ಹೊಸ ವರ್ಷದಲ್ಲೇ RO-KO ಫೈಟ್ – NZ ವಿರುದ್ಧ ODI ಬೇಟೆ ಯಾವಾಗ?
ಜೋಡೆತ್ತು ಬಿಟ್ಟು ಭಾರತ ಗೆಲ್ಲೋಕಾಗುತ್ತಾ?

ಹೊಸ ವರ್ಷದಲ್ಲೇ RO-KO ಫೈಟ್ – NZ ವಿರುದ್ಧ ODI ಬೇಟೆ ಯಾವಾಗ?ಜೋಡೆತ್ತು ಬಿಟ್ಟು ಭಾರತ ಗೆಲ್ಲೋಕಾಗುತ್ತಾ?

ಟೀಂ ಇಂಡಿಯಾ ಬ್ಯಾಕ್ ಟು ಬ್ಯಾಕ್ ಸಿರೀಸ್​ಗಳಲ್ಲಿ ಬ್ಯುಸಿ ಇದೆ. ಟೆಸ್ಟ್, ಓಡಿಐ ಹಾಗೇ ಟಿ-20ಐ ಪಂದ್ಯಗಳನ್ನ ಆಡ್ತಿದ್ದಾರೆ. ಇತ್ತೀಚೆಗಷ್ಟೇ ಸೌತ್ ಆಫ್ರಿಕಾ ವಿರುದ್ಧ ಮೂರೂ ಮಾದರಿ ಸರಣಿಗಳು ಮುಗಿದಿವೆ. ತವರಿನಲ್ಲೇ ನಡೆದ ಈ ಫೈಟ್​ನಲ್ಲಿ ಭಾರತ ಟೆಸ್ಟ್ ಕ್ರಿಕೆಟ್​ನಲ್ಲಿ ಕ್ಲೀನ್ ಸ್ವೀಪ್ ಆದ್ರೂ ಏಕದಿನ ಮತ್ತು ಟಿ-20ಐನಲ್ಲಿ ರಿವೇಂಜ್ ತೀರಿಸಿಕೊಂಡಿದೆ. ಬಟ್ ಭಾರತ ಎಷ್ಟೇ ಮ್ಯಾಚಸ್ ಗೆದ್ರೂ ಟೀಂ ಇಂಡಿಯಾ ಫ್ಯಾನ್ಸ್ ಗೆ ರಿಯಲ್ ಥ್ರಿಲ್ ಸಿಗೋದೇ ರೋಕೊ ಜೋಡಿ ಆಡ್ದಾಗ. ಏಕದಿನ ಮಾದರಿಯಲ್ಲಿ ಮಾತ್ರ ಆಡ್ತಿರೋ ಈ ಸ್ಟಾರ್ಸ್ ಮತ್ತೆ ಯಾವಾಗ ಮೈದಾನಕ್ಕೆ ಇಳೀತಾರೆ ಅಂತಾ ಕಾಯ್ತಿದ್ದಾರೆ. ಹಾಗಂತ ಈ ಲೆಜೆಂಡರ್ಸ್ ನೆಕ್ಸ್​ಟ್ ಮೆನ್ ಇನ್ ಬ್ಲ್ಯೂಜೆರ್ಸಿಯಲ್ಲಿ ಕಣಕ್ಕಿಳಿಯೋದು ತುಂಬಾ ದೂರ ಏನಿಲ್ಲ. ಹೊಸ ವರ್ಷದ ಆರಂಭದಲ್ಲೇ ಭಾರತದ ಪರ ಮೈದಾನಕ್ಕೆ ಇಳೀತಾರೆ. ಅದೂ ಕೂಡ ಭಾರತದಲ್ಲೇ.

ಇದನ್ನೂ ಓದಿ : SMATನಲ್ಲಿ ಕಿಶನ್ ಖದರ್.. T-20I ರೇಸ್ ​​ಗೆ ಸೆಂಚುರಿ ಸ್ಟಾರ್ – ಇಶಾನ್ ಗತ್ತು BCCIಗೆ ತಲೆ ಬಾಗುತ್ತಾ?

