ವಾಟ್ಸಾಪ್ ನಲ್ಲಿ ಕ್ರಾಂತಿಕಾರಕ ಬದಲಾವಣೆ! – ಯಾವ ಫೀಚರ್ ಗಳಲ್ಲಿ ಏನು ಬದಲಾವಣೆ?
ವಾಟ್ಸಾಪ್ ತನ್ನ ಬಳಕೆದಾರರ ಅನುಭವವನ್ನು ಹೆಚ್ಚಿಸಲು ಹೊಸ ಹೊಸ ಅಪ್ಡೇಟ್ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ವಾಟ್ಸಾಪ್ ಮತ್ತೊಂದು ವಿಶೇಷ ಅಪ್ಡೇಟ್ ತರುವ ಮೂಲಕ ಬಳಕೆದಾರರ ಗಮನಸೆಳೆದಿದೆ. ವಾಟ್ಸಾಪ್ ನಲ್ಲಿ ಇದುವರೆಗೆ ಏಕಕಾಲಕ್ಕೆ 30 ಫೋಟೋ ಮತ್ತು ವಿಡಿಯೋಗಳನ್ನಷ್ಟೇ ಸೆಂಡ್ ಮಾಡಬಹುದಿತ್ತು. ಆದ್ರೀಗ ವಾಟ್ಸಾಪ್ನಲ್ಲಿ ಕ್ರಾಂತಿಕಾರಕ ಬದಲಾವಣೆಯೊಂದನ್ನು ಮಾಡಲಾಗಿದೆ.
ಇದನ್ನೂ ಓದಿ: ದೇಶದಲ್ಲೇ ಮೊದಲ ಬಾರಿಗೆ ಪರ್ವತ ಪ್ರದೇಶಗಳಿಗೆ ಔಷಧಿ ತಲುಪಿಸಲು ಡ್ರೋನ್ ಬಳಕೆ
ವಾಟ್ಸಾಪ್ನಲ್ಲಿ ಇನ್ಮುಂದೆ ಒಂದೇ ಬಾರಿಗೆ 100 ಫೋಟೋ ಮತ್ತು ವಿಡಿಯೋಗಳನ್ನು ಸೆಂಡ್ ಮಾಡಬಹುದು. ಅಲ್ಲದೇ ಇದುವರೆಗೆ ಕೇವಲ, ಫೋಟೋ ಮತ್ತು ವಿಡಿಯೋಗೆ ಮಾತ್ರ ಕ್ಯಾಪ್ಷನ್ ಹಾಕೋ ಆಪ್ಷನ್ ಇತ್ತು. ಇದೀಗ ಡಾಕ್ಯೂಮೆಂಟ್ಸ್ಗಳನ್ನು ಸೆಂಡ್ ಮಾಡುವಾಗ ಕ್ಯಾಪ್ಷನ್ ಕೂಡ ಹಾಕಬಹುದು.
ವಾಟ್ಸಾಪ್ ಗ್ರೂಪ್ನಲ್ಲಿ ಡಿಸ್ಕ್ರಿಪ್ಷನ್ ಬರೆಯೋ ವೇಳೆ ಇದುವರೆಗೆ ಅಕ್ಷರಗಳ ಲಿಮಿಟ್ ಇತ್ತು. 25 ಅಕ್ಷರಗಳನ್ನಷ್ಟೇ ಬರೆಯಬಹುದಿತ್ತು. ಇದನ್ನ 512 ಅಕ್ಷರಗಳಿಗೆ ಏರಿಕೆ ಮಾಡಲಾಗಿದೆ. ಇವೆಲ್ಲವೂ ನಿಮ್ಮ ಬಳಕೆಗೆ ಬೇಕು ಅನ್ನೋದಾದ್ರೆ ಆ್ಯಂಡ್ರಾಯ್ಡ್ ಮೊಬೈಲ್ ಬಳಕೆದಾರರು ತಮ್ಮ ವಾಟ್ಸಾಪ್ನ್ನ ಅಪ್ಡೇಟ್ ಮಾಡಿಕೊಳ್ಳಬೇಕು.