ಬಲಿಷ್ಠ ಹರಿಣಗಳನ್ನು ಬೇಟೆಯಾಡಿದ ಡಚ್ಚರು – ನೆದರ್ಲ್ಯಾಂಡ್‌ನಲ್ಲಿ ಕ್ರಿಕೆಟ್ ಕ್ರೇಜ್ ಶುರುವಾಗಿದ್ದು ಯಾವಾಗ?

ಕ್ರಿಕೆಟ್ನಲ್ಲಿ ಏನು ಬೇಕಾದ್ರೂ ಅಗಬಹುದು.. ಅದ್ರಲ್ಲೂ ವರ್ಲ್ಡ್ಕಪ್ ಟೂರ್ನಿಯಲ್ಲಂತೂ ಯಾರು ಬೇಕಿದ್ದರೂ ಗೆಲ್ಲಬಹುದು ಅನ್ನೋದು ಪದೇ ಪದೇ ಪ್ರೂವ್ ಆಗುತ್ತಲೇ ಇದೆ. ಇದೀಗ ಡಚ್ಚರು ಬಲಿಷ್ಠ ಹರಿಣಗಳ ಹೆಡೆಮುರಿಕಟ್ಟಿದ್ದಾರೆ. ಹಾಗಾದರೆ, ನೆದರ್ಲ್ಯಾಂಡ್ ಕ್ರಿಕೆಟ್ ಟೀಂ ಸಕ್ಸಸ್ ಸ್ಟೋರಿಗೂ ಮೊದಲು ಡಚ್ಚರ ಕ್ರಿಕೆಟ್ ಇತಿಹಾಸದ ಬಗ್ಗೆ ತಿಳಿದುಕೊಳ್ಳಬೇಕು.
ಇದನ್ನೂ ಓದಿ: ಅಕ್ಟೋಬರ್ 20ಕ್ಕೆ ಬೆಂಗಳೂರಿನಲ್ಲಿ ಮೊದಲ ವಿಶ್ವಕಪ್ ಪಂದ್ಯ – ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಖಾಕಿ ಹೈಅಲರ್ಟ್
18ನೇ ಶತಮಾನದಲ್ಲಿ ಬ್ರಿಟಿಷ್ ವ್ಯಾಪಾರಸ್ಥರಿಂದಾಗಿ ನೆದರ್ಲ್ಯಾಂಡ್ಗೂ ಕ್ರಿಕೆಟ್ ಕಾಲಿಟ್ಟಿತು. 1845ರಲ್ಲಿ ಹೇಗ್ನಲ್ಲಿರುವ ಬೋರ್ಡಿಂಗ್ ಸ್ಕೂಲ್ ಒಂದರಲ್ಲಿ ಮೊಟ್ಟ ಮೊದಲ ಬಾರಿಗೆ ಕ್ರಿಕೆಟ್ ಮ್ಯಾಚ್ ನಡೆದಿತ್ತು. ನಿಧಾನಕ್ಕೆ ನೆದರ್ಲ್ಯಾಂಡ್ನ ಶಾಲೆಗಳಲ್ಲಿ ಕ್ರಿಕೆಟ್ ಕ್ರೇಜ್ ಶುರುವಾಯ್ತು. ಇದ್ರ ಪರಿಣಾಮ 1870 -1880ರ ದಶಕದಲ್ಲಿ ಡಚ್ಚರ ನಾಡಲ್ಲಿ ಹಲವು ಕ್ರಿಕೆಟ್ ಕ್ಲಬ್ಗಳ ಸ್ಥಾಪನೆಯಾಯ್ತು. 1881ರಲ್ಲಿ ಇಂಗ್ಲೆಂಡ್ನ ಬ್ರಿಡ್ಜ್ ಕ್ರಿಕೆಟ್ ಕ್ಲಬ್ ಮೊದಲ ಬಾರಿಗೆ ನೆದರ್ಲ್ಯಾಂಡ್ ಪ್ರವಾಸ ಕೈಗೊಂಡಿತ್ತು. ಆದ್ರೆ ಇಂಗ್ಲಿಷರ ಮುಂದೆ ಡಚ್ ಕ್ರಿಕೆಟ್ ಕ್ಲಬ್ ಸೋತಿತ್ತು. ಇದಾಗಿ ಎರಡೇ ವರ್ಷಗಳಲ್ಲಿ ನೆದರ್ಲ್ಯಾಂಡ್ ಕ್ರಿಕೆಟ್ ಕ್ಲಬ್ ಸ್ಥಾಪನೆಯಾಗಿತ್ತು. ಆದ್ರೆ ಮೊದಲನೇ ಮಹಾಯುದ್ಧದಿಂದ ನೆದರ್ಲ್ಯಾಂಡ್ ಕ್ರಿಕೆಟ್ನಲ್ಲಿ ಸಾಕಷ್ಟು ಬದಲಾವಣೆಯಾಯ್ತು. 