ವರ್ಲ್ಡ್​ ಕ್ರಿಕೆಟ್​​ಗೆ ರಿಷಬ್ ಪಂತ್ ಕಮ್​ಬ್ಯಾಕ್ ಯಾವಾಗ? -2024ರಲ್ಲಿ ಟಿ-20 ವರ್ಲ್ಡ್ ​​ಕಪ್​ ನಲ್ಲಿ ಆಡ್ತಾರಾ ಪಂತ್?

ವರ್ಲ್ಡ್​ ಕ್ರಿಕೆಟ್​​ಗೆ ರಿಷಬ್ ಪಂತ್ ಕಮ್​ಬ್ಯಾಕ್ ಯಾವಾಗ? -2024ರಲ್ಲಿ ಟಿ-20 ವರ್ಲ್ಡ್ ​​ಕಪ್​ ನಲ್ಲಿ ಆಡ್ತಾರಾ ಪಂತ್?

ರಿಷಬ್ ಪಂತ್​.. ಈ ಬಾರಿಯ ವರ್ಲ್ಡ್​ಕಪ್​ನಲ್ಲಿ ಆಡ್ಬೇಕಿದ್ದ ಮ್ಯಾಚ್ ವಿನ್ನಿಂಗ್ ಪ್ಲೇಯರ್.. ಆದ್ರೆ ಭಯಾನಕ ಆ್ಯಕ್ಸಿಡೆಂಟ್​ನಿಂದಾಗಿ ರಿಷಬ್ ಬದುಕುಳಿದಿದ್ದೇ ದೊಡ್ಡ. ಇದೀಗ ರಿಷಬ್ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.. ಒಂದೇ ಮಾತಲ್ಲಿ ಹೇಳೋದಾದ್ರೆ, ರಿಷಬ್ ಪಂತ್ ಈಸ್ ಬ್ಯಾಕ್.. 2022ರ ಡಿಸೆಂಬರ್ 30ರಂದು ದೆಹಲಿಯಿಂದ ಡೆಹ್ರಾಡೂನ್​ಗೆ ಕಾರಿನಲ್ಲೇ ತೆರಳುತ್ತಿದ್ದ ವೇಳೆ ರಿಷಬ್​ ಪಂತ್ ಕಾರು ಭೀಕರ ಆ್ಯಕ್ಸಿಡೆಂಟ್​ ಆಗಿತ್ತು. ಶರವೇಗದಲ್ಲಿ ಹೋಗುತ್ತಿದ್ದ ರಿಷಬ್ ಕಾರು ಕಂಟ್ರೋಲ್ ತಪ್ಪಿ ಡಿವೈಡರ್​​ಗೆ ಡಿಕ್ಕಿ ಹೊಡೆದು, ಕಾರು ಪಲ್ಟಿಯಾಗಿತ್ತು. ಇಡೀ ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಪವಾಡ ಎಂಬಂತೆ ರಿಷಬ್ ಪಂತ್ ಕಾರಿನಿಂದ ಹೊರಕ್ಕೆ ಬಂದಿದ್ರು. ಆದ್ರೆ, ರಿಷಬ್ ದೇಹವಿಡೀ ಗಾಯವಾಗಿತ್ತು. ರಿಷಬ್ ಇನ್ನು ಕ್ರಿಕೆಟ್ ಆಡೋದೆ ಡೌಟ್ ಎಂಬಂತಾಗಿತ್ತು. ಕೆಲ ತಿಂಗಳು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದಿದ್ರು. ರಿಷಬ್ ಈ ಬಾರಿಯ ವರ್ಲ್ಡ್​​ಕಪ್​ನಲ್ಲಿ ಆಡೋದಿಲ್ಲ ಅನ್ನೋದು ಖಚಿತವಾಗಿತ್ತು. ಅದಕ್ಕೂ ಮುನ್ನ ಐಪಿಎಲ್​ ಟೂರ್ನಿಯನ್ನ ಕೂಡ ಮಿಸ್ ಮಾಡಿಕೊಂಡಿದ್ದರು. ಆದ್ರೆ ಟೀಂ ಇಂಡಿಯಾ ವರ್ಲ್ಡ್​ಕಪ್​ಗಾಗಿ ತಯಾರಿ ನಡೆಸಿದ್ದಾಗ ರಿಷಬ್ ಪಂತ್ ಬೆಂಗಳೂರಿನ ಎನ್​ಸಿಎನಲ್ಲಿ ತಂಡವನ್ನ ಸೇರಿಕೊಂಡರು. ತಮ್ಮ ಫಿಟ್ನೆಸ್ ಮೇಲೆ ವರ್ಕೌಟ್ ಮಾಡುತ್ತಲೇ ಇದ್ದರು. ಇದೀಗ ಪಂತ್ ಪುನರಾಗಮನವಾಗುವ ಟೈಮ್ ಬಂದಿದೆ. ವರ್ಲ್ಡ್​ ಕ್ರಿಕೆಟ್​​ಗೆ ಪಂತ್ ಮತ್ತೆ ಕಮ್​ಬ್ಯಾಕ್ ಮಾಡ್ತಿದ್ದಾರೆ. ಈ ಕುರಿತ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಭಾರತಕ್ಕೆ ಬಂದು ಬಿರಿಯಾನಿ ಬಾರಿಸಿದ್ದೇ ಪಾಕ್ ಟೀಮ್ ಸಾಧನೆ – ಸೋತಿದ್ದಕ್ಕೆ ಕಾರಣ ಕೇಳಿದರೆ ಬಾಲ್, ಪಿಚ್ ಎಲ್ಲಾ ಡೊಂಕು ಅಂತಾ ಪಾಕ್ ಕೊಂಕು..!

