ಗೆ ಎಂಟ್ರಿಯಾಗುತ್ತೆ. ಹೀಗಾಗಿ ಸೆಮಿಫೈನಲ್​ ವಿಚಾರವಾಗಿ ಟೀಂ ಇಂಡಿಯಾದ ಬಗ್ಗೆ ನೋ ವರಿ.

ದಕ್ಷಿಣ ಆಫ್ರಿಕಾ ಸೆಮಿಫೈನಲ್ ​​ಗೆ ಎಂಟ್ರಿಯಾಗುತ್ತಾ?

ಇನ್ನು ದಕ್ಷಿಣ ಆಫ್ರಿಕಾ ಸೆಮಿಫೈನಲ್​​ಗೆ ಎಂಟ್ರಿಯಾಗಬೇಕು ಅನ್ನೋದಾದ್ರೆ ಇನ್ನೂ 3 ಪಾಯಿಂಟ್ಸ್​ಗಳ ಅವಶ್ಯಕತೆ ಇದೆ. ಒಂದು ವೇಳೆ ನ್ಯೂಜಿಲ್ಯಾಂಡ್​ ಮೇಲೆ ಸೌತ್​ ಆಫ್ರೀಕಾ ಗೆದ್ರೆ ಅವರಿಗೆ ಬೇಕಾಗಿರೋದು ಒಂದೇ ಪಾಯಿಂಟ್. ಸೋತ್ರೆ, ಇನ್ನೂ 3 ಪಾಯಿಂಟ್ಸ್​​ಗಳ ಅವಶ್ಯಕತೆ ಬೀಳುತ್ತೆ. ಆಗ ದಕ್ಷಿಣ ಆಫ್ರಿಕಾಗೆ ಬಾಕಿ ಉಳಿದಿರೋದು 2 ಮ್ಯಾಚ್​ಗಳು ಮಾತ್ರ. ಒಂದು ಭಾರತದ ವಿರುದ್ಧ.. ಮತ್ತೊಂದು ಅಫ್ಘಾನಿಸ್ತಾನದ ವಿರುದ್ಧ. ಆದ್ರೆ ದಕ್ಷಿಣ ಆಫ್ರಿಕಾಗೆ ಒಂದು ಪಂದ್ಯ ಗೆದ್ರೂ ಸೆಮಿಫೈನಲ್​ ಎಂಟ್ರಿಯಾಗಬಹುದು. ಆದ್ರೆ ಇದು ನಿರ್ಧಾರವಾಗೋದು ಈಗ 5 ರಿಂದ 10ನೇ ಪೊಸೀಶನ್​ನಲ್ಲಿರುವ ಟೀಂಗಳ ಪರ್ಫಾಮೆನ್ಸ್ ಆಧಾರದ ಮೇಲೆ. ಯಾಕಂದ್ರೆ ಪಾಯಿಂಟ್ಸ್​​ ಟೇಬಲ್​ನಲ್ಲಿ 5, 6ನೇ ಪೊಸೀಶನ್​ನಲ್ಲಿರುವ ಟೀಂಗಳಿಗೆ ಕೂಡ ಸೆಮಿಫೈನಲ್​ ಎಂಟ್ರಿಯಾಗುವ ಚಾನ್ಸ್ ಇದೆ. ಹೀಗಾಗಿ ದಕ್ಷಿಣ ಸೆಮಿಫೈನಲ್​​ ಎಂಟ್ರಿ ಕೂಡ ತೀವ್ರ ಕುತೂಹಲ ಕೆರಳಿಸಿದೆ.

ನ್ಯೂಜಿಲ್ಯಾಂಡ್ ಸೆಮಿಫೈನಲ್ ಕಥೆಯೇನು?

