ಜೈಲು ತಪ್ಪಿಸಲು ದರ್ಶನ್ ಬಿಪಿ ನಾಟಕ? – ಬೇಕೆಂದೇ ಸರ್ಜರಿ ಸಹಿಗೆ ಪತ್ನಿ ಹಿಂದೇಟು?
ಆಪರೇಷನ್ ಡ್ರಾಮಾದ ಅಸಲಿ ಸೀಕ್ರೆಟ್
ಕೊಲೆ ಕೇಸ್ನಲ್ಲಿ ಆರೋಪಿ ಆಗಿರುವ ನಟ ದರ್ಶನ್ , ಮೆಡಿಕಲ್ ಬೇಲ್ ಮೇಲೆ ಜೈಲಿಂದ ಹೊರಗೆ ಬಂದಿದ್ದಾರೆ. ಪರಪ್ಪನ ಅಗ್ರಹಾರ ಜೈಲಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗ್ತಿದ್ದಂತೆ ದರ್ಶನ್ಗೆ ಬೆನ್ನು ನೋವು ಹೆಚ್ಚಾಗಿತ್ತು. ಬಳಿಕ ಹೈಕೋರ್ಟ್ ನಟ ದರ್ಶನ್ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಜೈಲಿಂದ ಹೊರಗೆ ಬಂದ ದರ್ಶನ್ ಚಿಕಿತ್ಸೆಗೆಂದು ಬೆಂಗಳೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆಗೆ ದಾಖಲಾದ್ರು. ಡಿಸೆಂಬರ್ 11ರಂದು ನಟ ದರ್ಶನ್ಗೆ ಆಪರೇಷನ್ ಮಾಡಲಾಗುತ್ತೆ ಎಂದು ವಕೀಲರು ಕೋರ್ಟ್ಗೆ ತಿಳಿಸಿದ್ರು. ಆದ್ರೆ 11 ಕಳೆದು ಇನ್ನೊಂದು ದಿನವಾದ್ರು ದರ್ಶನ್ಗೆ ಆಪರೇಷನ್ ಆಗಿಲ್ಲ. ಇದನ್ನೇಲ್ಲೆ ನೋಡಿದ್ರೆ ಜಗ್ಗು ಮಹಾನ್ ಕಿಲಾಡಿ ಅನ್ಸುತ್ತೆ.
ಇದನ್ನೂ ಓದಿ:RCBಗೆ ಬೆಸ್ಟ್ ಫಿನಿಶರ್ ಯಾರು? – DK ಬಾಸ್ ಸ್ಥಾನಕ್ಕೆ ಮೂವರ ರೇಸ್
ಬಳ್ಳಾರಿ ಜೈಲಿನಲ್ಲಿದ್ದ ದರ್ಶನ್ಗೆ ಬೆನ್ನು ನೋವು ಕಾಡಿತ್ತು. ಕೂರೋಕು, ನಡೆಯೋಕು ಕಷ್ಟ ಕಷ್ಟವಾಗಿತ್ತಂತೆ. ಜೈಲಿನಲ್ಲೇ ಚಿಕಿತ್ಸೆ ಪಡೆದ್ರು ನೋವು ಕಡಿಮೆ ಆಗಲಿಲ್ಲ. ಹೆಚ್ಚಿನ ಟ್ರೀಟ್ಮೆಂಟ್ ಜೊತೆಗೆ ಸರ್ಜರಿ ಅಗತ್ಯವಿದೆ ಎಂದು ವೈದ್ಯರು ವರದಿ ನೀಡಿದ್ರು. ಬಳಿಕ ಹೈಕೋರ್ಟ್ ನಟ ದರ್ಶನ್ಗೆ ಷರತ್ತುಬದ್ಧ ಮೆಡಿಕಲ್ ಬೇಲ್ ಮಂಜೂರು ಮಾಡಿತ್ತು. ಸರ್ಜರಿ ಮಾಡಿಸಿಕೊಳ್ಳದಿದ್ರೆ ದರ್ಶನ್ಗೆ ಸ್ಟ್ರೋಕ್ ಆಗುವ ಸಾಧ್ಯತೆ ಇದೇ ಎಂದು ವಕೀಲರು ಹೇಳಿದ್ರು. ಆದ್ರೆ ದರ್ಶನ್ ಆಸ್ಪತ್ರೆ ಸೇರಿ ವಾರಗಳೇ ಕಳೆದು ಸರ್ಜರಿ ಮಾಡಿಲ್ಲ ಯಾಕೆ ಎನ್ನುವ ಪ್ರಶ್ನೆ ಮೂಡಿದೆ.