ಮುಂದಿನ ವರ್ಷ ಅಂದ್ರೆ 2024ರಲ್ಲಿ ನಡೆಯಲಿರುವ ಐಪಿಎಲ್​​ ಟೂರ್ನಿಯಲ್ಲಿ ರಿಷಬ್ ಪಂತ್ ಆಡಲಿದ್ದಾರೆ. ದೆಹಲಿ ಕ್ಯಾಪಿಟಲ್ಸ್​ ತಂಡದಲ್ಲಿ ರಿಷಬ್ ಪಂತ್ ಕೂಡ ಕಣಕ್ಕಿಳಿಯಲಿದ್ದಾರೆ. ಈ ವಿಚಾರವನ್ನ ದೆಹಲಿ ಕ್ಯಾಪಿಟಲ್ಸ್​ನ ನಿರ್ದೇಶಕರಾಗಿರುವ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದಾರೆ. ನಿಮಗೆ ಗೊತ್ತಿರೋ ಹಾಗೆ ರಿಷಬ್​ ಪಂತ್ ದೆಹಲಿ ಕ್ಯಾಪಿಟಲ್ಸ್​ನ ಕ್ಯಾಪ್ಟನ್ ಕೂಡ. ಹೀಗಾಗಿ ಮುಂದಿನ ವರ್ಷದ ಐಪಿಎಲ್​​ನಲ್ಲಿ ರಿಷಬ್ ಪಂತ್ ಮತ್ತೆ ತಂಡವನ್ನ ಮುನ್ನಡೆಸಲಿದ್ದಾರೆ. ಈಗಾಗ್ಲೇ ​ಜಾಧವ್​ಪುರ್​ ಯುನಿವರ್ಸಿಟಿಯ ಸಾಲ್ಟ್ ಲೇಕ್ ಕ್ಯಾಂಪಸ್ ಗ್ರೌಂಡ್​ನಲ್ಲಿ ದೆಹಲಿ ಕ್ಯಾಪಿಟಲ್ಸ್ ಟ್ರೈನಿಂಗ್ ಸೆಷನ್​ ನಡೀತಾ ಇದೆ. ಆದ್ರೆ ಈಗ ನಡೆಯುತ್ತಿರುವ ಟ್ರೈನಿಂಗ್ ಸೆಷನ್​​ನಲ್ಲಿ ಪಂತ್ ಭಾಗಿಯಾಗಿಲ್ಲ. ಮುಂದಿನ ವರ್ಷದ ಆರಂಭದಲ್ಲೇ ದೆಹಲಿ ಕ್ಯಾಪಿಟಲ್ಸ್ ಟ್ರೈನಿಂಗ್​ನಲ್ಲಿ ರಿಷಬ್ ಭಾಗಿಯಾಗಲಿದ್ದಾರೆ. ಇನ್ನು ದೆಹಲಿ ಕ್ಯಾಪಿಟಲ್ಸ್ ಡೈರೆಕ್ಟರ್ ಸೌರವ್​ ಗಂಗೂಲಿ ಮುಂಬರುವ ಐಪಿಎಲ್ ಬಿಡ್ಡಿಂಗ್ ವಿಚಾರವಾಗಿ ರಿಷಬ್ ಪಂತ್ ಜೊತೆ ಚರ್ಚೆ ನಡೆಸಿದ್ದಾರೆ.

