ಬಿಗ್‌ಬಾಸ್ ಮನೆಯ ಸಿಂಹಿಣಿಗೆ ಸೋಲು – ಕರ್ನಾಟಕದ ಕ್ರಷ್ ಸಂಗೀತಾ ಎಡವಿದ್ದು ಎಲ್ಲಿ?

ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 10 ಗ್ರ್ಯಾಂಡ್ ಫಿನಾಲೆ ಮುಗಿದಿದೆ. 10ನೇ ಸೀನಸ್ನಲ್ಲಿ ಅತೀ ಹೆಚ್ಚು ವೋಟ್ ಪಡೆಯುವ ಮೂಲಕ ಕಾರ್ತಿಕ್ ಮಹೇಶ್ ಟ್ರೋಫಿ ಗೆದ್ದು ಬೀಗಿದ್ದಾರೆ. ಆದ್ರಿಲ್ಲಿ ಕಾರ್ತಿಕ್ ಗೆಲುವಿಗಿಂತ ಸಂಗೀತಾ ಶೃಂಗೇರಿ ಸೋಲು ಭಾರೀ ಚರ್ಚೆಯಾಗ್ತಿದೆ. ಫಿನಾಲೆಗೆ ಎರಡು ವಾರ ಇರುವಾಗ್ಲೇ ಫಿನಾಲೆ ಟಿಕೆಟ್ ಪಡೆದಿದ್ದ ಸಂಗೀತಾರೇ ಈ ಸಲ ಗೆಲ್ಲೋದು. ಮಹಿಳಾ ಸ್ಪರ್ಧಿಗೆ ಚಾನ್ಸ್ ಇದೆ ಅಂತಾನೇ ಹೇಳಲಾಗುತ್ತಿತ್ತು. ಎಲಿಮಿನೇಟ್ ಆಗಿದ್ದ ಸ್ಪರ್ಧಿಗಳು ಕೂಡ ಸಂಗೀತಾನೇ ಗೆಲ್ಲೋದು ಅಂತಾ ಬಲವಾಗಿಯೇ ನಂಬಿದ್ದರು. ಆದರೆ, ಕೊನೇ ಕ್ಷಣಗಳಲ್ಲಿ ಸಂಗೀತಾ ಸೆಕೆಂಡ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.
ಇದನ್ನೂ ಓದಿ:ವ್ಯಕ್ತಿತ್ವದಲ್ಲೇ ಗೆದ್ದ ಕಾರ್ತಿಕ್ – ಎರಡು ವಾರ ಡಲ್ ಆದರೂ ವಿನ್ನರ್ ಪಟ್ಟ ಸಿಕ್ಕಿದ್ದು ಹೇಗೆ?
ಬಿಗ್ ಬಾಸ್ ಸೀಸನ್ 10ರಲ್ಲಿ ಸಂಗೀತಾ ಶೃಂಗೇರಿ ಸ್ಟ್ರಾಂಗ್ ಸ್ಪರ್ಧಿ ಎನ್ನೋದ್ರಲ್ಲಿ ಎರಡು ಮಾತಿಲ್ಲ. ಆರಂಭದಿಂದ ಕೊನೆವರೆಗೂ ಕೂಡ ಸದ್ದು ಮಾಡ್ತಾನೇ ಇದ್ರು. ಎಷ್ಟೇ ಕಿರುಚಾಟ, ಎಂಥದ್ದೇ ಸಂದರ್ಭದಲ್ಲೂ ಧ್ವನಿ ಏರಿಸಿ ಮಾತನಾಡಿದ್ರು. ಟಾಸ್ಕ್ ಅಂತಾ ಬಂದಾಗ ಎಲ್ಲರನ್ನೂ ಎದುರಾಕಿಕೊಂಡು ಗೆದ್ದು ತೋರಿಸ್ತಿದ್ರು. ವಿನಯ್, ಕಾರ್ತಿಕ್ಗೆ ಸರಿಸಮನಾಗಿ ಪೈಪೋಟಿ ಒಡ್ಡುತ್ತಿದ್ರು. ಅವ್ರ ಈ ಡೇರಿಂಗ್ ನೆಸ್ ನೋಡಿಯೇ ಫ್ಯಾನ್ಸ್ ಒಂದು ಬಿರುದು ಕೂಡ ಕೊಟ್ಟಿದ್ರು. ಅದುವೇ ಬಿಗ್ ಬಾಸ್ ಮನೆಯ ಸಿಂಹಿಣಿ ಅಂತಾ. ಹೌದು ಸಂಗೀತಾ ಅಭಿಮಾನಿಗಳು ಅವ್ರನ್ನ ಸಿಂಹಿಣಿ ಅಂತಾನೇ ಕರೀತಿದ್ರು. ಬಿಗ್‌ಬಾಸ್ ಫಿನಾಲೆಯಲ್ಲಿ ಈ ಸಲ ಅವ್ರೇ ಗೆಲ್ಲೋದು ಎನ್ನಲಾಗ್ತಿತ್ತು. ಟಾಪ್ ತ್ರಿಗೆ ಬಂದಾಗ ಸಂಗೀತಾನೇ ವಿನ್ ಅಂತಾನೂ ಅನ್ಕೊಂಡಿದ್ರು. ಸಂಗೀತಾ ಅಂತೂ ನಾನೇ ಗೆಲ್ಲೋದು ಅಂತಾ 100 ಪರ್ಸೆಂಟ್ ಕಾನ್ಫಿಡೆನ್ಸ್ ನಲ್ಲೇ ಇದ್ರು. ಆದ್ರೆ ಟಾಪ್ ತ್ರಿ ಎವಿಕ್ಷನ್ ವೇಳೆ ಕಲರ್ ಕೇಜ್ ನಲ್ಲಿ ಮೂವರನ್ನ ನಿಲ್ಲಿಸಿ ರೆಡ್ ಲೈಟ್ ಅವ್ರ ಮೇಲೆ ಬಿದ್ದಾಗ ಎಲ್ಲರಿಗೂ ಶಾಕ್ ಆಗಿತ್ತು.
ಬಿಗ್‌ಬಾಸ್ ಮನೆಯಲ್ಲಿ ಸಂಗೀತಾ ನಿಜಕ್ಕೂ ಗಟ್ಟಿಗಿತ್ತಿ. ಏಟಿಗೆ ಎದಿರೇಟು ನೀಡುವುದು, ಧ್ವನಿ ಏರಿಸಿ ಸವಾಲು ಹಾಕುವುದರಲ್ಲಿ ಸದಾ ಮುಂದೆ ಇರುತ್ತಿದ್ದರು. ಕೆಲವೊಮ್ಮೆ ಮಾನಸಿಕವಾಗಿ ಕುಗ್ಗಿದ್ದರೂ ಮತ್ತೆ ಪುಟಿದೇಳುತ್ತಿದ್ದರು. ದೈಹಿಕವಾಗಿ ಆಗಲಿ, ಮಾನಸಿಕವಾಗಿ ಆಗಲಿ ತಮ್ಮನ್ನ ತಾವು ವೀಕ್ ಅಂತ ಯಾವತ್ತೂ ತೋರಿಸಿಕೊಂಡಿರಲಿಲ್ಲ. ಅದ್ರಲ್ಲೂ ವಿನಯ್ ಜೊತೆಗಿನ ಜಗಳದಿಂದಲೇ ಸಂಗೀತಾ ಹೆಚ್ಚು ಸದ್ದು ಮಾಡಿದ್ದರು. ಬಳೆ ವಿವಾದವಂತೂ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಟಾಸ್ಕ್ ಮುಗಿದ ಮೇಲೆ ನೋಡು ಕೈಗೆ ಬಳೆ ಹಾಕಿಕೊಂಡಿದ್ದೇನೆ ಅಂತಾ ಕೈ ಎತ್ತಿ ತೋರಿಸಿದ್ದರು. ಬಳೆಗೆ ಕಿಚ್ಚನ ಚಪ್ಪಾಳೆಯೂ ಸಿಕ್ಕಿತ್ತು. ಅದಾದ ನಂತರ ಪ್ರತಿಬಾರಿಯೂ ಕೈಯಲ್ಲಿ ಬಳೆ ಧರಿಸಿಕೊಂಡೇ ಗಮನ ಸೆಳೆದಿದ್ದರು.