ನ್ಯೂಜಿಲ್ಯಾಂಡ್​ ಸೆಮಿಫೈನಲ್​ ಎಂಟ್ರಿಗೆ 2 ಪಾಯಿಂಟ್ಸ್ ಅಗತ್ಯ ಇದೆ. ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ರೆ ಸೆಮಿಫೈನಲ್​​ಗೆ ಎಂಟ್ರಿಯಾದಂತೆಯೇ. ಸೋತ್ರೆ ಉಳಿದ ಎರಡು ಮ್ಯಾಚ್​ಗಳು ನ್ಯೂಜಿಲ್ಯಾಂಡ್​ಗೆ ತುಂಬಾ ಕ್ರೂಶಿಯಲ್ ಆಗಲಿದೆ. ಶ್ರೀಲಂಕಾ ಮತ್ತು ಪಾಕಿಸ್ತಾನದ ವಿರುದ್ಧ ನ್ಯೂಜಿಲ್ಯಾಂಡ್​ ತನ್ನ ಕೊನೆಯ ಎರಡು ಮ್ಯಾಚ್​ಗಳನ್ನ ಆಡಲಿದೆ. ಹೀಗಾಗಿ ನ್ಯೂಜಿಲ್ಯಾಂಡ್ ಸೆಮಿಫೈನಲ್​ ಎಂಟ್ರಿ ಕೂಡ ತುಂಬಾನೆ ಇಂಟ್ರೆಸ್ಟಿಂಗ್ ಆಗಿದೆ.

ಆಸ್ಟ್ರೇಲಿಯಾ ಸೆಮಿಫೈನಲ್​ ಪ್ರವೇಶಿಸುತ್ತಾ?

ಸದ್ಯ ಪಾಯಿಂಟ್ಸ್​ ಟೇಬಲ್​ನಲ್ಲಿ 4ನೇ ಪೊಸೀಶನ್​ನಲ್ಲಿರುವ ಆಸ್ಟ್ರೇಲಿಯಾಗೆ ಕೂಡ ಸೆಮಿಫೈನಲ್​ಗೆ ಎಂಟ್ರಿಯಾಗಬಹುದು. ಆಡಿರುವ 6 ಮ್ಯಾಚ್​ಗಳ ಪೈಕಿ 4ರಲ್ಲಿ ಗೆದ್ದಿದೆ. 8 ಪಾಯಿಂಟ್ಸ್​ಗಳನ್ನ ಗಳಿಸಿಕೊಂಡಿದೆ. ಸೆಮಿಫೈನಲ್​​ ಎಂಟ್ರಿಯಾಗಬೇಕು ಅಂದ್ರೆ ಉಳಿದಿರುವ ಮೂರು ಪಂದ್ಯಗಳ ಪೈಕಿ ಎರಡರಲ್ಲಾದ್ರೂ ಅಸ್ಸೀಗಳು ಗೆಲ್ಲಲೇಬೇಕು. ಆದ್ರೆ ಆಸ್ಟ್ರೇಲಿಯಾಗೆ ಇಲ್ಲಿ ಕೇವಲ ಗೆಲುವು ಮಾತ್ರ ಇಂಪಾರ್ಟೆಂಟ್ ಆಗೋದಿಲ್ಲ. ನೆಟ್​ರನ್​ ರೇಟ್ ಕೂಡ ಕ್ರೂಶಿಯಲ್ ಆಗುತ್ತೆ. ಉತ್ತಮ ನೆಟ್​ರನ್​ ರೇಟ್​​ನ್ನ ಕಾಪಾಡಿಕೊಂಡ್ರೆ ಓಕೆ.. ಇಲ್ಲಾಂದ್ರೆ ಸೆಮಿಫೈನಲ್​ ರೇಸ್​ನಲ್ಲಿರುವ 5, 6ನೇ ಪೊಸೀಶನ್​​ನಲ್ಲಿರುವ ಟೀಂಗಳಿಂದಲೂ ಆಸ್ಟ್ರೇಲಿಯಾಗೆ ಚಾಲೆಂಜ್ ಎದುರಾಗಬಹುದು.

ಪಾಕಿಸ್ತಾನಕ್ಕೆ ಅದೃಷ್ಟ ಕೈ ಹಿಡಿಯುತ್ತಾ?

