ಎಲ್ಲಿ ಹಳ್ಳಿ ಇದೆಯೋ ಅಲ್ಲಿ ಬಾರ್​.. ಬಡವರಿಗೆ ಉಚಿತ ವಿಸ್ಕಿ – ವಿಚಿತ್ರ ಆಶ್ವಾಸನೆ ನೀಡಿದ ಲೋಕಸಭಾ ಚುನಾವಣಾ ಅಭ್ಯರ್ಥಿ

ಎಲ್ಲಿ ಹಳ್ಳಿ ಇದೆಯೋ ಅಲ್ಲಿ ಬಾರ್​.. ಬಡವರಿಗೆ ಉಚಿತ ವಿಸ್ಕಿ – ವಿಚಿತ್ರ ಆಶ್ವಾಸನೆ ನೀಡಿದ ಲೋಕಸಭಾ ಚುನಾವಣಾ ಅಭ್ಯರ್ಥಿ

ಲೋಕಸಭೆ ಚುನಾವಣೆಯ ಕಾವು ಜೋರಾಗಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಎಲ್ಲಾ ಪಕ್ಷಗಳು ನಾನಾ ಸರ್ಕಸ್‌ ಮಾಡ್ತಾ ಇವೆ. ಮತದಾರರ ಮನವೊಲಿಸಲು ಹೊಸ ಹೊಸ ತಂತ್ರಗಳನ್ನು ರೂಪಿಸುತ್ತಿವೆ. ಪ್ರಣಾಳಿಕೆಯಲ್ಲೂ ಹೊಸ ಹೊಸ ಆಶ್ವಾನೆಗಳನ್ನು ನೀಡುತ್ತಿವೆ. ಇದೀಗ ಇಲ್ಲೊಬ್ಬರು ಅಭ್ಯರ್ಥಿ ಮತದಾರರಿಗೆ ಕೊಟ್ಟ ಆಶ್ವಾಸನೆ ನೋಡಿ ಎಲ್ಲರೂ ಶಾಕ್‌ ಆಗಿದ್ದಾರೆ.

ಇದನ್ನೂ ಓದಿ: ‘ನಾಯಿ’ ಎಂದಿದ್ಯಾರಿಗೆ ಸಿಧು?, ಮುಂಬೈನಲ್ಲೂ ಹಾರ್ದಿಕ್ ಟ್ರೋಲ್? – ಮುಂಬೈ ಇಂಡಿಯನ್ಸ್ ಒಳಗಿನ ರಹಸ್ಯ ಬಿಚ್ಚಿಟ್ಟಿದ್ಯಾರು?

ಲೋಕಸಭೆ ಚುನಾವಣೆಗೆ ರಾಜಕಾರಣಿಗಳು ಮತಬೇಟೆ ಶುರುಮಾಡಿದ್ದಾರೆ. ಕೆಲವರು ಸಾರ್ವಜನಿಕ ಕಾರ್ಯಕ್ರಮ, ರ್ಯಾಲಿಯಲ್ಲಿ ಭಾಗವಹಿಸುವ ಮೂಲಕ ಪ್ರಚಾರ ಕಾರ್ಯಕೈಗೊಂಡರೆ. ಇನ್ನು ಕೆಲವರು ಆಶ್ವಾಸನೆ ಮೂಲಕ ಮತಗೆಲ್ಲಲು ಯತ್ನಿಸುತ್ತಿದ್ದಾರೆ. ಆದ್ರೆ ಮಹಾರಾಷ್ಟ್ರ ಚಿಮುರ್​ ಗ್ರಾಮದ ಸ್ವತಂತ್ರ ಅಭ್ಯರ್ಥಿ ವನಿತಾ ರಾವುತ್​​ ತಮ್ಮ ಭರವಸೆಯ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಬಾರಿಯ ಲೋಕ ಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಮತದಾರ ಸಹಕರಿಸಿದರೆ ಸಬ್ಸಿಡಿ ಮೂಲಕ ವಿಸ್ಕಿ ಮತ್ತು ಬಿಯರ್​ ನೀಡುವುದಾಗಿ ಭರವಸೆ ನೀಡಿದ್ದಾರೆ.

ಇವಿಷ್ಟು ಮಾತ್ರವಲ್ಲ, ವನಿತಾ ರಾವುತ್​​ ಪ್ರತಿ ಹಳ್ಳಿಯಲ್ಲಿ ಬಾರ್​ ತೆರೆಯುವುದಾಗಿ ಹೇಳಿದ್ದಾರೆ. ಜೊತೆಗೆ ಬಡವರಿಗೆ ಆಮದು ಮಾಡಿಕೊಳ್ಳುವ ವಿಸ್ಕಿಯನ್ನು ಉಚಿತವಾಗಿ ನೀಡುವುದಾಗಿ ಹೇಳಿದ್ದಾರೆ. ಸಂಸದರ ನಿಧಿಯಿಂದ ಈ ಸೌಲಭ್ಯ ಒದಗಿಸುತ್ತೇನೆ. ಆದರೆ ಈ ಬಾರಿ ನನ್ನನ್ನು ಬಹುಮತದಿಂದ ಗೆಲ್ಲಿಸಿಕೊಡಿ ಎಂದು ಭರವಸೆ ನೀಡಿದ್ದಾರೆ.

ವನಿತಾ ರಾವುತ್​​ ಅಚ್ಚರಿಯ ಅಶ್ವಾಸನೆ ನೀಡಿದ್ದಲ್ಲದೆ, ಪಡಿತರ ವ್ಯವಸ್ಥೆ ಮೂಲಕ ಮದ್ಯವನ್ನು ನೀಡುತ್ತೇನೆ. ಕುಡಿಯುವವರು ಮತ್ತು ಮದ್ಯ ಮಾರಾಟಗಾರರು ಪರವಾನಗಿ ಹೊಂದಿರಬೇಕು ಎಂದು ಪ್ರಚಾರದ ವೇಳೆ ತಿಳಿಸಿದ್ದಾರಂತೆ.

Shwetha M