ಟಾಸ್ ಗೆದ್ದು ಮ್ಯಾಚ್ ಬಿಟ್ಟ RCB.. SRH ವಿಕ್ಟರಿಗೆ ಏನೆಲ್ಲಾ ಡ್ಯಾಮೇಜ್? – ರೆಡ್ ಆರ್ಮಿ ಸೋಲಿಗೆ 8 ಕಾರಣ!

ಟಾಸ್ ಗೆದ್ದು ಮ್ಯಾಚ್ ಬಿಟ್ಟ RCB.. SRH ವಿಕ್ಟರಿಗೆ ಏನೆಲ್ಲಾ ಡ್ಯಾಮೇಜ್? – ರೆಡ್ ಆರ್ಮಿ ಸೋಲಿಗೆ 8 ಕಾರಣ!

ಗುರುವಾರ ಲಕ್ನೋ ವಿರುದ್ಧ ಗುಜರಾತ್ ಟೀಂ ಎಂಥಾ ಸೋಲು ಕಂಡಿತ್ತೋ ಅದೇ ಥರನೇ ಆರ್​ಸಿಬಿ ಶುಕ್ರವಾರ ಹೈದ್ರಾಬಾದ್ ಗೆ ಶರಣಾಯ್ತು. ಲಕ್ನೋದ ಏಕನಾ ಸ್ಟೇಡಿಯಮ್​ನಲ್ಲಿ ನಡೆದ ಈ ಪಂದ್ಯ ಬೆಂಗಳೂರು ಪಾಲಿಗೆ ಮೋಸ್ಟ್ ಇಂಪಾರ್ಟೆಂಟ್ ಆಗಿತ್ತು. ಬಟ್ ಬ್ಯಾಡ್​ಲಕ್ ಮ್ಯಾಚ್ ಗೆಲ್ಲೋಕೆ ಆಗ್ಲಿಲ್ಲ. ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಪವರ್ ಹಿಟ್ಟಿಂಗ್ ಬ್ಯಾಟಿಂಗ್ ವ್ಯರ್ಥವಾಯ್ತು. ಒಂದು ಸೋಲಿನಿಂದ ಪಾಯಿಂಟ್ಸ್ ಟೇಬಲ್​ನಲ್ಲಿ ಸಾಕಷ್ಟು ಡ್ಯಾಮೇಜ್ ಕೂಡ ಮಾಡಿಕೊಳ್ತು.

ರಜತ್ ಆಬ್ಸೆನ್ಸ್ ನಲ್ಲಿ ತಂಡವನ್ನ ಮುನ್ನಡೆಸಿದ ಜಿತೇಶ್!

ಹೈದ್ರಾಬಾದ್ ವಿರುದ್ಧದ ಆರ್​ಸಿಬಿ ಪಂದ್ಯದಲ್ಲಿ ಎರಡೂ ತಂಡಗಳಲ್ಲೂ ಒಂದಷ್ಟು ಚೇಂಜಸ್ ಇದ್ವು. ರಜತ್ ಪಾಟಿದಾರ್ ಬದ್ಲಿಗೆ ಜಿತೇಶ್ ಶರ್ಮಾ ಬೆಂಗಳೂರು ತಂಡದ ಕ್ಯಾಪ್ಟನ್ಸಿ ವಹಿಸಿಕೊಂಡಿದ್ರು. ಅದಕ್ಕೆ ಕಾರಣವೂ ಇದೆ. ಪಾಟಿದಾರ್ ಬೆರಳಿಗೆ ಗಾಯವಾಗಿದ್ದು ಫೀಲ್ಡಿಂಗ್ ಮಾಡೋಕೆ ಆಗ್ತಾ ಇರ್ಲಿಲ್ಲ. ಹೀಗಾಗಿ ಇಂಪ್ಯಾಕ್ಟ್ ಸಬ್ ಆಗಿ ಬ್ಯಾಟಿಂಗ್​ ವೇಳೆ ಕಣಕ್ಕಿಳಿದಿದ್ರು. ಅಲ್ದೇ ದೇವದತ್ ಪಡಿಕ್ಕಲ್ ಬದಲಿಗೆ ಮಯಾಂಕ್ ಅಗರ್ವಾಲ್​ಗೆ ಚಾನ್ಸ್ ನೀಡಲಾಗಿತ್ತು. ಹಾಗೆಯೇ ಜೆಕಬ್ ಬೆಥೆಲ್ ಬದಲಿಗೆ ಫಿಲ್ ಸಾಲ್ಟ್ ಮತ್ತೊಮ್ಮೆ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ರು. ಮತ್ತೊಂದೆಡೆ ಈ ಪಂದ್ಯಕ್ಕಾಗಿ ಸನ್‌ರೈಸರ್ಸ್ ಹೈದರಾಬಾದ್‌ ಕೂಡ ಪ್ಲೇಯಿಂಗ್-11 ರಲ್ಲಿ ಮೂರು ಬದಲಾವಣೆಗಳನ್ನು ಮಾಡಿದ್ದು, ಟ್ರಾವಿಸ್ ಹೆಡ್ ತಂಡಕ್ಕೆ ಮರಳಿದ್ರು.  ಉಳಿದಂತೆ ಅಭಿನವ್ ಮನೋಹರ್ ಮತ್ತು ಜಯದೇವ್ ಉನದ್ಕಟ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ರು.