ಪಾಕಿಸ್ತಾನ ಆಡಿರುವ 7 ಮ್ಯಾಚ್​ಗಳ ಪೈಕಿ 4ರಲ್ಲಿ ಸೋತು 3 ಪಂದ್ಯಗಳನ್ನ ಗೆದ್ದಿದೆ. ಒಟ್ಟು 6 ಪಾಯಿಂಟ್ಸ್​ಗಳನ್ನ ಪಡೆದಿದೆ. ಇನ್ನು ಪಾಕಿಸ್ತಾನಕ್ಕೆ ಉಳಿದಿರೋದು ಎರಡು ಮ್ಯಾಚ್​ಗಳು ಮಾತ್ರ. ಮ್ಯಾಕ್ಸಿಮಮ್ ಅಂದ್ರೆ 10 ಪಾಯಿಂಟ್ಸ್ ಪಡೆಯಬಹುದು. ಹೀಗಾಗಿ ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್​​ ವಿರುದ್ಧದ ಮುಂದಿನ ಪಂದ್ಯಗಳನ್ನ ಗೆದ್ರಷ್ಟೇ ಸಾಕಾಗೋದಿಲ್ಲ. ಈಗ ಟಾಪ್​-4 ಪೊಸೀಶನ್​ನಲ್ಲಿರುವ ಭಾರತ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ತನ್ನ ಮುಂದಿನ ಎಲ್ಲಾ ಮ್ಯಾಚ್​ಗಳನ್ನ ಸೋಲಬೇಕು. ಇತ್ತ ಪಾಕಿಸ್ತಾನ 10 ಪಾಯಿಂಟ್ಸ್​ ಪಡೆದಿರಬೇಕು. ಆಗ ಮಾತ್ರ ಪಾಕಿಸ್ತಾನಕ್ಕೆ ಸೆಮಿಫೈನಲ್​​ಗೆ ಕ್ವಾಲಿಫೈ ಆಗಬಹುದು. ಆದ್ರೆ ಆ ಸಾಧ್ಯತೆ ತುಂಬಾನೆ ಕಡಿಮೆ ಇದೆ. ಇಲ್ಲಿ ಪಾಕಿಸ್ತಾನದ ಪರ ಪವಾಡವೇ ನಡೀಬೇಕಷ್ಟೆ. ಪವಾಡ ನಡೆದಿಲ್ಲ ಅಂದ್ರೆ ಪಾಕಿಗಳ ಫ್ಲೈಟ್​ ಟೇಕ್​ ಆಫ್ ಆಗಲಿದೆ.

ಮೊದಲ ಬಾರಿಗೆ ಸೆಮಿಫೈನಲ್ ​ಗೆ ಆಫ್ಘನ್ ಎಂಟ್ರಿ?

ಅಫ್ಘಾನಿಸ್ತಾನ ಅಕ್ಷರಶ: ಈ ಬಾರಿಯ ವರ್ಲ್ಡ್​​ಕಪ್​​ ಡಾರ್ಕ್​​ಹಾರ್ಸ್​ ಆಗಿದೆ. ​​ಆಡಿರುವ 6 ಮ್ಯಾಚ್​ಗಳಲ್ಲಿ 3 ಪಂದ್ಯಗಳನ್ನ ಅಫ್ಘಾನಿಸ್ತಾನ ಗೆದ್ದಿದೆ. ಅಫ್ಘಾನಿಸ್ತಾನಕ್ಕೆ ಇನ್ನೂ 3 ಮ್ಯಾಚ್​ಗಳು ಬಾಕಿ ಉಳಿದಿದ್ದು, ನೆದರ್​ಲ್ಯಾಂಡ್​, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾವನ್ನ ಆಫ್ಘನ್ನರು ಮಣಿಸಬೇಕಿದೆ. ಆಗ ಅಫ್ಘಾನಿಸ್ತಾನಕ್ಕೆ 12 ಪಾಯಿಂಟ್ಸ್​ಗಳಾಗುತ್ತೆ. ಇದಿಷ್ಟೇ ಸಾಕಾಗಲ್ಲ, ಅತ್ತ ಆಸ್ಟ್ರೇಲಿಯಾ ಅಥವಾ ನ್ಯೂಜಿಲ್ಯಾಂಡ್​ ಪೈಕಿ ಯಾವುದಾದ್ರೂ ಒಂದು ಟೀಂ ಅಟ್​ಲೀಸ್ಟ್​ ಒಂದು ಮ್ಯಾಚ್​ನ್ನಾದದ್ರೂ ಸೋಲಬೇಕು. ಎರಡು ಪಂದ್ಯಗಳನ್ನ ಸೋತ್ರೆ ಅಫ್ಘಾನಿಸ್ತಾನಕ್ಕೆ ಇನ್ನೂ ಒಳ್ಳೆಯದು. ಆದ್ರೆ ನೆನಪಿರಲಿ, ಅಫ್ಘಾನಿಸ್ತಾನ ಎಲ್ಲಾ ಮೂರು ಮ್ಯಾಚ್​ಗಳನ್ನ ಗೆಲ್ಲಲೇಬೇಕು. ಆ ಸಾಮರ್ಥ್ಯ ಕೂಡ ಆಫ್ಘನ್ ತಂಡಕ್ಕೆ ಇದೆ. ಈಗಾಗ್ಲೇ ಅವರು ಪ್ರೂವ್ ಮಾಡಿದ್ದಾರೆ.