ಆರಂಭದಲ್ಲಿ ಕಾರ್ತಿಕ್ ಜೊತೆ ಸಂಗೀತಾ ಬಾಂಡಿಂಗ್ ಚೆನ್ನಾಗಿತ್ತು. ಆದ್ರೆ, ಬರ್ತಾ ಬರ್ತಾ ಇಬ್ಬರ ಮಧ್ಯೆ ಮನಸ್ತಾಪ, ಭಿನ್ನಾಭಿಪ್ರಾಯಗಳು ಹೆಚ್ಚಾದವು. ಕಾರ್ತಿಕ್, ತನಿಷಾ ಹಾಗೂ ಸಂಗೀತಾ ನಡುವಿನ ಫ್ರೆಂಡ್‌ಶಿಪ್ ಬ್ರೇಕ್ ಆಯ್ತು. ಬೆಸ್ಟ್ ಫ್ರೆಂಡ್ ಥರ ಇದ್ದ ಮೂವರು ಬಳಿಕ ಮಾತಿನಲ್ಲೇ ಟಾಂಟ್ ಕೊಟ್ಟುಕೊಳ್ತಿದ್ರು. ಇದು ಕೂಡ ಸಂಗೀತಾ ಹಿನ್ನಡೆಗೆ ಕಾರಣವಾಯ್ತು. ಅಲ್ದೇ ಪದೇ ಪದೇ ಜಗಳ ಮಾಡೋದು ಮೇನ್ ರೀಸನ್. ವಿನಯ್, ಕಾರ್ತಿಕ್ ಹಾಗೂ ತನಿಷಾ ಜೊತೆ ನಾಮಿನೇಷನ್, ಟಾಸ್ಕ್ ವಿಚಾರಗಳಲ್ಲಿ ಜಗಳ ಮಾಡಿಕೊಂಡ್ರು. ಅಲ್ಲಿಗೆ ಮೂವರ ಫ್ರೆಂಡ್‌ಶಿಪ್ ಬ್ರೇಕ್ ಆಗಿತ್ತು. ಸಂಗೀತಾಗೆ ದೊಡ್ಡ ಹಿನ್ನಡೆಯಾಗಿದ್ದು ಕಾರ್ತಿಕ್ ಜೊತೆಗಿನ ಜಗಳ. ಆರಂಭದಿಂದ ಕಾರ್ತಿಕ್ ಸಂಗೀತಾ ಬೆನ್ನಿಗೆ ನಿಂತಿದ್ರು. ಟಾಸ್ಕ್ ಇರಲಿ, ವೈಯಕ್ತಿಕವಾಗಿ ವಿಚಾರವಾಗಿ ಸಂಗೀತಾ ಪದೇಪದೇ ಟಾಂಟ್ ಮಾಡಿ ಮಾತನಾಡ್ತಿದ್ರು. ಇದು ಜನರ ಕಣ್ಣಿಗೆ ಒಂದು ಥರ ನೆಗೆಟಿವ್ ಆಗಿ ಕಾಣಿಸ್ತಿತ್ತು. ಕಾರ್ತಿಕ್ನ ಬಳಸಿಕೊಂಡು ಸಂಗೀತಾ ಮೇಲೆ ಬಂದ್ರು. ಈಗ ಅವ್ರನ್ನೇ ತುಳೀತಿದ್ದಾರೆ ಅನ್ನೋ ಅಭಿಪ್ರಾಯ ವ್ಯಕ್ತವಾಯ್ತು. ಹಾಗೇ ತನಿಷಾ ಜೊತೆಯೂ ಇದ್ದ ಬಾಂಡಿಂಗ್ ಕಟ್ ಆಯ್ತು. ಹೀಗಾಗಿ ಬಿಗ್ ಬಾಸ್ ಮನೆಯ ಒಳಗೆ ಹಾಗೂ ಹೊರಗೆ ಅವಕಾಶವಾದಿ ಅಂತಾ ಕರೆಯೋಕೆ ಶುರು ಮಾಡಿದ್ರು.