ಟಾಸ್ ಸೋತ್ರೂ ಬ್ಯಾಟಿಂಗ್ ನಲ್ಲಿ ಹೈದ್ರಾಬಾದ್ ಸುನಾಮಿ

ಇನ್ನು ಪಂದ್ಯಕ್ಕೂ ಮುನ್ನ ಆರ್​ಸಿಬಿ ಟಾಸ್ ಗೆದ್ದು ಬೌಲಿಂಗ್ ಡಿಸೈಡ್ ಮಾಡಿಕೊಳ್ತು. ಅದ್ರಂತೆ ಸನ್ ರೈಸರ್ಸ್ ಹೈದ್ರಾಬಾದ್ ಟೀಂ ಫಸ್ಟ್ ಬ್ಯಾಟಿಂಗ್​ಗೆ ಇಳೀತು. ಫುಲ್ ಜೋಶ್​ನಲ್ಲಿ ಫಿಲ್ಡಿಗಿಳಿದಿದ್ದ​ ಹೈದ್ರಾಬಾದ್ ಬ್ಯಾಟರ್ಸ್ ರನ್ ಮಳೆ ಸುರಿಸಿದ್ರು. ಒಂದ್ಕಡೆ ವಿಕೆಟ್​ಗಳು ಬೀಳ್ತಿದ್ರೆ ಮತ್ತೊಂದ್ಕಡೆ ಸ್ಕೋರ್ ಕೂಡ ಹೆಚ್ಚಾಗ್ತಾನೇ ಇತ್ತು. ಹೈದ್ರಾಬಾದ್ ಪರ ಇನ್ನಿಂಗ್ಸ್ ಆರಂಭಿಸಿದಗ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಸ್ಫೋಟಕ ಬ್ಯಾಟಿಂಗ್ ನಡೆಸಿದ್ರು. ಮೂರನೇ ಓವರ್ ಕಂಪ್ಲೀಟ್ ಆಗುವಷ್ಟ್ರಲ್ಲೇ ಮೊದಲ ವಿಕೆಟ್​​ಗೆ 54 ರನ್​ಗಳ ಜೊತೆಯಾಟವಾಡಿದ್ರು. ಅಭಿಷೇಕ್ ಶರ್ಮಾ 17 ಎಸೆತಗಳಲ್ಲಿ 3 ಸಿಕ್ಸರ್, 3 ಬೌಂಡರಿಗಳ ಸಹಿತ 34