ಡಿಸೆಂಬರ್ 19ರಂದು ಸೌತ್ ಆಫ್ರಿಕಾ ವಿರುದ್ಧದ ಕೊನೆಯ ಟಿ-20ಐ ಮ್ಯಾಚ್​ನೊಂದಿಗೆ ಸುಧೀರ್ಘ ಪ್ರವಾಸಕ್ಕೆ ತೆರೆ ಬಿದ್ದಿದೆ. ಮೂರೂ ಮಾದರಿಯಲ್ಲಿ ಒಟ್ಟು 10 ಪಂದ್ಯಗಳನ್ನ ಮುಗಿಸಿ ಹರಿಣಪಡೆ ತವರಿಗೆ ವಾಪಸ್ ಆಗ್ತಿದೆ. ಅಲ್ಲಿಗೆ ಟೀಂ ಇಂಡಿಯಾಗೆ ಈ ವರ್ಷದ ಎಲ್ಲಾ ಪಂದ್ಯಗಳು ಮುಗಿದಿವೆ. ಇನ್ನೇನಿದ್ರೂ 2026ರಲ್ಲೇ ಮೆನ್ ಇನ್ ಬ್ಲ್ಯೂ ಜೆರ್ಸಿ ಟೀಂ ಮೈದಾನಕ್ಕಿಳಿಯಲಿದೆ. ಅದೂ ಕೂಡ ತವರಿನಲ್ಲೇ. ಹಾಗಂತ ಈ ಪಂದ್ಯಗಳೇನೂ ದೂರ ಇಲ್ಲ. ಜನವರಿ ಸೆಕೆಂಡ್ ವೀಕಲ್ಲಿ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಸ್ಟಾರ್ಟ್ ಆಗುತ್ತೆ. ರೋಕೋ ಅಬ್ಬರವೂ ಶುರುವಾಗುತ್ತೆ.

ಜನವರಿ 11ರಂದು ನ್ಯೂಜಿಲೆಂಡ್ ವಿರುದ್ಧ ಮೊದಲ ಪಂದ್ಯ!

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಪ್ರಸ್ತುತ ಏಕದಿನ ಮಾದರಿಯಲ್ಲಿ ಮಾತ್ರನೇ ಆಡ್ತಿದ್ದಾರೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಸರಣಿ ಬಳಿಕ ರೆಸ್ಟ್​ನಲ್ಲಿದ್ದಾರೆ. ಇದೀಗ 2026ರ ಜನವರಿ ಎರಡನೇ ವಾರದಲ್ಲಿ ಮತ್ತೆ ಮೈದಾನಕ್ಕಿಳಿಯಲಿದ್ದಾರೆ. ಜನವರಿ 11 ರಂದು ವಡೋದರಾದಲ್ಲಿ ನ್ಯೂಜಿಲೆಂಡ್​ನಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದ್ದು ಈ ಇಬ್ಬರು ಲೆಜೆಂಡರ್ಸ್ ಮತ್ತೆ ಭಾರತದ ಪರ ಆಡಲಿದ್ದಾರೆ. ಬಳಿಕ ಜನವರಿ 14ಕ್ಕೆ ರಾಜ್​ಕೋಟ್​ನಲ್ಲಿ ಎರಡನೇ ಪಂದ್ಯ ನಡೆಯಲಿದ್ದು ಮೂರನೇ ಪಂದ್ಯಕ್ಕೆ ಜನವರಿ 18ರಂದು ಇಂದೋರ್ ಸಾಕ್ಷಿಯಾಗಲಿದೆ. ಅಲ್ಲಿಗೆ ಮೂರು ಪಂದ್ಯಗಳ ಏಕದಿನ ಸರಣಿ ಮುಗಿಯುತ್ತೆ. ಆದ್ರೆ ಮತ್ತೆ ಭಾರತ ತಂಡದ ಪರ ರೋಹಿತ್ ಕೊಹ್ಲಿ ಮೈದಾನಕ್ಕಿಳಿಯೋದು ಬರೋಬ್ಬರಿ 7 ತಿಂಗಳ ಬಳಿಕ. ಯಾಕಂದ್ರೆ ವಿಶ್ವಕಪ್, ಐಪಿಎಲ್​ ಎಲ್ಲಾ ಮುಗಿಸಿ ಆ ಬಳಿಕ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಜುಲೈನಲ್ಲಿ ಆಂಗ್ಲರ ವಿರುದ್ಧ 3 ಪಂದ್ಯಗಳ ಸರಣಿಯನ್ನಾಡಲಿದೆ. ಜುಲೈ 14, 16 ಹಾಗೂ 19ರಂದು ಪಂದ್ಯಗಳು ನಡೆಯಲಿವೆ.

