ತಿಂಗಳಿಂದ ಬ್ಯಾಟ್ ಮುಟ್ಟದ KOHLI – ಅಭ್ಯಾಸ ಇಲ್ಲದೇ ಟೆಸ್ಟ್ ಸರಣಿ ಆಡ್ತಾರಾ?
ವಿರಾಟ್ ಮೇಲೆ ಕ್ರಿಕೆಟರ್ಸ್ ಕೆಂಡ

ತಿಂಗಳಿಂದ ಬ್ಯಾಟ್ ಮುಟ್ಟದ KOHLI – ಅಭ್ಯಾಸ ಇಲ್ಲದೇ ಟೆಸ್ಟ್ ಸರಣಿ ಆಡ್ತಾರಾ?ವಿರಾಟ್ ಮೇಲೆ ಕ್ರಿಕೆಟರ್ಸ್ ಕೆಂಡ

ಫೈನಲಿ ದುಲೀಪ್ ಟ್ರೋಫಿ ಸ್ಟಾರ್ಟ್ ಆಯ್ತು. ಇನ್ನೇನಿದ್ರೂ ನೆಕ್ಸ್ಟ್​ ಎಲ್ಲರ ಕಣ್ಣು ಇರೋದು ಭಾರತ ವರ್ಸಸ್ ಬಾಂಗ್ಲಾ ಸರಣಿ ಮೇಲೆ. ಉಭಯ ರಾಷ್ಟ್ರಗಳ ಟೆಸ್ಟ್ ಸರಣಿಗೆ ಇನ್ನ ಉಳಿದಿರೋದೇ ಕೇವಲ 2 ವಾರ. ಬಟ್ ಇನ್ನೂ ಕೂಡ ಟೀಂ ಇಂಡಿಯಾ ಸ್ಕ್ವಾಡ್ ಅನೌನ್ಸ್ ಆಗಿಲ್ಲ. ದುಲೀಪ್ ಟ್ರೋಫಿ ಟೂರ್ನಿ ಮೇಲೆ ಕಣ್ಣಿಟ್ಟಿರೋ ಬಿಸಿಸಿಐ ಬೆಸ್ಟ್ ಪರ್ಫಾಮೆನ್ಸ್ ನೀಡಿದವ್ರಿಗೆ ಚಾನ್ಸ್ ಕೊಡೋಕೆ ಮುಂದಾಗಿದೆ. ಆದ್ರೆ ಈಗ ಎಲ್ರನ್ನೂ ಕಾಡ್ತಿರೋ ಪ್ರಶ್ನೆ ಅಂದ್ರೆ ವಿರಾಟ್ ಕೊಹ್ಲಿ ಎಲ್ಲಿ ಅನ್ನೋದು. ಲಂಕಾ ಸರಣಿ ಮುಗಿದ್ಮೇಲೆ ವಿರಾಟ್ ಪತ್ತೆಯೇ ಇಲ್ಲ. ಇದೇ ಈಗ ಹಲವು ಕ್ರಿಕೆಟಿಗರ ಕಣ್ಣು ಕೆಂಪಾಗಿಸಿದೆ. ಅದಕ್ಕೆ ಕಾರಣ ಆತಂಕ. ಏನದು ಟೆನ್ಷನ್..? ಕೊಹ್ಲಿ ಮೇಲೆ ಸಿಟ್ಟಾಗಿರೋದ್ಯಾಕೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ರೇಣುಕಾಸ್ವಾಮಿ ಕೊಲೆ – ಜಾಮೀನಿಗೆ ಅರ್ಜಿ ಸಲ್ಲಿಸಲು ದರ್ಶನ್ ಸಿದ್ಧತೆ

