ಟಿ-20 ಸೀರಿಸ್‌ನಲ್ಲಿ ಬೌಲಿಂಗ್ ವಿಭಾಗದಲ್ಲಿ ವೈಫಲ್ಯ – ಟೀಮ್ ಇಂಡಿಯಾದ ಬೌಲರ್‌ಗಳು ಎಡವುತ್ತಿರುವುದು ಎಲ್ಲಿ?

ಮೊದಲೆರೆಡು ಪಂದ್ಯಗಳನ್ನು ಗೆದ್ದ ಟೀಮ್ ಇಂಡಿಯಾ ಮೂರನೇ ಪಂದ್ಯ ಗೆದ್ದಿದ್ದರೆ ಆರಾಮಾಗಿ ಸೀರಿಸ್ ವಿನ್ ಆಗಬಹುದಿತ್ತು, ಆದ್ರೆ ಗ್ಲೇನ್ ಮ್ಯಾಕ್ಸ್ವೆಲ್ ಅದಕ್ಕೆ ಅವಕಾಶವೇ ಕೊಡಲಿಲ್ಲ. ನಮ್ಮ ಬೌಲರ್ಸ್ಗಳು ಆಸ್ಟ್ರೇಲಿಯಾವನ್ನ ಗೆಲ್ಲಿಸಿಕೋಡೋಕೆ ಮ್ಯಾಕ್ಸ್ವೆಲ್ಗೆ ಹೆಲ್ಪ್ ಮಾಡಿದರು ಅಂತಾನೂ ಹೇಳಬಹುದು. ಯಾಕೆಂದರೆ, ವರ್ಲ್ಡ್ಕಪ್ನಲ್ಲಿ ಟೀಂ ಇಂಡಿಯಾಗೆ ಬೌಲಿಂಗೇ ದೊಡ್ಡ ಸ್ಟ್ರೆಂತ್ ಆಗಿತ್ತು. ಬೌಲರ್ಸ್ಗಳೇ ಹೀರೋಗಳಾಗಿದ್ರು. ಆದ್ರೀಗ ಟಿ-20 ಸೀರಿಸ್‌ನಲ್ಲಿ ಎಲ್ಲವೂ ಉಲ್ಟಾ. ಬೌಲರ್ಸ್ಗಳು ವಿಲನ್ಗಳಾಗುತ್ತಿದ್ದಾರೆ.
ಇದನ್ನೂ ಓದಿ: ಗುಜರಾತ್ ಟೈಟಾನ್ಸ್ ಕ್ಯಾಪ್ಟನ್ ಆಗಿ ಶುಬ್ಮನ್ ಗಿಲ್ – ನಾಯಕತ್ವದ ಹೊಣೆ ನೀಡಿದ ಫ್ರಾಂಚೈಸಿಗೆ ಧನ್ಯವಾದ ತಿಳಿಸಿದ ಗಿಲ್
ಟಿ-20 ಸೀರಿಸ್‌ನಲ್ಲಿ ಟೀಂ ಇಂಡಿಯಾದ ಬೌಲಿಂಗ್ ನೋಡೋವಾಗ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರಿತ್ ಬುಮ್ರಾ ತುಂಬಾ ನೆನಪಾಗುತ್ತಾರೆ. ಅವರ ವ್ಯಾಲ್ಯೂ ಏನು ಅನ್ನೋದು ಇನ್ನಷ್ಟು ಅರ್ಥವಾಗುತ್ತೆ. ಮುಂದಿನ ವರ್ಷ ಟಿ-20 ವರ್ಲ್ಡ್ಕಪ್ ನಡೆಯಲಿದೆ. ಅಲ್ಲಿ ಶಮಿ, ಬಮ್ರಾ ಮತ್ತು ಸಿರಾಜ್ ಇಲ್ಲದೇ ಇದ್ರೆ ನಮ್ಮ ಕಥೆ ಏನಾಗಬಹುದು ಅನ್ನೋದನ್ನ ಈಗಲೇ ಊಹಿಸ್ಕೊಳ್ಳಬಹುದು. ಎಕ್ಸ್ಪೀರಿಯನ್ಸ್ ಮ್ಯಾಟರ್ಸ್.. ಆಸ್ಟ್ರೇಲಿಯಾ ಬ್ಯಾಟ್ಸ್ಮನ್ಗಳಿಗಿಂತ ಸರಿಯಾಗಿ ಹೊಡೆತ ತಿಂತಿರೋ ಪ್ರಸಿಧ್ ಕೃಷ್ಣ, ಅರ್ಶ್ದೀಪ್ ಸಿಂಗ್ ತುಂಬಾ ಟ್ಯಾಲೆಂಟೆಡ್ ಬೌಲರ್ಸ್ಗಳೇ. ಅವರ ಸಾಮರ್ಥ್ಯದ ಬಗ್ಗೆ ಎರಡು ಮಾತಿಲ್ಲ. ಆದ್ರೆ ಇಬ್ಬರೂ ಬೌಲರ್ಸ್ಗಳು ಪ್ರೆಷರ್ ಟೈಮ್ನಲ್ಲಿ ಎಕ್ಸಿಕ್ಯೂಟ್ ಮಾಡುವಲ್ಲಿ ಫೇಲ್ ಆಗಿದ್ದಾರೆ. ಸ್ಮಾರ್ಟ್ ಆಗಿ ಬೌಲಿಂಗ್ ಮಾಡುವಲ್ಲಿ ಫೇಲ್ ಆಗಿದ್ದಾರೆ. ಕೊನೆಯ ಓವರ್ನಲ್ಲಿ 21 ಆಸ್ಟ್ರೇಲಿಯಾಗೆ ಗೆಲ್ಲೋಕೆ 21 ರನ್ಗಳು ಬೇಕಾಗಿತ್ತು. ಪ್ರಸಿಧ್ ಕೃಷ್ಣ ಕೈಯಲ್ಲಿ ಬಾಲ್ ಇತ್ತು. ಆದ್ರೂ ಕೂಡ ಆ ಆರು ಬಾಲ್ಗಳಲ್ಲಿ ಗ್ಲೇನ್ ಮ್ಯಾಕ್ಸ್ವೆಲ್ ತಡೆಯೋಕೆ ಸಾಧ್ಯವೇ ಆಗಿಲ್ಲ. ಕೊನೆಯ ಮೂಮೆಂಟ್ನಲ್ಲಿ ಕೂಡ ಶಾಟ್ ಪಿಚ್ ಬಾಲ್ಗಳನ್ನೇ ಹಾಕಿದ್ರು. ಆ್ಯಕ್ಚುವಲಿ ಅರ್ಶ್ದೀಪ್ ಸಿಂಗ್ ಮತ್ತು ಪ್ರಸಿಧ್ ಕೃಷ್ಣ ಇಬ್ಬರೂ ಅತ್ಯುತ್ತಮವಾಗಿ ಯಾರ್ಕರ್ ಎಸೀತಾರೆ. ಅದ್ರಲ್ಲಿ ಅರ್ಶ್ದೀಪ್ ಸಿಂಗ್ ಅಂತೂ ಎಂಥಾ ಬ್ಯಾಟ್ಸ್ಮನ್ಗೂ ಸಾಧ್ಯವಾಗದಂತಾ ಯಾರ್ಕರ್ಗಳನ್ನ ಎಸೀತಾರೆ. 