ಡಿಸೆಂಬರ್ 11ರಂದು ನಟ ದರ್ಶನ್ಗೆ ವೈದ್ಯರು ಸರ್ಜರಿ ಮಾಡಲಿದ್ದಾರೆ ಎಂದು ಹಿರಿಯ ವಕೀಲರಾದ ಸಿವಿ ನಾಗೇಶ್ ಅವರು ಹೈಕೋರ್ಟ್ಗೆ ತಿಳಿಸಿದ್ರು. ಆದ್ರೆ ಹೇಳಿದ ಟೈಂ ಆದ್ರೂ ದರ್ಶನ್ಗೆ ಸರ್ಜರಿಯನ್ನೇ ಮಾಡಿಲ್ಲ ಎನ್ನುವ ಮಾಹಿತಿ ಹೊರಬಿದ್ದಿದೆ. ಸರ್ಜರಿ ಮಾಡಬೇಕು ಅಂದ್ರೆ ಬೆಳಗಿನಿಂದಲೇ ಅಪರೇಷನ್ ತಯಾರಿ ಹಾಗೂ ದರ್ಶನ್ ಆರೋಗ್ಯ ತಪಾಸಣೆ ಮಾಡ್ತಾರೆ. ಆದ್ರೆ 11 ರಂದು ಯಾವುದೇ ತಪಾಸಣೆ ನಡೆದಿಲ್ಲ ಎನ್ನಲಾಗ್ತಿದೆ.
ಬಿಪಿ ಡ್ರಾಮಾ ಮುಗಿತು ಈಗ ಹೊಸ ವರಸೆ!
ಮೊದಲು ಕೋರ್ಟ್ ಯಾಕೆ ಇನ್ನೂ ಆಪರೇಷನ್ ಮಾಡಿಲ್ಲ ಅಂತಾ ಕೇಳಿದ್ರೆ, ಸರ್ ಅವರಿಗೆ ಬಿಪಿ ಕಂಟ್ರೋಲ್‌ಗೆ ಬರ್ತಿಲ್ಲ. ಅದಕ್ಕೆ ಆಪರೇಷನ್ ಮಾಡೋಕೆ ಆಗುತ್ತಿಲ್ಲ ಅಂತಾ ಹೇಳುತ್ತಿದ್ದಾರೆ. ಆದ್ರೆ ಈಗ ಆಪರೇಷನ್ ಮಾಡೋದು ವಿಜಯಲಕ್ಷೀಗೆ ಇಷ್ಟ ಇಲ್ಲ ಅನ್ನೋ ಮಾತು ಕೇಳಿ ಬರ್ತಿದೆ. ಯಾಕಂದ್ರೆ ಬೆನ್ನು ನೋವಿನ ಆಪರೇಷನ್, ಸಣ್ಣ-ಪುಟ್ಟ ಸರ್ಜರಿ ಅಲ್ಲ. ದೊಡ್ಡ ರಿಸ್ಕ್ ಇರುತ್ತೆ. ಸರಿದಿರುವ ಬೆನ್ನಿನ ಮೂಳೆಯನ್ನು ಸರಿಯಾದ ಜಾಗಕ್ಕೆ ಫಿಕ್ಸ್ ಮಾಡ್ತಾರೆ. ಒಂದು ವೇಳೆ ಆಪರೇಷನ್ ಪೇಲ್ಯೂರ್ ಆದ್ರೆ ದರ್ಶನ್ ಬೆಡ್‌ನಲ್ಲೇ ಇರಬೇಕಾಗಬಹುದು. ಹೀಗಾಗಿಯೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸರ್ಜರಿ ಬಗ್ಗೆ ಟೆನ್ಷನ್ ಆಗಿದ್ದಾರೆ ಎನ್ನುವ ಮಾತು ಕೇಳಿಬರ್ತಿದೆ. ಸರ್ಜರಿ ಮಾಡಲು ವಿಜಯಲಕ್ಷ್ಮಿ ಅನುಮತಿ ನೀಡಿಲ್ಲ ಎನ್ನಲಾಗ್ತಿದೆ.