ಹಾಗೇ ಫಿನಾಲೆ ಟಿಕೆಟ್ ಸಿಕ್ಕ ಮೇಲೆ ಅವ್ರ ಆಟಿಟ್ಯೂಡ್ ಜಾಸ್ತಿ ಆಗಿದೆ ಅಂತಾ ಸ್ಪರ್ಧಿಗಳೇ ಹೇಳ್ತಿದ್ರು. ಯಾರಾದ್ರೂ ಪ್ರಶ್ನೆ ಮಾಡಿದ್ರೆ ಏನು, ಹೌದು, ನಾನಿರೋದೇ ಹೀಗೇ ಅಂತಾ ಟಾಂಟ್ ಕೊಡ್ತಿದ್ರು. ಇದು ಕೂಡ ಅವ್ರ ಪಾಪ್ಯುಲಾರಿಟಿಯನ್ನ ಕಡಿಮೆ ಮಾಡ್ತು. ಆದ್ರೆ ಕೊನೆ ಕೊನೆಗೆ ಸಂಗೀತಾ ಸೋತ್ರು ಅನ್ನೋದಕ್ಕಿಂತ ಕಾರ್ತಿಕ್ ಗೆದ್ರು ಅಂತಾ ಹೇಳ್ಬೋದು. ಯಾಕಂದ್ರೆ ಕಾರ್ತಿಕ್ ಮೊದ್ಲಿಂದ ಒಂದೇ ಥರ ಇದ್ರು. ಲಾಸ್ಟ್ ಎರಡು ವಾರ ಡಲ್ ಅನ್ನಿಸಿದ್ರೂ ಕಾರ್ತಿಕ್ ಬ್ಯಾಕ್ಗ್ರೌಂಡ್ ಜನರಿಗೆ ಪ್ರೀತಿ ಹೆಚ್ಚಿಸಿತ್ತು. ಅದ್ರಲ್ಲೂ ಅವ್ರ ತಂಗಿ ವಿಡಿಯೋ ಬಂದಾಗಂತೂ ವೀಕ್ಷಕರ ಕಣ್ಣಲ್ಲೂ ನೀರು ಬರುವಂತೆ ಮಾಡಿತ್ತು. ಕಾರ್ತಿಕ್ ತಂಗಿ ನೋಡಿದ್ರೇನೆ ಗೊತ್ತಾಗುತ್ತೆ. ಅವ್ರದ್ದು ಮಿಡಲ್ ಕ್ಲಾಸ್ ಫ್ಲ್ಯಾಮಿಲಿ, ಬಡವರ ಮಕ್ಕಳು ಬೆಳೀಬೇಕು ಕಣ್ರಯ್ಯಾ ಅನ್ನೋ ಟ್ರೆಂಡ್ ಶುರು ವಾಗಿತ್ತು. ಹೀಗಾಗಿ ಹೆಚ್ಚಿಗೆ ವೋಟ್ಗಳು ಬಂದ್ವು. ಇನ್ನು ಪ್ರತಾಪ್ಗೆ ಒಂದು ಚಾನ್ಸ್ ಕೊಡೋಣ ಅಂತಾ ಜನ ಹೆಚ್ಚೆಚ್ಚು ಪ್ರೀತಿಸೋಕೆ ಶುರು ಮಾಡಿದ್ರು. ಇದೇ ಕಾರಣಕ್ಕೆ ಸಂಗೀತಾಗೆ ವೋಟ್ಸ್ ಸ್ವಲ್ಪ ಕಡಿಮೆ ಆಯ್ತು. ಒಟ್ಟಾರೆ ‘ಅಸಮರ್ಥರು’ ಎಂಬ ಹಣೆಪಟ್ಟಿಯೊಂದಿಗೆ ‘ಬಿಗ್ ಬಾಸ್’ ಮನೆಯೊಳಗೆ ಕಾಲಿಟ್ಟ ಸಂಗೀತಾ ಶೃಂಗೇರಿ ಈಗ ಸೆಕೆಂಡ್ ರನ್ನರ್ ಅಪ್ ಆಗಿದ್ದಾರೆ. ಕರ್ನಾಟಕದ ಕ್ರಷ್ ಆಗಿದ್ದಾರೆ.