3ನೇ ಟಿ-20 ಮ್ಯಾಚ್ನಲ್ಲಿ ಅರ್ಶ್ದೀಪ್ ಆಗಲಿ, ಪ್ರಸಿಧ್ ಕೃಷ್ಣ ಆಗಲಿ ಎಫೆಕ್ಟಿವ್ ಆಗಿ ಒಂದೇ ಒಂದು ಯಾರ್ಕರ್ಗಳನ್ನ ಎಸೆಯೋಕೆ ಸಾಧ್ಯವಾಗಿಲ್ಲ. ಅದಕ್ಕೆ ಮತ್ತೊಂದು ಕಾರಣ ಗ್ಲೇನ್ ಮ್ಯಾಕ್ಸ್ವೆಲ್ ಅಂತಾನೆ ಹೇಳಬಹುದು. ಯಾವ ರೀತಿ ಬಾಲ್ ಹಾಕಿದ್ರೂ ಮ್ಯಾಕ್ಸ್ವೆಲ್ ಅದನ್ನ ಬೌಂಡರಿಯಾಚೆಗೆ ಕಳುಹಿಸ್ತಿದ್ರು. ಇದ್ರಿಂದಾಗಿ ಪ್ರಸಿಧ್ ಕೃಷ್ಣ ಮತ್ತು ಅರ್ಶ್ದೀಪ್ ಸಿಂಗ್ ಯಾರ್ಕರ್ ಹಾಕೋಕೂ ಹಿಂದೆ ಮುಂದೆ ನೋಡಿದಂತೆ ಕಾಣ್ತಿತ್ತು. ಅದ್ರಲ್ಲೂ ಪ್ರಸಿಧ್ ಕೃಷ್ಣ ಈ ರೀತಿ ಬೌಲ್ ಮಾಡ್ತಾರೆ ಅಂತಾ ಯಾರು ಕೂಡ ಅಂದುಕೊಂಡಿರಲಿಲ್ಲ. ನಿಮಗೆ ಗೊತ್ತಿರುತ್ತೆ, ವರ್ಲ್ಡ್ಕಪ್ ವೇಳೆ ಹಾರ್ದಿಕ್ ಪಾಂಡ್ಯಾ ಇಂಜ್ಯೂರಿಗೊಳಗಾದಾಗ ಇದೇ ಪ್ರಸಿಧ್ ಕೃಷ್ಣ ಪಾಂಡ್ಯಾ ಸ್ಥಾನವನ್ನ ರಿಪ್ಲೇಸ್ ಮಾಡಿದ್ರು. ವರ್ಲ್ಡ್ಕಪ್ನಲ್ಲಿ ಯಾವುದೇ ಮ್ಯಾಚ್ನಲ್ಲಿ ಆಡೋಕೆ ಚಾನ್ಸ್ ಸಿಕ್ಕಿರಲಿಲ್ಲ ಅನ್ನೋದು ಬೇರೆ ಪ್ರಶ್ನೆ. ಆದ್ರೆ, ಒಬ್ಬ ಟಾಪ್ ಕ್ಲಾಸ್ ಕ್ವಾಲಿಟಿ ಬೌಲರ್ ಅನ್ನೋ ಕಾರಣಕ್ಕೆ ಪ್ರಸಿಧ್ರನ್ನ ಸೆಲೆಕ್ಟ್ ಮಾಡಲಾಗಿತ್ತು. ಆದ್ರೀಗ ಟಿ-20 ಸೀರಿಸ್‌ನಲ್ಲಿ ಆಸ್ಟ್ರೇಲಿಯಾ ಬ್ಯಾಟ್ಸ್ಮನ್ಗಳು ಪ್ರಸಿಧ್ ಬಾಲ್ಗೆ ಹಬ್ಬ ಮಾಡ್ತಾ ಇದ್ದಾರೆ. 3ನೇ ಟಿ-20 ಮ್ಯಾಚ್ನಲ್ಲಂತೂ ಪ್ರಸಿಧ್ ಕೃಷ್ಣ ಎಸೆದ 4 ಓವರ್ಗಳಲ್ಲಿ ಬರೋಬ್ಬರಿ 68 ರನ್ ಕೊಟ್ಟಿದ್ದಾರೆ. ಒಂದೇ ಒಂದು ವಿಕೆಟ್ ಕೂಡ ಪಡೆದಿಲ್ಲ. ಪ್ರಸಿಧ್ ಕೃಷ್ಣ ಕೂಟ ಟಿ-20ಯಲ್ಲಿ ಹೈಯೆಸ್ಟ್ ಸ್ಕೋರಿಂಗ್ ಭಾರತೀಯರಾಗಿದ್ದಾರೆ. ಆದ್ರೆ ಬ್ಯಾಟಿಂಗ್ನಿಂದ ಅಲ್ಲ.. ಬೌಲಿಂಗ್ನಿಂದ. ಟಿ-20 ಇತಿಹಾಸದಲ್ಲಿ ಟೀಂ ಇಂಡಿಯಾದ ಪರ ಅತೀ ಹೆಚ್ಚು ರನ್ ಕೊಟ್ಟ ಬೌಲರ್ ಅನ್ನೋ ಬ್ಲ್ಯಾಕ್ ಮಾರ್ಕ್ ಈಗ ಪ್ರಸಿಧ್ ಕೃಷ್ಣಗೆ ಅಂಟಿಕೊಂಡಿದೆ. ಟೀಂ ಇಂಡಿಯಾದ ಇನ್ಯಾವುದೇ ಬೌಲರ್ ಟಿ-20ಯಲ್ಲಿ ನಾಲ್ಕು ಓವರ್ಗಳಲ್ಲಿ 68 ರನ್ ಕೊಟ್ಟಿಲ್ಲ. ಪ್ರಸಿಧ್ ಕೃಷ್ಣರಂಥಾ ಒಬ್ಬ ಕ್ವಾಲಿಟಿ ಬೌಲರ್ ಈ ರೀತಿ ರನ್ ಬಿಟ್ಟುಕೊಟ್ರೆ ಇನ್ನು ಉಳಿದವರ ಕಥೆ ಏನು. ಆಯ್ತು ರನ್ ಹೋಗ್ಲಿ..ಅಟ್ಲೀಸ್ಟ್ ವಿಕೆಟ್ ಆದ್ರೂ ತೆಗೆದ್ರಾ..ಅದೂ ಇಲ್ಲ.. ಅವರ ಬೌಲಿಂಗ್ ಎಷ್ಟು ಪೂವರ್ ಆಗಿತ್ತು ಅನ್ನೋದಕ್ಕೆ ಇದೇ ಸಾಕ್ಷಿ.
ಇನ್ನು ಆಸ್ಟ್ರೇಲಿಯಾ ವಿರುದ್ಧದ 3ನೇ ಟಿ-20 ಮ್ಯಾಚ್ನಲ್ಲಿ ನಮ್ಮ ಬೌಲರ್ಸ್ಗಳು ಒಟ್ಟು 15 ರನ್ ಎಕ್ಸ್ಟ್ರಾ ಕೊಟ್ಟಿದ್ದಾರೆ. ವೈಡ್, ನೋಬಾಲ್ ಸೇರಿದಂತೆ 15 ರನ್ಗಳು ಹಾಗೆ ಸುಮ್ನೆ ಆಸ್ಟ್ರೇಲಿಯಾಗೆ ದಾನ ಮಾಡಿದ್ದಾರೆ. ಟಿ-20 ಮ್ಯಾಚ್ ಅಂದ್ಮೇಲೆ ಒಂದೊಂದು ರನ್ ಕೂಡ ಇಂಪಾರ್ಟೆಂಟ್ ಆಗುತ್ತೆ. ಹೀಗಿರೋವಾಗ 15 ರನ್ ಎಕ್ಸ್ಟ್ರಾ ಕೊಟ್ಟಿರೋದು ಕೂಡ ಸೋಲಿಗೆ ಪ್ರಮುಖ ಕಾರಣ ಅನ್ನೋದ್ರಲ್ಲಿ ಡೌಟೇ ಇಲ್ಲ. ಓವರ್ಆಲ್ ಆಗಿ ನಮ್ಮ ಬೌಲಿಂಗ್ ಎಷ್ಟು ವೀಕ್ ಆಗಿತ್ತು ಅನ್ನೋದು ಬೌಲರ್ಸ್ಗಳು ನೀಡಿರೋ ಎಕ್ಸ್ಟ್ರಾ ರನ್ಗಳಲ್ಲೇ ಗೊತ್ತಾಗುತ್ತೆ.
