ಧೋನಿ, ಕೊಹ್ಲಿ ಮೀರಿಸಿದ ಯಶಸ್ವಿ ಲುಕ್? – ಹೇರ್ ಸ್ಟೈಲ್ ಟ್ರೋಲ್ ಆಗಿದ್ಯಾಕೆ?
ಬಾಲ್ಯ ನೆನಪಿಸಿದ ಜೈಸ್ವಾಲ್ ಕ್ರಾಪ್!

ಟಿ 20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇಡೀ ದೇಶವೇ ಸಂಭ್ರಮದಲ್ಲಿ ತೇಲಾಡುತ್ತಿದೆ.. ಕಪ್ ಗೆದ್ದು ತವರಿಗೆ ಆಗಮಿಸುತ್ತಿದ್ದಂತೆ ಕ್ರಿಕೆಟರ್ಸ್ ಹಾಗೂ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿತ್ತು. ಕ್ರಿಕೆಟರ್ಸ್ ಜೊತೆ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ರು. ಆದ್ರೆ ಇವೆಲ್ಲದರ ಮಧ್ಯೆ ಯಂಗ್ ಪ್ಲೇಯರ್ ಸೆಂಟರ್ ಆಫ್ ಆಟ್ರ್ಯಾಕ್ಷನ್ ಆಗಿದ್ರು.. ಆ ಆಟಗಾರ ಬೇರೆ ಯಾರು ಅಲ್ಲ.. ಯಶಸ್ವಿ ಜೈಸ್ವಾಲ್.. ನಿನ್ನೆ ಅವರ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ರು.. ನಿಮ್ಮನ್ನ ನೋಡಿ ನಮ್ಮ ಬಾಲ್ಯವೇ ನೆನಪಾಯ್ತು ಅಂತಾ ಅಭಿಮಾನಿಗಳು ಹೇಳ್ತಾ ಇದ್ರೆ, ಇತ್ತ ಈ ಫೋಟೋ ಟ್ರೋಲ್ ಪೇಜ್‌ಗಳಿಗೆ ಆಹಾರವಾಗಿದೆ.. ಅಷ್ಟಕ್ಕೂ ಜೈಸ್ವಾಲ್ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದು ಯಾಕೆ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ZIM ಸರಣಿಗೆ ಗಿಲ್ ಪಡೆ ರೆಡಿ – ಯಂಗ್ ಟೈಗರ್ಸ್ಗಿರೋ ಸವಾಲೇನು?
ವಿರಾಟ್ ಕೊಹ್ಲಿ, ಎಂ. ಎಸ್ ಧೋನಿ ಟ್ರೆಂಡ್ ಸೆಟ್ಟರ್ ಅಂತ ಅಭಿಮಾನಿಗಳಿಂದ ಕರೆಸಿಕೊಳ್ತಾರೆ. ಇವರಿಬ್ಬರು ಆಗಾಗ ಹೊಸ ಹೇರ್‌ಸ್ಟೈಲ್ ಮೂಲಕ ಕಾಣಿಸಿಕೊಳ್ಳುತ್ತಾರೆ.. ಇವರ ಒಂದೊಂದು ಹೇರ್‌ಸ್ಟೈಲ್ ಗೂ ಇಡೀ ಭಾರತದ ಯುವಕರು ಮಾರು ಹೋಗಿದ್ದಾರೆ. ಇವರ ಕೂದಲಿನ ವಿನ್ಯಾಸದ ಫೋಟೋಗಳನ್ನು ಈಗಲೂ ಸಲೂನ್ಗಳಲ್ಲಿ ಕಾಣಬಹುದು. ಇದೀಗ ಹೇರ್‌ಸ್ಟೈಲ್ ವಿಚಾರಕ್ಕೆ ಟೀಮ್ ಇಂಡಿಯಾದ ಯಂಗ್ ಮ್ಯಾನ್ ಜೈಸ್ವಾಲ್ ಸುದ್ದಿಯಲ್ಲಿದ್ದಾರೆ.
