ವಿಮಾನ ಹೊರಟ ಕೆಲವೇ ಹೊತ್ತಲ್ಲಿ ಸುಟ್ಟ ವಾಸನೆ – ವಾಸನೆ ಮೂಲ ಕಂಡುಹಿಡಿದ ಅಧಿಕಾರಿಗಳಿಗೆ ಶಾಕ್!‌

ವಿಮಾನ ಹೊರಟ ಕೆಲವೇ ಹೊತ್ತಲ್ಲಿ ಸುಟ್ಟ ವಾಸನೆ – ವಾಸನೆ ಮೂಲ ಕಂಡುಹಿಡಿದ ಅಧಿಕಾರಿಗಳಿಗೆ ಶಾಕ್!‌

ತಿರುವನಂತಪುರಂ: ವಿಮಾನ ಪ್ರಯಾಣ ವೇಳೆ ತಾಂತ್ರಿಕ ದೋಷ ಕಂಡುಬಂದರೆ ಅಥವಾ ಯಾವುದಾದರೂ ತುರ್ತು ಪರಿಸ್ಥಿತಿಗಳಲ್ಲಿ ಲ್ಯಾಂಡಿಂಗ್‌  ಆಗುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಂದು ಕಡೆ ವಿಮಾನದಲ್ಲಿ ಈರುಳ್ಳಿ ವಾಸನೆ ಬಂತೆಂದು ವಿಮಾನವನ್ನು ತುರ್ತು ಲ್ಯಾಂಡಿಂಗ್‌ ಮಾಡಿರುವ ಘಟನೆ ನಡೆದಿದೆ.

ಇದನ್ನೂ ಓದಿ: ಮುದ್ದಿನ ಗಿಳಿ ನಾಪತ್ತೆ – ಹುಡುಕಿಕೊಟ್ಟವರಿಗೆ ಬಂಪರ್‌ ಗಿಫ್ಟ್‌!

ಹೌದು, ಕೇರಳದ ಕೊಚ್ಚಿಯಿಂದ ಯುಎಇಯ ಶಾರ್ಜಾಗೆ ತೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನ ವಿಮಾನ ಹೊರಟಿದೆ. ಈ ವಿಮಾನದಲ್ಲಿ ಸುಮಾರು 175 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ವಿಮಾನ ಹೊರಟ ಕೆಲವೇ ಹೊತ್ತಲ್ಲಿ  ಏನೋ ಸುಟ್ಟಿರುವಂತಹ ವಾಸನೆ ಬಂದಿದೆ.  ಆತಂಕಗೊಂಡ ಪೈಲೆಟ್‌ಗಳು ಮತ್ತೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಹಿಂದಿರುಗಿದ್ದಾರೆ. ವಿಮಾನ ಲ್ಯಾಂಡಿಂಗ್‌ ಆದ ಕೂಡಲೇ ಪ್ರಯಾಣಿಕರನ್ನು ಕೆಳಗೆ ಇಳಿ ತಪಾಸಣೆ ನಡೆಸಿದ್ದಾರೆ. ಈ ದುರ್ವಾಸನೆ ಎಲ್ಲಿಂದ ಬರುತ್ತಿದೆ ಅಂತಾ ನೋಡಿದಾಗ ಅಸಲಿ ವಿಚಾರ ಬಯಲಾಗಿದೆ.

ಲ್ಯಾಂಡಿಂಗ್‌ ಬಳಿಕ ವಿಮಾನ ಪರಿಶೀಲಿಸಿದಾಗ ಯಾವುದೇ ತಾಂತ್ರಿಕ ದೋಷ ಕಂಡು ಬಂದಿಲ್ಲ. ಬಳಿಕ ಈ ದುರ್ವಾಸನೆ ಎಲ್ಲಿಂದ ಬರುತ್ತಿದೆ ಎಂದು ನೋಡಿದಾಗ ಪೈಲೆಟ್‌ಗಳು ಶಾಕ್‌ ಆಗಿದ್ದಾರೆ. ವಿಮಾನದಲ್ಲಿ ಕೆಟ್ಟ ವಾಸನೆ ಯಾವುದೇ ತಾಂತ್ರಿಕ ದೋಷದಿಂದ ಬಂದಿರಲಿಲ್ಲ. ಬದಲಾಗಿ ಸರಕು ಸರಂಜಾಮು ಭಾಗದಲ್ಲಿದ್ದ ಈರುಳ್ಳಿ, ತರಕಾರಿಗಳಿಂದ ಆ ರೀತಿಯ ವಾಸನೆ ಬಂದಿದೆ ಎಂಬುದು ಗೊತ್ತಾಗಿದೆ.

suddiyaana