ಇನ್ನು ಆಸ್ಟ್ರೇಲಿಯಾದ ದೈತ್ಯ ಗ್ಲೇನ್ ಮ್ಯಾಕ್ಸ್ವೆಲ್ ಬಗ್ಗೆಯಂತೂ ಹೇಳಲೇಬೇಕು. ಒಂದಂತೂ ನಿಜ.. ಆಸ್ಟ್ರೇಲಿಯಾದ ಎಷ್ಟೇ ವಿಕೆಟ್ಗಳು ಹೋಗಿರಲಿ, ಗ್ಲೇನ್ ಮ್ಯಾಕ್ಸ್ವೆಲ್ ಕ್ರೀಸ್ನಲ್ಲಿರೋವರೆಗೂ ರಿಸಲ್ಟ್ ಬಗ್ಗೆ ಏನನ್ನೂ ಹೇಳೋಕೆ ಸಾಧ್ಯವಿಲ್ಲ. ಮ್ಯಾಕ್ಸ್ವೆಲ್ರನ್ನ ಔಟ್ ಮಾಡೋವರೆಗೂ ಬೌಲಿಂಗ್ ಟೀಂ ರಿಲ್ಯಾಕ್ಸ್ ಆಗೋಕೆ ಸಾಧ್ಯವೇ ಇಲ್ಲ. ಎಂಥಾ ಮ್ಯಾಚ್ನ್ನ ಬೇಕಾದ್ರೂ ಮ್ಯಾಕ್ಸ್ವೆಲ್ ಟರ್ನ್ ಮಾಡಿ ಬಿಡ್ತಾರೆ. ಮ್ಯಾಚ್ ವಿನ್ ಮಾಡಿಸಿಕೊಡುವಂಥಾ ಸ್ಪೆಷಲ್ ಎಬಿಲಿಟಿ ಮ್ಯಾಕ್ಸ್ವೆಲ್ಗೆ ಇದೆ. ವರ್ಲ್ಡ್ ಕ್ರಿಕೆಟ್ ಇಂಥಾ ಸಾಮರ್ಥ್ಯವಿರೋ ಕೆಲವೇ ಕೆಲ ಆಟಗಾರರನ್ನ ಕಂಡಿದೆಯಷ್ಟೇ. ಅದ್ರಲ್ಲೂ ಮ್ಯಾಕ್ಸ್ವೆಲ್ರಂಥಾ ಬ್ಯಾಟ್ಸ್ಮನ್ ಈಗ ಯಾರೂ ಕೂಡ ಇಲ್ಲ. ಕೇವಲ 48 ಬಾಲ್ಗಳಲ್ಲಿ 104 ರನ್ ಚಚ್ಚಿದ್ರು. 8 ಬೌಂಡರಿ, 8 ಸಿಕ್ಸರ್ಗಳನ್ನ ಹೊಡೆದಿದ್ದಾರೆ. ಎಷ್ಟೇ ಪ್ರೆಷರ್ ಇದ್ರೂ ಗ್ಲೇನ್ ಮ್ಯಾಕ್ಸ್ವೆಲ್ ಕೂಲ್ ಆಗಿಯೇ ತಮ್ಮ ನ್ಯಾಚ್ಯುರಲ್ ಸ್ಟೈಲ್ನಲ್ಲಿ ಬ್ಯಾಟಿಂಗ್ ಮಾಡ್ತಾರೆ. ಕೊನೆಯ ಓವರ್ನಲ್ಲಿ 21 ರನ್ಗಳು ಬೇಕಿದ್ರು ಕೂಡ ಮ್ಯಾಕ್ಸ್ವೆಲ್ ಮುಖದಲ್ಲಿ ಸ್ವಲ್ಪವೂ ಟೆನ್ಷನ್ ಇರಲಿಲ್ಲ. ಲಾಸ್ಟ್ 2 ಬಾಲ್ಗಳಲ್ಲಿ 6 ರನ್ಗಳು ಬೇಕಾಗಿತ್ತು. ಈ ವೇಳೆ, ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಭಾರಿ ಪ್ಲ್ಯಾನಿಂಗ್ ಮಾಡ್ತಾ ಇದ್ರು. ಇದನ್ನ ನೋಡಿ ಗ್ಲೇನ್ ಮ್ಯಾಕ್ಸ್ವೆಲ್ ಅಕ್ಷರಶ: ನಗ್ತಾ ಇದ್ರು. ನಾವು ವರ್ಲ್ಡ್ಕಪ್ನಲ್ಲಿ ಆಡಿ, ಗೆದ್ದು ಬಂದವರು ಇವರೆಲ್ಲಾ ಯಾವ ಲೆಕ್ಕ ಅನ್ನೋ ರೀತಿಯಲ್ಲೇ ನಮ್ಮ ಬೌಲರ್ಸ್ಗಳು ಮ್ಯಾಕ್ಸ್ವೆಲ್ ಟ್ರೀಟ್ ಮಾಡಿದ್ರು. ಮ್ಯಾಕ್ಸ್ವೆಲ್ ಪಾಲಿಗೆ ಇದು ಇನ್ನೊಂದು ನಾರ್ಮಲ್ ಮ್ಯಾಚ್ ಆಗಿತ್ತಷ್ಟೇ. ಜಸ್ಟ್ ಎನಾದರ್ ಗೇಮ್..