2022ರ ಡಿಸೆಂಬರ್​​ನಲ್ಲಿ ರಿಷಬ್ ಪಂತ್ ಬಾಂಗ್ಲಾದೇಶ ವಿರುದ್ಧ ಟೆಸ್ಟ್​ ಸರಣಿಯಲ್ಲಿ ಆಡಿದ್ರು. ಅಲ್ಲಿಂದ ಮರಳಿದ ಬಳಿಕ ಅ್ಯಕ್ಸಿಡೆಂಟ್ ಆಗಿದ್ರಿಂದ ಯಾವುದೇ ಟೂರ್ನಿಯಲ್ಲಿ ಆಡೋಕೆ ಪಂತ್​​ಗೆ ಸಾಧ್ಯವಾಗಿಲ್ಲ. ಆ್ಯಕ್ಸಿಡೆಂಟ್ ಬಳಿಕ ರಿಷಬ್​ ಪಂತ್​ಗೆ ನಿಜಕ್ಕೂ ಪುನರ್ಜನ್ಮವೇ ಸಿಕ್ಕಂತಾಗಿದೆ. ಅಷ್ಟೊಂದು ಭೀಕರವಾಗಿ ಆ್ಯಕ್ಸಿಡೆಂಟ್ ಆಗಿದ್ರು ಕೂಡ ರಿಷಬ್ ಧೈರ್ಯ ಕಳೆದುಕೊಂಡಿರಲಿಲ್ಲ. ಇಷ್ಟು ಬೇಗನೆ ರಿಕವರಿ ಆಗಿದ್ದಾರೆ ಅಂದ್ರೆ ಅದಕ್ಕೆ ಪ್ರಮುಖ ಕಾರಣವೇ ರಿಷಬ್​​ಗೆ ಇರುವ ಆತ್ಮಸ್ಥೈರ್ಯ. ಮತ್ತೆ ಭಾರತದ ಪರ ಕ್ರಿಕೆಟ್ ಆಡಲೇಬೇಕು ಅನ್ನೋ ಹಠ. ಕಳೆದ ಒಂದು ವರ್ಷಗಳಿಂದ ರಿಷಬ್ ಅಕ್ಷರಶ: ಫೈಟ್ ಮಾಡಿದ್ದಾರೆ. ಹೀಗಾಗಿ ಪಂತ್ ಈಗ ಆಲ್​ಮೋಸ್ಟ್​ ಫಿಟ್ ಆಗಿದ್ದಾರೆ.