ಅದ್ಭುತ ಫಾರ್ಮ್ ನಲ್ಲಿದ್ದಾರೆ ರೋಹಿತ್ & ಕೊಹ್ಲಿ!

ಌಕ್ಚುಲಿ ರೋಹಿತ್ ಮತ್ತು ಕೊಹ್ಲಿ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಈ ವರ್ಷ ಭಾರತದ ಏಕದಿನ ಮಾದರಿಯಲ್ಲಿ ಹೈಯೆಸ್ಟ್ ರನ್ ಸ್ಕೋರರ್​​ಗಳ ಪಟ್ಟಿಯಲ್ಲಿ ಕೊಹ್ಲಿ ನಂಬರ್ 1 ಹಾಗೇ ರೋಹಿತ್ ನಂಬರ್ 2ನಲ್ಲಿದ್ದಾರೆ. ಸೌತ್ ಆಫ್ರಿಕಾ ಸಿರೀಸ್​ನಲ್ಲಿ ಕೊಹ್ಲಿ ಎರಡು ಶತಕ, ಒಂದು ಅರ್ಧಶತಕ ಗಳಿಸಿದ್ರು. ಮಾಜಿ ನಾಯಕ ರೋಹಿತ್ ಶರ್ಮಾ ಕೂಡ ಎರಡು ಅರ್ಧಶತಕ ಗಳಿಸಿದರು. ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಕೊಹ್ಲಿ 135 ಮತ್ತು 102 ರನ್ ಗಳಿಸಿದರೆ, ಕೊನೆಯ ಪಂದ್ಯದಲ್ಲಿ ಅಜೇಯ 65 ರನ್​ಗಳಿಸಿದರು. ರೋಹಿತ್ ಮೊದಲ ಪಂದ್ಯದಲ್ಲಿ 57, ಎರಡನೇ ಪಂದ್ಯದಲ್ಲಿ 14 ಮತ್ತು ಸರಣಿ ನಿರ್ಣಾಯಕ ಪಂದ್ಯದಲ್ಲಿ 75 ರನ್ ಗಳಿಸಿ ತಂಡದ ಟಾಪ್ ಸ್ಕೋರರ್​ಗಳಾದರು. ಹೀಗಾಗಿ ಮುಂದಿನ ಸರಣಿಯಲ್ಲಿ ರೋಕೊ ಪರ್ಫಾಮೆನ್ಸ್​ಗಾಗಿ ಫ್ಯಾನ್ಸ್ ಕೂಡ ಕಾಯ್ತಿದ್ದಾರೆ. 2027ರ ವಿಶ್ವಕಪ್ ಆಡ್ಲೇಬೇಕು ಅಂತಾ ಪಣ ತೊಟ್ಟಿರೋ ಈ ಲೆಜೆಂಡರ್ಸ್ ಟೀಕೆ ಮಾಡಿದವ್ರಿಗೆ ನಿವೃತ್ತಿ ಕೇಳಿದವ್ರಿಗೆ ಮೈದಾನದಲ್ಲೇ ಉತ್ತರ ನೀಡ್ತಿದ್ದಾರೆ. ಓಡಿಐ ರ್ಯಾಂಕಿಂಗ್​ನಲ್ಲೂ ನಂಬರ್ 1, ನಂಬರ್ 2ನಲ್ಲಿದ್ದಾರೆ. ಈ ವರ್ಷ ಅದ್ಭುತವಾಗಿ ಜರ್ನಿ ಮುಗಿಸಿರೋ ಈ ಸೂಪರ್ ಸ್ಟಾರ್ಸ್ ನೆಕ್ಸ್​ಟ್ ಇಯರ್ ಕೂಡ ಅಬ್ಬರಿಸೋಕೆ ಸಿದ್ಧರಾಗಿದ್ದಾರೆ.

Shantha Kumari