1914-1918ರ ಅವಧಿಯಲ್ಲಿ ಬಿಟ್ರೀಷ್ ಯೋಧರು ನೆದರ್ಲ್ಯಾಂಡ್‌ನಲ್ಲಿ ಬೀಡು ಬಿಟ್ಟಿದ್ದರು. ಈ ಸಂದರ್ಭದಲ್ಲಿ ನೆದರ್ಲ್ಯಾಂಡ್ ಕ್ಲಬ್ ಮತ್ತು ಬ್ರಿಟೀಷರ ಮಧ್ಯೆ ಕ್ರಿಕೆಟ್ ಮ್ಯಾಚ್ಗಳು ನಡೆದಿದ್ರಿಂದ ಡಚ್ಚರಲ್ಲಿ ಹಲವು ಟ್ಯಾಲೆಂಟೆಡ್ ಕ್ರಿಕೆಟರ್ಸ್ ಬೆಳಕಿಗೆ ಬಂದರು. ಆದರೆ, ಎರಡನೇ ಮಹಾಯುದ್ಧ ನೆದರ್ಲ್ಯಾಂಡ್‌ನಲ್ಲಿ ಕ್ರಿಕೆಟ್ನ್ನ ಅಕ್ಷರಶ: ಕೊಂದೇ ಬಿಟ್ಟಿತ್ತು. ನಾಜಿಗಳು ನೆದರ್ಲ್ಯಾಂಡ್ನ್ನ ಮುತ್ತಿಕೊಂಡಿದ್ರಿಂದಾಗಿ ಕ್ರಿಕೆಟ್ಗೂ ಬ್ರೇಕ್ ಬಿದ್ದಿತ್ತು. ಹಾಗಂತಾ ಕ್ರಿಕೆಟ್ ಆಡೋದನ್ನ ಡಚ್ಚರು ಸಂಪೂರ್ಣವಾಗಿ ಬಂದ್ ಮಾಡಿರಲಿಲ್ಲ. ಮಹಾಯುದ್ಧದ ಮಧ್ಯೆಯೂ ಒಂದಷ್ಟು ಕ್ರಿಕೆಟ್ ಮ್ಯಾಚ್ಗಳು ನಡೀತಾನೆ ಇದ್ದವು. ಹೀಗಾಗಿ ಕ್ರಿಕೆಟ್ ಅನ್ನೋದು ಡಚ್ಚರ ಪಾಲಿಗೆ ಒಂದು ಪ್ಯಾಷನ್ ಆಗಿಬಿಟ್ಟಿದೆ. ಈಗ ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾದಂಥಾ ತಂಡವನ್ನ ಮಣಿಸಿದೆ ಅಂದ್ರೆ ಅದಕ್ಕೆ ಕಾರಣವೇ ನೆದರ್ಲ್ಯಾಂಡ್ ಕ್ರಿಕೆಟರ್ಸ್ಗೆ ಇರುವ ಪ್ಯಾಷನ್. ಪ್ಯಾಷನ್ಗೋಸ್ಕರ ತಮ್ಮ ಖುಷಿಗೋಸ್ಕರ ಆಡಿಯೇ ಈ ಮಟ್ಟಕ್ಕೆ ಬೆಳೆದಿದ್ದಾರೆ. ನಿಮಗೆ ಗೊತ್ತಿರಲಿ, ನೆದರ್ಲ್ಯಾಂಡ್ ತಂಡದಲ್ಲಿ ಆಡ್ತಿರುವ ಇವಱರೂ ಕೂಡ ಪ್ರೊಫೆಷನಲ್ ಕ್ರಿಕೆಟರ್ಸ್ಗಳೇನಲ್ಲಾ. ಕ್ರಿಕೆಟ್ನಿಂದಲೇ ಇವರು ಜೀವನ ಸಾಗಿಸ್ತಿಲ್ಲ. ಕ್ರಿಕೆಟ್ನಿಂದ ನೆದರ್ಲ್ಯಾಂಡ್ ಪ್ಲೇಯರ್ಸ್ಗಳಿಗೆ ಅಷ್ಟೊಂದು ಹಣ ಕೂಡ ಸಿಗ್ತಿಲ್ಲ. ಹೀಗಾಗಿ ಈ ಎಲ್ಲಾ ಆಟಗಾರರು ಜೀವನಕ್ಕೆ ಬೇರೆ ಬೇರೆ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ.