ಟೀಮ್ ಇಂಡಿಯಾ ಪ್ಲ್ಯಾನ್ ವರ್ಕೌಟ್ ಆಗುತ್ತಿಲ್ಲ ಯಾಕೆ ? – ರೋಹಿತ್ ಶರ್ಮಾ ಮತ್ತು ಕೊಹ್ಲಿ ಎಡವುತ್ತಿರುವುದು ಎಲ್ಲಿ?

ಟೀಮ್ ಇಂಡಿಯಾ ಪ್ಲ್ಯಾನ್ ವರ್ಕೌಟ್ ಆಗುತ್ತಿಲ್ಲ ಯಾಕೆ ? – ರೋಹಿತ್ ಶರ್ಮಾ ಮತ್ತು ಕೊಹ್ಲಿ ಎಡವುತ್ತಿರುವುದು ಎಲ್ಲಿ?

ರೋಹಿತ್ ಶರ್ಮಾ & ವಿರಾಟ್ ಕೊಹ್ಲಿ ವಂಡೇ ವರ್ಲ್ಡ್​​ಕಪ್​ ವೇಳೆಯೂ ಇಬ್ಬರೂ ಗ್ರೌಂಡ್​​ನಲ್ಲಿ ಡಿಸ್ಕಸ್ ಮಾಡಿ ಡಿಫರೆಂಟ್ ಸ್ಟ್ರಾಟಜಿ ಮಾಡಿದ್ದರು. ಅದೇ ರೀತಿ ಸೌತ್​ ಆಫ್ರಿಕಾ ವಿರುದ್ಧದ ಟೆಸ್ಟ್ ಮ್ಯಾಚ್​ ವೇಳೆಯೂ ಅಷ್ಟೇ, ಬೌಲಿಂಗ್​​ ಸಂದರ್ಭದಲ್ಲಿ ಇಬ್ಬರೂ ಆಗಾಗ ಚರ್ಚೆ ನಡೆಸಿ, ಹೊಸ ಪ್ಲ್ಯಾನ್​ ಮಾಡ್ತಾನೆ ಇದ್ರು. ಆದರೂ ಟೀಮ್ ಇಂಡಿಯಾ ಟೆಸ್ಟ್ ಇತಿಹಾಸದಲ್ಲೇ ಕಳಪೆ ದಾಖಲೆ ಬರೆದಿದೆ.

ಇದನ್ನೂ ಓದಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯ – ಗೆಲ್ಲಲೇ ಬೇಕಾದ ಅನಿವಾರ್ಯತೆಯಲ್ಲಿ ಟೀಮ್ ಇಂಡಿಯಾ

ಬೌಲಿಂಗ್​ ಚೇಂಜ್​, ಫೀಲ್ಡಿಂಗ್​ ಸೆಟ್ ವೇಳೆ ಕ್ಯಾಪ್ಟನ್ ರೋಹಿತ್​​ ಶರ್ಮಾ, ಕಿಂಗ್ ಕೊಹ್ಲಿಯಿಂದ ಸಲಹೆ ಪಡೆದುಕೊಳ್ಳುತ್ತಲೇ ಇದ್ದರು. ಅದರಲ್ಲೂ ಯಾವಾಗಲೂ ಸ್ಲಿಪ್​​ನಲ್ಲಿ ಫೀಲ್ಡಿಂಗ್​​ ಮಾಡೋ ರೋಹಿತ್ ಶರ್ಮಾ ಹೆಲ್ಮೆಟ್ ಹಾಕ್ಕೊಂಡು ಶಾರ್ಟ್​​ಲೆಗ್​​ನಲ್ಲಿ ನಿಂತಿದ್ರು. ಎಸ್ಪೆಷಲಿ ಡೀನ್ ಎಲ್ಗರ್ ಬ್ಯಾಟಿಂಗ್ ಮಾಡೋವಾಗ. ಇದು ಡೀನ್ ಎಲ್ಗರ್​ಗೆ ಅಂತಾ ರೋಹಿತ್ ಮಾಡಿದ ಸ್ಟ್ರ್ಯಾಟಜಿಯಾಗಿತ್ತು. ಯಾಕಂದ್ರೆ ಡೀನ್ ಎಲ್ಗರ್ ತುಂಬಾ ಚೆನ್ನಾಗಿ ಲೆಗ್​​ಸೈಡ್​​ನತ್ತ ಫ್ಲಿಕ್ ಶಾಟ್ಸ್​ ಆಡ್ತಾರೆ. ಹೀಗಾಗಿ ರೋಹಿತ್​ ಶಾರ್ಟ್​ ಲೆಗ್​​ನಲ್ಲಿ ನಿಂತು ಎಲ್ಗರ್​​ ಆಫ್​​ಸೈಡ್​​ನತ್ತವೇ ಆಡುವಂತೆ ಪ್ರೆಷರ್ ಬಿಲ್ಡ್ ಮಾಡಿದ್ದರು. ರೋಹಿತ್​ ಶಾರ್ಟ್​​ಲೆಗ್​ನಲ್ಲಿ ನಿಂತ ಬಳಿಕ ಎಲ್ಗರ್​​ಗೂ ಫ್ಲಿಕ್ ಶಾಟ್ ಹೊಡೆಯೋಕೆ ಸಾಧ್ಯವಾಗಿಲ್ಲ. ಇನ್ನು ವಿರಾಟ್ ಕೊಹ್ಲಿ ಕೂಡ ಅಷ್ಟೇ, ಸೌತ್ ಆಫ್ರಿಕಾ ಮಾರ್ಕೊ ಜಾನ್ಸನ್ ಬ್ಯಾಟಿಂಗ್ ಮಾಡ್ತಿದ್ದಾಗ ಒಂದು ಪ್ಲ್ಯಾನ್ ಮಾಡ್ತಾರೆ. ಬೌಲಿಂಗ್​ಗೆ ಇಳಿದಿದ್ದ ಮೊಹಮ್ಮದ್ ಸಿರಾಜ್​ಗೆ ವಿಕೆಟ್​​ನಿಂದ ಆಚೆಗೆ ಔಟ್​ ಸ್ವಿಂಗ್​ ಬಾಲ್​ ಎಸೆಯುವಂತೆ ಸಿಗ್ನಲ್ ಕೊಡ್ತಾರೆ. ಕೊಹ್ಲಿ ಕೊಟ್ಟ ಸೂಚನೆಯಂತೆಯೇ ಸಿರಾಜ್ ಬಾಲ್ ಎಸೀತಾರೆ. ಬ್ಯಾಟ್​​ನ ಎಡ್ಜಿಗೆ ತಗುಲಿ ಜಾನ್ಸನ್ ಔಟಾಗ್ತಾರೆ. ಕ್ರೆಡಿಟ್ ಗೋಸ್ ಟು ಕೊಹ್ಲಿ & ಸಿರಾಜ್.