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯು ಸೆಪ್ಟೆಂಬರ್ 19 ರಿಂದ ಆರಂಭವಾಗಲಿದೆ. ಮೊದಲ ಪಂದ್ಯ ಸೆಪ್ಟೆಂಬರ್ 19ರಿಂದ ಚೆನ್ನೈನಲ್ಲಿ ನಡೆದ್ರೆ, ಎರಡನೇ ಪಂದ್ಯವು ಸೆಪ್ಟೆಂಬರ್ 27 ರಿಂದ ನಡೆಯಲಿದೆ. ಬಿಸಿಸಿಐ ಇನ್ನೂ ಕೂಡ ತಂಡವನ್ನ ಅನೌನ್ಸ್ ಮಾಡದ ಕಾರಣ ಯಾರಿಗೆಲ್ಲಾ ಚಾನ್ಸ್ ಸಿಗಬಹುದು ಅನ್ನೋ ಲೆಕ್ಕಾಚಾರ ನಡೀತಿದೆ. ಬಟ್ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಡೋದಂತೂ ಪಕ್ಕಾ. ಈ ಇಬ್ಬರು ಆಟಗಾರರು ದೇಶೀಯ ಟೂರ್ನಿ ಆಡದೆಯೇ ನೇರವಾಗಿ ಬಾಂಗ್ಲಾ ಸರಣಿಗೆ ಸೆಲೆಕ್ಟ್ ಆಗ್ತಾರೆ. ಬಟ್ ರೋಹಿತ್ ಶರ್ಮಾ ಈಗಾಗ್ಲೇ ಫಿಟ್​ನೆಸ್, ಪ್ರಾಕ್ಟೀಸ್ ಅಂತಾ ದೇಹವನ್ನ ದಂಡಿಸ್ತಿದ್ರೆ ವಿರಾಟ್ ಪತ್ತೆಯೇ ಇಲ್ಲ. ಇದೇ ಈಗ ಕೆಲ ಕ್ರಿಕೆಟಿಗರ ಅಸಮಾಧಾನಕ್ಕೆ ಕಾರಣ ಆಗಿದೆ. ದೇಶೀಯ ಟೂರ್ನಿಯಿಂದ ಕೈ ಬಿಟ್ಟಾಗಲೇ ಸಿಟ್ಟಾಗಿದ್ದ ಮಾಜಿ ಕ್ರಿಕೆಟಿಗರು ಈಗ ತರಬೇತಿಯನ್ನೂ ಪ್ರಾರಂಭ ಮಾಡದೇ ಇರೋದಕ್ಕೆ ಕಿಡಿ ಕಾರಿದ್ದಾರೆ. ಇದಕ್ಕೆ ಕಾರಣ ಈ ವರ್ಷದಲ್ಲಿ ಕೊಹ್ಲಿ ಅನುಭವಿಸಿರೋ ಕಳಪೆ ಫಾರ್ಮ್.

ಕೊಹ್ಲಿ ನಾಪತ್ತೆ! 