ರನ್ ಕಲೆ ಹಾಕಿದ್ರು. ಬಟ್ ಅಭಿಷೇಕ್ ಗೆ ಲುಂಗಿ ಎನ್​ಗಿಡಿ ಪೆವಿಲಿಯನ್ ಹಾದಿ ತೋರಿಸಿದ್ರು. ಅಭಿ ಔಟ್ ಆದ ನೆಕ್ಸ್ಟ್​ ಎರಡನೇ ಎಸೆತದಲ್ಲೇ ಟ್ರಾವಿಸ್ ಹೆಡ್ ಭುವನೇಶ್ವರ್ ಕುಮಾರ್​ಗೆ ವಿಕೆಟ್ ಒಪ್ಪಿಸಿದ್ರು. ಆ ಬಳಿಕ ಜೊತೆಯಾದ ಇಶಾನ್ ಕಿಶನ್ ಹಾಗೂ ಹೆನ್ರಿಚ್ ಕ್ಲಾಸೆನ್  47 ರನ್ ಗಳ ಜೊತೆಯಾಟವಾಡಿದ್ರು. ಅಂತಿಮವಾಗಿ ಹೈದ್ರಾಬಾದ್ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 231 ರನ್ಸ್ ಕಲೆ ಹಾಕಿತ್ತು.

ಬಿಗ್ ಟಾರ್ಗೆಟ್ ಬೆನ್ನತ್ತಿದ ಆರ್ ಸಿಬಿಗೆ 42 ರನ್ ಗಳ ಸೋಲು!

232 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಆರ್​ಸಿಬಿ ಪರ ಸಾಲ್ಟ್ ಮತ್ತು ಕೊಹ್ಲಿ ಇನ್ನಿಂಗ್ಸ್ ಆರಂಭಿಸಿದ್ರು. ಸ್ಟಾರ್ಟಿಂಗ್​ನಲ್ಲಿ ಸಾಲ್ಟ್ ಸ್ಲೋ ಆಗಿದ್ರೂ ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ ಫಸ್ಟ್ ಓವರ್​ನಿಂದಲೇ ಸಿಡಿಯೋಕೆ ಶುರು ಮಾಡಿದ್ರು. 9 ಬಾಲ್ ಗೆ 5 ರನ್ ಅಷ್ಟೇ ಗಳಿಸಿದ್ದ ಸಾಲ್ಟ್ 6ನೇ ಓವರ್ ನಲ್ಲಿ ಕಂಪ್ಲೀಟ್ ಚೇಂಜ್ ಆದ್ರು. ಆ ಬಳಿ 32 ಎಸೆತಳಲ್ಲೇ 62 ರನ್ ಬಾರಿಸಿದ್ರು. ಬಟ್ ಕೊಹ್ಲಿ ಮತ್ತು ಸಾಲ್ಟ್ ಔಟ್ ಆದ್ಮೇಲೆ ಆರ್​ಸಿಬಿ ಪರ ಯಾರೊಬ್ರೂ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ಕೊಡ್ಲಿಲ್ಲ. ಸೋ 19.5 ಓವರ್​ಗಳಲ್ಲೇ ಆಲೌಟ್ ಆದ ಬೆಂಗಳೂರು 42 ರನ್​ಗಳ ಅಂತರದಿಂದ ಸೋಲೊಪ್ಪಿಕೊಳ್ತು.

15ನೇ ಓವರ್ ವೇಳೆಗೆ ಸರಿಸಮ.. ಆಮೇಲೆ ಏನಾಯ್ತು?