ಇನ್ನು ಇ್ತತೀಚಿನ ದಿನಗಳಲ್ಲಿ ರಿಷಬ್ ಪಂತ್ ಸಾಕಷ್ಟು ಆ್ಯಕ್ಟೀವ್ ಆಗಿದ್ದಾರೆ. ವರ್ಲ್ಡ್​ಕಪ್​ ಜಾಹೀರಾತುಗಳನ್ನ ಕಾಣಿಸಿಕೊಳ್ತಿದ್ದಾರೆ. ತಿರುಪತಿ, ಕೇದಾರನಾಥ ಸೇರಿದಂತೆ ವಿವಿಧ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ರು. ನಂತರ ದೆಹಲಿ ಕ್ಯಾಪಿಟಲ್ಸ್​ನ ಕ್ಯಾಂಪ್​ಗೆ ಕೂಡ ಭೇಟಿ ನೀಡಿದ್ರು. ಈ ವೇಳೆ ಕೋಚ್ ರಿಕ್ಕಿ ಪಾಂಟಿಂಗ್ ಮತ್ತು ನಿರ್ದೇಶಕ ಗಂಗೂಲಿ ಜೊತೆಗೆ ಮಾತುಕತೆ ನಡೆಸಿದ್ರು. ಯಾವುದೇ ಪ್ರಾಕ್ಟೀಸ್ ಮಾಡದಿದ್ರೂ ರಿಷಬ್​​ ಕ್ಯಾಂಪ್​ಗೆ ಹಾಜರಾಗಿರೋದು ಅಲ್ಲಿನ ಅಟ್ಮಾಸ್ಪಿಯರನ್ನೇ ಬದಲಾಯಿಸಿದ್ದಂತೂ ಸುಳ್ಳಲ್ಲ. ರಿಷಬ್ ಕ್ಯಾಂಪ್​ಗೆ ಬರ್ತಿದ್ದಂತೆ ಮುಂದಿನ ಟೂರ್ನಿಯಲ್ಲಿ ಆಡ್ತಾರೆ ಅನ್ನೋದು ಗ್ಯಾರಂಟಿಯಾಗಿತ್ತು. ಬಳಿಕ ಸೌರವ್ ಗಂಗೂಲಿ ಕೂಡ ಈ ಬಗ್ಗೆ ಸ್ಪಷ್ಟನೆ ಕೂಡಾ ನೀಡಿದ್ದರು.

ಕಳೆದ ಒಂದು ವರ್ಷಗಳಲ್ಲಿ ರಿಷಬ್​ ಪಂತ್​ರನ್ನ ಟೀಂ ಇಂಡಿಯಾ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಮಿಸ್ ಮಾಡಿಕೊಂಡಿರೋದಂತೂ ಸುಳ್ಳಲ್ಲ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ, ವರ್ಲ್ಡ್​​ ಟೆಸ್ಟ್​ ಚಾಂಪಿಯನ್​​ಶಿಪ್​​ನಲ್ಲಿ ಒಂದು ವೇಳೆ ರಿಷಬ್​ ಇರ್ತಿದ್ರೆ ರಿಸಲ್ಟ್ ಚೆನ್ನಾಗಿರ್ತಿತ್ತು ಅಂತಾ ಎಲ್ಲಾ ಕ್ರಿಕೆಟ್ ಫಾಲೋವರ್ಸ್​​ಗಳಿಗೂ ಅನ್ನಿಸಿದ್ದು ಸುಳ್ಳಲ್ಲ. ಇನ್ನು​ ವಿಕೆಟ್ ಕೀಪಿಂಗ್ ಮಾಡೋವಾಗ ಪಂತ್ ಅವರ ಫನ್ನೀ ಕಾಮೆಂಟ್ಸ್​​ಗಳನ್ನ ಟೀಂ ಇಂಡಿಯಾ ಪ್ಲೇಯರ್ಸ್​ಗಳು ಕೂಡ ಮಿಸ್ ಮಾಡಿಕೊಂಡಿರ್ತಾರೆ ಬಿಡಿ. ಆ್ಯಕ್ಚುವಲಿ ಕಳೆದ ಒಂದು ವರ್ಷದಲ್ಲಿ ರಿಷಬ್ ಪಂತ್​ ಪ್ಲೇಸ್​​ನ್ನ ಇನ್ನೂ ಕೂಡ ಯಾರಿಗೂ ರಿಪ್ಲೇಸ್ ಮಾಡೋಕೆ ಸಾಧ್ಯವಾಗಿಲ್ಲ. ಎಸ್ಪೆಷಲಿ ಟೆಸ್ಟ್ ತಂಡದಲ್ಲಿ.

2024ರಲ್ಲಿ ಟಿ-20 ವರ್ಲ್ಡ್ ​​ಕಪ್​ ನಲ್ಲಿ ಆಡ್ತಾರಾ ಪಂತ್?