ಆಪರೇಷನ್ ಇಲ್ಲ, ಜಗ್ಗು ಮಹಾನ್ ಕಿಲಾಡಿ
ಇನ್ನೂ ಬೇಲೆ ಸಿಗಬೇಕಾದ್ರ ಮೊದಲು ಮೀಡಿಯಾ ಮುಂದೆ ಡಿ ಬಾಸ್ ದರ್ಶನ್ ಬೆನ್ನು ಹಿಡಿದುಕೊಂಡು ಓಡಾಡುತ್ತಿದ್ದರು.. ಎಲ್ಲರ ಕಣ್ಣಿಗೂ ನನಗೆ ಬೆನ್ನು ನೋವು ಇದೆ ಅನ್ನೋದು ಗೊತ್ತಾಗಲಿ ಅನ್ನೋ ತರ ಇರುತ್ತಿದ್ದರು.. ಒಂದು ಚಿಕ್ಕ ಬ್ಯಾಗ್ ಎತ್ತೋಕೆ ಹೆಣಗಾಡುತ್ತಿದ್ದರು.. ಇದನ್ನ ನೋಡಿದವರು ಛೇ ದರ್ಶನ್‌ಗೆ ಎಂತಹ ಸ್ಥಿತಿ ಬಂತು.. 2-3 ದಿನದಲ್ಲಿ ದರ್ಶನ್‌ಗೆ ಆಪರೇಷನ್ ಮಾಡಿಸಿಲ್ಲ ಅಂದ್ರೆ ಕಷ್ಟ ಇದೆ ಅನ್ಕೊಂಡಿದ್ರು.. ಕೋರ್ಟ್ ಕೂಡ ಇದೆ ಕಾರಣಕ್ಕೆ ಬೇಲ್ ನೀಡಿತ್ತು. ಆದ್ರೆ ದರ್ಶನ್ ಜೈಲಿನಿಂದ ಹೊರ ಬಂದು 7 ವಾರ ಕಳೆದ್ರೂ ಆಪರೇಷನ್ ಮಾಡಿಸಿಲ್ಲ. ಬಿಪಿ ಕಾರಣ ಹೇಳುತ್ತಾ ಮಂದೂಡುತ್ತಾ ಬಂದಿದ್ರು. ಆದ್ರೆ ಈಗ ಆಪರೇಷನ್ ಡೇಟ್ ಫಿಕ್ಸ್ ಆಗಿದ್ರು ಅವತ್ತು ಮಾಡಿಸಿಲ್ಲ.. ಹೆಂಡತಿ ವಿಜಯಲಕ್ಷ್ಮೀಗೆ ಇಷ್ಟ ಇಲ್ಲ ಅದ್ಕೆ ಮಾಡಿಸಿಲ್ಲ ಅನ್ನೋ ಮಾತು ಕೇಳಿ ಬರ್ತಿದೆ. ಇದನ್ನೆಲ್ಲಾ ಗಮನಿಸಿದ್ರೆ ನಿಜಕ್ಕೂ ದರ್ಶನ್‌ಗೆ ಬೆನ್ನು ನೋವು ಇದ್ಯಾ? ಅಥವಾ ಬೆನ್ನು ನೋವಿನ ಹೆಸರಲ್ಲಿ ಹೊರಗೆ ಇದ್ದಾರಾ ಅನ್ನೋ ಅನುಮಾನ ಕಾಡುತ್ತಿದೆ. ಆದ್ರೆ ಇದ್ರ ಎಫೆಕ್ಟ್ ದರ್ಶನ್‌ಗೆ ಎಷ್ಟರ ಮಟ್ಟಿಗೆ ಆಗುತ್ತೆ ಅನ್ನೋದು ಕಾಲವೇ ಉತ್ತರಿಸಲಿದೆ.