ಆಕ್ಚುಲಿ 15ನೇ ಓವರ್​ವರೆಗೂ ಎಲ್ಲವೂ ಚೆನ್ನಾಗೇ ಇತ್ತು. ಇಬ್ಬರ ಸ್ಕೋರ್ ಕಂಪೇರ್ ಮಾಡಿದ್ರೆ ಸೇಮ್ ಟು ಸೇಮ್ ಇತ್ತು. 15ನೇ ಓವರ್ ವೇಳೆಗೆ ಎಸ್​ಆರ್​ಹೆಚ್ 4 ವಿಕೆಟ್ ನಷ್ಟಕ್ಕೆ 164 ರನ್ ಕಲೆ ಹಾಕಿದ್ರೆ ಬೆಂಗಳೂರು ಟೀಂ ಕೂಡ 3 ವಿಕೆಟ್ ನಷ್ಟಕ್ಕೆ ಅಷ್ಟೇ ರನ್ ಸ್ಕೋರ್ ಮಾಡಿತ್ತು. ಬೆಂಗಳೂರು ಟೀಮ್​ಗೆ ಒನ್ ವಿಕೆಟ್ ಎಕ್ಸ್​ಟ್ರಾನೇ ಇತ್ತು. ಸೋ ಟಾರ್ಗೆಟ್ ನೋಡ್ದಾಗ ಇಲ್ಲಿಂದ ಈಸಿಯಾಗಿ ಚೇಸ್ ಮಾಡ್ತಾರೆ ಅಂತಾನೇ ಕ್ಯಾಲ್ಕುಲೇಟ್ ಮಾಡ್ತಿದ್ರು. ಬಟ್ ಬ್ಯಾಡ್​ಲಕ್ ರಜತ್ ಪಾಟಿದಾರ್ ರನ್ ಔಟ್ ಆಗ್ತಾರೆ. ಪಾಟಿದಾರ್ ಯಾವಾಗ ರನ್ ಔಟ್ ಆದ್ರೋ ಅಲ್ಲಿಂದ ಮ್ಯಾಚ್ ಕಂಪ್ಲೀಟ್ ಕಂಟ್ರೋಲ್ ಕಳ್ಕೊಳ್ತು. ಆರ್​ಸಿಬಿ ಓಪನಿಂಗ್ ನೋಡ್ದಾಗ ಈ ಮ್ಯಾಚ್ ಗೆದ್ದೇ ಗೆಲ್ತಾರೆ ಅನ್ನೋ ಹೋಪ್ಸ್ ಇತ್ತು. ಬಟ್ 15 ಓವರ್ ಆದ್ಮೇಲೆ ಮ್ಯಾಚ್ ಕಂಪ್ಲೀಟ್ ಹೈದ್ರಾಬಾದ್ ಕಡೆ ಟರ್ನ್​ ಆಯ್ತು. ಹೈದ್ರಾಬಾದ್ ವಿರುದ್ಧದ ಮ್ಯಾಚಲ್ಲಿ ಆರ್​ಸಿಬಿಯ ಸೋಲಿಗೆ ಈ ಮಿಸ್ಟೇಕ್​ಗಳೇ ಕಾರಣವಾದ್ವು. ಅದ್ರಲ್ಲಿ ನಂಬರ್ 1.

ಆರ್ ​ಸಿಬಿ ಸೋಲಿಗೆ ಇದೇ ಕಾರಣ!

