ಎಷ್ಟು ತಿಂಗಳಿಗೊಮ್ಮೆ BP ಚೆಕಪ್ ಮಾಡಿಸ್ಬೇಕು? – ಮಕ್ಕಳಿಗೂ ಬಿಪಿ ಚೆಕ್‌ ಮಾಡಿಸಬೇಕಾ?

ಎಷ್ಟು ತಿಂಗಳಿಗೊಮ್ಮೆ BP ಚೆಕಪ್ ಮಾಡಿಸ್ಬೇಕು? – ಮಕ್ಕಳಿಗೂ ಬಿಪಿ ಚೆಕ್‌ ಮಾಡಿಸಬೇಕಾ?

ಮನುಷ್ಯನಿಗೆ ಆರೋಗ್ಯವೇ ಭಾಗ್ಯ. ಆರೋಗ್ಯವಿಲ್ಲದಿದ್ದಾಗ ಮನುಷ್ಯನಿಗೆ ಬೇರೆ ಏನಿದ್ದರೂ ಪ್ರಯೋಜನವಿಲ್ಲ. ಅದೆಷ್ಟೇ ಡಿಗ್ರಿ, ಕೈ ತುಂಬಾ ಸಂಬಳ ನೀಡುವ ಉದ್ಯೋಗವಿದ್ದರೂ ಅನಾರೋಗ್ಯವಿದ್ದಾಗ ಏನನ್ನೂ ಮಾಡಲು ಸಾಧ್ಯವಿಲ್ಲ. ಎಲ್ಲರೂ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ವರ್ಷಕ್ಕೊಮ್ಮೆ ಸಂಪೂರ್ಣವಾಗಿ ದೇಹದ ತಪಾಸಣೆಯನ್ನು ಮಾಡಬೇಕು ಎಂದು ಹಲವರು ಹೇಳಿರುವುದನ್ನು ಕೇಳಿರಬಹುದು. ಆದರೆ ಅನೇಕರಿಗೆ ಎಷ್ಟು ತಿಂಗಳಿಗೊಮ್ಮೆ ಬಿಪಿ ಅನ್ನುವ ಗೊಂದಲ ಅನೇಕರಿಗೆ ಕಾಡುತ್ತಿದೆ. ಈ ಕುರಿತ ಮಾಹಿತಿ ಈ ಲೇಖನದಲ್ಲಿದೆ.

ಇದನ್ನೂ ಓದಿ: ಚಿಕನ್‌ ಇಷ್ಟ ಅಂತಾ ಹೆಚ್ಚು ತಿಂತೀರಾ? – ಪ್ರತಿದಿನ ಚಿಕನ್‌ ತಿಂದ್ರೆ ಆರೋಗ್ಯಕ್ಕೆ ಕಂಟಕ!

ಅಧಿಕ ರಕ್ತದೊತ್ತಡದ ಸಮಸ್ಯೆ ಇತ್ತೀಚಿಗೆ ಕಾಮನ್. ಅನಾರೋಗ್ಯಕರ ಆಹಾರ, ಜಡ ಜೀವನಶೈಲಿ, ಧೂಮಪಾನ ಮತ್ತು ಇತರ ಕೆಟ್ಟ ಅಭ್ಯಾಸಗಳಿಂದಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತೆ. ನಾವು ಹೆಲ್ದಿಯಾಗಿರಲು ಮುನ್ನೆಚ್ಚರಿಕೆ ವಹಿಸಬೇಕಾಗುತ್ತೆ. ಮುಖ್ಯವಾಗಿ ಆಗಾಗ ಬಿಪಿ ಚೆಕ್ ಮಾಡಿಸಿಕೊಳ್ಳಬೇಕು. ಆದ್ರೆ ಬಿಪಿ ಚೆಕ್ ಮಾಡೋ ಬಗ್ಗೆ ಕೆಲವರಿಗೆ ಗೊಂದಲ ಇದೆ. ಮಕ್ಕಳಿಗೂ ವರ್ಷಕ್ಕೊಮ್ಮೆ ಬಿಪಿ ಚೆಕ್ ಮಾಡಿಸ್ಬೇಕು ಅಂತಾ ವೈದ್ಯರು ಹೇಳ್ತಾರೆ. ವಯಸ್ಕರು ಕೂಡಾ ತಿಂಗಳಿಗೊಮ್ಮೆ ಟೆಸ್ಟ್ ಮಾಡಿಸ್ಬೇಕು. ಆಂಟಿಹೈಪರ್ಟೆನ್ಸಿವ್ ಔಷಧಿ ಸೇವಿಸುವವರು ವಾರಕ್ಕೊಮ್ಮೆ ಬಿಪಿ ಚೆಕ್ ಮಾಡಿಸ್ಬೇಕು. ಅಂದ ಹಾಗೆ ಬಿಪಿ ಚೆಕ್ ಮಾಡಿಸಿಕೊಳ್ಳಲು ಬೆಳಗ್ಗೆ ಅಥವಾ ಸಂಜೆ ಸಮಯ ಉತ್ತಮ. ಬಿಸಿಲಿನಲ್ಲಿ ನಡೆದುಕೊಂಡು ಹೋಗಿ ಚೆಕ್ ಮಾಡ್ಸಿದ್ರೆ ರಕ್ತದೊತ್ತಡ ಪ್ರಮಾಣ ಹೆಚ್ಚಿರುವಂತೆ ರಿಸಲ್ಟ್ ಬರೋ ಸಾಧ್ಯತೆ  ಅಂತಾ ತಜ್ಞರು ಹೇಳ್ತಾರೆ.

Shwetha M