ಬಾರ್ಬಡೋಸ್‌ನಲ್ಲಿನ ಟಿ20 ವಿಶ್ವಕಪ್ ಗೆಲುವಿನ ಬಳಿಕ ಟೀಂ ಇಂಡಿಯಾ ಆಟಗಾರರು ತಾಯ್ನಾಡು ಭಾರತಕ್ಕೆ ಮರಳಿದ್ದಾರೆ. ದೆಹಲಿಗೆ ಬಂದಿಳಿದ ಟೀಂ, ಮೊದಲು ಪ್ರಧಾನಿಯನ್ನು ಭೇಟಿ ಮಾಡಿದೆ. ಈ ವೇಳೆ ಬಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅವರ ಲುಕ್ ಎಲ್ಲರ ಗಮನ ಸೆಳೆದಿದೆ. ಜೈಸ್ವಾಲ್ ಹೊಸ ಹೇರ್ ಸ್ಟೈಲ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಭಾರತಕ್ಕೆ ಆಗಮಿಸಿದ ವೇಳೆ ಟೀಂ ಇಂಡಿಯಾ ಆಟಗಾರರು ಪ್ರಧಾನಿ ಮೋದಿ ಅವರನ್ನ ಭೇಟಿಯಾಗಿದ್ದಾರೆ. ಪ್ರಧಾನಿ ಭೇಟಿಗೆ ಪ್ಲೇಯರ್ಸ್ ಬರುವಾಗ ಕೆಲ ನಿಯಮಗಳನ್ನು ಪಾಲಿಸಲಾಗಿತ್ತು. ಕ್ರಿಕೆಟಿಗರು ನ್ಯೂ ಲುಕ್ನಲ್ಲಿ ಕಣಿಸಿಕೊಂಡಿದ್ದರು. ಆದರೆ ಈ ವೇಳೆ ಭಾರತದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಹೇರ್‌ಸ್ಟೈಲ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಏಕೆಂದರೆ ಮಗು ಶಾಲೆಗೆ ಹೋಗುವಾಗ ಅಮ್ಮ ಯಾವ ರೀತಿ ತಲೆ ಬಾಚುತ್ತಾರೋ ಆ ರೀತಿ ಯಶಸ್ವಿ ಜೈಸ್ವಾಲ್ ಕೇಶವಿನ್ಯಾಸವಿತ್ತು. ಇದೀಗ ಜೈಸ್ವಾಲ್ ಫೋಟೋಗಳನ್ನ ಟ್ರೋಲ್ ಮಾಡಲಾಗುತ್ತಿದೆ.
ʼತಾಯಿ ನಿಮ್ಮ ಕೂದಲನ್ನು ಬಾಚಿದಾಗʼ ಎಂದು ಪುಟ್ಟ ಮಗು ಹಾಗೂ ಜೈಸ್ವಾಲ್ ಫೋಟೋ ಕೊಲಾಜ್ ಮಾಡಿ ಹರಿಬಿಡಲಾಗಿದೆ. ಯಶಸ್ವಿ ಜೈಸ್ವಾಲ್ ಪೇರೆಂಟ್ಸ್ ಮೀಟಿಂಗ್ ಹೋಗುವುದಕ್ಕಾಗಿ ನೀಟ್ ಆಗಿ ಬಾಚಿಕೊಂಡಿದ್ದಾರೆ ಅಂತ ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಭಾರತದ ಪ್ರತಿ ಅಮ್ಮನ ಪ್ರೀತಿಯ ಹೇರ್‌ಸ್ಟೈಲ್ ಇದು ಎಂದು ಜೈಸ್ವಾಲ್ ಫೋಟೋ ಶೇರ್ ಮಾಡಿದ್ದಾರೆ. ಮತ್ತೊಬ್ಬರು ಯಾವಾಗ ನಿಮ್ಮ ಅಮ್ಮ ತಲೆ ಬಾಚುತ್ತಾರೋ ಈ ಹೇರ್‌ಸ್ಟೈಲ್ ಬರುವುದು ಕಾಮನ್ ಎಂದು ಜೈಸ್ವಾಲ್ ಮತ್ತು ಬೇಬಿ ಫೋಟೋ ಶೇರ್ ಮಾಡಿದ್ದಾರೆ. ಹೀಗೆ ಜೈಸ್ವಾಲ್ ಲುಕ್‌ಗೆ ಸೋಶಿಯಲ್ ಮೀಡಿಯಾ ಬಳಕೆದಾರರಿಂದ ಕಾಮೆಂಟ್ ಬರ್ತಾ ಇದೆ.