ಮುಂದಿನ ವರ್ಷ ಐಪಿಎಲ್ ಬಳಿಕ ಟಿ-20 ವರ್ಲ್ಡ್​ಕಪ್​ ಟೂರ್ನಿ ಕೂಡ ನಡೆಯಲಿದೆ. ಐಪಿಎಲ್​ನಲ್ಲಿ ಆಡೋದು ಗ್ಯಾರಂಟಿಯಾದ್ರೂ, ವರ್ಲ್ಡ್​​ಕಪ್​​ನಲ್ಲಿ ಆಡ್ತಾರಾ, ಇಲ್ವಾ ಅನ್ನೋದು ಸದ್ಯಕ್ಕಂತೂ ಕ್ವಶ್ಚನ್ ಮಾರ್ಕ್​ ಆಗಿಯೇ ಇದೆ. ಬಿಸಿಸಿಐ ಕೂಡ ಕಾದು ನೋಡುವ ತಂತ್ರ ಅನುಸರಿಸ್ತಾ ಇದೆ. ಐಪಿಎಲ್​​ನಲ್ಲಿ ರಿಷಬ್​​ ಕಮ್​​ಬ್ಯಾಕ್ ಮಾಡಿದ್ರು ಅಂದ್ರೆ, ಉತ್ತಮ ಪ್ರದರ್ಶನ ನೀಡಿದ್ರೆ ಟಿ-20 ವರ್ಲ್ಡ್​​ಕಪ್​​ ಸ್ಕ್ವಾಡ್​​ಗೂ ಸೆಲೆಕ್ಟ್ ಆಗಬಹುದು. ಜೊತೆಗೆ ರಿಷಬ್ ಪಂತ್ ಒಂದಷ್ಟು ಫಸ್ಟ್​ ಕ್ಲಾಸ್ ಕ್ರಿಕೆಟ್ ಟೂರ್ನಿಗಳಲ್ಲಿ ಕೂಡ ಆಡಿ ತಮ್ಮ ಪರ್ಫಾಮೆನ್ಸ್​ನ್ನ ಪ್ರೂವ್ ಮಾಡಬೇಕಾಗಬಹುದು.

ಅದೇನೇ ಇರಲಿ.. ಸಾವನ್ನೇ ಗೆದ್ದು ಬಂದಿರುವ ರಿಷಬ್ ಪಂತ್​ಗೆ ಇನ್ನು ಗ್ರೌಂಡ್​​ನಲ್ಲಿ ಪರ್ಫಾಮ್​ ಮಾಡೋದೇನು ದೊಡ್ಡ ವಿಷ್ಯ ಆಗಿರಲಿಕ್ಕಿಲ್ಲ. ಮೆಂಟಲಿ ರಿಷಬ್ ತುಂಬಾನೆ ಸ್ಟ್ರಾಂಗ್ ಇದ್ದಾರೆ. ಜೊತೆಗೆ ಟ್ಯಾಲೆಂಟೆಡ್ ಪ್ಲೇಯರ್​ ಬೇರೆ. ಇನ್ನು ರಿಕ್ಕಿ ಪಾಂಟಿಂಗ್​ ಮತ್ತು ಸೌರವ್ ಗಂಗೂಲಿ ಇಬ್ಬರೂ ರಿಷಬ್​ ಪಂತ್​ಗೆ ಬೇಕಾದ ಟಿಪ್ಸ್​ಗಳನ್ನ ನೀಡ್ತಾ ಇದ್ದಾರೆ. ಬ್ಯಾಕ್​ಅಪ್​ ಮಾಡ್ತಾ ಇದ್ದಾರೆ. ಹೀಗಾಗ ಮುಂದಿನ ಐಪಿಎಲ್​​ ಟೂರ್ನಿಯಲ್ಲಿ ಮತ್ತು ಟೀಂ ಇಂಡಿಯಾಗೆ ಕಮ್​ಬ್ಯಾಕ್ ಮಾಡಿದ ಬಳಿಕ ರಿಷಬ್ ಪಂತ್ ಬ್ಯಾಟಿಂಗ್​​ನಲ್ಲಿ ಡಾಮಿನೇಟ್ ಮಾಡಿದ್ರೂ ಯಾವುದೇ ಆಶ್ಚರ್ಯ ಇಲ್ಲ. ರಿಷಬ್ ಪಂತ್ ಬ್ಯಾಟಿಂಗ್​ ನೋಡೋಕೆ, ಕೀಪಿಂಗ್ ವೇಳೆಗಿನ ಕಾಮೆಂಟ್ಸ್​​ ಕೇಳೋಕೆ ಕ್ರಿಕೆಟ್ ಫ್ಯಾನ್ಸ್ ಕೂಡ ಕಾಯ್ತಾ ಇದ್ದಾರೆ.

Sulekha