ರಿಷಬ್ ಪಂತ್ ರೀ ಎಂಟ್ರಿ ಯಾವಾಗ ?- ಸೌರವ್ ಗಂಗೂಲಿ ಉತ್ತರ ಕೇಳಿ ಫ್ಯಾನ್ಸ್ ಶಾಕ್..!

ರಿಷಬ್ ಪಂತ್ ರೀ ಎಂಟ್ರಿ ಯಾವಾಗ ?- ಸೌರವ್ ಗಂಗೂಲಿ ಉತ್ತರ ಕೇಳಿ ಫ್ಯಾನ್ಸ್ ಶಾಕ್..!

ಟೀಮ್ ಇಂಡಿಯಾದ ವಿಕೆಟ್ ಕೀಪರ್ ರಿಷಬ್ ಪಂತ್ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ರಿಷಬ್ ಪಂತ್ ಶಸ್ತ್ರಚಿಕಿತ್ಸೆಯ ನಂತರ ನಿಧಾನವಾಗಿ ಗುಣಮುಖರಾಗುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿದ್ದರೂ ಕೂಡಾ ಅಪಘಾತಕ್ಕೊಳಗಾಗಿದ್ದರಿಂದ ಐಪಿಎಲ್‌ನಿಂದಲೂ ಹೊರಗುಳಿಯಬೇಕಾಗಿದೆ. ಆದರೆ, ಅಭಿಮಾನಿಗಳು ಮಾತ್ರ ರಿಷಬ್ ಪಂತ್ ಕಮ್ ಬ್ಯಾಕ್ ಮಾಡುವುದನ್ನೇ ಕಾಯ್ತಿದ್ದಾರೆ. ಈ ಬಗ್ಗೆ ಈಗ ಸೌರವ್ ಗಂಗೂಲಿ ಕೂಡಾ ಕೆಲ ಅಪ್‌ಡೇಟ್ಸ್ ಕೊಟ್ಟಿದ್ದಾರೆ.

ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಟಾರ್ ಕ್ರಿಕೆಟಿಗ ಶಾರ್ದೂಲ್ – ಮದುವೆ ಫೋಟೋಸ್ ವೈರಲ್

ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ರಿಷಭ್ ಪಂತ್ ಯಾವಾಗ ಕಮ್ ಬ್ಯಾಕ್ ಮಾಡ್ತಾರೆ ಅನ್ನೋದರ ಬಗ್ಗೆ ಮಾತನಾಡಿದ್ದಾರೆ. ರಿಷಭ್ ಪಂತ್ ತಂಡಕ್ಕೆ ಮರಳಲು ಕನಿಷ್ಠ ಒಂದರಿಂದ ಎರಡು ವರ್ಷ ಬೇಕು ಎಂದು ಸೌರವ್ ಗಂಗೂಲಿ ತಿಳಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಪಂತ್ ಸ್ಥಾನ ತುಂಬುವುದು ತುಂಬಾ ಕಷ್ಟ. ಅವರ ಬದಲಿ ಆಯ್ಕೆ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಅಪಘಾತದ ನಂತರ ನಾನು ಪಂತ್ ಅವರೊಂದಿಗೆ ಎರಡು ಬಾರಿ ಮಾತನಾಡಿದೆ. ಅವರು ಇದೀಗ ಕಠಿಣ ಸಮಯವನ್ನು ಎದುರಿಸುತ್ತಿದ್ದಾರೆ. ಗಾಯಗಳು ಮತ್ತು ಶಸ್ತ್ರಚಿಕಿತ್ಸೆಯಿಂದ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಗಂಗೂಲಿ ತಿಳಿಸಿದರು. ಅಲ್ಲದೆ ಪ್ರಸ್ತುತ ಸನ್ನಿವೇಶ ಗಮನಿಸಿದರೆ ರಿಷಭ್ ಪಂತ್ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಲು ಒಂದು ವರ್ಷದಿಂದ ಎರಡು ವರ್ಷಗಳು ಬೇಕಾಗಬಹುದು. ಇದು ಆತನ ಪಾಲಿಗೆ ಕಠಿಣ ಸಮಯ ಎಂದು ಸೌರವ್ ಗಂಗೂಲಿ ತಿಳಿಸಿದ್ದಾರೆ. ಇದರೊಂದಿಗೆ ಮುಂಬರುವ ಏಕದಿನ ವಿಶ್ವಕಪ್‌ನಲ್ಲೂ ರಿಷಭ್ ಪಂತ್ ಕಾಣಿಸಿಕೊಳ್ಳುವುದಿಲ್ಲ ಎಂಬುದು ಕನ್ಫರ್ಮ್ ಆಗಿದೆ. ಅಲ್ಲದೆ 2024 ಅಥವಾ 2025 ರಲ್ಲಿ ರಿಷಭ್ ಪಂತ್ ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳಬಹುದು. ಆದರೆ, ರಿಷಭ್ ಪಂತ್ ರೀ ಎಂಟ್ರಿಯಾಗುವ ಸಮಯದಲ್ಲಿ ಬೇರೆ ವಿಕೆಟ್ ಕೀಪರ್ ಗಳು ಮಿಂಚಿದರೆ ಪಂತ್ ಕಂಬ್ಯಾಕ್ ಮತ್ತಷ್ಟು ಕಷ್ಟಕರವಾಗಿರಲಿದೆ.

suddiyaana