ವಾಟ್ಸ್​ಆ್ಯಪ್ ಶಾಕಿಂಗ್ ನ್ಯೂಸ್! – ಇನ್ನು ಮುಂದೆ ವಾಟ್ಸ್​ಆ್ಯಪ್ ನಲ್ಲಿ ಫ್ರೀ ಸೇವೆ ಇರಲ್ಲ!

ವಾಟ್ಸ್​ಆ್ಯಪ್ ಶಾಕಿಂಗ್ ನ್ಯೂಸ್! – ಇನ್ನು ಮುಂದೆ ವಾಟ್ಸ್​ಆ್ಯಪ್ ನಲ್ಲಿ ಫ್ರೀ ಸೇವೆ ಇರಲ್ಲ!

ಈಗ ಎಲ್ಲರೂ‌ ವಾಟ್ಸ್​ಆ್ಯಪ್ ಯೂಸ್ ಮಾಡ್ತಾರೆ. ಮೆಟಾ ಮಾಲೀಕತ್ವದ ನಂಬರ್ ಒನ್ ಅಪ್ಲಿಕೇಷನ್ ವಾಟ್ಸ್​ಆ್ಯಪ್  ಇಂದು ಬಳಕೆದಾರರಿಗೆ ಅಗತ್ಯ ಫೀಚರ್​ಗಳನ್ನು ಪರಿಚಯಿಸಿ ಮೆಚ್ಚಿನ ಆ್ಯಪ್ ಆಗಿ ಬಿಟ್ಟಿದೆ. ಕೋಟಿಗಟ್ಟಲೆ ಜನರು ಇದನ್ನು ಉಪಯೋಗಿಸುತ್ತಿದ್ದಾರೆ. ಹೀಗಿರುವಾಗ ವಾಟ್ಸ್​ಆ್ಯಪ್​ ಇದೀಗ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ.

ಇದನ್ನೂ ಓದಿ: ಟಾಯ್ಲೆಟ್‌ನಲ್ಲಿ ಕುಳಿತು ಪೇಪರ್‌ ಓದುವುದು, ಫೋನ್‌ ಬಳಸುತ್ತೀರಾ?  

ಹೌದು, ಆಂಡ್ರಾಯ್ಡ್ ವಾಟ್ಸ್​ಆ್ಯಪ್​ ಬಳಕೆದಾರರು ತಮ್ಮ ಚಾಟ್ ಬ್ಯಾಕಪ್ ಡೇಟಾವನ್ನು ಗೂಗಲ್ ಡ್ರೈವ್‌ನಲ್ಲಿ ಸೇವ್ ಮಾಡಿಕೊಟ್ಟುಕೊಳ್ಳುದ್ದಾರೆ. ಈ ಸೇವೆಗಳು ಪ್ರಸ್ತುತ ಉಚಿತವಾಗಿದೆ. ಆದರೆ, ಕಂಪನಿಯು ಇನ್ನು ಮುಂದೆ 2024 ರಿಂದ ಗೂಗಲ್ ಡ್ರೈವ್‌ನಲ್ಲಿ ಉಚಿತ ಅನಿಯಮಿತ ಬ್ಯಾಕಪ್‌ಗಳನ್ನು ನೀಡುವುದಿಲ್ಲ ಅಂತಾ ಹೇಳಿದೆ. ಇನ್ನು ಮುಂದೆ ವಾಟ್ಸ್​ಆ್ಯಪ್​ ಬ್ಯಾಕ್‌ಅಪ್‌ಗಳು ಸೀಮಿತ ಸಂಗ್ರಹಣೆ ಕೋಟಾವನ್ನು ಮಾತ್ರ ಪಡೆಯುತ್ತವೆ. ಗೂಗಲ್ ಡ್ರೈವ್‌ನಲ್ಲಿ ಒದಗಿಸಲಾದ 15GB ಸಂಗ್ರಹದ ಮಿತಿಯನ್ನು ಮಾತ್ರ ಉಚಿತವಾಗಿ ನೀಡಲಾಗುತ್ತದೆ. ಇನ್ನಷ್ಟು ಸ್ಟೋರೇಜ್ ಹೆಚ್ಚಿಸಬೇಕಾದರೆ ಹಣ ಕೊಡಬೇಕು.

ಚಾಟ್ ಬ್ಯಾಕ್‌ಅಪ್‌ಗಳಿಗಾಗಿ ಗೂಗಲ್ ಡ್ರೈವ್‌ನಲ್ಲಿ ಜಾಗವನ್ನು ನಿಗದಿಪಡಿಸುವ ನಿಯಮವು 2024 ರ ಆರಂಭದಿಂದ ಜಾರಿಗೆ ಬರಲಿದೆ. ಬಳಕೆದಾರರು ಎಷ್ಟು ಸ್ಟೋರೇಜ್ ಬಳಸಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಬಯಸಿದರೆ, ನೀವು ವಾಟ್ಸ್​ಆ್ಯಪ್​ ಸೆಟ್ಟಿಂಗ್‌ಗಳಲ್ಲಿ ಸ್ಟೋರೇಜ್ ಆಯ್ಕೆಯನ್ನು ಪರಿಶೀಲಿಸಬಹುದು. ಚಾಟ್ ಬ್ಯಾಕಪ್ ಸಂಗ್ರಹಣೆಗೆ ಎಷ್ಟು ಶುಲ್ಕ ವಿಧಿಸಲಾಗುತ್ತದೆ ಎಂಬುದರ ಕುರಿತು ವಾಟ್ಸ್​ಆ್ಯಪ್​ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಈ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡಲಿದೆಯಂತೆ.

Shwetha M