INDಗೆ ಬ್ಯಾಕ್ ಟು ಬ್ಯಾಕ್ ಫೈಟ್ – WI, AUS, SA ಸರಣಿ ಫಿಕ್ಸ್
2026ರ ವಿಶ್ವಕಪ್ ಗೆ ಮಾಸ್ಟರ್ ಪ್ಲ್ಯಾನ್!

INDಗೆ ಬ್ಯಾಕ್ ಟು ಬ್ಯಾಕ್ ಫೈಟ್ – WI, AUS, SA ಸರಣಿ ಫಿಕ್ಸ್2026ರ ವಿಶ್ವಕಪ್ ಗೆ ಮಾಸ್ಟರ್ ಪ್ಲ್ಯಾನ್!

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ಮುಗಿದ ಬೆನ್ನಲ್ಲೇ ಭಾರತದ ಮುಂದಿನ ವೇಳಾಪಟ್ಟಿ ಬಗ್ಗೆ ಫ್ಯಾನ್ಸ್ ತಲೆ ಕೆಡಿಸಿಕೊಂಡಿದ್ದಾರೆ. ಬಟ್ ಆಗಸ್ಟ್ ತಿಂಗಳು ಅಂದ್ರೆ ಈ ತಿಂಗಳಲ್ಲಿ ಟೀಂ ಇಂಡಿಯಾದ ಯಾವುದೇ ಪಂದ್ಯಗಳು ನಡೆಯೋದಿಲ್ಲ.  ಯಾಕಂದ್ರೆ ನಿಗದಿತ ವೇಳಾಪಟ್ಟಿಯಂತೆ ಆಗಸ್ಟ್​ನಲ್ಲಿ ನಡೆಯಬೇಕಿದ್ದ ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಸರಣಿಯನ್ನು ಈಗಾಗಲೇ ರದ್ದುಗೊಳಿಸಲಾಗಿದೆ. ಹೀಗಾಗಿ ಈ ತಿಂಗಳಲ್ಲಿ ಯಾವುದೇ ಪಂದ್ಯ ನಡೆಯೋದಿಲ್ಲ.  ಭಾರತದ ಪಂದ್ಯಗಳನ್ನ ನೋಡ್ಬೇಕು ಅಂದ್ರೆ ಏಷ್ಯಾಕಪ್​ ಟೂರ್ನಿವರೆಗೂ ಕಾಯಲೇಬೇಕು.

ಇದನ್ನೂ ಓದಿ : ರಾಜ್ಯದ 5 ಜಿಲ್ಲೆಗಳಲ್ಲಿ ವರುಣನ ಆರ್ಭಟ – ಎಲ್ಲೆಲ್ಲಿ ಭಾರಿ ಮಳೆಯಾಗಲಿದೆ?