ಇನ್ನು ಟೀಂ ಇಂಡಿಯಾ ಫೀಲ್ಡಿಂಗ್ ವಿಚಾರಕ್ಕೆ ಬಂದಾಗ ಯಶಸ್ವಿ ಜೈಸ್ವಾಲ್ ಬಗ್ಗೆ ಹೇಳಲೇಬೇಕು. ಬ್ಯಾಟಿಂಗ್​​ನಲ್ಲಿ ಕ್ಲಿಕ್ ಆಗಿದಿದ್ರೂ ಕೂಡ ಸ್ಲಿಪ್​​ ಫಿಲ್ಡಿಂಗ್​​ನಲ್ಲಿ ಮಾತ್ರ ಜೈಸ್ವಾಲ್ ಕಮಾಲ್ ಮಾಡಿದ್ರು. ಆ್ಯಡನ್  ಮಾಕ್ರಮ್​​ರ ಕ್ಯಾಚ್​​ನ್ನಂತೂ ಅದ್ಭುತವಾಗಿ ಹಿಡಿದಿದ್ದರು. ಅಂತೂ ಟೀಂ ಇಂಡಿಯಾಗೆ ಒಬ್ಬ ಬೆಸ್ಟ್ ಸ್ಲಿಪ್ ಫೀಲ್ಡರ್ ಸಿಕ್ಕಿರೋದಂತೂ ಹೌದು. ಶುಬ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್​​ ಇಬ್ಬರೂ ಹೈಟ್ ಆಗಿದ್ದು, ತುಂಬಾ ಚೆನ್ನಾಗಿ ಡೈವ್ ಕೂಡ ಮಾಡ್ತಾರೆ.. ಸ್ಲಿಪ್​ ಫೀಲ್ಡಿಂಗ್​ಗೆ ಇಬ್ಬರೂ ಹೇಳಿ ಮಾಡಿಸಿದಂತಿದ್ದಾರೆ.

ಅದೇನೇ ಇದ್ದರೂ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಮೂಡಿಬಂದ ಅತ್ಯಂತ ಕಳಪೆ ದಾಖಲೆಗಳನ್ನು ಟೀಮ್ ಇಂಡಿಯಾದ ಈಗಿನ ಆಟಗಾರರು ಮಾಡಿದ್ದಾರೆ. ಅಂದರೆ 147 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಯಾವುದೇ ತಂಡದ 7 ಬ್ಯಾಟರ್​ಗಳು ಸೊನ್ನೆಯೊಂದಿಗೆ ಪೆವಿಲಿಯನ್​ಗೆ ಮರಳಿರಲಿಲ್ಲ. ಇದೀಗ 2522 ಟೆಸ್ಟ್​ ಪಂದ್ಯಗಳ ಬಳಿಕ ಟೀಮ್ ಇಂಡಿಯಾದ 7 ಬ್ಯಾಟರ್​ಗಳು ಸೊನ್ನೆ ಸುತ್ತುವ ಮೂಲಕ ಅತ್ಯಂತ ಕಳಪೆ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

 

Sulekha