ಬಾಂಗ್ಲಾ ಸರಣಿ ಆರಂಭದೊಂದಿಗೆ ಟೀಮ್​ ಇಂಡಿಯಾ ಮುಂದಿನ ಆರು ತಿಂಗಳವರೆಗೂ ಬ್ಯಾಕ್​ ಟು ಬ್ಯಾಕ್​ ಪಂದ್ಯಗಳಲ್ಲಿ ಬ್ಯುಸಿಯಾಗಲಿದೆ. ಇದಕ್ಕಾಗಿ ಆಟಗಾರರ ಪ್ರಾಕ್ಟೀಸ್ ಕೂಡ ಶುರುವಾಗಿದೆ. ಆದ್ರೆ ಕಿಂಗ್​ ಕೊಹ್ಲಿ ಮಾತ್ರ ಸುಳಿವೇ ಇಲ್ಲ. ಅಭ್ಯಾಸದಿಂದ ಹೊರಗುಳಿದಿರೋ ಕೊಹ್ಲಿಯ ನಡೆ ಅಭಿಮಾನಿಗಳ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ಟೀಮ್​​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಈಗಾಗ್ಲೇ ಭರ್ಜರಿ ಸಿದ್ಧತೆ ಆರಂಭಿಸಿದ್ದಾರೆ. ದುಲೀಪ್​ ಟ್ರೋಫಿಯಿಂದ ಹೊರಗುಳಿದಿರುವ ರೋಹಿತ್​, ಮುಂಬೈನಲ್ಲಿ ಪ್ರತ್ಯೇಕವಾಗಿ ಅಭ್ಯಾಸ ನಡೆಸ್ತಿದ್ದಾರೆ.  ರೋಹಿತ್​ ಅಭ್ಯಾಸವನ್ನ ಟೀಮ್​ ಇಂಡಿಯಾ ಅಸಿಸ್ಟೆಂಟ್​ ಕೋಚ್​ ಅಭಿಶೇಕ್​ ನಾಯರ್​ ಮಾನಿಟರ್​ ಮಾಡ್ತಿದ್ದಾರೆ. ಹಾಗೇ ಯಂಗ್​​ಸ್ಟರ್​​ಗಳಾದ ಯಶಸ್ವಿ ಜೈಸ್ವಾಲ್​, ಶುಭ್​ಮನ್​ ಗಿಲ್​ ಕೂಡ ಭರ್ಜರಿ ಅಭ್ಯಾಸ ನಡೆಸಿದ್ದಾರೆ. ಫಿಟ್​ನೆಸ್​ ಕಡೆಗೆ ಜೈಸ್ವಾಲ್​ ಗಮನ ಹರಿಸಿದ್ರೆ, ಶುಭ್​ಮನ್​ ಗಿಲ್​ ಬ್ಯಾಟಿಂಗ್​ ಮೇಲೆ ಫೋಕಸ್​ ಮಾಡ್ತಿದ್ದಾರೆ. ಹಾಗೇ ಬಹುತೇಕ ಆಟಗಾರರೆಲ್ಲಾ ದುಲೀಫ್ ಟ್ರೋಫಿ ಆಡ್ತಿದ್ದಾರೆ. ಆದ್ರೆ ತಂಡದ ಪ್ರಮುಖ ಆಟಗಾರ ವಿರಾಟ್​ ಕೊಹ್ಲಿ ಕಾಣೆಯಾಗಿದ್ದಾರೆ. ಶ್ರೀಲಂಕಾ ಪ್ರವಾಸದ ಏಕದಿನ ಸರಣಿಗಾಗಿ ಲಂಡನ್​ನಿಂದ ನೇರವಾಗಿ ಕೊಲಂಬೋಗೆ ಬಂದಿಳಿದಿದ್ದ ಕೊಹ್ಲಿ, ಸರಣಿ ಅಂತ್ಯದ ಬಳಿಕ ಮತ್ತೆ ಲಂಡನ್​ಗೆ ಹಾರಿದ್ರು. ಇದೀಗ ಟೆಸ್ಟ್​ ಸೀಸನ್​ ಆರಂಭಕ್ಕೆ ಕೌಂಟ್​​ಡೌನ್​ ಶುರುವಾಗಿದ್ರೂ ಕೊಹ್ಲಿಯ ಸುದ್ದಿಯೇ ಇಲ್ಲ. ಸರಣಿಗೆ ಇನ್ನು 2 ವಾರಗಳಷ್ಟೇ ಬಾಕಿ ಉಳಿದಿವೆ. ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ಫ್ಲಾಪ್​ ಶೋ ನೀಡಿ ಮತ್ತೆ ಲಂಡನ್​ಗೆ ತೆರಳಿರೋ ಕೊಹ್ಲಿ, ಬ್ಯಾಟ್​​ ಮುಟ್ಟಿ ಹತ್ತತ್ರ ಒಂದು ತಿಂಗಳೇ ಆಗ್ತಾ ಬಂತು. ಸುದೀರ್ಘ ದಿನಗಳ ಕಾಲ ಮೈದಾನದಿಂದ ಹೊರಗುಳಿಯೋ ಕೊಹ್ಲಿ ಡೈರೆಕ್ಟ್ ಸರಣಿಗೆ ಇಳಿದ್ರೆ ಹಿನ್ನಡೆಯಾಗೋ ಆತಂಕ ಕಾಡ್ತಿದೆ.