2025ರ ಏಷ್ಯಾಕಪ್ ಟೂರ್ನಿ ಸೆಪ್ಟೆಂಬರ್ 9 ರಿಂದ ಶುರುವಾಗಲಿದ್ದು ಟೀಮ್ ಇಂಡಿಯಾ ಮತ್ತೆ ತನ್ನ ಅಭಿಯಾನ ಆರಂಭಿಸಲಿದೆ. ಏಷ್ಯಾಕಪ್​ನಲ್ಲಿ ಭಾರತ ತಂಡವು ಸೆಪ್ಟೆಂಬರ್ 10 ರಂದು ತನ್ನ ಮೊದಲ ಪಂದ್ಯವನ್ನ ಯುಎಇ ವಿರುದ್ಧ ಆಡಲಿದೆ. ಬಳಿಕ ಸೆಪ್ಟೆಂಬರ್ 14ಕ್ಕೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಿಗದಿ ಮಾಡಲಾಗಿದೆ. ಆದ್ರೆ ಭಾರತ ಈ ಮ್ಯಾಚ್ ಆಡುತ್ತಾ ಅನ್ನೋದೇ ಡೌಟ್ ಇದೆ. ಯಾಕಂದ್ರೆ ಪೆಹಲ್ಗಾಮ್ ಅಟ್ಯಾಕ್ ಬಳಿಕ ಎರಡೂ ರಾಷ್ಟ್ರಗಳ ನಡುವಿನ ಉದ್ವಿಘ್ನತೆ ಜಾಸ್ತಿಯಾಗಿದೆ. ಡಬ್ಲ್ಯೂಸಿಎಲ್​ನಲ್ಲಿ ಯುವರಾಜ್ ಸಿಂಗ್ ನಾಯಕತ್ವದ ಟೀಂ ಇಂಡಿಯಾ ಪಾಕ್ ವಿರುದ್ಧ ಪಂದ್ಯಗಳನ್ನ ಆಡಿರಲಿಲ್ಲ. ಇನ್ನು ಏಷ್ಯಾಕಪ್​ನಲ್ಲಿ ಮೂರನೇ ಪಂದ್ಯ ಒಮಾನ್ ವಿರುದ್ಧ ಸೆಪ್ಟೆಂಬರ್ 19ಕ್ಕೆ ನಡೆಯಲಿದೆ. ಸೆಪ್ಟೆಂಬರ್ 28ಕ್ಕೆ ಫೈನಲ್ ಮ್ಯಾಚ್ ಇರುತ್ತೆ. ಸೋ ಇದಿಷ್ಟು ಏಷ್ಯಾಕಪ್ ಟೂರ್ನಿ ಡೀಟೇಲ್ಸ್. ಈ ಟೂರ್ನಿ ಆದ್ಮೇಲೆ ಭಾರತ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸರಣಿಗಳನ್ನ ಆಡಲಿದೆ.

ಅಕ್ಟೋಬರ್ ನಿಂದ ಮತ್ತೆ ವಾರ್!

ದಿನಾಂಕ                            ಮಾದರಿ            ಪಂದ್ಯ         ಎದುರಾಳಿ

ಅ. 2 &10                              ಟೆಸ್ಟ್                  2            ವೆಸ್ಟ್ ಇಂಡೀಸ್

ಅ.19, 23, 25                       ಏಕದಿನ             3             ಆಸ್ಟ್ರೇಲಿಯಾ

ಅ.29, 31, ನ. 2, 6, 8             ಟಿ-20              5              ಆಸ್ಟ್ರೇಲಿಯಾ

ನ. 14, 22                              ಟೆಸ್ಟ್                  2            ಸೌತ್ ಆಫ್ರಿಕಾ

ನ. 30, ಡಿ. 3, 6                     ಏಕದಿನ            3             ಸೌತ್ ಆಫ್ರಿಕಾ

ಡಿ. 9, 11, 14, 17, 19              ಟಿ-20                5             ಸೌತ್ ಆಫ್ರಿಕಾ

ಬಳಿಕ 2026ರ ಜನವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲೇ ಐದು ಪಂದ್ಯಗಳ ಟಿ-20ಐ ಸರಣಿ ಹಾಗೇ ಮೂರು ದಿನಗಳ ಏಕದಿನ ಸರಣಿ ಆಡಲಿದೆ.  ನ್ಯೂಝಿಲೆಂಡ್ ವಿರುದ್ಧದ ಟಿ20 ಸರಣಿ ಬಳಿಕ ಭಾರತ ತಂಡವು ಟಿ20 ವಿಶ್ವಕಪ್​ಗೆ ಕಸರತ್ತು ನಡೆಸಲಿದೆ. ಶ್ರೀಲಂಕಾ-ಭಾರತದಲ್ಲಿ ನಡೆಯಲಿರುವ 2026ರ ಟಿ20 ವಿಶ್ವಕಪ್ ಫೆಬ್ರವರಿ ಮತ್ತು ಮಾರ್ಚ್ ನಡುವೆ ನಡೆಯೋ ಚಾನ್ಸಸ್ ಇದೆ. ಆ ಬಳಿಕ ಐಪಿಎಲ್ ಹಬ್ಬ ಶುರುವಾಗಲಿದೆ.

Shantha Kumari