ಈಕೆ ಹಾಡಿದ್ದಕ್ಕೆ ಭೂಮಿಯೇ ಕಂಪಿಸಿತು! ಅಬ್ಬಾಬ್ಬಾ.. ಇವೆಳೆಂತಾ ಹಾಡುಗಾರ್ತಿ?

ಹಾಡು ಕೇಳಿದಾಗ ಕುಣಿಯಬೇಕು ಅಂತಾ ಅನ್ನಿಸುತ್ತದೆ. ನಮ್ಮ ಅಚ್ಚುಮೆಚ್ಚಿನ ಹಾಡು ಎಲ್ಲಾದರೂ ಕೇಳಿದರೆ ನಮಗೆ ಅರಿವಿಲ್ಲದಂತೆ ನಾವು ಹಾಡುತ್ತಾ ಕುಣಿಯುತ್ತೇವೆ. ಇನ್ನೂ ನಮ್ಮ ಅಚ್ಚುಮೆಚ್ಚಿನ ಹಾಡುಗಾರ ಎಲ್ಲಾದರೂ ನಮ್ಮ ಎದುರು ಬಂದು ಹಾಡಿದರೆ ಹುಚ್ಚೆದ್ದು ಕುಣಿಯುತ್ತೇವೆ. ಇದೀಗ ಆಂಗ್ಲ ಭಾಷೆಯ ಹಾಡುಗಾರ್ತಿಯೊಬ್ಬಳು ತನ್ನ ಅಭಿಮಾನಿಗಳ ಮುಂದೆ ಹಾಡು ಹಾಡಿದ್ದಾಳೆ. ಅವಳ ಹಾಡಿಗೆ ಆಕೆಯ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದು ಭೂಕಂಪವೇ ಆಗಿದೆ.
ಆಂಗ್ಲ ಭಾಷೆಯ ಹಾಡುಗಾರ್ತಿ ಟೈಲರ್ ಸ್ವಿಫ್ಟ್ಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಆಕೆ ತನ್ನ ಸುಮಧುರ ಕಂಠಕ್ಕಾಗೇ ಹೆಸರುವಾಸಿ. ಆದರೆ ಇಲ್ಲಿಯವರೆಗೆ ಓರ್ವ ಹಾಡುಗಾರ್ತಿಯಿಂದಾಗಿ ಭೂಮಿಯೇ ಕಂಪಿಸಬಹುದು ಎಂದು ಯಾರೂ ಅಂದುಕೊಂಡಿರಲಿಕ್ಕಿಲ್ಲ. ಇದೀಗ ಆಕೆಯ ಹಾಡಿಗೆ ಟೈಲರ್ ಸ್ವಿಫ್ಟ್ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದು, ಭೂಮಿ ಕಂಪಿಸಿದೆ.
ಇದನ್ನೂಓದಿ: ಬೆಂಗಳೂರಿನಲ್ಲಿ ಮನೆ ಬಾಡಿಗೆ ಪಡೆಯಲು ಜೇಬು ಗಟ್ಟಿ ಇರಬೇಕು! – 25 ಲಕ್ಷ ರೂ ಡೆಪಾಸಿಟ್, 2.5 ಲಕ್ಷ ರೆಂಟ್!
ಹೌದು. ಟೇಲರ್ ಸ್ವಿಫ್ಟ್ ಅವರ ಸಿಯಾಟಲ್ ಲೆಗ್ ಸಂಗೀತ ಕಛೇರಿ ಹೊಸ ದಾಖಲೆಯನ್ನೇ ನಿರ್ಮಿಸಿದೆ. ಟೈಲರ್ ಸ್ವಿಫ್ಟ್ರ ಕಟ್ಟರ್ ಅಭಿಮಾನಿಗಳನ್ನು ಸ್ವಿಫ್ಟೀಸ್ ಎಂದು ಕರೆಯಲಾಗುತ್ತದೆ. ಅವರು ಸಿಯಾಟೆಲ್ನಲ್ಲಿ ಇದೀಗ ತಮ್ಮ ಆದರ್ಶ ಹಾಡುಗಾರ್ತಿಯ ಹಾಡಿಗೆ ಕುಣಿದು ಬರೋಬ್ಬರಿ 2.3 ತೀವ್ರತೆಗೆ ಸಮನಾದ ಭೂಕಂಪವನ್ನು ಉಂಟುಮಾಡಿದ್ದಾರೆ.
ಸಿಯಾಟಲ್ ಟೈಮ್ಸ್ ಪ್ರಕಾರ, ವಾರಾಂತ್ಯದಲ್ಲಿ “ಆಂಟಿ ಹೀರೋ” ಗಾಯಕಿ ಸಿಯಾಟಲ್‌ನ ಲುಮೆನ್ ಫೀಲ್ಡ್‌ನಲ್ಲಿ ಬರೋಬ್ಬರಿ 1,44,000 ಅಭಿಮಾನಿಗಳಿಗೆ ಬ್ಯಾಕ್-ಟು-ಬ್ಯಾಕ್ ಶೋಗಳನ್ನು ಪ್ರದರ್ಶಿಸಿದ ಕಾರಣ ಈ ಅದ್ಭುತ ವಿದ್ಯಮಾನವು ಸಂಭವಿಸಿದೆ ಎನ್ನಲಾಗುತ್ತಿದೆ.
ಗ್ರ್ಯಾಮಿ ವಿಜೇತೆ ಟೈಲರ್ ಸ್ವಿಫ್ಟ್ ಅವರ ಸಂಗೀತ ಕಚೇರಿಗಳು ಭೂಕಂಪನಕ್ಕೆ ಕಾರಣವಾಗುತ್ತವೆ ಎಂದು ಊಹನೆಗೂ ಮೀರಿದ್ದು. ಮೂರುವರೆ ಗಂಟೆಗಳ ಅವಧಿಯ ಕಾಲ ಸಂಗೀತ ಕಛೇರಿ ನಡೆದಿದ್ದು, ಕ್ರೀಡಾಂಗಣದ ಪಕ್ಕದಲ್ಲಿರುವ ಭೂಕಂಪನ ಮಾಪಕದಲ್ಲಿ ಸಾಕಷ್ಟು ಗದ್ದಲವನ್ನು ಉಂಟುಮಾಡಿದೆ.
ದತ್ತಾಂಶವನ್ನು ವಿಶ್ಲೇಷಿಸಿದ ವೆಸ್ಟರ್ನ್ ವಾಷಿಂಗ್ಟನ್ ವಿಶ್ವವಿದ್ಯಾಲಯದ ಭೂವಿಜ್ಞಾನ ಪ್ರಾಧ್ಯಾಪಕ ಜಾಕಿ ಕ್ಯಾಪ್ಲಾನ್-ಔರ್‌ಬ್ಯಾಕ್, ಆಶ್ಚರ್ಯಚಕಿತರಾದರು. ಅವರು “ಇದು ಬೀಸ್ಟ್ ಕ್ವೇಕ್ಗಿಂತಲೂ ದೊಡ್ಡದಾಗಿದ್ದು ಆಶ್ಚರ್ಯಕಾರಿಯಾಗಿದೆ” ಎಂದಿದ್ದಾರೆ.