ಇನ್ನು ವಿರಾಟ್ ಕೊಹ್ಲಿ ಸೌತ್​ ಆಫ್ರಿಕಾ ಪ್ರವಾಸದಲ್ಲಿ ರೆಡ್​ಬಾಲ್ ಕ್ರಿಕೆಟ್​ ಆಡಿದ್ದ ಕೊಹ್ಲಿ, ಆ ಬಳಿಕ ವೈಟ್​ಬಾಲ್​ ಫಾರ್ಮೆಟ್​ನಲ್ಲಿ ಬ್ಯುಸಿಯಾಗಿದ್ರು. ಅಲ್ಲೂ ಕೂಡ T20 ವಿಶ್ವಕಪ್​ನಲ್ಲಿ ಫೈನಲ್​ ಪಂದ್ಯ ಹೊರತು ಪಡಿಸಿದ್ರೆ, ಉಳಿದ ಪಂದ್ಯಗಳಲ್ಲಿ ಕೊಹ್ಲಿ ಪ್ರದರ್ಶನ ಅಷ್ಟಕ್ಕಷ್ಟೇ ಇತ್ತು. ಕಳೆದ ತಿಂಗಳ ಆರಂಭದಲ್ಲಿ ಲಂಕಾ ವಿರುದ್ಧ ಸಿದ್ಧತೆಯೆ ಇಲ್ಲದೇ ಅಖಾಡಕ್ಕಿಳಿದ ಕೊಹ್ಲಿ, ಮೂರು ಪಂದ್ಯಗಳಲ್ಲಿ ಅಟ್ಟರ್​ ಫ್ಲಾಪ್​ ಶೋ ನೀಡಿದ್ರು. ಆದ್ರೆ ಪದೇ ಪದೇ ರೆಸ್ಟ್​ ಮೊರೆ ಹೊಗ್ತಿರೋದ್ರಿಂದ ಕೊಹ್ಲಿ ಬ್ಯಾಟ್​​ ಹಳೆ ಖದರ್​​ನಲ್ಲಿ ಸದ್ದೇ ಮಾಡ್ತಿಲ್ಲ. 2024ರಲ್ಲಿ 15 ಇನ್ನಿಂಗ್ಸ್​ಗಳಲ್ಲಿ ಬ್ಯಾಟಿಂಗ್​ ನಡೆಸಿರುವ ವಿರಾಟ್​ ಕೊಹ್ಲಿ 296 ರನ್​ಗಳಿಸಿದ್ದಾರೆ. 19.73ರ ಸರಾಸರಿಯಲ್ಲಿ ರನ್​ಗಳಿಸಿರೋ ಕೊಹ್ಲಿ 1 ಬಾರಿ ಮಾತ್ರ ಅರ್ಧಶತಕದ ಗಡಿ ದಾಟಿದ್ದಾರೆ. ಹೀಗಾಗಿ ಪ್ರಾಕ್ಟೀಸ್ ಮಾಡ್ಬೇಕಿತ್ತು ಅನ್ನೋದು ಕೆಲ ಅಭಿಮಾನಿಗಳ ವಾದ. ಆದ್ರೆ ಇನ್ನೂ ಕೆಲ ಫ್ಯಾನ್ಸ್ ಕೊಹ್ಲಿಗೆ ಅಭ್ಯಾಸವೇ ಬೇಡ. ಬಾಂಗ್ಲಾ ವಿರುದ್ಧ ಸಾಲಿಡ್ ಪರ್ಫಾಮೆನ್ಸ್ ಕೊಡ್ತಾರೆ ಅಂತಿದ್ದಾರೆ.

Shwetha M