ಶ್ರೀಲಂಕಾದ ಸೆಮಿಫೈನಲ್ ಕಥೆಯೇನು?

ಲಂಕನ್ನರು ಕೂಡ ಆಲ್​ಮೋಸ್ಟ್ ಮನೆಗೆ ಹೋಗೋದು ಗ್ಯಾರಂಟಿ. ಟೆಕ್ನಿಕಲಿ ಮಾತ್ರ ಶ್ರೀಲಂಕಾ ಇನ್ನೂ ಟೂರ್ನಿಯಲ್ಲಿದೆ. ಆಡಿರುವ 6 ಮ್ಯಾಚ್​ಗಳಲ್ಲಿ 4 ಪಂದ್ಯಗಳನ್ನ ಸೋತಿದೆ. ಗಳಿಸಿರೋದು ಕೇವಲ 4 ಪಾಯಿಂಟ್ಸ್ ಮಾತ್ರ. ಆದ್ರೂ ಶ್ರೀಲಂಕನ್ನರಿಗೂ ಸಣ್ಣ ಹೋಪ್ ಇದೆ. ಯಾಕಂದ್ರೆ, ಉಳಿದಿರಿವ ಎಲ್ಲಾ 3 ಮ್ಯಾಚ್​ಗಳನ್ನ ಶ್ರೀಲಂಕಾ ಗೆಲ್ಲಬೇಕು. ಆಗ 10 ಪಾಯಿಂಟ್ಸ್ ಆಗುತ್ತೆ. ಜೊತೆಗೆ ಪಾಯಿಂಟ್ಸ್​ ಟೇಬಲ್​ನಲ್ಲಿ ಶ್ರೀಲಂಕಾದ ಮೇಲೆ ಇರುವ 5 ತಂಡಗಳ ಪೈಕಿ ಕನಿಷ್ಠ ಎರಡು ಟೀಂಗಳ ಪಾಯಿಂಟ್ಸ್​ 10ಕ್ಕೆ ರೀಚ್ ಆಗಬಾರದು. ಅಂದ್ರೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಮುಂದಿನ ಯಾವುದೇ ಪಂದ್ಯಗಳನ್ನ ಗೆಲ್ಲಬಾರದು. ಜೊತೆಗೆ ನ್ಯೂಜಿಲ್ಯಾಂಡ್ ಅಥವಾ ಆಸ್ಟ್ರೇಲಿಯಾ ಸೋತು ಟೇಬಲ್​ನಲ್ಲಿ 5ನೇ ಸ್ಥಾನಕ್ಕೆ ಇಳಿದ್ರಷ್ಟೇ ಶ್ರೀಲಂಕಾಗೆ ಸೆಮಿಫೈನಲ್ ಚಾನ್ಸ್ ಇರುತ್ತೆ. ಆದ್ರೆ ಸದ್ಯದ ಕಂಡೀಷನ್​ನಲ್ಲಿ ಇದು ಕಷ್ಟ.