ಈ ಮೆಂಟಾಲಿಟಿಯಿಂದಾಗಿಯೇ ಮ್ಯಾಕ್ಸ್ವೆಲ್ಗೆ ಇಂಥಾ ಇನ್ನಿಂಗ್ಸ್ಗಳನ್ನ ಆಡೋಕೆ ಸಾಧ್ಯವಾಗ್ತಾ ಇರೋದು. ಇಂಪಾಸಿಬಲ್ ಅನ್ನೋ ವರ್ಡೇ ಮ್ಯಾಕ್ಸ್ವೆಲ್ ಡಿಕ್ಷನರಿಯಲ್ಲೇ ಇಲ್ಲ. ಇನ್ನು ಮ್ಯಾಚ್ ಸೋತ ಬಳಿಕ ಮ್ಯಾಕ್ಸ್ವೆಲ್ ಕುರಿತಾಗಿ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಕೂಡ ಒಂದು ವಿಚಾರವನ್ನ ಬಹಿರಂಗ ಪಡಿಸಿದ್ದಾರೆ. ಬೌಲಿಂಗ್ಗೆ ಇಳಿಯೋ ಮುನ್ನ ಕೊನೆಯ ಕ್ಷಣದ ಟೀಂ ಮೀಟಿಂಗ್ನಲ್ಲಿ ಗ್ಲೇನ್ ಮ್ಯಾಕ್ಸ್ವೆಲ್ ಔಟ್ ಮಾಡೋದನ್ನೇ ಮೇನ್ ಟಾರ್ಗೆಟ್ ಆಗಿ ಇಟ್ಟುಕೊಂಡಿದ್ರಂತೆ. ಮ್ಯಾಕ್ಸ್ವೆಲ್ರನ್ನ ಆದಷ್ಟು ಬೇಗ ಔಟ್ ಮಾಡಬೇಕು ಅಂತಾ ಎಲ್ಲಾ ಬೌಲರ್ಸ್ಗಳಿಗೂ ಹೇಳಿದ್ರಂತೆ. ಆದ್ರೆ ಇಷ್ಟೆಲ್ಲಾ ಪ್ಲ್ಯಾನ್ ಮಾಡಿದ್ರೂ ಮ್ಯಾಕ್ಸ್ವೆಲ್ಲ ಎಲ್ಲಾ ಅಡಿಮೇಲು ಮಾಡಿದ್ದಾರೆ ಅಂದ್ರೆ ಊಹಿಸ್ಕೊಳ್ಳಿ. ಕೆಲವೊಮ್ಮೆ ಹಾಗೆಯೇ ಮ್ಯಾಕ್ಸ್ವೆಲ್ರಂಥಾ ಬ್ಯಾಟ್ಸ್ಮನ್ಗಳಿಗೆ ಏನೇ ಪ್ಲ್ಯಾನ್ ಮಾಡಿದ್ರೂ ಅದು ವರ್ಕೌಟ್ ಆಗೋದಿಲ್ಲ. ಇಲ್ಲೂ ಆಗಿರೋದಿಷ್ಟೇ..ಅದಕ್ಕೆ ಸರಿಯಾಗಿ ನಮ್ಮ ಬೌಲರ್ಸ್ಗಳು ಮಾಡಿರೋ ಪ್ಲ್ಯಾನ್ನನ್ನ ಸರಿಯಾಗಿ ಎಕ್ಸಿಕ್ಯೂಟ್ ಕೂಡ ಮಾಡಿಲ್ಲ. ಟೋಟಲ್ಲಿ ಇದು ನಮ್ಮ ಬೌಲರ್ಸ್ಗಳ ಫೇಲ್ಯೂರ್ ಅಷ್ಟೇ. ಬೌಲಿಂಗ್ ಇಂಪ್ರೂವ್ಮೆಂಟ್ ಆಗಿಲ್ಲ ಅಂದ್ರೆ, ಈ ಸೀರಿಸ್ ಸೋತ್ರೂ ಆಶ್ಚರ್ಯ ಇಲ್ಲ.