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಹೈದ್ರಾಬಾದ್​ ಆಟಗಾರರು ಫಸ್ಟ್ ಓವರ್​ನಿಂದಲೇ ಬೆಂಗಳೂರು ಬೌಲರ್ಸ್ ಮೇಲೆ ಡಾಮಿನೇಟ್ ಮಾಡಿದ್ರು. ಅಟ್ಯಾಕಿಂಗ್ ಮೋಡ್​ನಲ್ಲೇ ಬ್ಯಾಟ್ ಬೀಸಿದ್ರು. ಪ್ರತೀ ಓವರ್​ನಲ್ಲೂ ಸಿಕ್ಸ್, ಫೋರ್​ಗಳಲ್ಲೇ ಡೀಲ್ ಮಾಡ್ತಿದ್ರು. ಆರ್​ಸಿಬಿ ಬೌಲರ್ಸ್ ವಿಕೆಟ್ ತೆಗೆದ್ರೂ ಕೂಡ ಅಷ್ಟ್ರಲ್ಲಾಗ್ಲೇ ಎಸ್​ಆರ್​ಹೆಚ್ ಬ್ಯಾಟರ್ಸ್ ಸಾಕಷ್ಟು ಡ್ಯಾಮೇಜ್ ಮಾಡಿಯೇ ಹೋಗ್ತಿದ್ರು. ಅದ್ರಲ್ಲೂ ಇಶಾನ್ ಕಿಶನ್ ವಿಕೆಟ್ ತೆಗೆಯದೇ ಇದ್ದದ್ದೂ ಕೂಡ ದೊಡ್ಡ ಹೊಡೆತ ಕೊಡ್ತು. ಇನ್ನು ಸೆಕೆಂಡ್ ರೀಸನ್ ಅಂದ್ರೆ ಮಯಾಂಕ್ ಅಗರ್ವಾಲ್ ಸ್ಲೋ ರನ್ಸ್. ದೇವದತ್ ಪಡಿಕ್ಕಲ್ ಬದಲಿಗೆ ಆರ್​ಸಿಬಿ ಸೇರಿರುವ ಮಯಾಂಕ್​ಗೆ ಪ್ಲೇಯಿಂಗ್ 11ನಲ್ಲಿ ಚಾನ್ಸ್ ಕೊಡ್ಲಾಗಿತ್ತು. ನಂಬರ್ 3 ಸ್ಲಾಟ್​ನಲ್ಲಿ ಬಂದ ಮಯಾಂಕ್ 10 ಬಾಲ್​ಗಳಲ್ಲಿ 11 ರನ್ ಗಳಿಸಿದ್ರು. 200+ ಸ್ಟ್ರೈಕ್ ರೇಟ್ ರಿಕ್ವೈರ್ಡ್ ಆಗಿದ್ದಾಗ ಬಾಲ್​ಗೆ ಒಂದು ರನ್ ಹೊಡೆದ್ರು. ಹೇಗೋ ಫಿಲ್ ಸಾಲ್ಟ್ ಕವರ್ ಅಪ್ ಮಾಡ್ತಿದ್ರೂ ಕೂಡ 62 ರನ್​​ಗೆ ಆಟ ಮುಗಿಸಿದ್ರು. ಆಬಳಿಕ ಜೊತೆಯಾದ ರಜತ್ ಪಾಟಿದಾರ್ ಮತ್ತು ಜಿತೇಶ್ ಶರ್ಮಾ ಅದ್ಭುತ ಜೊತೆಯಾಟವಾಗ್ತಿದ್ರು. ಬಟ್ ಬ್ಯಾಡ್​ಲಕ್ ರಜತ್ ಪಾಟಿದಾರ್ ರನ್ ಔಟ್ ಆದ್ರು. ಪಾಟಿದಾರ್ ಔಟ್ ಆಗಿದ್ದೇ ಆಗಿದ್ದು ಅಲ್ಲಿಂದ ಆರ್​ಸಿಬಿ ಅದಃಪತನ ಶುರುವಾಯ್ತು. ಇದೆಲ್ಲದ್ರ ನಡುವೆ ತುಂಬಾನೇ ಹೋಪ್ಸ್ ಇಟ್ಕೊಂಡಿದ್ದ ರೊಮ್ಯಾರಿಯೋ ಶೆಫರ್ಡ್ 6ನೇ ಸ್ಲಾಟ್​ನಲ್ಲಿ ಬಂದು ಫಸ್ಟ್ ಬಾಲ್​ನಲ್ಲೇ ವಿಕೆಟ್ ಒಪ್ಪಿಸಿದ್ರು. ಌಕ್ಚುಲಿ ಹೈದ್ರಾಬಾದ್ ಬಿಗ್ ಸ್ಕೋರ್​ನಲ್ಲಿ ಟಾಪ್ ಆರ್ಡರ್ ಬ್ಯಾಟರ್ಸ್ ಹಾಗೇ ಮಿಡಲ್ ಓವರ್ ಪ್ಲೇಯರ್ಸ್ ಬಿಗ್ ಹಿಟ್ ಕೊಟ್ಟಿದ್ದು. ಬಟ್ ಆರ್​ಸಿಬಿ ಪರ ಫಿಲ್ ಸಾಲ್ಟ್ ಮತ್ತೆ ಕೊಹ್ಲಿ ಒಳ್ಳೆ ಇನ್ನಿಂಗ್ಸ್ ಬಂದಿದ್ದು ಬಿಟ್ರೆ ಮಿಡಲ್ ಆರ್ಡರ್ ಕಂಪ್ಲೀಟ್ ಹಳ್ಳ ಹಿಡಿದಿತ್ತು. ಸೋ ಆರ್​ಸಿಬಿ ಸೋಲಿಗೆ ಇದೂ ಕೂಡ ಕಾರಣ ಆಯ್ತು. ಅದೂ ಅಲ್ದೇ ಹೈದ್ರಾಬಾದ್ ಆಟಗಾರರು ಪ್ರತೀ ಓವರ್​ನಲ್ಲಿ ಫೋರ್, ಸಿಕ್ಸ್ ಪಿಕ್ ಮಾಡ್ತಿದ್ರು. ಬಟ್ ಆರ್​ಸಿಬಿ 5ನೇ ಓವರ್ ಆದ್ಮೇಲೆ ಫಸ್ಟ್ ಸಿಕ್ಸ್ ಬರುತ್ತೆ. ಸೋ ಇಡೀ ಪಂದ್ಯದಲ್ಲಿ ಆರ್​ಸಿಬಿ ಕಡೆಯಿಂದ ಸಿಕ್ಸರ್ ಅಷ್ಟೇ ಬಂದಿತ್ತು. ಅದ್ರಲ್ಲಿ 5 ಸಿಕ್ಸರ್ ಸಾಲ್ಟ್ ಬ್ಯಾಟ್​ನಿಂದಲೇ ಬಂದಿದ್ದು. ಇನ್ನು ಟೋಟಲ್ಲಾಗಿ 16 ಫೋರ್ಸ್ ಅಷ್ಟೇ ಬಂತು. ಬಟ್ ಹೈದ್ರಾಬಾದ್ ಕಡೆಯಿಂದ 15 ಸಿಕ್ಸರ್, 16 ಫೋರ್ಸ್ ಬಂದಿತ್ತು. ಇದು ಸ್ಕೋರ್ ವೇರಿಯೇಷನ್​ಗೆ ಕಾರಣ ಆಯ್ತು. ಇನ್ನು ಈ ಪಂದ್ಯದಲ್ಲಿ ಆರ್​ಸಿಬಿಯ ಟ್ರಸ್ಟೆಡ್ ಪ್ಲೇಯರ್ಸ್ ರಜತ್ ಪಾಟಿದಾರ್ ಮತ್ತು ಟಿಮ್ ಡೇವಿಡ್ ಇಂಜುರಿಯಾಗಿದ್ದು ಹೊಡೆತ ಕೊಡ್ತು. ಇಬ್ಬರೂ ಆಟಗಾರರಿಂದ ಹೈ ಸ್ಕೋರ್ ಬರ್ಲಿಲ್ಲ. ಹಾಗೇ ಹೈದ್ರಾಬಾದ್​ಗಿಂತ ಆರ್​ಸಿಬಿಯಲ್ಲೇ ಹೆಚ್ಚಿನ ಫಿನಿಶರ್ಸ್ ಇದ್ರು. ಶೆಫರ್ಡ್, ಟಿಮ್ ಡೇವಿಡ್ ಹಾಗೇ ಕೃನಾಲ್ ಪಾಂಡ್ಯ. ಬಟ್ ಶೆಫರ್ಡ್ ಡಕೌಟ್ ಆದ್ರೆ ಕೃನಾಲ್ 8 ರನ್ಸ್, ಟಿಮ್ ಡೇವಿಡ್ 1 ರನ್​ ಗಳಿಸಿದ್ರು. ಸೋ ಮೂವರಿಂದ ಸೇರಿ ಬಂದಿದ್ದೇ 10 ರನ್. ಇದೂ ಕೂಡ ಆರ್​ಸಿಬಿ ಸೋಲಿಗೆ ಕಾರಣ ಆಯ್ತು.  ಹೀಗೆ ಆರ್​ಸಿಬಿ ಕೈಯಲ್ಲಿದ್ದ ಪಂದ್ಯವನ್ನ ಕೈಚೆಲ್ಲಿಕೊಂಡಿದೆ. ಬಟ್ ಈ ಸೋಲಿನಿಂದ ಸಿಕ್ಕಾಪಟ್ಟೆ ಡ್ಯಾಮೇಜ್ ಅಂತೂ ಆಗಿದೆ.

Shwetha M

Leave a Reply

Your email address will not be published. Required fields are marked *