ನೆದರ್​ ಲ್ಯಾಂಡ್ ​ಗೆ ಸೆಮಿಫೈನಲ್ ಆಸೆ ಇದ್ಯಾ?

ಇನ್ನು ಈ ಬಾರಿಯ ವರ್ಲ್ಡ್​ಕಪ್​​ನಲ್ಲಿ ಅಫ್ಘಾನಿಸ್ತಾನದ ಜೊತೆಗೆ ಒಂದಷ್ಟು ಶಾಕಿಂಗ್​ ರಿಸಲ್ಟ್ ನೀಡಿರುವ ಮತ್ತೊಂದು ಟೀಂ ಅಂದ್ರೆ ಅದು ನೆದರ್​​ಲ್ಯಾಂಡ್. ಡಚ್ಚರು ಆರು ಮ್ಯಾಚ್​ಗಳನ್ನಾಡಿದ್ದು, ಎರಡರಲ್ಲಿ ಗೆದ್ದಿದ್ದಾರೆ. 4ರಲ್ಲಿ ಸೋತಿದ್ದಾರೆ. ಟೀಂ ಇಂಡಿಯಾ ವಿರುದ್ಧ ಸೇರಿದಂತೆ ಉಳಿದಿರುವ ಎಲ್ಲಾ ಮೂರು ಮ್ಯಾಚ್​ಗಳನ್ನ ಭಾರಿ ರನ್​ರೇಟ್​ನಿಂದ ನೆದರ್​ಲ್ಯಾಂಡ್​ ಗೆಲ್ಲಲೇಬೇಕು. 10 ಪಾಯಿಂಟ್ಸ್​ ಗಳಿಸಬೇಕು. ಜೊತೆಗೆ ಪಾಕಿಸ್ತಾನ, ಅಫ್ಘಾನಿಸ್ತಾನ, ಶ್ರೀಲಂಕಾ ಈ ಎಲ್ಲಾ ಟೀಂಗಳು 10 ಪಾಯಿಂಟ್ಸ್​ ಗಳಿಸಬಾರದು. ಆಗ ಮಾತ್ರ ನೆದರ್​ಲ್ಯಾಂಡ್​ಗೆ ಸೆಮಿಫೈನಲ್​​ ಚಾನ್ಸ್ ಇರುತ್ತೆ. ಆದ್ರೆ ಇಲ್ಲೂ ಕೂಡ ಮ್ಯಾಜಿಕ್ ನಡೀಬೇಕಷ್ಟೆ.

ಇಂಗ್ಲೆಂಡ್ ​​ಗೆ ಇನ್ನೂ ಸೆಮಿಫೈನಲ್ ಚಾನ್ಸ್ ಇದ್ಯಾ?

ಯೆಸ್.. ಆರು ಮ್ಯಾಚ್​ಗಳ ಪೈಕಿ 5ರಲ್ಲಿ ಸೋತು ಕೇವಲ 2 ಪಾಯಿಂಟ್ಸ್ ಪಡೆದುಕೊಂಡು, ಪಾಯಿಂಟ್ಸ್​ ಟೇಂಬಲ್​ನಲ್ಲಿ ನಂಬರ್​-10 ಅಂದ್ರೆ ಲಾಸ್ಟ್​ನಿಂದ ಫಸ್ಟ್​ ಪೊಸೀಶನ್​​ನಲ್ಲಿರುವ ಇಂಗ್ಲೆಂಡ್​​ಗೆ ಇನ್ನೂ ಕೂಡ ಸೆಮಿಫೈನಲ್​ ಎಂಟ್ರಿಯಾಗುವ ಚಾನ್ಸ್ ಇದೆ. ನಂಬೋಕೆ ಕಷ್ಟವಾಗ್ತಿದ್ರೂ ಸದ್ಯದ ಸ್ಟೇಜ್​ನಲ್ಲಿ ಇದು ಫ್ಯಾಕ್ಟ್. ಅಫ್​ಕೋಸ್ ದೊಡ್ಡ ಮಟ್ಟದ ಮ್ಯಾಜಿಕ್ ನಡೀಲೇಬೇಕು. ಹೇಗೆ ಅಂತಾ ಹೇಳ್ತೀನಿ. ಇನ್ನುಳಿದಿರುವ ಮೂರು ಮ್ಯಾಚ್​ಗಳಲ್ಲಿ ಆಸ್ಟ್ರೇಲಿಯಾ, ನೆದರ್​ಲ್ಯಾಂಡ್ ಮತ್ತು ಪಾಕಿಸ್ತಾನವನ್ನ ಇಂಗ್ಲೆಂಡ್​ ಸೋಲಿಸಬೇಕು. ಅಂದ್ರೆ ಈ ಮೂರೂ ಟೀಂಗಳ ವಿರುದ್ಧ ಭಾರಿ ರನ್​ರೇಟ್​ನಿಂದ ಗೆಲ್ಲಬೇಕು. ಜೊತೆಗೆ ಮೂರು ಟೀಂಗಳು ಮಾತ್ರ 8ಕ್ಕಿಂತ ಹೆಚ್ಚು ಪಾಯಿಂಟ್ಸ್ ಗಳಿಸಿರಬೇಕು. ಅಂದ್ರೆ ಭಾರತ ಮತ್ತು ದಕ್ಷಿಣ ಆಫ್ರಿಕಾ ಮಾತ್ರ 8ಕ್ಕಿಂತ ಹೆಚ್ಚು ಪಾಯಿಂಟ್ಸ್ ಪಡೆದಿವೆ. ಉಳಿದೆಲ್ಲಾ ಟೀಂಗಳು 10ಕ್ಕಿಂತ ಕೆಳಗೆ ಇವೆ. ಮೂರು ಟೀಂಗಳು ಮಾತ್ರ 8ಕ್ಕಿಂತ ಹೆಚ್ಚು ಪಾಯಿಂಟ್ಸ್ ಪಡೆದು, ಇಂಗ್ಲೆಂಡ್​ ತನ್ನೆಲ್ಲಾ ಪಂದ್ಯಗಳನ್ನ ಗೆದ್ರಷ್ಟೇ ಸೆಮಿಫೈನಲ್​ಗೆ ಎಂಟ್ರಿಯಾಬಹುದು. ಒಂದು ಮ್ಯಾಚ್ ಸೋತ್ರೂ ಜಾಸ್ ಬಟ್ಲರ್ ಪಡೆ ಬ್ರಿಟಿಷ್ ಏರ್​ವೇಸ್​ ಏರಬೇಕಾಗುತ್ತೆ.

ಇನ್ನು ಪಾಕಿಸ್ತಾನ ವಿರುದ್ಧದ ಮ್ಯಾಚ್​ನಲ್ಲಿ ಬಾಂಗ್ಲಾದೇಶ ಸೋತಿದೆ. ಹೀಗಾಗಿ ಬಾಂಗ್ಲಾ ಹುಲಿಗಳು ಇನ್ನು ಢಾಕಾಗೆ ಪ್ರಯಾಣ ಮಾಡೋದಷ್ಟೇ ಬಾಕಿ ಉಳಿದಿದೆ. ಸೋ.. ಸದ್ಯದ ಸ್ವಿಚ್ಯುವೇಶನ್​ನಲ್ಲಿ ಸೆಮಿಫೈನಲ್​ಗೆ ಎಂಟ್ರಿಯಾಗೋ ಟಾಪ್​-4 ಟೀಂಗಳು ಭಾರತ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ. ಈ ನಾಲ್ಕೂ ತಂಡಗಳು ಫಿಕ್ಸ್​ ಅಂತಾನೆ ಹೇಳಬಹುದು. ಅದ್ರಲ್ಲೂ, ಭಾರತ, ಸೌತ್​ಆಫ್ರಿಕಾ ಅಲ್​​ಮೋಸ್ಟ್ ಸೆಮಿಫೈನಲ್​ ಎಂಟ್ರಿಯಾಗಿದೆ. ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ವಿಚಾರದಲ್ಲಿ ಏನು ಬೇಕಾದ್ರೂ ಆಗಬಹುದು.

 

 

 

 

Sulekha