ಹಾಸನದ ಹೊಳೆನರಸೀಪುರದಲ್ಲೂ ಇಲ್ಲ, ಇತ್ತ ಮೈಸೂರಲ್ಲೂ ಇಲ್ಲ! – ಭವಾನಿ ರೇವಣ್ಣ ಎಲ್ಲಿದ್ದಾ?
ಪ್ರಜ್ವಲ್ ಅರೆಸ್ಟ್ ಬೆನ್ನಲ್ಲೇ SIT ಅಧಿಕಾರಿಗಳು ಭವಾನಿ ರೇವಣ್ಣಗೂ ಬಿಗ್ ಶಾಕ್ ಕೊಟ್ಟಿದ್ದಾರೆ. ಮಹಿಳೆಯ ಕಿಡ್ನಾಪ್ ಕೇಸ್ ಸಂಬಂಧ ನಾಳೆ ಭವಾನಿ ರೇವಣ್ಣ ಅವರನ್ನು ವಿಚಾರಣೆ ನಡೆಸಲು SIT ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಭವಾನಿ ರೇವಣ್ಣಗೆ ಮತ್ತೊಂದು ನೋಟಿಸ್ ಜಾರಿ ಮಾಡಲಾಗಿದೆ.
ಇದನ್ನೂ ಓದಿ: ವಿಶ್ವಕಪ್‌ಗೆ ಪ್ಲಾಫ್ ಶೋಗಾರರು ಬೇಕಾ? – IPLನಲ್ಲಿ ಫೇಲ್.. ವರ್ಲ್ಡ್ ಕಪ್ ಕತೆಯೇನು?
ಕಳೆದ ಕೆಲವು ದಿನಗಳ ಹಿಂದೆ ಎಸ್‌ಐಟಿಗೆ ಪತ್ರ ಬರೆದಿದ್ದ ಭವಾನಿ ರೇವಣ್ಣ, ಅವಶ್ಯವಿದ್ದರೆ ತನಿಖೆಗೆ ತಮ್ಮ ಚೆನ್ನಾಂಬಿಕಾ ಮನೆಯಲ್ಲಿ ಲಭ್ಯವಿರುವುದಾಗಿ ತಿಳಿಸಿದ್ದರು. ಆದ್ರೆ ಈಗ ಭವಾನಿ ರೇವಣ್ಣ ಅವರು ಎಲ್ಲಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿಲ್ಲ. ಅತ್ತ ಹಾಸನದಲ್ಲೂ ಇಲ್ಲ, ಇತ್ತ ಮೈಸೂರಲ್ಲೂ ಇಲ್ಲ. ಕೆ.ಆರ್ ನಗರ ಮಹಿಳೆ ಕಿಡ್ನಾಪ್ ಪ್ರಕರಣ ಬೆಳಕಿಗೆ ಬಂದ ಬಳಿಕ ಹೊಳೆನರಸೀಪುರದಲ್ಲಿ ಇಲ್ಲ ಎನ್ನಲಾಗಿದೆ.ಇನ್ನು ಭವಾನಿ ರೇವಣ್ಣ ಅವರ ತವರು ಮನೆ ಮೈಸೂರು ಜಿಲ್ಲೆ ಕೆ.ಆರ್ ನಗರದ ಸಾಲಿಗ್ರಾಮದಲ್ಲಿದೆ. ಇದೀಗ ಈ ಮನೆಗೂ ಬೀಗ ಹಾಕಲಾಗಿದೆ. ಕಳೆದ ಒಂದು ವಾರದಿಂದ ಈ ಮನೆ ಖಾಲಿಯಾಗಿದೆ. ಒಂದು ವಾರಕ್ಕೆ ಮುಂಚೆ ಸಾಲಿಗ್ರಾಮಕ್ಕೆ ಬಂದಿದ್ದ ಭವಾನಿ ರೇವಣ್ಣ ಅವರು ಬಂಧನದ ಭೀತಿಯಿಂದ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
ಹಾಸನ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಪ್ರಜ್ವಲ್ ರೇವಣ್ಣ ಅವರನ್ನು ಎಸ್‌ಐಟಿ ತಂಡ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದೆ. ಈ ಸಂದರ್ಭದಲ್ಲಿ ಪ್ರಾಥಮಿಕವಾಗಿ ದೇಹದ ತೂಕ, ಬಣ್ಣ, ಮಧುಮೇಹ, ಬಿಪಿ, ರಕ್ತದ ಮಾದರಿ ಪರೀಕ್ಷೆಗೆ ಪ್ರಜ್ವಲ್ ರೇವಣ್ಣ ಒಳಪಡಿಸಲಾಗಿದೆ. ಇದು ಬಂಧನ ಸಂದರ್ಭದಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆಯಾಗಿದೆ. ಮೆಡಿಕಲ್ ಟೆಸ್ಟ್ ಬಳಿಕ ಪ್ರಜ್ಬಲ್ ರೇವಣ್ಣನನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದೆ.